ಅಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅಡಿ ಅಳತೆಯ ಚಕ್ರಾಧಿಪತ್ಯ ಮತ್ತು ಅಮೇರಿಕದ ರೂಢಿಗತ ಪದ್ಧತಿಗಳಲ್ಲಿ ಉದ್ದದ ಒಂದು ಏಕಮಾನ. ೧೯೫೯ರಿಂದ, ಅಂತರರಾಷ್ಟ್ರೀಯ ಒಪ್ಪಂದದಿಂದ ಎರಡೂ ಏಕಮಾನಗಳು ನಿಖರವಾಗಿ ೦.೩೦೪೮ ಮೀಟರ್‍ಗೆ ಸಮಾನ ಎಂದು ವ್ಯಾಖ್ಯಾನಿಸಲ್ಪಟ್ಟಿವೆ. ಎರಡೂ ಪದ್ಧತಿಗಳಲ್ಲಿ, ಒಂದು ಅಡಿ ೧೨ ಅಂಗುಲಗಳನ್ನು ಹೊಂದಿರುತ್ತದೆ ಮತ್ತು ಮೂರು ಅಡಿಗಳಿಂದ ಒಂದು ಗಜವಾಗುತ್ತದೆ.

ಐತಿಹಾಸಿಕವಾಗಿ "ಅಡಿ" ಗ್ರೀಕ್, ರೋಮನ್, ಚೀನಾದ, ಫ಼್ರೆಂಚ್ ಮತ್ತು ಆಂಗ್ಲ ಪದ್ಧತಿಗಳನ್ನು ಒಳಗೊಂಡಂತೆ ಏಕಮಾನಗಳ ಅನೇಕ ಸ್ಥಳೀಯ ಪದ್ಧತಿಗಳ ಭಾಗವಾಗಿತ್ತು. ಅದು ಉದ್ದದಲ್ಲಿ ದೇಶದಿಂದ ದೇಶಕ್ಕೆ, ನಗರದಿಂದ ನಗರಕ್ಕೆ ಮತ್ತು ಕೆಲವೊಮ್ಮೆ ವ್ಯಾಪಾರದಿಂದ ವ್ಯಾಪಾರಕ್ಕೆ ಬದಲಾಗುತ್ತಿತ್ತು. ಅದರ ಉದ್ದ ಸಾಮಾನ್ಯವಾಗಿ ೨೫೦ ಮಿಲಿಮೀಟರ್‍ನಿಂದ ೩೩೫ ಮಿಲಿಮೀಟರ್ ನಡುವೆ ಇರುತ್ತಿತ್ತು ಮತ್ತು ಸಾಮಾನ್ಯವಾಗಿ, ಆದರೆ ಯಾವಾಗಲೂ ಅಲ್ಲ, ಒಂದು ಅಡಿಯನ್ನು ೧೨ ಅಂಗುಲಗಳಲ್ಲಿ ಅಥವಾ ೧೬ ಡಿಜಿಟ್‍ಗಳಲ್ಲಿ ವಿಭಜಿಸಲಾಗುತ್ತಿತ್ತು.

ಅಮೇರಿಕಾ ತನ್ನ ವಾಣಿಜ್ಯಿಕ, ಶಿಲ್ಪಶಾಸ್ತ್ರೀಯ, ಮತ್ತು ಮಾನದಂಡಗಳ ಚಟುವಟಿಕೆಗಳಲ್ಲಿ ಮೀಟರ್ ಬದಲು ಅಂತರರಾಷ್ಟ್ರೀಯ ಅಡಿ ಮತ್ತು ಮೋಜಣಿ ಅಡಿಯನ್ನು ಬಳಸುವ ಏಕೈಕ ಕೈಗಾರಿಕೀಕೃತ ರಾಷ್ಟ್ರವಾಗಿದೆ.[೧] ಅಡಿಯನ್ನು ಯುನೈಟಡ್ ಕಿಂಗ್ಡಮ್‍ನಲ್ಲಿ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟಿದೆ; ರಸ್ತೆ ಚಿಹ್ನೆಗಳು ಚಕ್ರಾಧಿಪತ್ಯದ ಏಕಮಾನಗಳನ್ನು ಬಳಸಬೇಕು, ಮತ್ತು ಎತ್ತರದ ಮಾಪಕವಾಗಿ ಸಾರ್ವಜನಿಕರಲ್ಲಿ ಅದರ ಬಳಕೆ ವ್ಯಾಪಕವಾಗಿದೆ. ಅಡಿಯನ್ನು ಉದ್ದದ ಪರ್ಯಾಯ ಅಭಿವ್ಯಕ್ತಿಯೆಂದು ಗುರುತಿಸಲಾಗಿದೆ, ಆದರೆ ಯು.ಕೆ. ಮತ್ತು ಕೆನಡಾ ಎರಡೂ ರಾಷ್ಟ್ರಗಳು ತಮ್ಮ ಅಳತೆಯ ಏಕಮಾನಗಳನ್ನು ಭಾಗಶಃ ಮೆಟ್ರಿಕ್ ಪದ್ಧತಿಗೆ ಪರಿವರ್ತಿಸಿವೆ. ಅಂತರರಾಷ್ಟ್ರೀಯ ವಾಯುಯಾನದಲ್ಲಿ ಎತ್ತರದ ಅಳತೆ ಮಾಡಲು ಆಂಗ್ಲ ಮಾತನಾಡುವ ವಿಶ್ವದ ಹೊರಗೆ ಅಡಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
"https://kn.wikipedia.org/w/index.php?title=ಅಡಿ&oldid=753665" ಇಂದ ಪಡೆಯಲ್ಪಟ್ಟಿದೆ