ವಿಷಯಕ್ಕೆ ಹೋಗು

ನೊಬೆಲ್ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನೊಬೆಲ್ ಇಂದ ಪುನರ್ನಿರ್ದೇಶಿತ)
ನೊಬೆಲ್ ಪ್ರಶಸ್ತಿ
ಕೊಡಲ್ಪಡುವ ವಿಷಯಮಾನವೀಯತೆ ಅತ್ಯುತ್ತಮ ಕೊಡುಗೆಗಳಿಗಾಗಿ ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ, ಶಾಂತಿ, ಭೌತಶಾಸ್ತ್ರ, ಮತ್ತು ಶರೀರ ವಿಜ್ಞಾನ ಅಥವಾ ಔಷಧ
ದೇಶ
ಕೊಡಿಸಲ್ಪಡು
  • ಸ್ವೀಡಿಷ್ ಅಕಾಡೆಮಿ
  • ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ನೋಬೆಲ್ ಸೈನ್ಸಸ್ನ ,
  • ನೊಬೆಲ್ ಕಮಿಟಿ ಆಫ್ ಕರೋಲಿನ್ಸ್ಕಾ ಇನ್ಸ್ಟಿಟ್ಯುಟ್ಟ್ ,
  • ನಾರ್ವೇಜಿಯನ್ ನೊಬೆಲ್ ಸಮಿತಿ.

ನೊಬೆಲ್ ಪ್ರಶಸ್ತಿಯು ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ. ಇವನ್ನು ಕೆಳಗೆ ನಮೂದಿ ಸಿರುವ ವಿಭಾಗಗಳಿಗೆ ಪ್ರದಾನಿಸಲಾಗುತ್ತದೆ. ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ. ನವೆಂಬರ್ ೨೦೦೫ರವರೆಗೆ ಒಟ್ಟು ೭೭೬ ನೊಬೆಲ್ ಪದಕಗಳನ್ನು ನೀಡಲಾಗಿದೆ. (೭೫೮ನ್ನು ಸಾಧಕರಿಗೂ ಉಳಿದ ೧೮ನ್ನು ಸಂಸ್ಥೆಗಳಿಗೆ ನೀಡಲಾಗಿದೆ).

ಪ್ರಶಸ್ತಿಯ ಇತಿಹಾಸ

[ಬದಲಾಯಿಸಿ]

ಆಲ್ಫ್ರೆಡ್ ನೋಬೆಲ್ 'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, ೧೮೯೫ರಲ್ಲಿ ತನ್ನ ಸಂಪತ್ತಿನ ೯೪% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ. ಈ ಪ್ರಕಾರವಾಗಿ ೧೯೦೧ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.

ವಿವಿಧ ವರ್ಷಗಳಲ್ಲಿ ಬಂದ ನೋಬೆಲ್ ಪ್ರಶಸ್ತಿಗಳು

[ಬದಲಾಯಿಸಿ]
  1. ೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು
  2. ೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು

ನೋಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು

[ಬದಲಾಯಿಸಿ]

ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ (ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು ೧೯೬೯ ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)

ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು

[ಬದಲಾಯಿಸಿ]

೨೦೦೯ ರ ವರೆಗೆ ಭಾರತೀಯರಾದ (ಅಥವಾ ಭಾರತೀಯ ಮೂಲದ) ೮ ಜನಕ್ಕೆ ಈ ಪ್ರಶಸ್ತಿ ಸಂದಿದೆ. ಇವರುಗಳು-

2019

ಕೈಲಾಸ್ ಸತ್ಯಾರ್ಥಿ - ಶಾಂತಿ (2014)

[ಬದಲಾಯಿಸಿ]
  • ಗಾಂಧಿವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ 'ಬಚಪನ್ ಬಚಾವೋ' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಶೋಷಿತರ ಧ್ವನಿಯಾಗಿ ನಿಂತಿದ್ದಾರೆ.
  • ಮಹಾತ್ಮನ ಅಹಿಂಸಾ ಹೋರಾಟದ ಪರಂಪರೆಯನ್ನು ಅವರು ಮುಂದವರಿಸಿಕೊಂಡು ಬಂದಿದ್ದು, ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿ ಕೊಂಡಿದ್ದಾರೆ.
  • ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ ಮಲಾಲ ಅವರಿಗೆ ಪಾಕ್‌`ನ ಮಲಾಲಾ ಯೂಸುಫ್ ಝಾಯಿ ಅವರಿಗೆ ೨೦೧೪ ರ ನೊಬೆಲ್ ಶಾಂತಿ ಪುರಸ್ಕಾರ ನೀಡಿದೆ. ತಾಲಿಬಾನ್‌ ಉಗ್ರರ ದಾಳಿಗೆ ಸಿಲುಕಿ ಬಚಾವಾಗಿದ್ದ ಮಲಾಲ ಯೂಸುಫ್ ಝಾಯಿ ನೊಬೆಲ್‌ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
  • (ವಿಜಯ ಕರ್ನಾಟಕ ಸುದ್ದಿ -೧೧-೧೦-೨೦೧೪)

ಜಪಾನಿನ ಯಶಿನೋರಿ ಒಶುಮಿಗೆ ಗೆ ೨೦೧೬ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ

[ಬದಲಾಯಿಸಿ]
  • ೨೦೧೬ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದ್ದು, ಜಪಾನಿನ ಯಶಿನೋರಿ ಒಶುಮಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಪಾನಿನ ಜೀವಶಾಸ್ತ್ರಜ್ಞ, ಜೀವಕೋಶ ಅಧ್ಯಯನ ತಜ್ಞ ಯೊಶಿನೊರಿ ಒಶುಮಿ ಅವರಿಗೆ 2016ರ ಜೀವವಿಜ್ಞಾನ ಅಥವಾ ವೈದ್ಯಕೀಯ ನೊಬೆಲ್ ಗೆ ಭಾಜನರಾಗಿದ್ದಾರೆ. ಯೊಶಿನೊರಿ ಅವರು ಅಟೋಫೇಜಿ ಕಾರ್ಯವೈಖರಿಯಲ್ಲಿ ನಡೆಸಿರುವ ಸಂಶೋಧನೆಗಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ವರದಿಗಳ ಪ್ರಕಾರ ಸುಮಾರು ೨೭೩ ವಿಜ್ಞಾನಿಗಳು ಜೀವಶಾಸ್ತ್ರ ಅಥವಾ ವೈದ್ಯಕೀಯದ ಈ ವರ್ಷದ ನೊಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆದಿದ್ದರು. ಒಶುಮಿ ಅವರ ಸಂಶೋಧನೆಯು ಕ್ಯಾನ್ಸರ್ ಹಾಗೂ ಪಾರ್ಕಿನ್ಸನ್ಸ್ ಮುಂತಾದ ಕಾಯಿಲೆಗಳಿಗೆ ಮನುಷ್ಯನ ದೇಹವು ಹೇಗೆ ತುತ್ತಾಗುತ್ತದೆ ಮತ್ತು ಈ ರೋಗಗಳಿಗೆ ಕಾರಣವಾಗುವಲ್ಲಿ ಆತನ ದೇಹದಲ್ಲಿನ ಜೀವಕೋಶಗಳು ಹೇಗೆ ನಾಶವಾಗುತ್ತವೆ ಮತ್ತು ಅವುಗಳ ಭಾಗಗಳು ಪುನರ್ ಬಳಕೆಯಲ್ಲಿ ಹೇಗೆ ತೊಡಗಿಕೊಳ್ಳುತ್ತವೆ ಎಂಬುದನ್ನು ವಿವರಿಸುತ್ತದೆ.
  • ನೊಬೆಲ್ ಕಮಿಟಿಯು ವೈದ್ಯಕೀಯ ರಂಗದ ಈ ವರ್ಷ ನೊಬೆಲ್ ಬಹುಮಾನವನ್ನು ಸ್ಟಾಕ್ಹೋಮ್ನಲ್ಲಿಂದು ಪ್ರಕಟಿಸಿತು. ಮನುಷ್ಯನ ದೇಹದಲ್ಲಿನ ಜೀವಕೋಶಗಳು ನಾಶವಾಗುವ ಹಾಗೂ ಅವುಗಳ ಭಾಗಗಳು ಪುನರ್ ಬಳಕೆಯಲ್ಲಿ ತೊಡಗಿಕೊಳ್ಳುವಲ್ಲಿನ ಅಟೋಫೇಜಿ ಕಾರ್ಯವೈಖರಿಯನ್ನು ವಿವರಿಸುವ ಒಶುಮಿ ಅವರ ಸಂಶೋಧನೆಯು ಮಹತ್ವದ್ದಾಗಿದೆ ಎಂದು ನೊಬೆಲ್ ಸಮಿತಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ೧೯೦೫ರಲ್ಲಿ ಮೊದಲ ನೊಬೆಲ್ ಬಹುಮಾನ ನೀಡಲಾಗಿತ್ತು. ಅಲ್ಲಿಯ ಬಳಿಕ ಇದೀಗ ಮೆಡಿಸಿನ್ ವರ್ಗದಲ್ಲಿ ನೀಡಲ್ಪಟ್ಟಿರುವ 107ನೇ ನೊಬೆಲ್ ಬಹುಮಾನ ಇದಾಗಿದೆ.
  • ಪರಿಚಯ : ಹೆಸರು: ಯಶಿನೋರಿ ಒಶುಮಿ ಜನನ: ೧೯೪೫, ಫೊಕೋಕಾ, ಜಪಾನ್ ಸಂಶೋಧನೆ: ಆಟೋಫಗಿ ಪ್ರಕ್ರಿಯಾ ವಿಧಾನ

[]

ನೊಬೆಲ್‌ ಪುರಸ್ಕೃತರು ಬೆಂಗಳೂರು ನಗರಕ್ಕೆ

[ಬದಲಾಯಿಸಿ]
  • 17 Nov, 2016;ಪ್ರಜಾವಾಣಿ ವಾರ್ತೆ
  • ಸ್ವೀಡನ್‌ನ ನೊಬೆಲ್‌ ಮೀಡಿಯಾ ಮತ್ತು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ‘ನೊಬೆಲ್‌ ಪ್ರೈಜ್‌ ಸರಣಿ’ ಕಾರ್ಯಕ್ರಮ ಹಮ್ಮಿಕೊಂಡಿವೆ.
  • ಹತ್ತು ನೊಬೆಲ್‌ ವಿಜ್ಞಾನಿಗಳ ಪೈಕಿ ಆರು ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಈ ವಿಜ್ಞಾನಿಗಳು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೂ ಭೇಟಿ ನೀಡಲಿದ್ದಾರೆ. ನೊಬೆಲ್‌ ಸರಣಿಯ ಮೊದಲ ಕಾರ್ಯಕ್ರಮ ಗುಜರಾತ್‌ನ ರಾಜಧಾನಿಯಲ್ಲಿ 2017 ರ ಜನವರಿ 9 ರಿಂದ 11 ರವರೆಗೆ ನಡೆಯಲಿದೆ.
  • ಜ. 13 ರಂದು ಬೆಂಗಳೂರಿಗೆ ನೊಬೆಲ್‌ ವಿಜೇತರು ಭೇಟಿ ನೀಡಲಿದ್ದಾರೆ. ಇಲ್ಲಿ ವಿಶೇಷ ಉಪನ್ಯಾಸ . ನೊಬೆಲ್‌ ವಿಜೇತರ ಸಂಶೋಧನೆಗಳ ಕುರಿತು ವಿಜ್ಞಾನ ಪ್ರದರ್ಶನವು ನೊಬೆಲ್‌ ಮೀಡಿಯಾದಿಂದ ನಡೆಯಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಗಳು ತಿಳಿಸಿವೆ.

ಭಾಗವಹಿಸುವವರು

[ಬದಲಾಯಿಸಿ]
  • ಅಡ ಯೋನಾಥ ಇಸ್ರೇಲ್
  • ವೆಂಕಟರಾಮನ್ ರಾಮಕೃಷ್ಣನ್ (ಅಮೇರಿಕ ವಾಸಿ- ತಮಿಳುನಾಡು)
  • ಹಾರೋಲ್ಡ ವಾರ್ಮನ್ ಅಮೆರಿಕ
  • ಡೇವಿಡ್ ಗ್ರೋಸ್ ಅಮೆರಿಕ
  • ವಿಲಿಯಂ ಇ ಮೋರ್ನರ್ ಅಮೆರಿಕ

ನೊಬೆಲ್‌ ಸರಣಿ

[ಬದಲಾಯಿಸಿ]
  • ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ ಬೆಳೆಸುವುದು ಮತ್ತು ಸಂಶೋಧನೆ ನಡೆಸಲು ದೇಶದ ಪ್ರಖ್ಯಾತ ವಿಜ್ಞಾನಿಗಳ ಜೊತೆ ನೊಬೆಲ್‌ ವಿಜೇತ ವಿಜ್ಞಾನಿಗಳು ಜಂಟಿ ಪ್ರಯತ್ನ ನಡೆಸುವುದು ನೊಬೆಲ್‌ ಪ್ರೈಜ್‌ ಸರಣಿಯ ಉದ್ದೇಶ. ವಿದ್ಯಾರ್ಥಿಗಳಿಗೆ ಅವಕಾಶ: ಪಿಯುಸಿ ವಿದ್ಯಾರ್ಥಿಗಳು ವಿಜ್ಞಾನದ ಕುರಿತಂತೆ ಹೊಸ ಪರಿಕಲ್ಪನೆಗಳ ಕುರಿತು 150 ಪದಗಳಲ್ಲಿ ಬರೆಯುವ ಸ್ಪರ್ಧೆ[]

ಉಲ್ಲೇಖ

[ಬದಲಾಯಿಸಿ]