ವಿಷಯಕ್ಕೆ ಹೋಗು

ಮುಅಮ್ಮರ್ ಗಡಾಫಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಅಮ್ಮರ್ ಗಡಾಫಿ
معمر محمد أبو منيار القذافي

GCFR
ಮುಅಮ್ಮರ್ ಗಡಾಫಿ ೨೦೦೯ರಲ್ಲಿ ನಡೆದ ಆಫ್ರಿಕನ್ ಯೂನಿಯನ್ ಶೃಂಗಸಭೆಯಲ್ಲಿ

ಅಧಿಕಾರ ಅವಧಿ
1 September 1969 – 23 August 2011[೪]
ರಾಷ್ಟ್ರಪತಿ
See list
ಪ್ರಧಾನ ಮಂತ್ರಿ
ಪೂರ್ವಾಧಿಕಾರಿ Position established
ಉತ್ತರಾಧಿಕಾರಿ Position abolished

ಅಧಿಕಾರ ಅವಧಿ
1 September 1969 – 2 March 1977
ಪ್ರಧಾನ ಮಂತ್ರಿ
ಪೂರ್ವಾಧಿಕಾರಿ Idris (King)
ಉತ್ತರಾಧಿಕಾರಿ Himself (Secretary General of the General People's Congress of Libya)

ಅಧಿಕಾರ ಅವಧಿ
2 March 1977 – 2 March 1979
ಪ್ರಧಾನ ಮಂತ್ರಿ Abdul Ati al-Obeidi
ಪೂರ್ವಾಧಿಕಾರಿ Himself (Chairman of the Revolutionary Command Council)
ಉತ್ತರಾಧಿಕಾರಿ Abdul Ati al-Obeidi

ಅಧಿಕಾರ ಅವಧಿ
16 January 1970 – 16 July 1972
ಪೂರ್ವಾಧಿಕಾರಿ Mahmud Sulayman al-Maghribi
ಉತ್ತರಾಧಿಕಾರಿ Abdessalam Jalloud

ಅಧಿಕಾರ ಅವಧಿ
2 February 2009 – 31 January 2010
ಪೂರ್ವಾಧಿಕಾರಿ Jakaya Kikwete
ಉತ್ತರಾಧಿಕಾರಿ Bingu wa Mutharika
ವೈಯಕ್ತಿಕ ಮಾಹಿತಿ
ಜನನ c. 1940–43
Qasr Abu Hadi, Italian Libya
ಮರಣ 20 ಅಕ್ಟೋಬರ್ 2011(2011-10-20) (aged c.69)
Sirte, Libya
ಸಮಾಧಿ ಸ್ಥಳ Undisclosed
ರಾಜಕೀಯ ಪಕ್ಷ Arab Socialist Union (1971–1977)

Independent (1977–2011)

ಸಂಗಾತಿ(ಗಳು)
ಮಕ್ಕಳು
Sons
Daughters
ಅಭ್ಯಸಿಸಿದ ವಿದ್ಯಾಪೀಠ Benghazi Military University Academy
ಧರ್ಮ Sunni Islam
ಸಹಿ
ಮಿಲಿಟರಿ ಸೇವೆ
Allegiance Libyan Arab Jamahiriya
ಸೇವೆ/ಶಾಖೆ Libyan Army
ವರ್ಷಗಳ ಸೇವೆ 1961–2011
Rank Colonel
Commands Libyan Armed Forces
Battles/wars

ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿ[೫][variations] (ಅರೇಬಿಕ್: معمر القذافي Muʿammar al-Qaḏḏāfī audio ; ಜನನ ೭ ಜೂನ್ ೧೯೪೨), ಕರ್ನಲ್ ಗಡಾಫಿಯೆಂದು ಪ್ರಸಿದ್ದರು. ಇವರು ೧ನೇ ಸೆಪ್ಟೆಂಬರ್ ೧೯೬೯ರ ಸೈನ್ಯ ಕ್ರಾಂತಿಯ ನಂತರ ಲಿಬಿಯಾದ ನಾಯಕರಾಗಿದ್ದಾರೆ.

ಜನನ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನ

[ಬದಲಾಯಿಸಿ]

ಲಿಬಿಯಾದೇಶದ 'ಬರ್ಬರ್ ಬುಡಕಟ್ಟಿನ', 'ಮುಅಮ್ಮರ್ ಗಡಾಫಿ'ಯವರು ಜನಿಸಿದ್ದು 'ಸಿರ್ಟೆ' ಸಮೀಪದ ಮರಳುಗಾಡಿನಲ್ಲಿ ಜೂನ್ ೧೯೪೨ ರಲ್ಲಿ. ಹತ್ತಿರದ ಪುಟ್ಟ ಪಟ್ಟಣವೊಂದರ ಶಾಲೆಯಲ್ಲಿ ಕಲಿಕೆ ಪ್ರಾರಂಭವಾಗಿದ್ದು ಅವರ ಚಿಕ್ಕಪ್ಪನವರ ನೆರವಿನಿಂದ. ಬಾಲ್ಯದಲ್ಲಿ ಚಿಕ್ಕ ಹಳ್ಳಿಯಿಂದ ಬಂದಿದ್ದ ಗಡಾಫೆಯವರನ್ನು ಪಟ್ಟಣದ ಸಹಪಾಠಿಗಳು ಗೇಲಿಮಾಡುವುದನ್ನು ಸಹಿಸಿಕೊಳ್ಳಬೇಕಾಯಿತು. ಸಾರ್ಟೆ ಹತ್ತಿರ ಇರುವ ಮರುಭೂಮಿಯ ಗುಡಾರದಲ್ಲಿ ಬೆಳೆದ. ಮನೆಯಿಂದ ದೂರವಿದ್ದ ಸಬಾದ ಮುಸ್ಲಿಂ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದ. ಆ ಸಮಯದಲ್ಲಿ ಅರಬ್ ದೇಶಗಳಲ್ಲಿ ನಡೆಯುತ್ತಿದ್ದ ಮುಖ್ಯ ಘಟನೆಗಳು ಇವನ ಮೇಲೆ ಪ್ರಭಾವ ಬೀರಿದವು.1911ರಲ್ಲಿ ಇಟಲಿಯು ಲಿಬಿಯವನ್ನು ಸ್ವಾಧೀನ ಪಡೆಸಿಕೊಳ್ಳಲು ನಡೆಸಿದ ಯುದ್ಧದಲ್ಲಿ ಇವನ ತಾತ ಲಿಬಿಯ ಪರ ಹೋರಾಡಿ ಖೋಂನಲ್ಲಿ ಮೊದಲ ಬಲಿಯಾದ. 1948ರಲ್ಲಿ 6ವರ್ಷದ ಬಾಲಕನಾಗಿದ್ದಾಗ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುವಾಗ ದೂಳು ತುಂಬಿದ ಮಣ್ಣಿನಲ್ಲಿ ಯುದ್ಧದ ಸಮಯದಲ್ಲಿ ಇಟಲಿ ಸೈನ್ಯ ಹುಗಿದಿದ್ದ ಸಿಡಿಮದ್ದು ಸಿಡಿದು ಇಬ್ಬರು ಮಕ್ಕಳು ನಿಧನವಾಗಿ ಇವನಿಗೆ ತೋಳಿನಲ್ಲಿ ಗಾಯವಾಗಿತ್ತು. ಈ ಘಟನೆ ಇವನ ಮನಸ್ಸಿನಲ್ಲಿ ಇಟಲಿಯ ವಿಷಯದಲ್ಲಿ ವಿರೋಧಿ ಭಾವನೆ ಬೆಳೆಯಲು ಅಚ್ಚಳಿಯದ ಪ್ರಭಾವ ಬೀರಿತು. ಹೀಗಾಗಿ ಯುವಾವಸ್ಥೆಯಲ್ಲಿ ಅವರು ಹಣವಂತರು, ಪಟ್ಟಣದ ಜನ ವ್ಯಾಪಾರಿಗಳು ಮೊದಲಾದವರನ್ನು ಕಂಡರೆ ರೊಚ್ಚಿಗೇಳುತ್ತಿದ್ದರು. ಮೊದಲು ಒಬ್ಬ ಚತುರ ರಾಜಕೀಯ ಚಿಂತಕನಾಗಿದ್ದ ಅವರ ವ್ಯಕ್ತಿತ್ವ ವಿಕ್ಷಿಪ್ತವಾಗಿತ್ತು. ಕಾಲಕ್ರಮೇಣ ಹಲವಾರು ಹುಚ್ಚು ವಿಕೃತಿಗಳು ಅವರ ಜೊತೆಯಲ್ಲೇ ಬೆಳೆದವು ಸನ್ ೧೯೬೯ ರಲ್ಲಿ ಲಿಬಿಯಾದ ರಾಜ,ಇದ್ರಿಸ್ ನನ್ನು 'ಸೈನಿಕ ಕ್ರಾಂತಿ'ಯಲ್ಲಿ ಪದಚ್ಯುತಿಗೊಳಿಸಿ ಸರ್ವಾಧಿಕಾರಿಯಾಗಿ ಪದಗ್ರಹಣಮಾಡಿದರು.

ಇವನು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗ ಅರಬ್ ದೇಶಗಳಲ್ಲಿ ನಡೆಯುತ್ತಿದ್ದ ಮುಖ್ಯ ಘಟನೆಗಳು ಇವನ ಮೇಲೆ ಪ್ರಭಾವ ಬೀರಿದವು. ಪ್ರಾಥಮಿಕ ಶಿಕ್ಷಣದ ಅನಂತರ ಮಿಸರಾಟದಲ್ಲಿ ಖಾಸಾಗಿಯಾಗಿ ಶಿಕ್ಷಣವನ್ನು ಪಡೆದ. ಶಿಕ್ಷಣದ ಸಮಯದಲ್ಲಿ ಇತಿಹಾಸ ಅಭ್ಯಾಸದಲ್ಲಿ ಆಸಕ್ತಿ ವಹಿಸಿದ. ಜಿಂಗಾಸಿಯ (ಬೆಂಗಾಸಿ) ರಾಯಲ್ ಲಿಬಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಅಧ್ಯಯನ ಮಾಡಿ (1961-66) ಪದವೀಧರನಾದ. ಅನಂತರ ಗ್ರೇಟ್ ಬ್ರಿಟನ್ನಿನ ಸಾಂಡ್ಹರ್ಟ್ನ ರಾಯಲ್ ಮಿಲಿಟರಿ ಅಕಾಡೆಮಿಯಲ್ಲಿ 4 ತಿಂಗಳು ಸಿಗ್ನಲ್ ಆಫೀಸರ್ ತರಬೇತಿ ಪಡೆದ. ಲಿಬಿಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆದ. ಲಿಬಿಯ ಸೈನ್ಯದ ಎಂಜನಿಯರ್ ವಿಭಾಗದಲ್ಲಿ ನಿಯೋಜಿತ ಅಧಿಕಾರಿಯಾದ.

ಈಜಿಪ್ಟ್ ನ ಅಧ್ಯಕ್ಷ ನಾಸಿರ್, ಅವರಿಗೆ ಒಬ್ಬ ಆದರ್ಶವ್ಯಕ್ತಿಯಾದರು

[ಬದಲಾಯಿಸಿ]

ಈಜಿಪ್ಟ್ ದೇಶದ ಆಗಿನ ಅಧ್ಯಕ್ಷ, ಗಮಾಲ್ ಅಬ್ದುಲ್ ನಾಸಿರ್ ರವರ ಭಾಷಣಗಳು 'ಕೈರೋ ಆಕಾಶವಾಣಿ'ಯಲ್ಲಿ ಕೇಳಿದಾಗ ಅವರಿಗೆ ಸ್ಫೂರ್ತಿ ನೀಡಿದವು. 'ನಾಸಿರ್' ರಂತೆ ತಾವೊಬ್ಬ ಮಾದರಿ ಜನರಲ್ ಆಗುವ ಕನಸು ಕಾಣುತ್ತಾ ಸೈನಿಕ ಶಾಲೆಗೆ ಭರ್ತಿಯಾದರು. ಗಡಾಫೆ, ಸುಮಾರಾಗಿ ಓದಿಕೊಂಡಿದ್ದರು. ಅವೆಲ್ಲಾ ಸಮಾಜವಾದಿ ಯುಟೋಪಿಯ, ಸಮಾಜವಾದ, ಅರಬ್ ಬುಡಕಟ್ಟಿನ ಸಾಂಪ್ರದಾಯಿಕ ಗೌರವ ಕಟ್ಟಳೆಗಳ ಅಧ್ಯಯನ, ಇಸ್ಲಾಮಿ ಪ್ರಜಾಪ್ರಭುತ್ವ, ಸರ್ವಾಧಿಕಾರದ ವಿರೋಧ, ಐರೋಪ್ಯ ವಸಾಹತು ಶಾಹೀ ವಿಚಾರಗಳ ಬಗ್ಗೆ ವಿರೋಧ, ಮೂರನೇ ವಿಶ್ವದ ಬಗ್ಗೆ ಸಿದ್ಧಾಂತಗಳು ; ಇವೆಲ್ಲಾ ಅವರ ಅಧ್ಯಯನದ ಮಗ್ಗಲುಗಳಾಗಿದ್ದವು. ಇಷ್ಟೆಲ್ಲಾ ಮನಸ್ಸಿನಲ್ಲಿ ತುಂಬಿಕೊಂಡಿದ್ದ ಯುವ ಗಡಾಫೆ ಮುಂದೆ ವರ್ತಿಸಿದ್ದೇ ಬೇರೆತರಹ. ಅವರ ತಲೆಯಲ್ಲಿ ಒಂದು ಹೊಸ ವಿಚಾರಧಾರೆ ಪ್ರವಹಿಸುತ್ತಿತ್ತು. ತಾವೇ ಅಧಿಕಾರವನ್ನು ಹೊಂದಿದಾಗ ಅವರ ಮನಸ್ಸಿನಲ್ಲಿ ಮೆಲುಕುಹಾಕುತ್ತಿದ್ದ ರಾಜಕೀಯ ಹಾಗೂ ಸಾಮಾಜಿಕ ಒಲವುಗಳು ಭ್ರಾಂತವಾಗಿದ್ದವು.

ಸೂಯೆಝ್ ಕ್ರಾಂತಿಯಲ್ಲಿ ಭಾಗವಹಿಸಿದರು

[ಬದಲಾಯಿಸಿ]

೧೯೫೬ ರಲ್ಲಿ ನಡೆದ 'ಸೂಯೆಝ್ ಕ್ರಾಂತಿ'ಯಲ್ಲಿ 'ಗಡ್ಡಾಫಿ'ಯವರು, ಇಸ್ರೇಲ್ ವಿರುದ್ಧದ ದಂಗೆಯಲ್ಲಿ ಭಾಗಿಯಾಗಿದ್ದರು. 'ಬ್ರಿಟನ್ ನ ಮಿಲಿಟರಿ ಕಾಲೇಜ್' ನಲಿ ತರಬೇತಿ ಪಡೆದ, ರಾಜಾಡಳಿತವನ್ನು ಕೊನೆಗೊಳಿಸುವ ಸಂಚು ರೂಪಿಸಿದ್ದರು.ಸನ್, ೧೯೬೯ ರ ಸೆಪ್ಟೆಂಬರ್ ೧ ರಂದು, 'ಬೆಂಗಾಝಿ'ಗೆ ವಾಪಸ್ ಆದ 'ಗಡ್ಡಾಫಿಯವರು,ಕ್ರಾಂತಿಯನ್ನು ಆರಂಭಿಸಿದರು. ೧೯೭೦ ರಲ್ಲಿ ಪ್ರಕಟವಾದ ’ಗ್ರೀನ್ ಬುಕ್ ಪುಸ್ತಕ'ದಲ್ಲಿ ತಮ್ಮ ರಾಜಕೀಯ ಸಿದ್ಧಾಂತಗಳನ್ನು ವಿವರಿಸಿದ್ದಾರೆ. 'ಇಸ್ಲಾಂ ತತ್ವ'ಗಳನ್ನು ಅಳವಡಿಸಿಕೊಂಡಿರುವ ಹಾಗೂ 'ದೇಶೀಯವಾಗಿ ಪೋಶಿಸಲ್ಪಟ್ಟರಾಜಕೀಯ ಸಿದ್ಧಾಂತ','ಸಮಾಜವಾದ' ಮತ್ತು 'ಬಂಡವಾಳಶಾಹಿ'ಗೆ ಪರ್ಯಾಯವೆಂಬುದನ್ನು ಅವರು ಪ್ರತಿಪಾದಿಸುತ್ತಾ ಬಂದರು. ಸರ್ವಾಧಿಕಾರ ಹೊರಗೆ ತೋರಿದರೂ ಸಮಾನತೆಯಲ್ಲಿ ವಿಶ್ವಾಸವಿಡುವ ತಮ್ಮ ನಿಲುವನ್ನು ಪ್ರಜೆಗಳಿಗೆ ಸಾರಿಹೇಳುತ್ತಾ ಬಂದರು. 'ಉದಾರ ಹೃದಯಿಯಾದ ತಾವು, 'ಕೇವಲ ನಿಯಂತ್ರಕರಷ್ಟೆ'; ಎಲ್ಲಾ ಹಕ್ಕು, ಸೌಲತ್ತುಗಳನ್ನೂ ಪ್ರಜೆಗಳ ಕೈನಲ್ಲಿ ಕೊಟ್ಟಿರುವೆ',ಎಂದು ಸದಾ ಘೋಷಿಸುತ್ತಿದ್ದ ಅವರ ಮಾತಿನ ಸತ್ಯವನ್ನು ಪ್ರಜೆಗಳೆಲ್ಲಾ ಬಲ್ಲವರಾಗಿದ್ದರು.

ಜಮ ಹಿರಿಯ

[ಬದಲಾಯಿಸಿ]

ಅಂದರೆ, ಸಾವಿರಾರು ಜನರಿರುವ ಅನೇಕ ಸಮಿತಿಗಳನ್ನು ರಚಿಸಿ, ಅಧಿಕಾರವೆಲ್ಲಾ ಸಮಿತಿಗಳ ಕೈಯಲ್ಲಿದೆ, ಅಥವಾ’ಜನಸಮೂಹದ ದೇಶ'ವೆಂಬ ಪರಿಕಲ್ಪನೆಯನ್ನು ಜನರ ಮನಸ್ಸಿನಮೇಲೆ ಮೂಡಿಸಿ ಅದನ್ನು ಅನುಷ್ಠಾನಕ್ಕೂ ತಂದರು.

ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿರವರ, ಕಾರ್ಯ ವೈಖರಿ

[ಬದಲಾಯಿಸಿ]

ವಿದೇಶ ಪ್ರವಾಸಕ್ಕೆ ಹೋದಾಗ,ತಮ್ಮ ಜೊತೆಯಲ್ಲಿ, 'ಸರ್ವ ಸೌಲಭ್ಯವುಳ್ಳ ಐಶಾರಾಮಿ ಡೇರೆ'ಗಳನ್ನು ಒಯ್ಯುತ್ತಿದ್ದರು. ಅವರ ಅಂಗರಕ್ಷಕಿಯರು 'ಬಂದೂಕು ಧಾರಿಗಳಾದ ಯುವತಿಯರು'. ಆಧುನೀಕತೆಯನ್ನು ಪ್ರದರ್ಶಿಸುತ್ತಾ, ಮರುಭೂಮಿಯ ಸಂಸ್ಕೃತಿಯನ್ನು ಹೊರಗೆ ಪ್ರದರ್ಶಿಸುತ್ತಾ, ಅತಿ ಚತುರನಂತೆ ಮುಖವಾಡವನ್ನು ಪ್ರದರ್ಶಿಸಲು ಅವರು ಹಾತೊರೆಯುತ್ತಿದ್ದರು. ತಮ್ಮ ವರ್ಚಸ್ಸಿನಿಂದ ಅರಬ್ ರಾಜ್ಯಗಳನ್ನೆಲ್ಲಾ ಒಟ್ಟುಗೂಡಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು.'ಲಿಬಿಯಾದ ಧಾರ್ಮಿಕ ಮಾರ್ಗದರ್ಶಿ' ಎಂದು ತೋರ್ಪಡಿಸಿಕೊಳ್ಳಲು ಸದಾ ಪ್ರಯತ್ನ ಶೀಲರಾಗಿದ್ದರು. ವಾಸ್ತವವಾಗಿ ಅವರನ್ನು ಹತ್ತಿರದಲ್ಲಿ ಕಂಡವರು, ಅವರೊಬ್ಬ 'ಢೊಂಗಿವ್ಯಕ್ತಿ' ಯೆಂಬ ಸತ್ಯವನ್ನು ಅರಿತಿದ್ದರು. 'ನಿರಂಕುಶ ಪ್ರಭುತ್ವವನ್ನು ಸದಾ ಪೂಜಿಸಿ,' ಅದನ್ನು ವಿರೋಧಿಸಿದ ಸಾವಿರಾರು ಜನರನ್ನೆಲ್ಲಾ ಕೊಲ್ಲಿಸಿದ 'ಅಮಾನುಷವ್ಯಕ್ತಿ'ಯೆಂದು ಗುರುತಿಸಿದ್ದಾರೆ. ವಯಸ್ಸಾದ ಆತ ಈಗ, 'ದೇವದೂತ'ನಂತೆ ಜನರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಬಳಿಕ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಹುನ್ನಾರದಲ್ಲಿದ್ದಾರೆಂದು, ಅವರ ವಿರೋಧಿಗಳು ಮಾತಾಡಿಕೊಳ್ಳುತ್ತಿದ್ದಾರೆ.

ಲಿಬಿಯಾದೇಶದ ಕ್ರಾಂತಿಗೆ ಕಾರಣಗಳು

[ಬದಲಾಯಿಸಿ]

ವಿಶ್ವದಲ್ಲಿ ಪೆಟ್ರೋಲಿಯಂ ಉತ್ಪಾದಿಸುವ ರಾಷ್ಟ್ರಗಳಲ್ಲಿ ಮಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾದ, ೧೪೦ ಬುಡಕಟ್ಟುಗಳಿರುವ ಲಿಬಿಯ ದೇಶದಲ್ಲಿ ಯಾವುದೇ ರೀತಿಯ ಸಂಘಟನೆಗಳಿಲ್ಲ. ಚಾಣಾಕ್ಷರಾದ,ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿ ಈ ಬುಡಕಟ್ಟುಗಳ ಬಲವನ್ನು ೧೯೬೯ ರಲ್ಲಿ ಪಾದಾರ್ಪಣೆಮಾಡಿದ ಸಮಯದಲ್ಲೇ ಕಂಡುಕೊಂಡಿದ್ದರು. ಮುಂದೆ ಈ ಬುಡಕಟ್ಟುಗಳ ಸಮೂಹವೇ ಅವರ ಸಾಮಾಜಿಕ ಧೋರಣೆಗಳನ್ನು ವಿರೋಧಿಸುವ ಗೋಡೆಗಳಾಗುತ್ತವೆ,ಎಂಬ ಕಟು-ಸತ್ಯವನ್ನೂ ಅವರು ಮನಗಂಡಿದ್ದರು. ಮೊದಲು ಅವರನ್ನು ಧ್ವಂಸಮಾಡುವ ಸಾಹಸಕ್ಕೆ ಕೈಹಾಕಿ ಸೋತಮೇಲೆ, ಅವರಜೊತೆಯೇ ಹೊಂದಾಣಿಕೆಗಾಗಿ ಪ್ರಯತ್ನ ನಡೆಸಿದರು. ಅವರ ಸಮ್ಮತಿಯಿಂದಲೇ ಇದುವರೆವಿಗೂ ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿ ರವರು, ನೆಮ್ಮದಿಯಾಗಿ ರಾಜ್ಯವಾಳುತ್ತಿದ್ದರು.

1969ರ ಸೆಪ್ಟೆಂಬರ್ 1ರಂದು ಗದಾಫಿಯ ನಾಯಕತ್ವದಲ್ಲಿ ಮಿಲಿಟರಿ ಅಧಿಕಾರಿಗಳು ರಕ್ತಪಾತವಿಲ್ಲದ ಕ್ಷಿಪ್ರಕ್ರಾಂತಿಯನ್ನು ನಡೆಸಿ ಲಿಬಿಯ ರಾಜನನ್ನು ಪದಚ್ಯುತಿಗೊಳಿಸಿ ಮಿಲಿಟರಿ ಆಡಳಿತ ಸ್ಥಾಪಿಸಿದರು. ಗದಾಫಿ 1970ರಲ್ಲಿ ಮುಖ್ಯಮಂತ್ರಿಯಾದ. ಲಿಬಿಯನ್ ರಿವೆಲ್ಯೂಷನರಿ ಕಮಾಂಡ್ ಕೌನ್ಸಿಲ್ ನ ಆಣತಿಯಂತೆ ಆಡಳಿತ ನಡೆಯುತ್ತಿತ್ತು. ಇವನು ಅಧಿಕಾರ ವಹಿಸಿಕೊಂಡ ಕೂಡಲೇ ಅಮೆರಿಕ ಮತ್ತು ಬ್ರಿಟಿಷ್ ರಕ್ಷಣ ನೆಲೆಗಳನ್ನು ಮುಚಲು ಆಜ್ಞೆ ಮಾಡಿದ. ಐರೋಪ್ಯ ತೈಲೋದ್ಯಮ ಕಂಪನಿಗಳಿಗೆ ಆದಾಯದಲ್ಲಿ ಅಧಿಕಭಾಗ ಕೊಡದಿದ್ದರೆ ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿದ. ಇವನ ಆಣತಿಯಂತೆ ಕಂಪನಿಗಳು ಶೇ.50 ರಿಂದ ಶೇ.70 ಭಾಗ ಕೊಡಲು ಒಪ್ಪಿದವು. ಗದಾಫಿ 1972ರಲ್ಲಿ ಅಧ್ಯಕ್ಷನಾದ, ಆಗ ಮೇಜರ್ ಅಬ್ದುಲ್ ಮುಖ್ಯಮಂತ್ರಿಯಾದ. ಇವನು 1971 ರಿಂದ 1977ರ ವರೆಗೆ ಈಜಿಪ್ಟ್ ಮಾದರಿಯಂತೆ ಅರಬ್ ಸೋಷಿಯಲಿಸ್ಟ್ ಯೂನಿಯನ್ ಲಿಬಿಯದ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಿದ. 1977ರಲ್ಲಿ ಅಧಿಕಾರ ತ್ಯಜಿಸಿದ. ಲಿಬಿಯನ್ ಅರಬ್ ಜಮಾಹಿರಿಯ ನೇರವಾಗಿ ದೇಶದ ಆಡಳಿತಕ್ಕೆ ಹೊಣೆಯೆಂದು ತಿಳಿಸಿದ. ಆದರೂ ಲಿಬಿಯನ್ ರೆವೆಲ್ಯೂಷನರಿ ಕಮಾಂಡ್ ಕೌನ್ಸಿಲ್ ಆಣತಿಯಂತೆ ನಡೆಯುತ್ತಿತ್ತು.

ಬುಡಕಟ್ಟು ನಾಯಕರನ್ನು ಒಡೆಯುವ ಪ್ರಯತ್ನ ಸೋತಿತು

[ಬದಲಾಯಿಸಿ]

ಅವರ ಅಧಿಕಾರಕ್ಕೆ ಬಂದಾಗ ಆ ಬುಡಕಟ್ಟುಗಳ ನಾಯಕರನ್ನು ಒಡೆದು ಬೇರೆಮಾಡುವ ರಣ ನೀತಿ ಮುಳುವಾಯಿತು. ಅವೇ ಒಟ್ಟುಗೂಡಿ ಗಡಾಫೆಯವರ ವಿರುದ್ಧ ಯುದ್ಧವನ್ನು ಘೋಷಿಸಿವೆ. ಲಿಬಿಯಾದೇಶದ ಹೆಚ್ಚುಭಾಗವನ್ನು ಆಕ್ರಮಿಸಿಕೊಂಡು,'ಕರ್ನಲ್ ಗಡಾಫೆ'ಯವರ ಪದಚ್ಯುತಿಗೆ ಮಂಗಳ ಹಾಡಿವೆ. ದೇಶದ 'ಅತಿಬಲಾಢ್ಯ ವಾರ್ಫಾಲ್ಲಾಹ್' ತನ್ನ ವಿರೋಧವನ್ನು ಬಹಿರಂಗವಾಗಿ ಪ್ರಕಟಿಸಿ 'ಅವನೀಗ ನಮಗೆ ಸೋದರನಲ್ಲ 'ಎಂದು ಘೋಷಿಸಿದೆ.'ಝುವೈಯ್ಯ ಬುಡಕಟ್ಟಿನ ಪಂಗಡ' ಪೂರ್ವ ಲಿಬಿಯದೇಶದ ಪೆಟ್ರೋಲಿಯಂ ಭಂಡಾರದ ಸಂಗ್ರದ ಪೆಟ್ರೋಲ್ ರವಾನಿಸುವ ಕೊಳವೆಗಳನ್ನು ನುಚ್ಚುನೂರುಮಾಡುವುದಾಗಿ ಬೆದರಿಸಿದೆ. 'ಬಾನಿವಾಲಿದ್ ಸಮುದಾಯ' ದೇಶದ ಭದ್ರತಾ ಪಡೆಯಲ್ಲಿರುವ ತನ್ನ ಯೋಧರನ್ನು ಮರಳಿ ಬರಲು ಹೇಳಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿರವರ, ಬಲಗೈಯಂತಿದ್ದ 'ಬಲಿಷ್ಠ ಝಿಂಟಾನ್ ಬುಡಕಟ್ಟು' ಬಂಡುಕೋರರಿಗೆ ಬೆಂಬಲವನ್ನು ಘೋಷಿಸಿದೆ.

ಅಮೆರಿಕದ ಸ್ವಾರ್ಥನೀತಿ

[ಬದಲಾಯಿಸಿ]

ಇವುಗಳ ಜೊತೆಗೆ 'ಪ್ರಜಾಪ್ರಭುತ್ವದ ರಕ್ಷಣೆ'ಯ ಸೋಗು ಹಾಕಿ, ತಮಗೆ ಬೇಕಾದ ಸರಕಾರವನ್ನು ಸ್ಥಾಪಿಸಲು ಪಣತೊಟ್ಟ ಅಮೆರಿಕ ಹಾಗೂ ಮಿತ್ರರಾಜ್ಯಗಳು ಹೆಣಗಾಡುತ್ತಿರುವುದು ಸರ್ವಾಧಿಕಾರಿಯ ನೈತಿಕ ಹಕ್ಕನ್ನು ಮುರಿದು ಮುಅಮ್ಮರ್ ಮಹಮ್ಮದ್ ಅಲ್-ಗಡಾಫಿರವರನ್ನು 'ಲಿಬಿಯಾ ದೇಶ'ದಿಂದ ತೊಲಗಿಸುವ ಹುನ್ನಾರದಲ್ಲಿ ತೊಡಗಿವೆ. ಪೆಟ್ರೋಲಿಯಂ ಭಂಡಾರದ ಮೇಲೆ ತಮ್ಮ ಪಾಲನ್ನು ಸುನಿಶ್ಚಿತಗೊಳಿಸುವ ಯೋಜನೆಯಲ್ಲಿವೆ. ಇವನನ್ನು ಟೀಕೆ ಮಾಡುವವರು ಗದಾಫಿ ನಿರಂಕುಶ ಸರ್ವಾಧಿಕಾರಿ ಎಂದು ಕರೆಯುತ್ತಿದ್ದರು. ಈತ 1980ರ ದಶಕದಲ್ಲಿ ರಸಾಯನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ. ವಿಶ್ವಸಂಸ್ಥೆಯ ಸದಸ್ಯ ದೇಶಗಳು ಲಿಬಿಯಕ್ಕೆ ನಿರ್ಬಂಧವನ್ನು ವಿಧಿಸಿದವು. 2003ರಲ್ಲಿ ಇರಾಕ್ನ ಅಧ್ಯಕ್ಷ ಸದ್ದಾಂ ಹುಸೇನ್ನನ್ನು ಬಂಧಿಸಿದ 6 ದಿನಗಳ ಅನಂತರ ಶಸ್ತ್ರಾಸ್ತ್ರಗಳನ್ನು ತ್ಯಜಿಸಿರುವುದಾಗಿ ಗದಾಫಿ ಹೇಳಿದ.

2011ರ ಫೆಬ್ರವರಿಯಲ್ಲಿ ನೆರೆಹೊರೆಯ ದೇಶಗಳಾದ ಈಜಿಪ್ಟ್ ಮತ್ತು ಟ್ಯೂನಿಷಿಯ ದೇಶಗಳಲ್ಲಿ ಕ್ರಾಂತಿಗಳು ನಡೆದಾಗ ಗದಾಫಿ ವಿರುದ್ಧವಾಗಿ ಪ್ರತಿಭಟನೆಗಳು ಪ್ರಾರಂಭವಾಗಿ ದೇಶಾದ್ಯಂತ ಹರಡಿತು. ಗದಾಫಿಗೆ ವಿರೋಧಿಯಾದ ಸೈನ್ಯದ ಭಾಗ ಬೆಂಗಾಜಿ಼ಯಲ್ಲಿ ನ್ಯಾಷನಲ್ ಟ್ರಾನ್ಸಿಷನಲ್ ಕೌನ್ಸಿಲ್ (ಎನ್.ಟಿ.ಸಿ) ಮಧ್ಯಕಾಲಿನ ಸರ್ಕಾರ ಸ್ಥಾಪಿಸಿತು. ದೇಶದಲ್ಲಿ ಹೋರಾಟ ಪ್ರಾರಂಭವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಗದಾಫಿ ಮತ್ತು ಇವನ ಕುಟುಂಬದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಜೂನ್ 27ರಂದು ಅವರನ್ನು ಬಂಧಿಸಲು ಆಜ್ಞೆ ಹೊರಡಿಸಿತು. ನ್ಯಾಟೊ ಬಲವು ಎನ್.ಟಿ.ಸಿ.ಗೆ ಬೆಂಬಲವಾಗಿ ಹೋರಾಟ ಪ್ರಾರಂಭಿಸಿತು. ಗದಾಫಿಗೆ ವಿಧೇಯರಾದ ಸೈನ್ಯವು ಟ್ರಿಪೋಲಿ ಮೇಲಿನ ಹತೋಟಿಯನ್ನು ಆಗಸ್ಟ್ 16ರಂದು ಕಳೆದುಕೊಂಡಿತು. ಗದಾಫಿ ಸಾರ್ಟೆ ಪಟ್ಟಣದ ಮೇಲೆ ಮಾತ್ರ ಹತೋಟಿಯನ್ನು ಹೊಂದಿದ್ದ. ಸೆಪ್ಟೆಂಬರ್ 16ರಂದು ಎನ್.ಟಿ.ಸಿ. ವಿಶ್ವಸಂಸ್ಥೆಯಲ್ಲಿ ಸ್ಥಾನವನ್ನು ತುಂಬಿತು. ನ್ಯಾಟೊ ಪಡೆಗಳ ಯುದ್ಧ ವಿಮಾನಗಳು ಇವನ ಬೆಂಗಾವಲು ಪಡೆಗಳ ಮೇಲೆ ಧಾಳಿ ನಡೆಸಿದವು. ಅಕ್ಟೋಬರ್ 20ರಂದು ಸಾರ್ಟೆಯಲ್ಲಿ ಎನ್.ಎಲ್.ಎ. ಹೋರಾಟಗಾರರಿಗೆ ಈತ ಜೀವಂತವಾಗಿ ಕೈವಶವಾದಾಗ ಈತನನ್ನು ಕೊಲ್ಲಲಾಯಿತು. ಇವನ 41 ವರ್ಷಗಳ ಆಡಳಿತ ಮುಕ್ತಾಯವಾಯಿತು. 1900 ಅನಂತರ ದೀರ್ಘಕಾಲ ಆಡಳಿತ ನಡೆಸಿದ ರಾಜವಂಶಕ್ಕೆ ಸೇರಿಲ್ಲದ ನಾಲ್ಕನೆಯ ವ್ಯಕ್ತಿ ಈತ.

ಉಲ್ಲೇಖಗಳು

[ಬದಲಾಯಿಸಿ]
 1. Vela, Justin (16 July 2011). "West prepares to hand rebels Gaddafi's billions". The Independent. London. Retrieved 16 July 2011.
 2. Staff (23 August 2011). "Libya Live Blog: Tuesday, 23 August 2011 – 16:19". Al Jazeera. Retrieved 23 August 2011.
 3. "Muammar Gaddafi: How he died". BBC. Retrieved 21 October 2011.
 4. For purposes of this article, 23 August 2011 is considered to be the date that Gaddafi left office. Other dates might have been chosen.
  • On 15 July 2011, at a meeting in Istanbul, more than 30 governments, including the United States, withdrew recognition from Gaddafi's government and recognised the National Transitional Council (NTC) as the legitimate government of Libya.[೧]
  • On 23 August 2011, during the Battle of Tripoli, Gaddafi lost effective political and military control of Tripoli after his compound was captured by rebel forces.[೨]
  • On 20 October 2011, Gaddafi was captured and killed near his hometown of Sirte.[೩]
 5. "Al-Qadhafi, Muammar Muhammad". Oxford Dictionary of Political Biography