ವಿಷಯಕ್ಕೆ ಹೋಗು

ಸುಷ್ಮಾ ಸ್ವರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ಅಧಿಕಾರ ಅವಧಿ
೨೬ ಮೇ ೨೦೧೪ – ೩೦ ಮೇ ೨೦೧೯
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಸಲ್ಮಾನ್ ಖುರ್ಷಿದ್

ಅಧಿಕಾರ ಅವಧಿ
೨೬ ಮೇ ೨೦೧೪ – ೦೭ ಜನವರಿ ೨೦೧೬
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ವಯಲರ್ ರವಿ
ಉತ್ತರಾಧಿಕಾರಿ ಎಸ್.ಜೈಶಂಕರ್

ಲೋಕಸಭಾ ವಿರೋಧ ಪಕ್ಷದ ನಾಯಕಿ
ಅಧಿಕಾರ ಅವಧಿ
೨೧ ಡಿಸೆಂಬರ್ ೨೦೦೯ – ೨೬ ಮೇ ೨೦೧೪
ಪೂರ್ವಾಧಿಕಾರಿ ಎಲ್. ಕೆ. ಅಡ್ವಾಣಿ
ಉತ್ತರಾಧಿಕಾರಿ ಖಾಲಿ ಇದೆ

ಅಧಿಕಾರ ಅವಧಿ
೨೯ ಜನವರಿ ೨೦೦೩ – ೨೨ ಮೇ ೨೦೦೪
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಪ್ರಮೋದ್ ಮಹಾರಾಜನ್
ಉತ್ತರಾಧಿಕಾರಿ ಗುಲಾಂ ನಬಿ ಆಜಾದ್

ಅಧಿಕಾರ ಅವಧಿ
೨೯ ಜನವರಿ ೨೦೧೩ – ೨೨ ಮೇ ೨೦೦೪
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಸಿ.ಪಿ. ಠಾಕೂರ್
ಉತ್ತರಾಧಿಕಾರಿ ಅಂಬುಮಣಿ ರಾಮದಾಸ್

ಅಧಿಕಾರ ಅವಧಿ
೩೦ ಸೆಪ್ಟೆಂಬರ್ ೨೦೦೩ – ೨೯ ಜನವರಿ ೨೦೦೩
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಅರುಣ್ ಜೇಟ್ಲಿ
ಉತ್ತರಾಧಿಕಾರಿ ರವಿ ಶಂಕರ್ ಪ್ರಸಾದ್

ಅಧಿಕಾರ ಅವಧಿ
೧೩ ಆಕ್ಟೊಬರ್ ೧೯೯೮ – ೩ ಡಿಸೆಂಬರ್ ೧೯೯೮
Lieutenant Governor ವಿಜಯ್ ಕಪೂರ್
ಪೂರ್ವಾಧಿಕಾರಿ ಸಾಹಿಬ್ ಸಿಂಗ್ ವರ್ಮಾ
ಉತ್ತರಾಧಿಕಾರಿ ಶೀಲಾ ದೀಕ್ಷಿತ್

ಲೋಕಸಭೆಯ ಸಂಸದೆ
ಅಧಿಕಾರ ಅವಧಿ
೧೩ ಮೇ ೨೦೦೯ – ೨೪ ಮೇ ೨೦೧೯
ಪೂರ್ವಾಧಿಕಾರಿ ರಾಮ್ ಪಾಲ್ ಸಿಂಗ್
ಉತ್ತರಾಧಿಕಾರಿ ರಮಾಕಾಂತ್ ಭಾರ್ಗವ
ಮತಕ್ಷೇತ್ರ ವಿದಿಶಾ
ಅಧಿಕಾರ ಅವಧಿ
೭ ಮೇ ೧೯೯೬ – ೩ ಆಕ್ಟೊಬರ್ ೧೯೯೯
ಪೂರ್ವಾಧಿಕಾರಿ ಮದನ್ ಲಾಲ್ ಖುರಾನ
ಉತ್ತರಾಧಿಕಾರಿ ವಿಜಯ್ ಕುಮಾರ್ ಮಲ್ಹೋತ್ರಾ
ಮತಕ್ಷೇತ್ರ ದಕ್ಷಿಣ ದೆಹಲಿ
ವೈಯಕ್ತಿಕ ಮಾಹಿತಿ
ಜನನ ಸುಷ್ಮಾ ಶರ್ಮಾ
(೧೯೫೨-೦೨-೧೪)೧೪ ಫೆಬ್ರವರಿ ೧೯೫೨
ಪಂಜಾಬ್
ಮರಣ 6 August 2019(2019-08-06) (aged 67)
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) ಸ್ವರಾಜ್ ಕೌಶಲ್
ಮಕ್ಕಳು ಬಾನ್ಸುರಿ ಸ್ವರಾಜ್
ಅಭ್ಯಸಿಸಿದ ವಿದ್ಯಾಪೀಠ ಸನಾತನ ಧರ್ಮ ಕಾಲೇಜು
ಪಂಜಾಬ್ ವಿಶ್ವವಿದ್ಯಾಲಯ
ಉದ್ಯೋಗ ವಕೀಲೆ, ರಾಜಕಾರಣಿ

ಸುಷ್ಮಾ ಸ್ವರಾಜ್ (14 ಫೆಬ್ರವರಿ 1952 - 6 ಆಗಸ್ಟ್ 2019) ಭಾರತೀಯ ರಾಜಕಾರಣಿಯಾಗಿದ್ದರು. ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆ. ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಲ್ಲೊಬ್ಬರು. ಇವರು ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ ಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ೧೯೭೭ರಲ್ಲಿ ಹರ್ಯಾಣಾ ರಾಜ್ಯದ ಸಂಪುಟ ಸಚಿವೆಯಾದರು. .[೧]. ನರೇಂದ್ರ ಮೋದಿ ನೇತೃತ್ವದ ಭಾರತ ಒಕ್ಕೂಟ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿದ್ದರು. ಅಲ್ಪಕಾಲ ದೆಹಲಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಸುಷ್ಮಾ ಸ್ವರಾಜ್ ಅವರು ೧೯೫೨ರ ಫೆಬ್ರುವರಿ ೧೪ರಂದು ಹರಿಯಾಣದ ಅಂಬಾಲಾ ಕ್ಯಾಂಟ್ನಲ್ಲಿ ಜನಿಸಿದರು. ಇವರ ತಂದೆ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ.[೨][೩] ಅವರು ಅಂಬಾಲಾ ಕಂಟೋನ್ಮೆಂಟ್ನ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿಯನ್ನು ಪಡೆದರು. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದರು.[೪]೧೯೭೩ರಲ್ಲಿ ರಲ್ಲಿ ಭಾರತದ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದರು.

ರಾಜಕೀಯ ಜೀವನ[ಬದಲಾಯಿಸಿ]

ಸುಷ್ಮಾ ಸ್ವರಾಜ್ ಅವರು ರಾಜಕೀಯ ವೃತ್ತಿಜೀವನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನೊಂದಿಗೆ ೧೯೭೦ರಲ್ಲಿ ಆರಂಭಿಸಿದರು. ಅವರ ಪತಿ ಸ್ವರಾಜ್ ಕೌಶಲ್, ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸರೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಮತ್ತು ಸುಷ್ಮಾ ಸ್ವರಾಜ್ ೧೯೭೫ರಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಕಾನೂನು ರಕ್ಷಣಾ ತಂಡದ ಅಂಗವಾಗಿದ್ದರು. ಜಯಪ್ರಕಾಶ್ ನಾರಾಯಣರ ಒಟ್ಟು ಕ್ರಾಂತಿಯ ಚಳುವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ತುರ್ತು ಪರಿಸ್ಥಿತಿಯ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ನಂತರ ಅವರು ಬಿಜೆಪಿಯ ರಾಷ್ಟ್ರೀಯ ನಾಯಕರಾದರು.[೫]

ರಾಜ್ಯ ರಾಜಕೀಯ[ಬದಲಾಯಿಸಿ]

ಅವರು ೧೯೭೭ ರಿಂದ ೧೯೮೨ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು. ೨೫ನೇ ವಯಸ್ಸಿನಲ್ಲಿ ಅಂಬಾಲಾ ಕಂಟೋನ್ಮೆಂಟ್ ಶಾಸನ ಸಭೆಗೆ ಅವಕಾಶ ಪಡೆದರು.[೬]೧೯೭೭ ರ ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ದೇವಿ ಲಾಲ್ ಅವರ ನೇತೃತ್ವದಲ್ಲಿ ಜನತಾ ಪಕ್ಷದ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅವರು ಪ್ರಮಾಣವಚನ ಸ್ವೀಕರಿಸಿದರು. ಅವರು ೧೯೭೯ರಲ್ಲಿ ಹರಿಯಾಣ ರಾಜ್ಯದ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾದರು. ಅವರು ೧೯೮೭ ರಿಂದ ೧೯೯೦ರ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ-ಲೋಕಸಭೆ ಒಕ್ಕೂಟದ ಸರಕಾರದಲ್ಲಿ ಹರಿಯಾಣದ ಶಿಕ್ಷಣ ಸಚಿವೆಯಾಗಿದ್ದರು.

ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

 1. ೧೯೭೭-೮೨ರಲ್ಲಿ ಹರಿಯಾಣಾ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
 2. ೧೯೭೭-೭೯ ಕ್ಯಾಬಿನೆಟ್ ಮಂತ್ರಿ, ಕಾರ್ಮಿಕ ಮತ್ತು ಉದ್ಯೋಗ, ಹರಿಯಾಣ ಸರ್ಕಾರ
 3. ೧೯೮೭-೯೦ ಹರಿಯಾಣಾ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
 4. ೧೯೮೭-೯೦ ಕ್ಯಾಬಿನೆಟ್ ಮಂತ್ರಿ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಹರಿಯಾಣ ಸರ್ಕಾರ
 5. ೧೯೯೦-೯೬ರಲ್ಲಿ ರಾಜ್ಯಸಭೆಗೆ ಆಯ್ಕೆ (೧ ನೇ ಅವಧಿ)
 6. ೧೯೯೬-೯೭ಹನ್ನೊಂದನೇ ಲೋಕಸಭೆ ಸದಸ್ಯೆ,(ಎರಡನೆಯ ಅವಧಿ)
 7. ೧೯೯೬[೧೬ ಮೇ - ೧ಜೂನ್] - ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ
 8. ೧೯೯೮-೯೯ [೧೦ಮಾರ್ಚ್ ೧೯೯೮ - ೨೬ ಏಪ್ರಿಲ್ ೧೯೯೯] ಹನ್ನೆರಡನೆಯ ಲೋಕಸಭೆ ಸದಸ್ಯೆ,(೩ ನೇ ಅವಧಿ)
 9. ೧೯೯೯೮ [೧೯ಮಾರ್ಚ್ - ೧೨ಅಕ್ಟೋಬರ್] ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ ಮತ್ತು ದೂರಸಂಪರ್ಕ
 10. ೧೯೯೯೮ [೧೩ ಅಕ್ಟೋಬರ್ - ೩ ಡಿಸೆಂಬರ್] ದೆಹಲಿಯ ಮುಖ್ಯಮಂತ್ರಿ
 11. ೧೯೯೮[ನವೆಂಬರ್] - ದೆಹಲಿ ಅಸೆಂಬ್ಲಿಯ ಹಾಝ್ ಖಾಸ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು
 12. ೨೦೦೦-೦೬ ರಾಜ್ಯಸಭೆ ಸದಸ್ಯೆ,(೪ನೇ ಅವಧಿ)
 13. ೨೦೦-೦೩ [೩೦ ಸೆಪ್ಟೆಂಬರ್ ೨೦೦೦- ೨೯ ಜನವರಿ ೨೦೦೩] ಮಾಹಿತಿ ಮತ್ತು ಪ್ರಸಾರ ಮಂತ್ರಿ
 14. ೨೦೦೩-೦೪ [೨೯ ಜನವರಿ ೨೦೦೩ - ೨೨ ಮೇ ೨೦೦೪] ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವೆ
 15. ೨೦೦೬-೦೯ ರಾಜ್ಯಸಭೆ ಸದಸ್ಯೆ,(೫ ನೇ ಅವಧಿ)
 16. ೨೦೦೯-೧೪[೧೬ ಮೇ ೨೦೦೯ - ೧೮ಮೇ ೨೦೧೪]೧೫ ನೇ ಲೋಕಸಭೆ ಸದಸ್ಯೆ,(೬ನೇ ಅವಧಿ)
 17. ೨೦೦೯[೩ ಜೂನ್ ೨೦೦೯- ೨೧ ಡಿಸೆಂಬರ್ ೨೦೦೯] ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ
 18. ೨೦೦೯-೧೪[೨೧ ಡಿಸೆಂಬರ್ ೨೦೦೯- ೧೮ ಮೇ ೨೦೧೪]ಲಾಲ್ ಕೃಷ್ಣ ಆಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ
 19. ೨೦೧೪[೨೬ ಮೇ]೧೬ನೇ ಲೋಕಸಭೆ ಸದಸ್ಯೆ,(೭ ನೇ ಅವಧಿ)
 20. ೨೦೧೪ [೨೬ ಮೇ] ಭಾರತದ ಒಕ್ಕೂಟದ ವಿದೇಶಾಂಗ ಸಚಿವೆ

ಮಾಹಿತಿ ಮತ್ತು ಪ್ರಸಾರ[ಬದಲಾಯಿಸಿ]

ದಕ್ಷಿಣ ದೆಹಲಿ ವಿಧಾನ ಸಭಾ ಕ್ಷೇತ್ರದಿಂದ ೧೯೯೮ರ ಮಾರ್ಚ್ನಲ್ಲಿ ಎರಡನೆಯ ಅವಧಿಗೆ ಅವರು ೧೨ನೇ ಬಾರಿಗೆ ಲೋಕಸಭೆಗೆ ಮರು ಚುನಾಯಿತರಾದರು. ಎರಡನೇ ವಾಜಪೇಯಿ ಸರ್ಕಾರದಲ್ಲಿ, ಅವರು ದೂರಸಂಪರ್ಕ ಸಚಿವಾಲಯದ ಮಾಹಿತಿ ಮತ್ತು ಪ್ರಸಾರದ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.[೭]

ಕೇಂದ್ರ ಆರೋಗ್ಯ ಸಚಿವೆ[ಬದಲಾಯಿಸಿ]

ಜನವರಿ ೨೦೦೩ ರಿಂದ ಮೇ ೨೦೦೪ರ ವರೆಗೆ ಅವರು ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಕೇಂದ್ರ ಆರೋಗ್ಯ ಸಚಿವರಾಗಿ ಅವರು ಭೋಪಾಲ್ (ಎಂಪಿ), ಭುವನೇಶ್ವರ್ (ಒಡಿಶಾ), ಜೋಧಪುರ್ (ರಾಜಸ್ಥಾನ), ಪಾಟ್ನಾ (ಬಿಹಾರ), ರಾಯ್ಪುರ್ (ಛತ್ತೀಸ್ಗಢ) ಮತ್ತು ರಿಷಿಕೇಶ್ (ಉತ್ತರಾಖಂಡ್) ನಲ್ಲಿ ಆರು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸ್ಥಾಪಿಸಿದ್ದಾರೆ.[೮]

ವಿದೇಶಾಂಗ ಸಚಿವೆ[ಬದಲಾಯಿಸಿ]

೨೦೧೪ ರ ಮೇ ತಿಂಗಳಿನಿಂದ ಭಾರತೀಯ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿರಾ ಗಾಂಧಿಯವರ ನಂತರ ಈ ಸ್ಥಾನವನ್ನು ಪಡೆದ ಎರಡನೇ ಮಹಿಳೆ ಇವರು.[೯][೧೦]

ಮರಣ[ಬದಲಾಯಿಸಿ]

ಅಗಸ್ಟ್ ೦೬, ೨೦೧೯ರಂದು ಹೃದಯಾಘಾತದಿಂದ ಮರಣ.[೧೧]

ಉಲ್ಲೇಖಗಳು[ಬದಲಾಯಿಸಿ]

 1. "At a glance: Sushma Swaraj, from India's 'youngest minister' to 'aspiring PM'". India TV. 15 ಜೂನ್ 2013. Retrieved 6 ಆಗಸ್ಟ್ 2013.
 2. https://web.archive.org/web/20060528171046/http://rajyasabha.nic.in/kiosk/whoswho/beta_s19.htm
 3. "ಆರ್ಕೈವ್ ನಕಲು". Archived from the original on 25 ಜೂನ್ 2014. Retrieved 23 ಫೆಬ್ರವರಿ 2019.
 4. "ಆರ್ಕೈವ್ ನಕಲು". Archived from the original on 24 ಮೇ 2020. Retrieved 23 ಫೆಬ್ರವರಿ 2019. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 5. https://www.business-standard.com/article/politics/wheel-comes-full-circle-for-sushma-swaraj-115122700696_1.html
 6. "ಆರ್ಕೈವ್ ನಕಲು" (PDF). Archived from the original (PDF) on 26 ಮಾರ್ಚ್ 2014. Retrieved 23 ಫೆಬ್ರವರಿ 2019. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 7. https://www.india.gov.in/my-government/indian-parliament/sushma-swaraj
 8. "ಆರ್ಕೈವ್ ನಕಲು". Archived from the original on 30 ಜುಲೈ 2021. Retrieved 10 ಮಾರ್ಚ್ 2019.
 9. https://sushmaswaraj.co.in/about/[ಶಾಶ್ವತವಾಗಿ ಮಡಿದ ಕೊಂಡಿ]
 10. https://www.dnaindia.com/india/commentary-sushma-swaraj-arun-jaitley-uma-bharti-and-rajnath-singh-sworn-into-the-new-cabinet-1991311
 11. https://www.news18.com/news/india/sushma-swaraj-former-foreign-minister-and-bjp-stalwart-passes-away-2260617.html