ವಿಷಯಕ್ಕೆ ಹೋಗು

ಜೋಸೆಫ್ ಸ್ಟಾಲಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸ್ಟಾಲಿನ್ ಇಂದ ಪುನರ್ನಿರ್ದೇಶಿತ)
ಜೋಸೆಫ್ ಸ್ಟಾಲಿನ್
Iosif Vissarionovich Stalin
Иосиф Виссарионович Сталин
Ioseb Besarionis dze Jughashvili
იოსებ ბესარიონის ძე ჯუღაშვილი
ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ
In office
ಏಪ್ರಿಲ್ ೩ ೧೯೨೨ – ಮಾರ್ಚ್ ೫ ೧೯೫೩
Preceded byPost Instated
Succeeded byಜಾರ್ಜಿ ಮೆಲೆನ್ಕೋವ್
ಸೋವಿಯತ್ ಒಕ್ಕೂಟದ ಪ್ರಧಾನಿ (ಪೀಪಲ್ಸ್ ಕಾಮಿಸ್ಸಾರ್ಸ್)
In office
ಮೇ ೬ ೧೯೪೧ – ಮಾರ್ಚ್ ೧೯ ೧೯೪೬
Preceded byವ್ಯಾಚೆಸ್ಲಾವ್ ಮೊಲೊಟೋವ್
Succeeded byPost abolished
ಸೋವಿಯತ್ ಒಕ್ಕೂಟದ ಪ್ರಧಾನಿ
In office
ಮಾರ್ಚ್ ೧೯ ೧೯೪೬ – ಮಾರ್ಚ್ ೫ ೧೯೫೩
Preceded byPost instated
Succeeded byಜಾರ್ಜಿ ಮೆಲೆನ್ಕೋವ್
Personal details
Born(೧೮೭೮-೧೨-೧೮)೧೮ ಡಿಸೆಂಬರ್ ೧೮೭೮
ಗೋರಿ, ರಷ್ಯನ್ ಸಾಮ್ರಾಜ್ಯದ ಟಿಫ್ಲಿಸ್ ಪ್ರಾಂತ್ಯ (ಈಗ ಜಾರ್ಜಿಯ)
Died೫ ಮಾರ್ಚ್ ೧೯೫೩ (ವಯಸ್ಸು ೭೪)
ಮಾಸ್ಕೋ, ಸೋವಿಯತ್ ಒಕ್ಕೂಟ
NationalityGeorgian
Political partyಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷ

ಪೀಠಿಕೆ

[ಬದಲಾಯಿಸಿ]
  • ಜೋಸೆಫ್ ಸ್ಟಾಲಿನ್ - ಜೋಸೆಫ್ ವಿಸ್ಸರಿಯೊನೊವಿಚ್ ಸ್ಟಾಲಿನ್ [ಜನನ 18 ಡಿಸೆಂಬರ್ -1878; ಮತ್ತು ನಿಧನ ಮಾರ್ಚ್ 5, 1953) ಜಾರ್ಜಿಯನ್ ಕ್ರಾಂತಿಕಾರಿ ಮತ್ತು ಸೋವಿಯತ್ ರಾಜಕಾರಣಿ, ಇವರು 1920 ರ ದಶಕದ ಮಧ್ಯಭಾಗದಿಂದ 1953 ರವರೆಗೆ ಸೋವಿಯತ್ ಒಕ್ಕೂಟವನ್ನು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೋವಿಯತ್ ಯೂನಿಯನ್ (1922-1952)ದೇಶವನ್ನು ಮುನ್ನಡೆಸಿದರು.
  • ಅವರು. ಸೋವಿಯತ್ ಒಕ್ಕೂಟದ (1941-1953) ಸಾಮೂಹಿಕ ಪ್ರಧಾನ ನಾಯಕತ್ವದ ಭಾಗವಾಗಿ ಆರಂಭದಲ್ಲಿ ಸೋವಿಯತ್ ಒಕ್ಕೂಟವನ್ನು ಆಳುತ್ತಿದ್ದರೂ, ಅಂತಿಮವಾಗಿ ಅವರು 1930 ರ ಹೊತ್ತಿಗೆ ದೇಶದ ವಾಸ್ತವಿಕ ಸರ್ವಾಧಿಕಾರಿಯಾಗಿ ಅಧಿಕಾರವನ್ನು ನೆಡೆಸಿದರು. ಮಾರ್ಕ್ಸ್‌ವಾದದ ಲೆನಿನಿಸ್ಟ್ ವ್ಯಾಖ್ಯಾನಕ್ಕೆ ಸೈದ್ಧಾಂತಿಕವಾಗಿ ಬದ್ಧವಾಗಿದ್ದ ರಷ್ಯಾದ ಉದಾರ ಕಮ್ಯುನಿಸ್ಟ್ ನೀತಿಯನ್ನು, ಉಗ್ರವಾದದ ಸರ್ವಾಧಿಕಾರದ ಸ್ಟಾಲಿನ್ ಮಾರ್ಕ್ಸ್‌ವಾದ-ಲೆನಿನಿಸಂ ಎಂದು ಪ್ರಚಾರಗೊಳಿಸಿದರು, ಆದ್ದರಿಂದ ಅವರ ಸ್ವಂತ ನೀತಿಗಳನ್ನು ಸ್ಟಾಲಿನಿಸಂ ಎಂದು ಕರೆಯಲಾಗುತ್ತದೆ.[]

ಜೀವನ ವಿವರ

[ಬದಲಾಯಿಸಿ]
  • ಸ್ಟಾಲಿನ್, ಜೋಸೆಫ್ 1879 ರಿಂದ 1953 ವರೆಗಿನ ಕಾಲ, ಯೂನಿಯನ್ ಆಫ್ ಸೋಷಿಯಲಿಸ್ಟ್ ಸೋವಿಯತ್ ರಿಪಬ್ಲಿಕ್‍ನ (ಯು.ಎಸ್.ಎಸ್.ಆರ್.) ಸರ್ವಾಧಿಕಾರಿ. ಇವನು ಜಾರ್ಜಿಯಾದ ಗೋರಿ ಎಂಬಲ್ಲಿ 1879 ಡಿಸೆಂಬರ್ 21ರಂದು ಜನಿಸಿದ. ತಂದೆ ವಿಸೊರಿನ್ ಐವಾನೊವಿಚ್, ತಾಯಿ ಎಕ್ತರಿನ ಗೆಹ್ಲಾಜ್. ಇವನ ಮೂಲ ಹೆಸರು ಐವೊಸಿಫ್ ವಿಸರಿಯೊನವಿಚ್ ಜುಗಾಷ್‍ವಿಲಿ. 1913ರಲ್ಲಿ ಸ್ಟಾಲಿನ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡ. ರಷ್ಯನ್ ಭಾಷೆಯಲ್ಲಿ ಸ್ಟಾಲಿನ್ ಎಂದರೆ ಕಬ್ಬಿಣ ಎಂದರ್ಥ. ಕಡುಬಡತನದಲ್ಲಿ ಬೆಳೆದ ಇವನು ಚರ್ಚ್‍ನ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ. ಧರ್ಮಾಧಿಕಾರಿಯಾಗಬೇಕೆಂಬುದು ಇವನ ಅಪೇಕ್ಷೆಯಾಗಿತ್ತು. ಜಾರ್ಜಿಯನ್ ಆರ್ಥೊಡಾಕ್ಸ್ ಚರ್ಚ್‍ನಲ್ಲಿ ಅಧ್ಯಯನ ಕೈಗೊಂಡ. ಆದರೆ ರಷ್ಯದಲ್ಲಿ ಸಂಭವಿಸಿದ ಅನೇಕ ಘಟನೆಗಳು ಇವನನ್ನು ಕ್ರಾಂತಿಕಾರಿಯಾಗಿ ರೂಪಿಸಿದವು. ಅನೇಕ ಬಾರಿ ಬಂಧನಕ್ಕೊಳಗಾಗಿ ಸೆರೆಮನೆವಾಸ ಅನುಭವಿಸಿದ. ಗಡೀಪಾರು ಶಿಕ್ಷೆಗೂ ಒಳಗಾಗಿದ್ದ. ಇವನ ಹೆಂಡತಿ ನಡೇಸ್ಥ ಅಲ್ಲಿಲುಯೆವ.

ಲೆನಿನ್ನನ ಬೋಲ್ಷೆವಿಕ್ ಪಕ್ಷದಲ್ಲಿ- ನಂತರ ಸರ್ವಾಧಿಕಾರಿ

[ಬದಲಾಯಿಸಿ]
  • ಇವನು 1905ರಲ್ಲಿ ಮೊದಲಬಾರಿಗೆ ಲೆನಿನನನ್ನು ಭೇಟಿ ಮಾಡಿದ. ಅನಂತರ ಲೆನಿನ್ ಇವನನ್ನು ಬೋಲ್ಷೆವಿಕ್ ಪಕ್ಷದ ಕೇಂದ್ರ ಸಮಿತಿಗೆ ಸದಸ್ಯನಾಗಿ ಮಾಡಿದ (1912). 1917ರಲ್ಲಿ ಸೋಷಿಯಲ್ ಡೆಮಾಕ್ರಟಿಕ್ಟ್ ಲೇಬರ್ ಪಾರ್ಟಿ ಸೇರಿದ. 1917ರ ಅಕ್ಟೋಬರ್ ಕ್ರಾಂತಿಯಲ್ಲಿ ತಮ್ಮ ಪಕ್ಷದ ತತ್ತ್ವ ಸಿದ್ಧಾಂತಗಳಿಗೆ ವಿರೋಧಿಗಳಾಗಿದ್ದ ಅನೇಕ ಕ್ರಾಂತಿಕಾರಿಗಳನ್ನು ಅಡಗಿಸುವಲ್ಲಿ ಯಶಸ್ವಿಯಾದ. ಕೆಂಪು ಸೈನ್ಯ ಸಂಘಟಿಸಿದ. ವಿರೋಧಿಗಳನ್ನು ಹತ್ತಿಕ್ಕಿದ. ರಾಜಕೀಯ ಚತುರನಾದ ಇವನು ತನ್ನ ರಾಜಕೀಯ ವಿರೋಧಿಯಾದ ಟ್ರಾಟಸ್ಕಿಯನ್ನು ರಾಜಕೀಯ ರಂಗದಿಂದ ದೂರ ಸರಿಯುವಂತೆ ಮಾಡಿ, ಅನಂತರ ಅವನನ್ನು ಗಡೀಪಾರುಗೊಳಿಸಿದ. 1927ರ ಹೊತ್ತಿಗೆ ಅನೇಕ ರಾಜಕೀಯ ವಿರೋಧಿಗಳಿಂದ ಮುಕ್ತನಾದ. ಹಲವಾರು ಸಂಸ್ಥಾನಗಳನ್ನು ಒಗ್ಗೂಡಿಸಿ ಯೂನಿಯನ್ ಆಫ್ ಸೋಷಿಯಲಿಸ್ಟ್ ಸೋವಿಯತ್ ರಿಪಬ್ಲಿಕ್ (ಯು.ಎಸ್.ಎಸ್.ಆರ್.) ಸ್ಥಾಪಿಸಿದ (1923). ಅನಂತರ ರಷ್ಯ ಆರ್ಥಿಕ ಹಾಗೂ ಸೈನಿಕ ಶಕ್ತಿಗಳನ್ನು ಬಲಗೊಳಿಸಿದ. ಲೆನಿನ್ ಜಾರಿಗೊಳಿಸಿದ ಹೊಸ ಆರ್ಥಿಕ ನೀತಿಯನ್ನು 1928ರಲ್ಲಿ ಕೊನೆಗೊಳಿಸಿದ. ರಷ್ಯಕ್ಕೆ ಒಂದು ಪ್ರಜಾಪ್ರಭುತ್ವ ಮಾದರಿಯ ರಾಜ್ಯಾಂಗ ರೂಪಿಸಲು ಕಾರಣನಾದ (1935). ಪಂಚವಾರ್ಷಿಕ ಯೋಜನೆಗಳ (1928) ಮೂಲಕ ಕೈಗಾರಿಕೆ, ಕೃಷಿ, ಉತ್ಪಾದನೆ, ವಿದ್ಯಾಭ್ಯಾಸ, ವಿಜ್ಞಾನ ಮತ್ತಿತ್ತರ ಕ್ಷೇತ್ರಗಳಲ್ಲಿ ಗಣನೀಯವಾದ ಪ್ರಗತಿ ಸಾಧಿಸಿದ.

ರಾಜಕೀಯ ಮತ್ದ್ದಿ

[ಬದಲಾಯಿಸಿ]
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಾಮುತ್ಸದ್ಧಿಯಾಗಿದ್ದ. ಈತನ ನೇತೃತ್ವದ ಕಮ್ಯೂನಿಷ್ಟ್ ಸರ್ಕಾರಕ್ಕೆ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಿಂದ ಯಾವುದೇ ಸಹಕಾರ ದೊರೆಯಲಿಲ್ಲ. ಲೆನಿನ್‍ನಂತೆ ಇವನೂ 1939ರಲ್ಲಿ ಹಿಟ್ಲರನೊಡನೆ ಅನ್ಯಾಕ್ರಮಣ ಒಪ್ಪಂದ ಮಾಡಿಕೊಂಡ. ಎರಡನೆಯ ಮಹಾಯುದ್ಧದಲ್ಲಿ ರಷ್ಯವನ್ನು ಯುದ್ಧದಿಂದ ದೂರವಿಡಲು ಯತ್ನಿಸಿದನಾದರೂ ಹಿಟ್ಲರ್‍ನ ಆಕ್ರಮಣ ನೀತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ರಷ್ಯ ಮಿತ್ರರಾಷ್ಟ್ರಗಳ ಪರ ಹೋರಾಡಿ ವಿಜಯದಲ್ಲಿ ಭಾಗಿಯಾದ. ಈ ಯುದ್ಧದಿಂದ ರಷ್ಯ ಪ್ರಪಂಚದಲ್ಲಿಯೇ ಶಸ್ತ್ರಸಜ್ಜಿತ ಬಲಿಷ್ಠ ರಾಷ್ಟ್ರವೆಂಬ ಕೀರ್ತಿಗೆ ಪಾತ್ರವಾಯಿತು. ರಷ್ಯ ಪ್ರಪ್ರಥಮ ಬಾರಿಗೆ 1949ರಲ್ಲಿ ಅಣುಬಾಂಬ್ ಸ್ಫೋಟಿಸಿ ಅಣುಶಕ್ತಿ ರಾಷ್ಟ್ರವಾಯಿತು. ಕೊರಿಯ ಯುದ್ಧ ಸಂದರ್ಭದಲ್ಲಿ (1950-53) ಈತ ಕಮ್ಯೂನಿಷ್ಟ್ ಉತ್ತರಕೊರಿಯವನ್ನು ಬೆಂಬಲಿಸಿದ್ದ. ವಿಚಾರವಂತನೂ ಚಿಂತಕನೂ ಆಗಿದ್ದ ಈತ ದ ನ್ಯಾಷನಲ್ ಕ್ವೆಶ್ಚನ್ ಅಂಡ್ ಸೋಷಿಯಲ್ ಡೆಮಾಕ್ರಸಿ ಎಂಬ ಸುದೀರ್ಘ ಲೇಖನವನ್ನು ಬರೆದಿದ್ದ (1913). ಈತ ಕೆಲಕಾಲ ಪ್ರಾವ್ಡ (ಸತ್ಯ) ಪತ್ರಿಕೆಯ ಸಂಪಾದಕನೂ ಆಗಿದ್ದ. ಇವನು 1953 ಮಾರ್ಚ್ 5ರಂದು ಮಾಸ್ಕೋದಲ್ಲಿ ನಿಧನನಾದ.[]

ಉಲ್ಲೇಖಗಳು

[ಬದಲಾಯಿಸಿ]
  1. Brackman, Roman (2001). The Secret File of Joseph Stalin: A Hidden Life. London and Portland: Frank Cass Publishers.
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟಾಲಿನ್, ಜೋಸೆಫ್