ಹರಗೋಬಿಂದ ಖುರಾನ

ವಿಕಿಪೀಡಿಯ ಇಂದ
(ಡಾ. ಹರಗೋಬಿಂದ ಖುರಾನ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಹರಗೋಬಿಂದ ಖುರಾನ'
ಜನನ ಟೆಂಪ್ಲೇಟು:ಜನನ
ರಾಯ್ಪುರ್ ಪಂಜಾಬ್, British India
ಮರಣ ನವೆಂಬರ್ 9, 2011(2011-11-09) (ವಯಸ್ಸು 89)
ಕಂಕಾರ್ಡ್, ಮೆಸಾಚುಸೆಟ್ಸ್, ಅಮೆರಿಕ ಸಂಯುಕ್ತ ಸಂಸ್ಥಾನ.
ವಾಸಸ್ಥಳ ಭಾರತ
ರಾಷ್ಟ್ರೀಯತೆ American[೧]
ಕಾರ್ಯಕ್ಷೇತ್ರ Molecular Biology
ಸಂಸ್ಥೆಗಳು MIT (1970 - 2007)
University of Wisconsin, Madison (1960-70)
University of British Columbia (1952-60)
Cambridge University (1950-52)
Swiss Federal Institute of Technology, Zurich (1948-49)
ಅಭ್ಯಸಿಸಿದ ವಿದ್ಯಾಪೀಠ ಲಿವರ್ ಪೂಲ್ ವಿಶ್ವವಿದ್ಯಾಲಯ (ಪಿ.ಎಚ್.ಡಿ)
ಪಂಜಾಬ್ ವಿಶ್ವವಿದ್ಯಾಲಯ (BS/MS)
ಪ್ರಸಿದ್ಧಿಗೆ ಕಾರಣ First to demonstrate the role of Nucleotides in protein synthesis
ಗಮನಾರ್ಹ ಪ್ರಶಸ್ತಿಗಳು ವೈದ್ಯಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ Nobel (೧೯೬೮), ಗೈರ್ಡ್ ನರ್ ಫೌಂಡೇಶನ್ ಇಂಟರ್ನ್ಯಾಶನಲ್ ಅವಾರ್ಡ್, ಲೂಸಿಯ ಗ್ರಾಸ್ ಹಾರ್ವಿಟ್ಸ್ ಪ್ರಶಸ್ತಿ, ಆಲ್ಬರ್ಟ್ ಲಸ್ಕರ್ ಅವಾರ್ಡ್ ಫಾರ್ ಬೇಸಿಕ್ ಮೆಡಿಕಲ್ ರಿಸರ್ಚ್
ಹರ್ ಗೋಬಿಂದ್ ಖೊರಾನ
ಚಿತ್ರ:Khorana.jpg
ಹರ್ ಗೋಬಿಂದ್ ಖೊರಾನ
ಜನನ ಜನವರಿ ೯, ೧೯೨೨
ಸಂಸ್ಥೆಗಳು ಎಮ್‍ಐ‍ಟಿ
ಗಮನಾರ್ಹ ಪ್ರಶಸ್ತಿಗಳು Nobel prize medal.svg ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ (೧೯೬೮)

ಹರ್ ಗೋಬಿಂದ್ ಖೊರಾನ ਹਰਿ ਗੋਬਿੰਦ ਖੁਰਾਨਾ , ಪಂಜಾಬಿ ಮೂಲದ ಅಮೇರಿಕ ದೇಶದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ. ವಂಶವಾಹಿ (Genes) ತಂತ್ರಜ್ಞಾನದ ಪ್ರವರ್ತಕ.

(ಜನನ ಜನವರಿ ೯, ೧೯೨೨)-(ಮರಣ ನವೆಂಬರ್,೯, ೨೦೧೧

ಜನನ-ವಿದ್ಯಾಭ್ಯಾಸ[ಬದಲಾಯಿಸಿ]

ಹರಗೋಬಿಂದ ಖುರಾನರವರ ಜನನ ಪಂಜಾಬಿನ ರಾಯಪುರದಲ್ಲಿ. ಸಣ್ಣ ಊರಿನ ಅಕ್ಷರಸ್ಥ ಕುಟುಂಬ ಇವರದ್ದು. ತಂದೆ ಕಂದಾಯ ವಸೂಲಿ ಅಧಿಕಾರಿ. ಇವರ ೧೨ನೇ ವಯಸ್ಸಿನಲ್ಲೇ ತಂದೆಯವರ ಮರಣ. ಕಷ್ಟಪಟ್ಟು ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಸಿ, ನಂತರ ಲಾಹೋರ್‍‌ನ ಸರ್ಕಾರಿ ಕಾಲೇಜು ಸೇರಿ, ೧೯೪೫ರಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ದಲಾಲ್ ವಿದ್ಯಾರ್ಥಿವೇತನದ ಸಹಾಯದಿಂದ ಇಂಗ್ಲೆಂಡಿನ ಲಿವರ್‌ಪೂಲ್ ವಿಶ್ವವಿದ್ಯಾನಿಲಯದಲ್ಲಿ ಅಭ್ಯಸಿಸಿ ಪಿಎಚ್‌ಡಿ ಪದವಿ ಪಡೆದರು.

ಉದ್ಯೋಗ-ಸಂಶೋಧನೆ[ಬದಲಾಯಿಸಿ]

೧೯೪೮-೪೯ರಲ್ಲಿ ಜೂರಿಕ್ನಲ್ಲಿ ಸಂಶೋಧಕರಾಗಿದ್ದರು. ೧೯೫೨ರಲ್ಲಿ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಸಾವಯವ ರಾಸಾಯನಿಕವಿಜ್ಞಾನ ವಿಭಾಗದ ಮುಖ್ಯಸ್ಥರಾದರು. ನಂತರದಲ್ಲಿ ವಿಸ್ಕಾನ್ಸಿನ್‌ ವಿಶ್ವವಿದ್ಯಾನಿಲಯದ 'ಕಿಣ್ವ ವಿಜ್ಞಾನ' ಸಂಶೋಧನಾಲಯದಲ್ಲಿ ಸಂಶೋಧನೆ ಮುಂದುವರೆಸಿದರು.೧೯೭೦ರಲ್ಲಿ ಮಸ್ಸಾಚುಸೆಟ್ಸ್ ತಂತ್ರಜ್ಞಾನಸಂಸ್ಥೆ ಸೇರಿ,ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ವಂಶವಾಹಿ-ಜೀನ್ಸ್(genes)[ಬದಲಾಯಿಸಿ]

ಖುರಾನರ ದೊಡ್ಡ ಸಾಧನೆಯೆಂದರೆ, ಕೃತಕವಾಗಿ ವಂಶವಾಹಿಯನ್ನು ಸೃಷ್ಟಿಸಿದ್ದು.ಎಲ್ಲಾ ಜೀವಿಗಳಲ್ಲೂ ಇರುವ ಸೂಕ್ಷ್ಮ ಜೀವಕೋಶಗಳ ಕೋಶಬಿಂದುವಿನಲ್ಲಿ 'ಡಿಅಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ' ಎಂಬ ರಾಸಾಯನಿಕವಿರುತ್ತದೆ. ಈ ಆಮ್ಲವೇ 'ವಂಶಪಾರಂಪರತೆ' ಅಥವಾ 'ಅನುವಂಶೀಯತೆ'ಯನ್ನು ನಿರ್ಧರಿಸುತ್ತದೆ.ಇದನ್ನು ಡಿಎನ್‌ಎ(DNA) ಎನ್ನುತ್ತಾರೆ.

ಪ್ರಶಸ್ತಿ-ಪುರಸ್ಕಾರಗಳು[ಬದಲಾಯಿಸಿ]

೧೯೬೦ರಲ್ಲಿ ಖೊರಾನ ಅವರಿಗೆ ಕೆನಡಾ ಸಾರ್ವಜನಿಕ ಸೇವಾಪರಿಣತರ ಸಂಸ್ಥೆಯಿಂದ ಚಿನ್ನದ ಪದಕ ದೊರಕಿತು. ೧೯೬೭ರಲ್ಲಿ ಡ್ಯಾನಿಖೈಮನ್ ಬಹುಮಾನ ದೊರೆಯಿತು. ಖೊರಾನ ಅವರು ರಾಬರ್ಟ್ ಹಾಲಿ ಮತ್ತು ಮಾರ್ಶಲ್ ನೈರೆನ್‌ಬರ್ಗ್ ಅವರೊಂದಿಗೆ ಜಂಟಿಯಾಗಿ ೧೯೬೮ರಲ್ಲಿ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ೧೯೮೭ರಲ್ಲಿ ಅಮೆರಿಕಾ ಸರ್ಕಾರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ.

ನಿಧನ[ಬದಲಾಯಿಸಿ]

'ಡಾ.ಖುರಾನ'ರವರು ನವೆಂಬರ್ ೯, ೨೦೧೧ ರಂದು, ಅಮೆರಿಕದ ಮೆಸ್ಸಾಚುಸೆಟ್ಸ್ ರಾಜ್ಯಕಾನ್ಕಾರ್ಡ್ ನಗರದಲ್ಲಿ ತಮ್ಮ ೮೯ ವರ್ಷ ಪ್ರಾಯದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಜೂಲಿಯ ಮತ್ತು ಡೇವ್ ಎಂಬ ಮಕ್ಕಳು ಇದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Cite error: Invalid <ref> tag; no text was provided for refs named brit