ವಿಷಯಕ್ಕೆ ಹೋಗು

ಪಂಜಾಬ್ ವಿಶ್ವವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಜಾಬ್ ವಿಶ್ವವಿದ್ಯಾಲಯ
ಪಂಜಾಬ್ ವಿಶ್ವವಿದ್ಯಾಲಯ
ಧ್ಯೇಯಸಂಸ್ಕೃತ:तमसो मा ज्योतिर्गमयत
Motto in English
ಕತ್ತಲೆಯಿಂದ ಬೆಳಕಿನಡೆಗೆ ದಾರಿ ತೋರು ನಮಗೆ
ಪ್ರಕಾರಸಾರ್ವಜನಿಕ
ಸ್ಥಾಪನೆ೧೮೮೨, ೧೯೪೭ರಲ್ಲಿ ಸ್ತಳಾಂತರಗೊಂಡಿತು
ಕುಲಪತಿಗಳುಭಾರತಉಪರಾಷ್ಟ್ರಪತಿಗಳು
ಉಪ-ಕುಲಪತಿಗಳುಪ್ರೊ. ಅರುಣ್ ಕುಮಾರ್ ಗ್ರೋವರ್
ವಿದ್ಯಾರ್ಥಿಗಳು೧೫,೦೦೦ (೨೫೦,೦೦೦ ಪಂಜಾಬ್ ವಿಶ್ವವಿದ್ಯಾಲಕ್ಕೆ ಒಳಪಡುವ ಕಾಲೇಜುಗಳು ಸೇರಿದಂತೆ)[೧]
ಸ್ಥಳಚಂಡೀಘಢ
ಆವರಣನಗರ
ಮಾನ್ಯತೆಗಳುUGC, NAAC, AIU
ಜಾಲತಾಣPuchd.ac.in

ಪಂಜಾಬ್ ವಿಶ್ವವಿದ್ಯಾನಿಲಯ (ಹಿಂದಿ: पंजाब विश्वविद्यालय, ಪಂಜಾಬಿ: ਪੰਜਾਬ ਯੂਨੀਵਰਸਿਟੀ) ಚಂಡೀಘಢದಲ್ಲಿ ೧೮೮೨ರಲ್ಲಿ ಸ್ಥಾಪಿಸಲಾಯಿತು. ಭಾರತದಲ್ಲಿ ಸ್ಥಾಪಿತವಾಗಿರುವ ಸಾರ್ವಜನಿಕ ಸ್ವಾಯತ್ತ ವಿಶ್ವವಿದ್ಯಾಲಯ. ಇದು ಭಾರತದಲ್ಲಿ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದೆನಿಸಿದೆ . ಪಂಜಾಬ್ ವಿಶ್ವವಿದ್ಯಾನಿಲಯ ಭಾರತ ಮತ್ತು ಏಷ್ಯಾದಲ್ಲಿ ಉನ್ನತ ಶಿಕ್ಷಣದ ಉನ್ನತ ಸಂಸ್ಥೆಗಳ ಪೈಕಿ ಸ್ಥಾನವನ್ನು ಪಡೆದಿದೆ.[೨] ಚಂಡೀಘಢದಲ್ಲಿರುವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಬೋಧನೆ ಮತ್ತು ಸಂಶೋಧನೆಗಾಗಿ ೭೫ ಬೋಧನೆ ಮತ್ತು ಸಂಶೋಧನಾ ಶಾಖೆಗಳನ್ನು ಮತ್ತು ೧೫ ಕೇಂದ್ರಗಳನ್ನು ಹೊಂದಿದೆ.

ಹತ್ತು ಸಂಯೋಜಿತ ಕಾಲೇಜುಗಳು[ಬದಲಾಯಿಸಿ]

ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ಒಳಪಡುವ 10 ಸಂಯೋಜಿತ ಕಾಲೇಜುಗಳೆಂದರೆ-

 1. ಪಂಜಾಬ್,
 2. ಹರಿಯಾಣ,
 3. ಹಿಮಾಚಲ ಪ್ರದೇಶ ಮತ್ತು
 4. ಉತ್ತರ ಪ್ರದೇಶ ರಾಜ್ಯಗಳಲ್ಲಿ ಹಬ್ಬಿಕೊಂಡಿದೆ. ಪಂಜಾಬ್ ರಾಜ್ಯದ
 5. ಮುಕ್ತಾಸರ್,
 6. ಲುಧಿಯಾನ,
 7. ಹೊಶಿಯಾರ್ಪುರ್ ನಗರಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ.[೩]ಪಂಜಾಬ್ ವಿಶ್ವವಿದ್ಯಾನಿಲಯ ಒಂದು ವಸತಿ ವಿಶ್ವವಿದ್ಯಾನಿಲಯವಾಗಿದೆ ಮತ್ತು ಕ್ಯಾಂಪಸ್ ೫೫೦ ಎಕರೆಯಷ್ಟು ವಿಸ್ತಾರವಗಿದ್ದು, ಚಂಡೀಘಢ ನಗರದ ೧೪ ಮತ್ತು ೨೫ನೇ ಕ್ಷೇತ್ರಗಳಲ್ಲಿ ಹರಡಿದೆ. ಮುಖ್ಯ ಆಡಳಿತ ಕಚೇರಿ, ಶೈಕ್ಷಣಿಕ ಕಟ್ಟಡಗಳು, ಒಂದು ಆರೋಗ್ಯ ಕೇಂದ್ರ, ಒಂದು ಕ್ರೀಡಾ ಸಂಕೀರ್ಣ, ಮತ್ತು ವಸತಿ ನಿಲಯಗಳು ೧೪ನೇ ಕ್ಷೇತ್ರದಲ್ಲಿ ಸ್ತಾಪಿತವಾಗಿದೆ.[೪]

ಇಲ್ಲಿ ಕಲಿತವರು[ಬದಲಾಯಿಸಿ]

 1. ಹರಗೋಬಿಂದ್ ಖುರಾನಾ
 2. ಶಂಕರ್ ದಯಾಳ್ ಶರ್ಮಾ
 3. ಮನಮೋಹನ್ ಸಿಂಗ್
 4. ಐ ಕೆ ಗುಜ್ರಾಲ್
 5. ಕಲ್ಪನಾ ಚಾವ್ಲಾ
 6. ಸುಷ್ಮಾ ಸ್ವರಾಜ್
 7. ಕಿರಣ್ ಬೇಡಿ
 8. ಸುನಿಲ್ ಭಾರತಿ ಮಿತ್ತಲ್

ಉಲ್ಲೇಖಗಳು[ಬದಲಾಯಿಸಿ]

 1. http://puchd.ac.in/vc-address/PU_VC_Vigyan%20Bhawan-MHRD-UGC-AICTE_December%206,%202014.pdf
 2. http://timesofindia.indiatimes.com/india/Only-9-Indian-universities-make-it-to-Times-Asia-rankings-2015/articleshow/47622310.cms
 3. Service, Tribune News (26 August 2015). "3,872 appear for LLB entrance at PU". http://www.tribuneindia.com/news/chandigarh/3-872-appear-for-llb-entrance-at-pu/96994.html. Retrieved 26 August 2015. {{cite web}}: External link in |website= (help)
 4. Vibhor MohanVibhor Mohan, TNN (15 July 2013). "'Preserve Chandigarh's rich urban and architectural legacy'". The Times of India. Retrieved 26 August 2015.