ವಿಷಯಕ್ಕೆ ಹೋಗು

ಅರುಣ್‌ ಜೇಟ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅರುಣ್ ಜೇಟ್ಲಿ ಇಂದ ಪುನರ್ನಿರ್ದೇಶಿತ)
ಅರುಣ್ ಜೇಟ್ಲಿ
Arun Jaitley

ಅಧಿಕಾರ ಅವಧಿ
26 May 2014 – 30 May 2019
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಪಿ. ಚಿದಂಬರಂ
ಉತ್ತರಾಧಿಕಾರಿ ನಿರ್ಮಲಾ ಸೀತಾರಾಮನ್

ಕಾರ್ಪೊರೇಟ್ ವ್ಯವಹಾರಗಳ ಸಚಿವ
ಅಧಿಕಾರ ಅವಧಿ
26 May 2014 – 30 May 2019
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಸಚಿನ್ ಪೈಲಟ್
ಉತ್ತರಾಧಿಕಾರಿ ನಿರ್ಮಲಾ ಸೀತಾರಾಮನ್

ಅಧಿಕಾರ ಅವಧಿ
13 March 2017 – 3 September 2017
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಮನೋಹರ್ ಪರಿಕ್ಕರ್
ಉತ್ತರಾಧಿಕಾರಿ ನಿರ್ಮಲಾ ಸೀತಾರಾಮನ್
ಅಧಿಕಾರ ಅವಧಿ
26 May 2015 – 9 November 2014
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಎ.ಕೆ.ಆಂಟನಿ
ಉತ್ತರಾಧಿಕಾರಿ ಮನೋಹರ್ ಪರಿಕ್ಕರ್

ಅಧಿಕಾರ ಅವಧಿ
9 November 2014 – 5 July 2016
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಪ್ರಕಾಶ್ ಜಾವ್ಡೇಕರ್
ಉತ್ತರಾಧಿಕಾರಿ Venkaiah Naidu

ಅಧಿಕಾರ ಅವಧಿ
3 June 2009 – 26 May 2014
ಪೂರ್ವಾಧಿಕಾರಿ ಜಸ್ವಂತ್ ಸಿಂಗ್
ಉತ್ತರಾಧಿಕಾರಿ ಗುಲಾಂ ನಬಿ ಆಜಾದ್

ಅಧಿಕಾರ ಅವಧಿ
29 July 2003 – 22 May 2004
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಜನ ಕೃಷ್ಣಮೂರ್ತಿ
ಉತ್ತರಾಧಿಕಾರಿ ಎಚ್. ಆರ್. ಭಾರದ್ವಾಜ್
ಅಧಿಕಾರ ಅವಧಿ
7 November 2000 – 1 July 2002
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ರಾಮ್ ಜೆತ್ಮಲಾನಿ
ಉತ್ತರಾಧಿಕಾರಿ ಜನ ಕೃಷ್ಣಮೂರ್ತಿ

ಅಧಿಕಾರ ಅವಧಿ
26 May 2014 – 11 June 2019
ಪೂರ್ವಾಧಿಕಾರಿ ಮನಮೋಹನ್ ಸಿಂಗ್
ಉತ್ತರಾಧಿಕಾರಿ ತಾವರ್ ಚಂದ್ ಗೆಹ್ಲೋಟ್

ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ
ಅಧಿಕಾರ ಅವಧಿ
13 October 1999 – 30 September 2000
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಜೈಪಾಲ್ ರೆಡ್ಡಿ
ಉತ್ತರಾಧಿಕಾರಿ ಸುಷ್ಮಾ ಸ್ವರಾಜ್

ಉತ್ತರ ಪ್ರದೇಶದ ರಾಜ್ಯ ಸಭಾ ಸದಸ್ಯರು
ಅಧಿಕಾರ ಅವಧಿ
3 April 2018 – 24 August 2019
ಪೂರ್ವಾಧಿಕಾರಿ ನರೇಶ್ ಅಗರ್ವಾಲ್
ವೈಯಕ್ತಿಕ ಮಾಹಿತಿ
ಜನನ Arun Maharaj Kishen Jaitley
(೧೯೫೨-೧೨-೨೮)೨೮ ಡಿಸೆಂಬರ್ ೧೯೫೨
ದೆಹಲಿ, ಭಾರತ
ಮರಣ ಆಗಸ್ಟ್ 24, 2019(2019-08-24)
AIIMS ಆಸ್ಪತ್ರೆ ನವದೆಹಲಿ, ಭಾರತ, ಮಧ್ಯಾಹ್ನ12:07ಘಂ
ರಾಷ್ಟ್ರೀಯತೆ Indian
ರಾಜಕೀಯ ಪಕ್ಷ Bharatiya Janata Party
ಸಂಗಾತಿ(ಗಳು) Sangeeta Jaitley (ವಿವಾಹ ೧೯೮೨)
ಮಕ್ಕಳು Sonali Jaitley Bakhshi
Rohan Jaitley
ವಾಸಸ್ಥಾನ New Delhi, Delhi, India
ಅಭ್ಯಸಿಸಿದ ವಿದ್ಯಾಪೀಠ Delhi University
ವೃತ್ತಿ Advocate
Politician
ಧರ್ಮ ಹಿಂದೂ
ಜಾಲತಾಣ Official website

ಅರುಣ್ ಜೇಟ್ಲಿ (28 ಡಿಸೆಂಬರ್ 1952 - 24 ಆಗಸ್ಟ್ 2019) ಒಬ್ಬ ಭಾರತೀಯ ರಾಜಕಾರಣಿ ಮತ್ತು ವಕೀಲರಾಗಿದ್ದರು, ಅವರು 2014 ರಿಂದ 2019 ರವರೆಗೆ ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿದ್ದರು.

ಭಾರತೀಯ ಜನತಾ ಪಕ್ಷದ ಸದಸ್ಯರಾದ ಜೇಟ್ಲಿ ಈ ಹಿಂದೆ ವಾಜಪೇಯಿ ಸರ್ಕಾರ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಹಣಕಾಸು, ರಕ್ಷಣಾ, ಕಾರ್ಪೊರೇಟ್ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಕಾನೂನು ಮತ್ತು ನ್ಯಾಯಗಳ ಕ್ಯಾಬಿನೆಟ್ ಪೋರ್ಟ್ಫೋಲಿಯೊಗಳನ್ನು ಹೊಂದಿದ್ದರು.  2009 ರಿಂದ 2014 ರವರೆಗೆ,

ಅರುಣ್ ಜೇಟ್ಲಿ (ಹಿಂದಿ:अरुण जेटली)(ಜನನ: ಡಿಸೆಂಬರ್ ೨೮, ೧೯೫೨) ಅವರು ಭಾರತದ ರಾಜಕಾರಣಿ ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಹಾಗೂ ಭಾರತ ಸರ್ಕಾರದಲ್ಲಿ ವಾಣಿಜ್ಯ, ಕೈಗಾರಿಕೆ, ಕಾನೂನು ಹಾಗೂ ನ್ಯಾಯಾಂಗದ ಯೂನಿಯನ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹಿನ್ನೆಲೆ[ಬದಲಾಯಿಸಿ]

ಇವರು ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಗಳಿಗೆ ನವ ದೆಹಲಿಯಲ್ಲಿ ಜನಿಸಿದರು.[೧] ಇವರ ತಂದೆ ವಕೀಲರಾಗಿದ್ದರು,[೨] ಇವರು ೧೯೬೯-೭೦ರ ಅವಧಿಯಲ್ಲಿ ನವದೆಹಲಿಯಲ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದರು .[ಸೂಕ್ತ ಉಲ್ಲೇಖನ ಬೇಕು] ೧೯೭೩ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡರು. ೧೯೭೭ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿಯನ್ನು ಪಡೆದುಕೊಂಡರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ, ಅವರ ವಿದ್ಯಾಭ್ಯಾಸದ ಹಾಗೂ ಇತರ ಚಟುವಟಿಕೆಗಳಲ್ಲಿ ಉತ್ತಮ ಮಟ್ಟದ ಸಾಧನೆಗಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ೧೯೭೪ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.[೩]

ವಿದ್ಯಾರ್ಥಿ ಸಂಘದ ನಾಯಕನಾಗಿ ತಮ್ಮ ರಾಜಕೀಯ ವೃತ್ತಿ ಜೀವನದ ಆರಂಭ[ಬದಲಾಯಿಸಿ]

ಎಪ್ಪತ್ತರ ದಶಕದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಜೇಟ್ಲಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ‌ಬಿವಿಪಿ)ನ ವಿದ್ಯಾರ್ಥಿ ನಾಯಕನಾಗಿದ್ದರು ಹಾಗೂ ೧೯೭೪ರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. ನಾಗರೀಕರ ಅನಿರ್ಬಂಧಿತ ಸ್ಥಿತಿಯಲ್ಲಿ ಆಂತರಿಕ ತುರ್ತು ಪರಿಸ್ಥಿತಿಯ (೧೯೭೫–೭೭) ಘೋಷಣೆಯಾದಾಗ, ೧೯ ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು. ೧೯೭೩ರಲ್ಲಿ ರಾಜ್ ನರೇನ್ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರಕ್ಕೆ ವಿರುದ್ಢದ ಚಳುವಳಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಜಯ ಪ್ರಕಾಶ್ ನಾರಾಯಣ್ ಅವರು ಇವರನ್ನು ವಿದ್ಯಾರ್ಥಿಗಳ ನ್ಯಾಷನಲ್ ಕಮಿಟಿಯ ಹಾಗೂ ಯೂತ್ ಆರ್ಗನೈಸೇಶನ್‌ನ ಸಂಯೋಜಕರಾಗಿ ನೇಮಕಗೊಳಿಸಿದರು. ಸತೀಶ್ ಝಾ ಹಾಗೂ ಸ್ಮಿತು ಕೋಠಾರಿ ಅವರೊಂದಿಗೆ ಸೇರಿ ನಾಗರೀಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ಹಾಗೂ ಪಿಯುಸಿಎಲ್ ಬುಲೆಟಿನ್ ಹೊರತಂದರು.[೨][೩] ಜೈಲಿನಿಂದ ಹೊರಬಂದ ಮೇಲೆ ಅವರು ಜನಸಂಘವನ್ನು ಸೇರಿದರು.

ಕಾನೂನು ವೃತ್ತಿ[ಬದಲಾಯಿಸಿ]

೧೯೭೭ರಿಂದ ದೇಶದ ಹಲವಾರು ಹೈಕೋರ್ಟ್‌ಗಳಲ್ಲಿ ಹಾಗೂ ಭಾರತದ ಸುಪ್ರೀಂ ಕೋರ್ಟ್ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ.[೪] ಇವರು ನಿಯೋಜನೆಗೊಂಡ ಹಿರಿಯ ವಕೀಲರಾಗಿದ್ದಾರೆ. ೧೯೮೯ರ ವಿ.ಪಿ. ಸಿಂಗ್ ಸರ್ಕಾರದಲ್ಲಿ ಅವರನ್ನು ಅಡಿಷನಲ್ ಸಾಲಿಸಿಟರ್ ಜನರಲ್ ಎಂದು ನೇಮಕ ಮಾಡಲಾಯಿತು ಹಾಗೂ ಅವರು ಬೋಫೋರ್ಸ್ ಹಗರಣದ ಎಲ್ಲಾ ಕಾಗದ ವ್ಯವಹಾರಗಳ ಕೆಲಸವನ್ನು ಮಾಡಿದರು.[೨] ರಾಜಕೀಯ ವ್ಯಾಪ್ತಿಯ ಜನತಾ ದಳದ ಶರದ್ ಯಾದವ್ರಿಂದ ಹಿಡಿದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಾಧವ್‌ರಾವ್ ಸಿಂಧ್ಯಾ ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಎಲ್.ಕೆ. ಅಡ್ವಾಣಿಯವರವರೆಗೆ ಇವರ ಕಕ್ಷಿದಾರರಾಗಿದ್ದಾರೆ. ಇವರು ಕಾನೂನು ಹಾಗೂ ಪ್ರಸಕ್ತ ವ್ಯವಹಾರಗಳ ಬಗ್ಗೆ ಹಲವಾರು ಪ್ರಕಟಣೆಗಳ ಲೇಖಕರಾಗಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಅಪರಾದಗಳು ಎಂಬ ವಿಷಯದ ಪತ್ರಗಳನ್ನು ಇಂಡೋ-ಬ್ರಿಟಿಷ್ ಲೀಗಲ್ ಫೋರಂ ಎದುರಿಗೆ ಮಂಡಿಸಿದರು. ಜೂನ್ ೧೯೯೮ರಲ್ಲಿ ಡ್ರಗ್ಸ್ ಹಾಗೂ ಮನಿ ಲಾಂಡರಿಂಗ್ ಹಗರಣಗಳಿಗೆ ಸಂಬಂಧಿಸಿದಂತೆ ನಡೆದ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸಭೆಯಲ್ಲಿ ಇವರು ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ರಾಜಕೀಯ ಜೀವನ[ಬದಲಾಯಿಸಿ]

ಅರುಣ್ ಜೇಟ್ಲಿಯವರು ತಮ್ಮ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ವಿದ್ಯಾರ್ಥಿ ವಿಭಾಗವಾದ ಎ‌ಬಿವಿಪಿಯ ಸಕ್ರಿಯ ಸದಸ್ಯರಾಗಿದ್ದರು ೧೯೯೯ರ ಚುನಾವಣೆಯ ಸಮಯದಲ್ಲಿ ಇವರು ಬಿಜೆಪಿ ಪಕ್ಷದ ಪರವಾಗಿ ಮಾತನಾಡುವ ವಕ್ತಾರರಾದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಡಿಯಲ್ಲಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, ೧೯೯೯ ಅಕ್ಟೋಬರ್ ೧೩ ರಲ್ಲಿ ಇವರು ಮಾಹಿತಿ ಹಾಗೂ ಪ್ರಸಾರದ ರಾಜ್ಯ ಮಂತ್ರಿಯಾಗಿ (ಸ್ವತಂತ್ರ ಹೊಣೆಗಾರಿಕೆ)ನೇಮಕಗೊಂಡರು. ಅಲ್ಲದೆ ಅವರು ಬಂಡವಾಳಹರಣದ ರಾಜ್ಯ ಮಂತ್ರಿಯಾಗಿ (ಸ್ವತಂತ್ರ ಹೊಣೆಗಾರಿಕೆ) ನೇಮಕಗೊಂಡರು, ಹೊಸ ಮಂತ್ರಿಮಂಡಲವು ಮೊದಲಬಾರಿಗೆ ವರ್ಲ್ಡ್ ಟ್ರೇಡ್ ಆರ್ಗನೈಸೇಶನ್ (ಡಬ್ಲುಟಿಒ) ಆಳ್ವಿಕೆಯಡಿಯಲ್ಲಿ ಬಂಡವಾಳಹರಣ ನಿಯಮಕ್ಕೆ ಮಂತ್ರಿ ಪದವಿಯನ್ನು ನಿರ್ಮಿಸಿತು ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರದ ಯೂನಿಯನ್ ಕ್ಯಾಬಿನೆಟ್ ಮಂತ್ರಿ ರಾಮ್ ಜೇಟ್ಮಲಾನಿ ಅವರು ರಾಜೀನಾಮೆ ನೀಡಿದ ನಂತರ ಜೇಟ್ಲಿಯವರು ಜುಲೈ ೨೩, ೨೦೦೦ರಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರ ಖಾತೆಯನ್ನು ವಹಿಸಿಕೊಂಡು ಹೆಚ್ಚಿನ ಹೊಣೆಗಾರಿಕೆ ತೆಗೆದುಕೊಂಡರು. ನವೆಂಬರ್ ೨೦೦೦ರಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಆಯ್ಕೆಯಾದರು ಜೊತೆಯಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳು ಹಾಗೂ ಶಿಪ್ಪಿಂಗ್ ಮಂತ್ರಿಯಾಗಿ ನೇಮಕಗೊಂಡರು. ಸಾರಿಗೆ ವಿಧಾನಗಳಿಂದ ಮಂತ್ರಿ ಪದವಿಯ ವಿಂಗಡಣೆಯಾದ ಮೇಲೆ ಮೊದಲಬಾರಿಗೆ ಶಿಪ್ಪಿಂಗ್ ಮಂತ್ರಿ ಪದವಿಯು ಇವರಿಗೆ ಲಭಿಸಿತು. ಸೆಪ್ಟೆಂಬರ್ ೧, ೨೦೦೧ರಲ್ಲಿ ಶಿಪ್ಪಿಂಗ್ ಮಂತ್ರಿ ಪದವಿಯನ್ನು ತೊರೆದರು ಹಾಗೂ ಜುಲೈ ೧, ೨೦೦೨ರಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳ ಖಾತೆಯನ್ನು ತೊರೆದು ಬಿಜೆಪಿಯ ಜನರಲ್ ಸೆಕ್ರೆಟರಿಯಾದರು ಹಾಗೂ ಅದರ ರಾಷ್ಟ್ರೀಯ ವಕ್ತಾರರಾದರು.[೪] ಜನವರಿ ೨೦೦೩ರವರೆಗೆ ಇದೇ ಪದವಿಯಲ್ಲಿ ಮುಂದುವರೆದರು. ೨೯ ಜನವರಿ ೨೦೦೩ರಲ್ಲಿ ಮತ್ತೊಮ್ಮೆ ಯೂನಿಯನ್ ಕ್ಯಾಬಿನೆಟ್ ಅನ್ನು ವಾಣಿಜ್ಯ & ಕೈಗಾರಿಕೆ ಹಾಗೂ ಕಾನೂನು & ನ್ಯಾಯಾಂಗ ಖಾತೆಯನ್ನು ವಹಿಸಿಕೊಳ್ಳುವುದರ ಮೂಲಕ ಸೇರಿದರು. ಮೇ ೨೦೦೪ರಲ್ಲಿ ನ್ಯಾಷನಲ್ ಡೆಮೋಕ್ರಟಿಕ್ ಅಲಯನ್ಸ್ ಸೋಲನ್ನನುಭವಿಸಿದಾಗ, ಜೇಟ್ಲಿಯವರು ಬಿಜೆಪಿಯ ಜನರಲ್ ಸೆಕ್ರೆಟರಿ ಸ್ಥಾನಕ್ಕೆ ಹಿಂದಿರುಗಿದರು ಹಾಗೂ ಕಾನೂನು ವೃತ್ತಿಯನ್ನು ಮುಂದುವರೆಸಿದರು. ಪ್ರಸ್ತುತ ಇವರು ಗುಜರಾತ್ ರಾಜ್ಯದಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ (ಮಾರ್ಚ್ ೨೦೦೬) ಹಾಗೂ ಚುನಾವಣೆಯಲ್ಲಿ ಎಂದಿಗೂ ಪಾಲ್ಗೊಳ್ಳಲಿಲ್ಲ. ಜೂನ್ ೩, ೨೦೦೯ರಲ್ಲಿ ಎಲ್.ಕೆ.ಅಡ್ವಾಣಿಯವರಿಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡರು. ಜೂನ್ ೧೬, ೨೦೦೯ರಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷದ ನಿಯಮಕ್ಕೆ ಬದ್ಧರಾಗಿ ಬಿಜೆಪಿಯ ಜನರಲ್ ಸೆಕ್ರೆಟರಿ ಹುದ್ದೆಗೆ ರಾಜೀನಾಮೆ ನೀಡಿದರು.

ಗುರುತಿಸುವಂತಹ ಸಾಧನೆಗಳು[ಬದಲಾಯಿಸಿ]

ಕಾನೂನು[ಬದಲಾಯಿಸಿ]

ಬಿರ್ಲಾ ಕಾರ್ಪೊರೇಶನ್ ಲಿಮಿಟೆಡ್ ಒಡೆತನದ ಸುಮಾರು ೫೦೦೦ ಕೋಟಿಗೂ ಹೆಚ್ಚಿನ ಆಸ್ತಿಯ ವಿರುದ್ಧ ಆರ್. ಎಸ್. ಲೋಧಾ ಅವರ ಕಾನೂನು ಸಮರದಲ್ಲಿ ಬಿರ್ಲಾ ಕುಟುಂಬದ ಪರವಾಗಿ ಅರುಣ್ ಜೇಟ್ಲಿಯವರು ವಾದ ಮಾಡಿದ್ದರು ರಣ್ ಚಿತ್ರದಲ್ಲಿ ರಾಷ್ಟ್ರಗೀತೆಯನ್ನು ತಿರುಚಿ ಬಳಸಿದ್ದಕ್ಕಾಗಿ ರಾಮ್‌‌ ಗೋಪಾಲ್ ವರ್ಮಾ ಅವರ ವಿರುದ್ಧದ ಮೊಕದ್ದಮೆಯಲ್ಲಿ ವರ್ಮಾ ಅವರ ಪರವಾಗಿ ವಾದ ಮಾಡಿದ್ದರು. ಆದರೆ ಆ ಹಾಡನ್ನು ನಂತರದಲ್ಲಿ ಚಿತ್ರದಿಂದ ಕೈಬಿಡಲಾಯಿತು.

೮೪ನೆಯ ತಿದ್ದುಪಡಿ[ಬದಲಾಯಿಸಿ]

೨೦೨೬ರವರೆಗೆ ಪಾರ್ಲಿಮೆಂಟರಿ ಸ್ಥಾನಗಳ ಲಭ್ಯತೆಯನ್ನು ಸ್ಥಿರವಾಗಿಸಲು ಎಂಭತ್ತ-ನಾಲ್ಕನೇ ತಿದ್ದುಪಡಿಯನ್ನು ಭಾರತ ಸಂವಿಧಾನದಲ್ಲಿ ತಂದರು.[೫]

೯೧ನೆಯ ತಿದ್ದುಪಡಿ[ಬದಲಾಯಿಸಿ]

೨೦೦೪ರಲ್ಲಿ ಪಕ್ಷಾಂತರ ಮಾಡುವವರನ್ನು ಶಿಕ್ಷಿಸುವವರನ್ನು ಭಾರತ ಸಂವಿಧಾನದಲ್ಲಿ ತೊಂಬತ್ತನೆಯ ತಿದ್ದುಪಡಿಯನ್ನು ಯಶಸ್ವಿಯಾಗಿ ಪರಿಚಯಿಸಿದರು.[೬]

ಬಿಜೆಪಿಯ ಚುನಾವಣಾ ತಂತ್ರಗಳನ್ನು ರೂಪಿಸುವ ಪಾತ್ರ ವಹಿಸಿ[ಬದಲಾಯಿಸಿ]

ಇತ್ತೀಚೆಗೆ, ಅರುಣ್ ಜೇಟ್ಲಿಯವರನ್ನು ಬಿಜೆಪಿಯ ರಾಜ್ಯ ಅಸೆಂಬ್ಲಿ ಚುನಾವಣೆಯ ಗೆಲುವುಗಳನ್ನು ತಂದುಕೊಟ್ಟುದಕ್ಕಾಗಿ ಚುನಾವಣಾ ತಂತ್ರಗಳನ್ನು ರೂಪಿಸುವ ರೂವಾರಿಯಾಗಿ ನೇಮಿಸಿದರು. ಅರುಣ್ ಜೇಟ್ಲಿಯವರು ಜನರಲ್ ಸೆಕ್ರೆಟರಿಯಾಗಿ ಮೇ ೨೦೦೮ರವರೆಗೆ ೮ ಚುನಾವಣೆಗಳನ್ನು ನಿರ್ವಹಿಸಿದ್ದಾರೆ. ತೀರಾ ಇತ್ತೀಚೆಗೆ, ಕರ್ನಾಟಕದಲ್ಲಿ ಬಿಜೆಪಿಯ ಅತಿ ಯಶಸ್ಸನ್ನು ಅವರು ತಂದುಕೊಟ್ಟಿದ್ದಾರೆ.

ಗುಜರಾತ್‌‌[ಬದಲಾಯಿಸಿ]

೨೦೦೨ರಲ್ಲಿ, ಅರುಣ್ ಜೇಟ್ಲಿಯವರು ಅವರ ಹತ್ತಿರದ ಸಹಯೋಗಿ ನರೇಂದ್ರ ಮೋದಿಯವರಿಗೆ ಸಹಾಯ ನೀಡಿದರು, ಬಿಜೆಪಿಯು ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು ೧೮೨ ಸ್ಥಾನಗಳಲ್ಲಿ ೧೨೬ ಸ್ಥಾನಗಳನ್ನು ಗೆದ್ದುಕೊಂಡಿತು. ಈ ಸಹಯೋಗವು ಅವರನ್ನು ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿತು. ಡಿಸೆಂಬರ್ ೨೦೦೭ರಲ್ಲಿ, ಅರುಣ್ ಜೇಟ್ಲಿಯವರು ಒಂದು ಚಳುವಳಿಯನ್ನು ನಡೆಸಿ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದರು. ಒಟ್ಟು ೧೮೨ ಸ್ಥಾನಗಳಲ್ಲಿ ಬಿಜೆಪಿ ೧೧೭ ಸ್ಥಾನ ಪಡೆದುಕೊಂಡಿತು. ನರೇಂದ್ರ ಮೋದಿಯವರು ಅರುಣ್ ಜೇಟ್ಲಿಯವರನ್ನು ಗುಜರಾತ್‌ಗೆ ವರ್ಗಾಯಿಸುವಂತೆ ವಿಶೇಷವಾಗಿ ಪಕ್ಷದ ಹೈಕಮಾಂಡ್ ಅನ್ನು ಕೇಳಿಕೊಂಡರು. ಮತದಾನದ ಪ್ರಾಥಮಿಕ ವಿಷಯಗಳೆಂದರೆ ನರೇಂದ್ರ ಮೋದಿಯವರ ಅಧಿಕಾರತ್ವ ಹಾಗೂ ರಾಜ್ಯಾಡಳಿತದಿಂದ ಉತ್ತಮ ಸರ್ಕಾರದ ನಿರ್ವಹಣೆ.

ಮಧ್ಯ ಪ್ರದೇಶ[ಬದಲಾಯಿಸಿ]

೨೦೦೩ರಲ್ಲಿ, ಮಧ್ಯ ಪ್ರದೇಶದ ಅಸೆಂಬ್ಲಿ ಚುನಾವಣೆಯನ್ನು ಅರುಣ್ ಜೇಟ್ಲಿಯವರು ನಿರ್ವಹಿಸಿದರು. ಅವರು ಉಮಾ ಭಾರತಿಯವರ ಜೊತೆಗೂಡಿ ಎಮ್‌ಪಿ ಅಸೆಂಬ್ಲಿಯ ಒಟ್ಟು ೨೩೦ ಸ್ಥಾನಗಳಲ್ಲಿ ೧೭೩ ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ಯಶಸ್ಸು ಸಾಧಿಸಿದರು. ಮುಖ್ಯ ಮಂತ್ರಿ ಉಮಾಭಾರತಿ ಹಾಗೂ ಅರುಣ್ ಜೇಟ್ಲಿಯವರು ರೈತರ ಉಚ್ಛಾಟನೆಯಿಂದಾಗಿ ಪಕ್ಷವು ಕೆಳಗೆ ಬಿತ್ತು.

ಕರ್ನಾಟಕ[ಬದಲಾಯಿಸಿ]

ಮೇ ೨೦೦೪ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿಯವರಿಗೆ ಕರ್ನಾಟಕದ ವಿಶೇಷ ಹೊಣೆಯನ್ನು ನೀಡಲಾಗಿತ್ತು. ದೇಶದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಉತ್ತಮ ಸ್ಥಾನದಲ್ಲಿದೆ ಹಾಗೂ ಉತ್ತಮ ನಿರೀಕ್ಷೆಕೂಡಾ ಮಾಡಬಹುದಾಗಿತ್ತು. ಒಟ್ಟು ೨೬ ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯು ೧೮ ಸ್ಥಾನಗಳನ್ನು ಗೆದ್ದುಕೊಂಡಿತು, ರಾಜ್ಯದಲ್ಲಿ ಒಟ್ಟು ೮೩ ಸ್ಥಾನಗಳನ್ನು ಪಡೆದುಕೊಂಡು ಅಸೆಂಬ್ಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಎದುರಾಳಿಗಳಾದ ಕಾಂಗ್ರೆಸ್ ೬೮ ಹಾಗೂ ಜನತಾ ದಳ (ಸೆಕ್ಯುಲರ್) ೫೯ ಸ್ಥಾನಗಳನ್ನು ಪಡೆದುಕೊಂಡಿದ್ದವು. ಕಾಂಗ್ರೆಸ್ ಹಾಗೂ ಜೆಡಿ(ಎಸ್) ಮೈತ್ರಿಕೂಟ ರಚಿಸಿ ಕಾಂಗ್ರೆಸ್‌ನ ಧರಂ ಸಿಂಗ್ ಮುಖ್ಯಮಂತ್ರಿಯಾದರು. ಜನವರಿ ೨೦೦೬ರಲ್ಲಿ, ಅಸಮಾಧಾನಗೊಂಡ ಜೆಡಿಎಸ್ ನಾಯಕರು, ಎಚ್. ಡಿ. ಕುಮಾರಸ್ವಾಮಿಯ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಒಕ್ಕೂಟ ಮಾಡಿಕೊಂಡು ಸರ್ಕಾರ ಸ್ಥಾಪಿಸಲು ನಿರ್ಧರಿಸಿದರು. ಮೊದಲರ್ಧ ಅವಧಿಯಲ್ಲಿ ಜೆಡಿಎಸ್‌ನ ಮುಖ್ಯಮಂತ್ರಿ ಹಾಗೂ ಉಳಿದರ್ಧ ಅವಧಿಗೆ ಬಿಜೆಪಿಯು ತನ್ನದೇ ಪಕ್ಷದ ಮುಖ್ಯಮಂತ್ರಿಯನ್ನು ಹೊಂದಬಹುದು ಎಂದು ಒಪ್ಪಂದ ಮಾಡಿಕೊಂಡರು. ನವೆಂಬರ್ ೨೦೦೭ರಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿಯ ಬಿ. ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ನಿರಾಕರಿಸಿದರು. ಮೇ ೨೦೦೮ರಲ್ಲಿ, ಅರುಣ್ ಜೇಟ್ಲಿಯವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುವಂತಹ ಜವಾಬ್ಧಾರಿ ತೆಗೆದುಕೊಂಡರು. ೨೨೪-ಸದಸ್ಯರ ಅಸೆಂಬ್ಲಿಯಲ್ಲಿ, ಬಿಜೆಪಿಯು ೧೧೦ ಸ್ಥಾನಗಳನ್ನು ಪಡೆದುಕೊಂಡು ಬಹುಮತ ಸಾಧಿಸಲು ೩ ಸ್ಥಾನಗಳು ಕಡಿಮೆಯಾದವು. ಆ ನಂತರ, ಅರುಣ್ ಜೇಟ್ಲಿಯವರು ೫ ಜನ ಸ್ವತಂತ್ರ ಎಮ್‌ಎಲ್‌ಎ‌ಗಳ ಬೆಂಬಲ ಯಾಚಿಸಿ ಬಿಜೆಪಿಯ ಬಲವನ್ನು ೧೧೫ ಸ್ಥಾನಗಳಿಗೆ ತಂದರು. ಪಕ್ಷದ ಅಧ್ಯಕ್ಷ ರಣಜಿತ್ ಸಿಂಗ್ರವರಿಂದ ಹಿಡಿದು ಸಹೋದ್ಯೋಗಿ ಸುಷ್ಮಾ ಸ್ವರಾಜ್ ಹಾಗೂ ಬಿಜೆಪಿಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪನವರವರೆಗೆ ಪಕ್ಷದ ಎಲ್ಲಾ ನಾಯಕರುಗಳು ಈ ಗೆಲುವಿನ ರೂವಾರಿ ಅರುಣ್ ಜೇಟ್ಲಿ ಎಂದು ಹೇಳಿದರು. ಕರ್ನಾಟಕದ ಜಯ ಹಾಗೂ ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡದ್ದು ದಕ್ಷಿಣ ಭಾರತದಲ್ಲಿ ಬಿಜೆಪಿಯ ಉತ್ತಮವಾದ ಪ್ರವೇಶ ಎನ್ನಲಾಗಿದೆ.

ಬಿಹಾರ[ಬದಲಾಯಿಸಿ]

ಬಿಹಾರದಲ್ಲಿ ೨೦೦೫ರ, ಫೆಬ್ರವರಿಯಲ್ಲಿ ನಡೆದ ಚುನಾವಣೆಗಳು ಅನಿಶ್ಚಿತತೆಯಿಂದ ಕೂಡಿದ್ದರಿಂದ, ನವೆಂಬರ್‌ನಲ್ಲಿ ಮರುಚುನಾವಣೆಗಳು ನಡೆದವು. ಈ ಚುನಾವಣೆಯನ್ನು ಬಿಜೆಪಿಯು ಜೆಡಿ (ಯು)ನೊಂದಿಗೆ ಒಂದುಗೂಡಿ ಎದುರಿಸಿದವು. ಎನ್‌ಡಿಎಯ ಒಗ್ಗಟ್ಟಿಗೆ ಜೇಟ್ಲಿಯವರೇ ಮುಖ್ಯ ಯೋಜನಾ ರೂಪುಗಾರರಾಗಿದ್ದರು. ಬಿಜೆಪಿ ಅತಿ ಹೆಚ್ಚು ಸಂಖ್ಯೆಯ ೫೮ ಸ್ಥಾನಗಳನ್ನು ಜೊತೆಗೆ ಜೆಡಿ(ಯು)ನ ೮೮ ಸ್ಥಾನಗಳು ಸರ್ಕಾರವನ್ನು ರಚಿಸಲು ಸಹಕಾರಿಯಾಯಿತು ಜೆಡಿ (ಯು)ನ ನೀತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾದರು ಹಾಗೂ ಬಿಜೆಪಿಯ ಸುಶೀಲ್ ಕುಮಾರ್ ಮೋದಿಯವರು ಉಪ ಮುಖ್ಯಮಂತ್ರಿಯಾದರು.

ಪಂಜಾಬ್‌[ಬದಲಾಯಿಸಿ]

ಫೆಬ್ರವರಿ ೨೦೦೭ರಲ್ಲಿ, ಅರುಣ್ ಅವರು ಪಂಜಾಬ್‌ನಲ್ಲಿ ನಡೆದ ಬಿಜೆಪಿ ಚಳುವಳಿಯ ನೇತೃತ್ವ ವಹಿಸಿದ್ದರು ಹಾಗೂ ಪಕ್ಷ ಹಾಗೂ ಅದರ ಒಕ್ಕೂಟ ಶಿರೋಮಣಿ ಅಕಾಲಿ ದಳದ ನಡುವಿನ ತಂತ್ರಗಳನ್ನು ಸಹಯೋಜಿಸಿದರು. ಸ್ಪರ್ಧಿಸಿದ ೨೩ ಸ್ಥಾನಗಳಲ್ಲಿ, ಅದು ೧೯ರಲ್ಲಿ ಜಯಗಳಿಸಿತು, ರಾಜ್ಯದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನದನ್ನು ಪಕ್ಷವು ಸಾಧಿಸಿತು.

ಎಮ್‌ಸಿಡಿ[ಬದಲಾಯಿಸಿ]

೨೦೦೭ರ ಕೊನೆಯ ಭಾಗದಲ್ಲಿ, ಮುನಿಸಿಪಲ್ ಕಾರ್ಪೊರೇಷನ್ ಆಫ್ ದೆಹಲಿ (ಎಮ್‌ಸಿಡಿ)ಯ ಚುನಾವಣೆಗಳ ಅಧಿಕಾರಿಯಾಗಿ ಅರುಣ್ ಜೇಟ್ಲಿಯವರನ್ನು ನೇಮಕಗೊಳಿಸಲಾಯಿತು. ಕಾರ್ಪೊರೇಶನ್‌ನ ೨೭೨ ಸದಸ್ಯತ್ವದಲ್ಲಿ, ಬಿಜೆಪಿಯು ೧೬೪ ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿತು.

ವೈಯಕ್ತಿಕ ಜೀವನ[ಬದಲಾಯಿಸಿ]

ಜೇಟ್ಲಿಯವರು ೨೪ ಮೇ ೧೯೮೨ರಂದು ಸಂಗೀತಾ ಜೇಟ್ಲಿಯವರನ್ನು ವಿವಾಹವಾದರು. ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ, ಮಗ ರೋಹನ್[೭] ಹಾಗೂ ಮಗಳು ಸೊನಾಲಿ.[೧][೪] ಅವರ ಮಗಳು ಸೊನಾಲಿ ಜೇಟ್ಲಿಯು ವಕೀಲರಾಗಿದ್ದಾರೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "ಆರ್ಕೈವ್ ನಕಲು". Archived from the original on 2019-01-04. Retrieved 2011-04-19.
  2. ೨.೦ ೨.೧ ೨.೨ http://www.indianexpress.com/res/web/pIe/ie/daily/19990919/iex19021.html
  3. ೩.೦ ೩.೧ "ಆರ್ಕೈವ್ ನಕಲು". Archived from the original on 2009-07-24. Retrieved 2011-04-19.
  4. ೪.೦ ೪.೧ ೪.೨ http://pib.nic.in/archieve/lreleng/lyr2003/rjan2003/30012003/r300120032.html
  5. ಅರುಣ್ ಜೇಟ್ಲಿಯವರು ಪಾರ್ಲಿಮೆಂಟರಿ ಸ್ಥಾನಗಳ ಲಭ್ಯತೆಯನ್ನು 2026ರವರೆಗೆ ಸೀಮಿತಗೊಳಿಸುವುದಕ್ಕೋಸ್ಕರ 84ನೆಯ ತಿದ್ದುಪಡಿಯನ್ನು ಹೊರಡಿಸಿದರು
  6. ಪಕ್ಷಾಂತರಿಗಳನ್ನು ದಂಡಿಸುವುದಕ್ಕೋಸ್ಕರ ಅರುಣ್ ಜೇಟ್ಲಿಯವರು 91ನೆಯ ತಿದ್ದುಪಡಿಯನ್ನು ಹೊರಡಿಸಿದರು(ಪಿಡಿಎಫ್)
  7. http://timesofindia.indiatimes.com/articleshow/636819.cms

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]

Political offices
ಪೂರ್ವಾಧಿಕಾರಿ
Ram Jethmalani
Minister of Law and Justice
2000-2002
ಉತ್ತರಾಧಿಕಾರಿ
Hansraj Bhardwaj
ಪೂರ್ವಾಧಿಕಾರಿ
Hansraj Bhardwaj
Minister of Law and Justice
2003-?
ಉತ್ತರಾಧಿಕಾರಿ
Veerappa Moily
ಪೂರ್ವಾಧಿಕಾರಿ
unknown
Minister of Shipping
2000-2001
ಉತ್ತರಾಧಿಕಾರಿ
unknown
ಪೂರ್ವಾಧಿಕಾರಿ
unknown
Minister of Commerce and Industry
2003-04
ಉತ್ತರಾಧಿಕಾರಿ
unknown

೨೯ ಜನವರಿ ೨೦೦೩ರಲ್ಲಿ ಕಾಮರ್ಸ್ & ಇಂಡಸ್ಟ್ರಿ ಹಾಗೂ ಲಾ & ಜಸ್ಟೀಸ್‌ನ ಮಂತ್ರಿಯಾಗಿ ಯೂನಿಯನ್ ಕ್ಯಾಬಿನೆಟ್‌ ಅನ್ನು ಮತ್ತೊಮ್ಮೆ ಸೇರಿದರು