ವೆಂಕಟ್ರಾಮನ್ ರಾಮಕೃಷ್ಣನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವೆಂಕಟರಾಮನ್ ರಾಮಕೃಷ್ಣನ್ ಇಂದ ಪುನರ್ನಿರ್ದೇಶಿತ)
ವೆಂಕಟ್ರಾಮನ್ ರಾಮಕೃಷ್ಣನ್ (ಡಾ.ವೆಂಕಿ)
'ಡಾ.ವೆಂಕಿ, ೨೦೦೯ ರ ಸಾಲಿನ ನೋಬೆಲ್ ಪ್ರಶಸ್ತಿಯನ್ನು, ಅಮೆರಿಕದ,'ಥಾಮಸ್.ಎ.ಸ್ಟೀಟ್ಜ್,'ಮತ್ತು ಇಸ್ರೇಲಿನ,'ಡಾ.ಅಡಾ ಯೂನತ್',ರವರೊಂದಿಗೆ ಹಂಚಿಕೊಂಡಿದ್ದಾರೆ
ಜನನ೧೯೫೨
ಚಿದಂಬರಮ್, ತಮಿಳು ನಾಡು
ವಾಸಯುನೈಟೆಡ್ ಕಿಂಗ್‌ಡಮ್
ಪೌರತ್ವಅಮೇರಿಕ ದೇಶ
ಕಾರ್ಯಕ್ಷೇತ್ರಗಳುಜೀವರಸಾಯನಶಾಸ್ತ್ರ ಮತ್ತು ಜೀವಭೌತಶಾಸ್ತ್ರ
ಸಂಸ್ಥೆಗಳುಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಅಭ್ಯಸಿಸಿದ ಸಂಸ್ಥೆಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ, ಬರೋಡ
ಒಹಾಯೊ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣBio-crystallography
ಗಮನಾರ್ಹ ಪ್ರಶಸ್ತಿಗಳುರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ (೨೦೦೯)

(Venkatraman "Venki" Ramakrishnan (Tamil: வெங்கட்ராமன் ராமகிருஷ்ணன்;) 'ವೆಂಕಿ' ಎಂದೆ ಖ್ಯಾತರಾಗಿರುವ ವೆಂಕಟ್ರಾಮನ್ ರಾಮಕೃಷ್ಣನ್ ಭಾರತೀಯ ಮೂಲದ ಅಮೇರಿಕ ದೇಶದ ಪೌರತ್ವವನ್ನು ಹೊಂದಿರುವ ಜೀವರಸಾಯನಶಾಸ್ತ್ರ ವಿಭಾಗದ ವಿಜ್ನಾನಿ.[೧] ೧೯೫೨ರಲ್ಲಿ ತಮಿಳುನಾಡಿನ ಚಿದಂಬರಂನಲ್ಲಿ ಜನಿಸಿದ ಇವರು,ಪ್ರಸ್ತುತ 'ಬ್ರಿಟನ್' ನ 'ಕೇಂಬ್ರಿಡ್ಜ್ ವಿಶ್ವವಿದ್ಯಾಲಯ'ದಲ್ಲಿರುವ ಎಂ.ಆರ್.ಸಿ. ಲೆಬೋರೆಟರಿ ಆಫ್ ಮಾಲಿಕ್ಯುಲಾರ್ ಬಯಾಲಜಿ ಸಂಸ್ಥೆಯ ಮೆಡಿಕಲ್ ರಿಸರ್ಚ್ ಸೆಂಟರ್ ಪ್ರಯೋಗಾಲಯದಲ್ಲಿ ವಿಜ್ನಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[೨].ಇವರು ೨೦೦೯ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೆರಿಕದ 'ಥಾಮಸ್.ಎ. ಸ್ಟೀಟ್ಜ್' ಮತ್ತು ಇಸ್ರೇಲ್ ನ ಆಡ ಯೊನಾತ್ ಅವರೊಂದಿಗೆ ಹಂಚಿಕೊಂಡರು.[೩]

'DNA' ಯ ಒಳನೋಟದ ರಹಸ್ಯವನ್ನು ಹೊರಗೆಡಹಿದ 'ರೈಬೊಸೋಮ್' ಅಧ್ಯಯನ[ಬದಲಾಯಿಸಿ]

ಚಿತ್ರ:Sciencelarge.jpg
'ಸನ್, ೨೦೧೧ ರಲ್ಲಿ 'ಚೆನ್ನೈನ,ಎಸ್.ಆರ್.ಎಂ. ವಿ.ವಿ.'ದಲ್ಲಿ, ಆಯೋಜಿಸಲಾಗಿದ್ದ, '೯೮ ನೇ ಸೈನ್ಸ್ ಕಾಂಗ್ರೆಸ್' ನಲ್ಲಿ, ಪ್ರಧಾನಿ,'ಡಾ. ಮನಮೋಹನ ಸಿಂಗ್, ಚಿನ್ನದ ಪದಕದಿಂದ ಗೌರವಿಸುತ್ತಿರುವುದು'

೨೦೦೯ ರ ಸಾಲಿನ 'ರಸಾಯನ ಶಾಸ್ತ್ರದ ನೋಬೆಲ್ ಪ್ರಶಸ್ತಿ,'ಯನ್ನು ಭಾರತದ ಮೂಲದ ೫೭ ವರ್ಷ ಹರೆಯದ, ಅಮೆರಿಕನ್ ಡಾ. ವೆಂಕಟ್ರಾಮನ್ ರಾಮಕೃಷ್ಣನ್, (ಈಗ, 'ಲಂಡನ್ನಿನ ಮೆಡಿಕಲ್ ರಿಸರ್ಚ್ ಕೌನ್ಸಿಲ್,' ನ 'ಮಾಲಿಕ್ಯೂಲಾರ್ ಬಯಾಲಜಿ ಲಾಬೋರೇಟರೀಸ್' 'MRC ಪ್ರಯೋಗಾಲಯ'ದಲ್ಲಿ ಸಂಶೋಧಕರಾಗಿದ್ದಾರೆ). ಅಮೆರಿಕದ,'ಥಾಮಸ್.ಎ. ಸ್ಟೀಟ್ಜ್', ಮತ್ತು ಇಸ್ರೇಲಿನ, 'ಡಾ. ಅಡಾ ಯೂನತ್',ರವರೊಂದಿಗೆ ಹಂಚಿಕೊಂಡಿದ್ದಾರೆ. ಈ ಮೂರ್ವರೂ ೧.೪ ಮಿಲಿಯನ್ ಡಾಲರ್ ಮೌಲ್ಯದ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಾರೆ. ಜೀವನದ ಪ್ರಮುಖ ಕ್ರಿಯೆಯೊಂದರ ಅಧ್ಯಯನ ನಡೆದಿದ್ದು, ಸನ್, ೨೦೧೧ ರಲ್ಲಿ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ೯೮ ನೇ ಸೈನ್ಸ್ ಕಾಂಗ್ರೆಸ್ ನಲ್ಲಿ ಡಾ. ಮನಮೋಹನ ’ರೈಬೊಸೋಮ್’, [ಕೋಶದಲಿನ ಪ್ರೋಟೀನ್ ಮತ್ತು 'RNA' ಅಣುಗಳಿಂದ ನಿರ್ಮಿತವಾದ ಸಣ್ಣ ಚೆಂಡಿನಾಕಾರದ ರಚನೆಯಾಗಿದ್ದು ಕೋಶದಲ್ಲಿನ ಪ್ರೋಟೀನ್ ನಿರ್ಮಾಣಕ್ಕೆ ವೇದಿಕೆಯಾಗಿ ಉಪಯೋಗಿಸಲ್ಪಡುವುದು) (೨೦ ’ನ್ಯಾನೋಮೀಟರ್ ಅಗಲ’, ೧ ನ್ಯಾನೋ ಮೀ. = ಮೀಟರ್ ನ ಮಿಲಿಯನ್ ಭಾಗದಷ್ಟು).'DNA' ಮಾಹಿತಿಯನ್ನು ಜೀವವಾಗಿ ಹೇಗೆ ಪರಿವರ್ತಿತಗೊಳಿಸುತ್ತದೆ ಎನ್ನುವುದನ್ನು ಇದು ಸಾರುತ್ತದೆ.

'ರೈಬೊಸೋಮ್,' ಪ್ರೋಟೀನ್ ತಯಾರಿಸುವ ಯಂತ್ರವಾಗಲಿದೆ[ಬದಲಾಯಿಸಿ]

'ರೈಬೊಸೋಮ್' ಪ್ರೋಟೀನ್ ತಯಾರಿಸುವ ಯಂತ್ರವಾಗಲಿದೆ. ಅಂತಹ ಪ್ರೋಟೀನ್ ಎಲ್ಲ ಜೀವಿಗಳ ರಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಜೀವಕ್ಕೆ ಅತಿಮುಖ್ಯವಾಗಿ ಬೇಕಾದ'ರೈಬೊಸೋಮ್' ಗಳು ಇರುವುದಲ್ಲದೆ, ಹೊಸ ವಿಷಹಾರಕಗಳಿಗೆ ಇವು ಪ್ರಮುಖ ಲಕ್ಷ್ಯವೂ ಆಗಿವೆ.'ರೈಬೊಸೋಮ್' ನ್ನು ಕಣ್ಣಿಗೆ ಕಾಣಿಸುವ ನೆಲೆಯಲ್ಲಿ ಅಣುವಿನ ಮಟ್ಟದಲ್ಲಿ ಹೇಗೆ ಕಾಣಿಸುತ್ತವೆ ಎಂಬುದನ್ನು ಈ ಮೂವರು ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಆಂತಹ ಲಕ್ಷಾಂತರ ಅಣುಗಳು, ರೈಬೊಸೋಮ್ ನ್ನು ಹೇಗೆ ತಯಾರಿಸುತ್ತವೆ ಎಂಬುದನ್ನು ಕಂಡುಕೊಳ್ಳಲು, 'ಎಕ್ಸ್-ರೇ ಕ್ರಿಸ್ಟಿಲೋಗ್ರಫಿ', ವಿಧಾನವನ್ನು ಬಳಸಿಕೊಂಡು, ೩ ವಿಜ್ಞಾನಿಗಳೂ ತಮ್ಮದೇ ಆದರೀತಿಯಲ್ಲಿ ಸಂಶೋಧನೆಯನ್ನು ಪ್ರತ್ಯೇಕವಾಗಿ ಅನುಸರಿಸಿದ್ದಾರೆ. ಈ ಸಂಶೋಧನೆಯ ತಥ್ಯದಿಂದ ಅಣುವಿನ ಸ್ಥಾನವನ್ನು ಅಳೆಯಲು ಸಹಕಾರಿಯಾಗಿದೆ. 'MRC ಪ್ರಯೋಗಾಲಯ’ ದಿಂದ, ಸ್ನೇಹಿತರ ವಲಯದಲ್ಲಿ ’ವೆಂಕಿ’ ಯೆಂದೇ ಪ್ರಸಿದ್ಧರಾದ, ರಾಮಕೃಷ್ಣನ್, ೧೩ ನೇ ಸಾಧಕರಾಗಿದ್ದಾರೆ. ’ಕೇಂಬ್ರಿಡ್ಜ್ ನ ಅಣು-ಜೀವಶಾಸ್ತ್ರ ಪ್ರಯೋಗಾಲಯ’ ದಲ್ಲಿ ನಡೆಸಿದ ಅಮೋಘ ಸಂಶೋಧನೆಗಾಗಿ ’ನೋಬೆಲ್ ಪ್ರಶಸ್ತಿ ಸಮಿತಿ’ ೨೦೦೯ ರ ಸಾಲಿನ ನೋಬೆಲ್ ಪ್ರಶಸ್ತಿಗೆ, ಈ ವಿಜ್ಞಾನಿಗಳನ್ನು ಆರಿಸಿಕೊಂಡಿದೆ. ಇದಕ್ಕೆ ಮೊದಲು, 'MRC' ಯಿಂದ ನೋಬೆಲ್ ಪಾರಿತೋಷಕವನ್ನು ಪಡೆದ ವಿಜ್ಞಾನಿಗಳ ಪೈಕಿ 'Fred Sangar'-ಎರಡು ಬಾರಿ ನೋಬೆಲ್ ಪ್ರಶಸ್ತಿಗೆ, ಭಾಜನರಾಗಿದ್ದಾರೆ.

ಜನ್ಮಸ್ಥಾನ ಮತ್ತು ಬಾಲ್ಯ[ಬದಲಾಯಿಸಿ]

'ವೆಂಕಟ್ರಾಮನ್ ರಾಮಕೃಷ್ಣನ್' ಜನಿಸಿದ್ದು ತಮಿಳುನಾಡಿನ ’ಚಿದಂಬರಂ’ ಎಂಬ ಊರಿನಲ್ಲಿ, ೧೯೫೨ ರಲ್ಲಿ 'ಶ್ರೀ. ಸಿ. ವಿ. ರಾಮಕೃಷ್ಣನ್,' ಹಾಗೂ 'ಶ್ರೀಮತಿ. ರಾಜಲಕ್ಷ್ಮಿ', ದಂಪತಿಗಳ ಮಗನಾಗಿ ಜನ್ಮವೆತ್ತಿದರು. 'ಮದ್ರಾಸ್' ನಿಂದ 'ವಡೋದರ'ಕ್ಕೆ ಬಂದಾಗ, ರಾಮಕೃಷ್ಣರಿಗೆ, ೨ ವರ್ಷ ವಯಸ್ಸಾಗಿತ್ತು. 'ಇಂಗ್ಲೀಷ್ ಮೀಡಿಯಮ್ ಶಾಲೆ'ಗೆ ಹುಡುಕಿ 'ಕಾನ್ವೆಂಟ್ ಆಫ್ ಜೀಸಸ್ ಅಂಡ್ ಮೇರಿ ಶಾಲೆ'ಯಲ್ಲಿ ಸ್ಥಾನವಿತ್ತು. ಆದರೆ ಅದು ಹುಡುಗಿಯರ ಶಾಲೆ. ಹೇಗೋ ಅಲ್ಲಿಯೇ ಸೇರಿಸಿದರು. ಆಟ-ಪಾಟಗಳಿಗಿಂತ ಓದಿನಲ್ಲಿ ಹೆಚ್ಚಿನ ಆಸಕ್ತಿತೋರಿಸುತ್ತಿದ್ದರು. ಮನೆಯಲ್ಲಿ 'ರಸಾಯನಶಾಸ್ತ್ರ', ಹಾಗೂ 'ಭೌತಶಾಸ್ತ್ರ'ದ ಪುಸ್ತಕಗಳು ರಾಶಿ-ರಾಶಿಯಾಗಿದ್ದವು. ತಂದೆ ತಾಯಿ, ಮನೆಯಲ್ಲೂ ತಮ್ಮ ಸಂಶೋಧನ ವಿಶಯಗಳ ಬಗೆಗೆ, ಚರ್ಚಿಸುತ್ತಿದ್ದರು. ಮನೆಯ ಮೂಲೆ-ಮೂಲೆಗಳಲ್ಲೂ ಓದು, ವಿಶ್ಲೇಶಣೆ, ಹಾಗೂ ವೈಜ್ಞಾನಿಕ ವಾತಾವರಣವಿತ್ತು. ಅಂತಹ ವಾತಾವರಣದಲ್ಲಿ ಆದರ್ಶ ತಂದೆ-ತಾಯಿಗಳ ಲಾಲನೆ-ಪಾಲನೆಯಲ್ಲಿ ಬೆಳೆದ ರಾಮಕೃಷ್ಣನ್, ಸಹಜವಾಗಿ ವಿಜ್ಞಾನದ ಎಲ್ಲಾ ಪ್ರಾಕಾರಗಳಲ್ಲೂ ಅತ್ಯಂತ ಆಸಕ್ತರಾಗಿದರು. ತಂದೆ,'ಎಮ್ ಎಸ್. ವಿಶ್ವವಿದ್ಯಾಲಯ,,ದಲ್ಲಿ 'ಬಯೊ-ರಸಾಯನ-ಶಾಸ್ತ್ರ' ದಲ್ಲಿ ಪ್ರಾಧ್ಯಾಪಕರಾಗಿ, ನಂತರ, ಆ ವಿಭಾಗದ ಮುಖ್ಯಸ್ಥರಾದರು. ತಾಯಿಯವರೂ ಅದೇ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 'ರಾಮಕೃಷ್ಣನ್' ೧೯೫೫ ರಲ್ಲಿ, ಪಿ ಯು.ಸಿ ಪರೀಕ್ಷೆಯನ್ನು ’ಅಣ್ಣಾಮಲೆ ವಿಶ್ವವಿದ್ಯಾಲಯ’ ದಲ್ಲಿ ಮಾಡಿದರು. ಅವರ ಬಾಲ್ಯದ ಹೆಚ್ಚಿನ ಸಮಯವನ್ನು ಕಳೆದದ್ದು, ಬರೋಡದಲ್ಲಿ. ಅದ್ದರಿಂದ ಬರೋಡ ನಗರದ ನಂಟು ಹೆಚ್ಚು. ಅಲ್ಲಿನ ಪರಿಸರ, ಗೆಳೆಯರು, ಶಿಕ್ಷಕರು, ಇತ್ಯಾದಿ. ಈಗ ಅವರ ತಂದೆ, ರಾಮಕೃಷ್ಣನ್, ಅಮೆರಿಕದ ಸಿಯಾಟಲ್ ನಗರದಲ್ಲಿ, ಅವರ ಮಗಳ ಮನೆಯಲ್ಲಿ ವಾಸವಾಗಿದ್ದಾರೆ.

ವಿದ್ಯಾಭ್ಯಾಸ, ಹಾಗೂ ವೃತ್ತಿಜೀವನ[ಬದಲಾಯಿಸಿ]

  • ೧೯೭೧ ರಲ್ಲಿ 'ಬರೋಡದ ಸಯ್ಯಾಜಿರಾವ್ ಗಾಯಕವಾಡ್ ವಿಶ್ವವಿದ್ಯಾಲಯ' ದಲ್ಲಿ 'BSc; (ಭೌತಶಾಸ್ತ್ರ)’ ಪದವಿ'.
  • ೧೯೭೬ ರಲ್ಲಿ ’ಪಿ. ಎಚ್. ಡಿ’ ಒಹೈ ವಿಶ್ವ ವಿದ್ಯಾಲಯ, ಅಮೆರಿಕದಲ್ಲಿ'
  • ೧೯೭೬-೭೮ 'ಜೀವಶಾಸ್ತ್ರದಲ್ಲಿ ಪದವಿ. ಕ್ಯಾಲಿಫೋರ್ನಿಯ ವಿಶ್ವ ವಿದ್ಯಾಲಯ, ಸ್ಯಾಂಡಿಯಾಗೊ'
  • ೧೯೭೮-೮೨-'ಯೇಲ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೊ'
  • ೧೯೮೩-೯೫ ’ಬ್ರೂಕ್ ಹೆವೆನ್ಸ್ ನ್ಯಾಶನಲ್ ಪ್ರಯೋಗಾಲಯ’ ದಲ್ಲಿ ಜೀವಶಾಸ್ತ್ರದ ವಿಭಾಗದಲ್ಲಿ'
  • ೧೯೮೩-೮೫' ಸಹಾಯಕ ಜೀವ, ಭೌತಶಾಸ್ತ್ರಜ್ಞ' ರಾಗಿ,
  • ೧೯೮೫-೮೮ 'ಸಹ-ಜೀವ-ಭೌತಶಾಸ್ತ್ರ, ಜೀವಶಾಸ್ತ್ರದಲ್ಲಿ'
  • ೧೯೮೫-೯೦ 'ಭೌತಶಾಸ್ತ್ರಜ್ಞ'ರಾಗಿ.
  • ೧೯೯೪-೯೫ ಹಿರಿಯ ಭೌತ ವಿಜ್ಞಾನಿ, ಹಾಗೂ ಕಾರ್ಯ ನಿರ್ವಹಣೆ'.
  • ೧೯೯೫-೯೯ 'ಊಟಾ ವಿಶ್ವವಿದ್ಯಾಲಯದಲ್ಲಿ, 'ಜೈವಿಕ ರಸಾಯನ ಶಾಸ್ತ್ರ ಭಾಗದಲ್ಲಿ ಪ್ರೊಫೆಸರ್'
  • ೧೯೯೯ ರಲ್ಲಿ ಕೇಂಬ್ರಿಡ್ಜ್ ನ MRC ಅಣು-ಜೀವಶಾಸ್ತ್ರ ಪ್ರಯೋಗಾಲಯದಲ್ಲಿ ’ಗ್ರೂಪ್ ಲೀಡರ್’.
  • ೨೦೦೬ ರಲ್ಲಿ ಸಂರಚನೆ. ಅಲ್ಲಿಂದ 'ವಿಶ್ವವಿದ್ಯಾಲಯದ ಜಂಟಿ ಮುಖ್ಯಸ್ಥ'.
  • ೨೦೦೮ ರಲ್ಲಿ 'ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿಗೆ ಫೆಲೋ'
  • ೧೯೯೧-೯೨ ’ಗಗ್ಗನ್ ಹೀಮ ಫೆಲೊ ಶಿಪ್'
  • ೨೦೦೨’ EMBO ಗೆ ಆಯ್ಕೆ'
  • ೨೦೦೩’ 'Fellow of Royal Society', ಸದಸ್ಯರಾಗಿ ಆಯ್ಕೆ
  • ೨೦೦೪ 'American National Academy of Science,' ಸದಸ್ಯತ್ವ ಆಯ್ಕೆ'
  • ೨೦೦೭ 'ಔಷಧ ಸಂಶೋಧನೆಗಾಗಿ, ’ಲೂಯಿಸ್ ಜೀನ್ ಟೆಟ್’ ಬಹುಮಾನ'
  • ೨೦೦೭ 'ವಿಯೆನ್ನಾದ ಲ್ಲಿ ನಡೆದ 'FEBS' ವಾರ್ಷಿಕ ಸಭೆ’ ವಿಶೇಷ ಪದಕ, ಮತ್ತು ಉಪನ್ಯಾಸ'
  • ೨೦೦೮’'ಬ್ರಿಟಿಷ್ ಬಯೊ-ಕೆಮಿಕಲ್ ಸೊಸೈಟಿಯ, ಪ್ರತಿಷ್ಠಿತ ಹೀಬ್ಲೆ ಪದಕ',
  • ೨೦೦೮ 'Indian National Science Academy' 'ವಿದೇಶ ಸದಸ್ಯತ್ವ, ಆಯ್ಕೆ',
  • ೨೦೦೮, ರಲ್ಲಿ, 'ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜ್ ಫೆಲೊ'

ಮದುವೆ[ಬದಲಾಯಿಸಿ]

ಡಾ. ರಾಮಕೃಷ್ಣನ್, ಮಕ್ಕಳ ಸಚಿತ್ರ ಕಥೆಗಳನ್ನು ರಚಿಸುವ ಲೇಖಕಿ, 'ವೆರಾ ರೊಸೆನ್ಬೆರ್ರಿ'ಯವರನ್ನು ಮದುವೆಯಾದರು. ಅವರ ಮಲಮಗಳು 'ತಾನ್ಯಕಪ್ಕ', ಒರೆಗನ್ ನಲ್ಲಿ ಡಾಕ್ಟರ್ ಆಗಿ ಕೆಲಸಮಾಡುತ್ತಿದ್ದಾರೆ. ಮಗ, ರಾಮನ್ ರಾಮಕೃಷ್ಣನ್, ನ್ಯೂಯಾರ್ಕ್ ನಗರದಲ್ಲಿ 'ಸೆಲಿಸ್ಟ್' ಆಗಿದ್ದಾನೆ.

'ಡಾ.ರಾಮಕೃಷ್ಣನ್,ಕೇಂಬ್ರಿಡ್ಜ್,'ನ MRC ಅಣು-ಜೀವಶಾಸ್ತ್ರದ ವಲಯದ ಹಿರಿಯವಿಜ್ಞಾನಿ[ಬದಲಾಯಿಸಿ]

'ಕೇಂಬ್ರಿಡ್ಜ್,'ನ MRC ಅಣು-ಜೀವಶಾಸ್ತ್ರದ ವಲಯದಲ್ಲಿ ಹಿರಿಯವಿಜ್ಞಾನಿಯಾಗಿ ಸೇವೆಸಲ್ಲಿಸುತ್ತಿದ್ದ, ಡಾ.ವೆಂಕಟ್ರಾಮನ್ ರಾಮಕೃಷ್ಣನ್, ೨೦೦೯ ರ ಸಾಲಿನ, 'ಥಾಮಸ್ ಇ ಸ್ಪಿಟ್ಜ್' (ಅಮೆರಿಕ) 'ಅಡಾ ಇ ಯೋನಾತ್'[ಇಸ್ರೇಲ್] ಜೊತೆ, ಆಯ್ಕೆಯಾಗಿ, ೧.೪ ಮಿಲಿಯನ್ ಪ್ರಶಸ್ತಿಧನವನ್ನು ಹಂಚಿಕೊಂಡಿದ್ದಾರೆ. ಗುಟ್ಟು ರಟ್ಟುಮಾಡುವ, 'ರೈಬೊಸೋಮ್' ನ ಕಾರ್ಯ ನಿರ್ವಹಣೆ, ಮತ್ತು ಸಂರಚನೆ, ಕುರಿತ ಅಧ್ಯಯನಕ್ಕಾಗಿ ದೊರೆತ ಮನ್ನಣೆಯೆಂದು 'ಪ್ರಶಸ್ತಿ ಪ್ರದಾನ ಸಮಿತಿ,' ಮನದಟ್ಟುಮಾಡಿದೆ. 'ರೈಬೊಸೋಮ್' ನಿರ್ಮಿಸುವ, ಸಾವಿರಾರು ಅಣುಗಳ ಪೈಕಿ, ಪ್ರತಿಯೊಂದರ ಸ್ಥಾನವನ್ನು, ಅಳೆಯುವ ಸಲುವಾಗಿ, 'ಎಕ್ಸ್-ರೇ ಕ್ರಿಸ್ಟಿಲೋಗ್ರಫಿ,'ತಂತ್ರವನ್ನು ಈ ಮೂರು ಅನುಸಂಧಾನಕರ್ತರು, ಅನುಸರಿಸಿದ್ದು, ವಿಷಹಾರಕಗಳು 'ರೈಬೊಸೋಮ್' ಗಳಿಗೆ, ಹೇಗೆ ಬೆಸೆದುಕೊಂಡಿವೆ ಎಂಬುದರ, ಪರಿಯನ್ನು ವಿವರಿಸಲು, ’೩ಡಿ’ ಮಾದರಿಗಳನ್ನು ನಿರ್ಮಿಸಿ, ಪ್ರಸ್ತುತಪಡಿಸಿದ್ದರು. 'ಕೇಂಬ್ರಿಡ್ಜ್,ನ MRC ಅಣು-ಜೀವಶಾಸ್ತ್ರದ ಪ್ರಯೋಗಾಲಯ',' ದ ೧೩ 'ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ವಿಜೇತರುಗಳಲ್ಲಿ ವೆಂಕಿಯೂ ಒಬ್ಬರಾಗಿದ್ದಾರೆ.

'MRC' ಪ್ರಯೋಗಾಲಯ'ದ ಇತರ 'ನೋಬೆಲ್ ಪ್ರಶಸ್ತಿವಿಜೇತರು'[ಬದಲಾಯಿಸಿ]

  • 'ಫ್ರೆಡ್ ಸ್ಯಾಂಗರ್'-೧೯೫೮
  • 'ಮ್ಯಾಕ್ಸ್ ಪೆರುಟ್ಜ್'-೧೯೬೨
  • 'ಜಾನ್ ಕೆಂಡ್ರ್ಯೂ'-೧೯೬೨
  • 'ಫ್ರಾನ್ಸಿಸ್ ಕ್ರಿಕ್'-೧೯೬೨
  • 'ಜೇಮ್ಸ್ ವ್ಯಾಟ್ಸನ್'-೧೯೬೨
  • 'ಫ್ರೆಡ್ ಸ್ಯಾಂಗರ್'-೧೯೮೦
  • 'ಆರಾನ್ ಕ್ಲೆಗ್'-೧೯೮೨
  • 'ಜಾರ್ಜಸ್ ಕೊಪ್ಲರ್'-೧೯೮೪
  • 'ಸೀಸರ್ ಮಿಲ್ ಸ್ಟೀನ್'-೧೯೮೪
  • 'ಜಾನ್ ವಾಕರ್'-೧೯೯೭
  • 'ಸಿಡ್ನಿ ಬೆನ್ನರ್'-೨೦೦೨
  • 'ಜಾನ್ ಸ್ಯಾಲ್ಸ್ ಟನ್'-೨೦೦೨
  • 'ರೋಬರ್ ಹೌರಿಟ್ಜ್'-೨೦೦೨
  • ಇವರಲ್ಲಿ 'ಫ್ರೆಡ್ ಸ್ಯಾಂಗರ್,' ೨ ಬಾರಿ, 'ನೋಬೆಲ್ ಪಾರಿತೋಷಕ' ಕ್ಕೆ, ಭಾಜನರಾಗಿದ್ದಾರೆ.

ಮೂರು ಜನ ವಿಜ್ಞಾನಿಗಳೂ, ೩-ಡಿ ಮಾಡೆಲ್ ತಯಾರಿಸಿ, ಹೊಸ ತಿಳುವಳಿಕೆಗೆ ನಾಂದಿಹಾಡಿದ್ದಾರೆ[ಬದಲಾಯಿಸಿ]

ಈ ಮಾಡೆಲ್ ಗಳ ಉಪಯೋಗದಿಂದ ವಿಜ್ಞಾನಿಗಳು ಹೊಸ ವಿಷಹಾರಕಗಳನ್ನು ತಯಾರುಮಾಡುವಲ್ಲಿ ಉದ್ಯುಕ್ತವಾಗಿವೆ.ಇದರ ನೆರವಿನಿಂದ ಮನುಕುಲದ ಸಮಸ್ಯೆಗಳನ್ನು ನಿವಾರಿಸಿ ಹಲವಾರು ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ, ಅವರ ಕೆಲಸ ಮಹತ್ವದ ಪಾತ್ರವಹಿಸಿದೆಯೆಂದು ಸಮಿತಿ ಖಚಿತಪಡಿಸಿದೆ.'ವೆಂಕಟ್ರಾಮನ್' ಪ್ರಾಯೊಗಿಕ ಭೌತಶಾಸ್ತ್ರಜ್ಞರಾಗಿ, ಪಾದಾರ್ಪಣೆಮಾಡಿ, ವೃತ್ತಿಯನ್ನು ಆರಂಭಿಸಿದ್ದರು.[೪] ಪದವಿಯ ಬಳಿಕೆ ೨ ವರ್ಷಗಳಲ್ಲಿ ಭೌತಶಾಸ್ತ್ರದಿಂದ, ಜೀವಶಾಸ್ತ್ರಕ್ಕೆ ತಮ್ಮ ಅಭ್ಯಾಸವನ್ನು ವಿಸ್ತಾರಗೊಳಿಸಿದರು. 'ಒಹೈ ವಿಶ್ವವಿದ್ಯಾಲಯ'ದಿಂದ, 'ಡಾಕ್ಟರೇಟ್ ಪದವಿ,' ಗಳಿಸಿದ ಬಳಿಕ, 'ಯೇಲ್ ವಿಶ್ವವಿದ್ಯಾಲಯ'ದಲ್ಲಿ, ಉನ್ನತ ಶಿಕ್ಷಣ ನಡೆಸಿದ 'ವೆಂಕಟರಾಮನ್ ರಾಮಕೃಷ್ಣನ್, ಮುಂದೆ ಅತಿ ಮಹತ್ವದ ಸಂಶೋಧನೆಗಳನ್ನು ಕೈಗೆತ್ತಿಕೊಂಡರು. ಶೈಕ್ಷಣಿತ ನಿಯತಕಾಲಿಕಗಳಲ್ಲಿ ತಮ್ಮ ಹಲವಾರು ಅತ್ಯಮೂಲ್ಯ ಲೇಖನಗಳನ್ನು ದಾಖಲಿಸಿದ್ದಾರೆ.

ಭಾರತದಲ್ಲಿ ಜನಿಸಿದ/ವಾಸಿಸಿದ/ವಾಸಿಸುತ್ತಿರುವ, ಇತರ ನೋಬೆಲ್ ಪ್ರಶಸ್ತಿವಿಜೇತರು[ಬದಲಾಯಿಸಿ]

ಚೆನ್ನೈನಲ್ಲಿ ನಡೆದ ೯೮ ನೇ ಸೈನ್ಸ್ ಕಾಂಗ್ರೆಸ್ ನಲ್ಲಿ ಪ್ರಶಸ್ತಿ ವಿತರಣೆ[ಬದಲಾಯಿಸಿ]

ಸನ್, ೨೦೧೧ ರಲ್ಲಿ ಚೆನ್ನೈನ ಎಸ್.ಆರ್.ಎಂ.ವಿಶ್ವವಿದ್ಯಾಲಯದಲ್ಲಿ,(ISCA) ಪ್ರಧಾನಿ, ಡಾ.ಮನಮೋಹನ್ ಸಿಂಗ್ ರವರು, ಒಟ್ಟು ೨೬ ವಿಜ್ಞಾನಿಗಳಿಗೆ ಪ್ರಶಸ್ತಿಪ್ರದಾನ ಮಾಡಿದರು. ಅದರಲ್ಲಿ ೫ ಮಂದಿ ನೋಬೆಲ್ ಪ್ರಶಸ್ತಿ ವಿಜೇತರೂ ಸೇರಿದ್ದಾರೆ. ಅವರುಗಳ ಹೆಸರುಗಳು ಹೀಗಿವೆ :

ವರ್ಷ ೨೦೧೫ ರಲ್ಲಿ, ಲಂಡನ್ ನ, ಪ್ರತಿಷ್ಠಿತ ರಾಯಲ್ ಸೊಸೈಟಿಯ ಅಧ್ಯಕ್ಷರಾಗಿ[ಬದಲಾಯಿಸಿ]

೧೬ ವರ್ಷಗಳಿಂದ ಬ್ರಿಟನ್ನಿನಲ್ಲಿ ಕೆಲಸಮಾಡುತ್ತಿರುವ ಸರ್. ವೆಂಕಟ್ರಾಮನ್‌ ರಾಮಕೃಷ್ಣನ್‌, ೨೦೧೫ ರಲ್ಲಿ, ಬ್ರಿಟನ್‌ನ ಪ್ರತಿಷ್ಠಿತ, 'ರಾಯಲ್‌ ಸೊಸೈಟಿಯ ಅಧ್ಯಕ್ಷ'ರಾಗಿ ನೇಮಕಗೊಂಡಿದ್ದಾರೆ.[೫] ಇವರು ಈ ಹುದ್ದೆಗೇರಿದ ಪ್ರಥಮ ಭಾರತೀಯ. ಡಿ. ೧ ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ 'ಬ್ರಿಟಿಷ್‌ ಮೆಡಿಕಲ್‌ ರಿಸರ್ಚ್‌ ಕೌನ್ಸಿಲ್‌ ಲ್ಯಾಬರೇಟರಿ ಆಫ್ ಮಾಲಿಕ್ಯುಲಾರ್‌ ಬಯೋಲಾಜಿ'ಯ ಉಪನಿರ್ದೇಶಕರಾಗಿದ್ದಾರೆ.

ಮೂಲಗಳು[ಬದಲಾಯಿಸಿ]

  1. Venkatraman Ramakrishnan - FactsThe Nobel Prize in Chemistry 2009
  2. "Venki Ramakrishnan". Laboratory of Molecular Biology. 2004. Retrieved 2009-10-07.
  3. Abadjiev, Stanislav P. (7 October 2009). "The Nobel Prize in chemistry is going to Ramakrishnan, Steitz, Yonath". Science Centric. Archived from the original on 2009-10-10. Retrieved 2009-10-07.
  4. "Ribosome Structure and Function- Venki Ramakrishnan". Archived from the original on 2011-04-21. Retrieved 2014-10-15.
  5. 'The Royal Society', 'Sir Venki Ramakrishnan confirmed as President Elect of the Royal Society', 18 March 2015

ಬಾಹ್ಯ ಸಂಪರ್ಕಗಳು[ಬದಲಾಯಿಸಿ]