ವಿಷಯಕ್ಕೆ ಹೋಗು

ರಾಷ್ಟ್ರೀಯ ಸ್ವಯಂಸೇವಕ ಸಂಘ

ನಿರ್ದೇಶಾಂಕಗಳು: 21°08′46″N 79°06′40″E / 21.146°N 79.111°E / 21.146; 79.111
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಷ್ಟ್ರೀಯ ಸ್ವಯಂಸೇವಕ ಸಂಘ
ಸಂಕ್ಷಿಪ್ತ ಹೆಸರುಆರ್‌ಎಸ್‌ಎಸ್
ಸ್ಥಾಪನೆ27 ಸೆಪ್ಟೆಂಬರ್ 1925 (36245 ದಿನ ಗಳ ಹಿಂದೆ) (1925-೦೯-27)
ಸ್ಥಾಪಿಸಿದವರುಕೇಶವ್ ಬಲಿರಾಮ್ ಹೆಡಗೇವಾರ್
ಶೈಲಿಸ್ವಯಂಸೇವೆ
Legal statusಅಸ್ತಿತ್ವದಲ್ಲಿದೆ
Purposeಸ್ವಯಂಸೇವೆಯ ಮೂಲಕ ದೇಶಸೇವೆ
ಪ್ರಧಾನ ಕಚೇರಿಡಾ. ಹೆಡ್ಗೆವಾರ್ ಭವನ, ಸಂಘ ಕಟ್ಟಡ ರಸ್ತೆ, ನಾಗ್ಪುರ, ಮಹಾರಾಷ್ಟ್ರ - ೪೪೦೦೩೨
ಕಕ್ಷೆಗಳು21°08′46″N 79°06′40″E / 21.146°N 79.111°E / 21.146; 79.111
ಪ್ರದೇಶ
ಭಾರತ
Membership
ಅಧಿಕೃತ ಭಾಷೆ
ಯಾವುದೂ ಇಲ್ಲ
ಸರಸಂಘಚಾಲಕ
ಮೋಹನ್ ಭಾಗವತ್
ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)
ದತ್ತಾತ್ರೇಯ ಹೊಸಬಾಳೆ
ಅಂಗಸಂಸ್ಥೆಗಳು
  • ಭಾರತೀಯ ಜನತಾ ಪಕ್ಷ
  • ಭಾರತೀಯ ಕಿಸಾನ್ ಸಂಘ
  • ಭಾರತೀಯ ಮಜ್ದೂರ್ ಸಂಘ
  • ಸೇವಾ ಭಾರತಿ
  • ಭಾರತೀಯ ರಾಷ್ಟ್ರಸೇವಿಕಾ ಸಮಿತಿ
  • ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು
  • ಶಿಕ್ಷಾ ಭಾರತಿ
  • ವಿಶ್ವ ಹಿಂದೂ ಪರಿಷತ್ತು
  • ಭಜರಂಗದಳ
ಅಧಿಕೃತ ಜಾಲತಾಣwww.rss.org

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಭಾರತದ ಹಾಗು ವಿಶ್ವದ ಅತಿ ದೊಡ್ದ ಸ್ವಯಂಸೇವಿ ಸಂಘಟನೆ.[ಸೂಕ್ತ ಉಲ್ಲೇಖನ ಬೇಕು] ಸೆಪ್ಟೆಂಬರ್ ೨೭, 1925ರ ವಿಜಯದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ. ಕೇಶವ ಬಲಿರಾಂ ಹೆಡಗೆವಾರ್ ಈ ಸಂಘಟನೆಯನ್ನು ಹುಟ್ಟುಹಾಕಿದರು. ಹಿಂದೂ ರಾಷ್ಟ್ರೀಯವಾದ ಬಲಪಂಥೀಯ ಸಂಘಟನೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಡುವ ಈ ಸಂಸ್ಥೆ ಭಾರತದ ನಾಗಪುರದಲ್ಲಿ ತನ್ನ ಮುಖ್ಯ ಕಾರ್ಯಾಲಯ ಹೊಂದಿದೆ. ಹಿಂದೂ ಸಂಘಟನೆ ಮತ್ತು ಐಕ್ಯತೆಯನ್ನು ತನ್ನ ಗುರಿಯನ್ನಾಗಿ ಹೊಂದಿರುವ ಈ ಸಂಸ್ಥೆಗೆ ಹೊಂದಿಕೊಂಡಿರುವ ಇತರ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಸಾಮಾನ್ಯವಾಗಿ "ಸಂಘ ಪರಿವಾರ" ಎಂದು ಕರೆಯಲಾಗುತ್ತದೆ. ಸುಮಾರು ಆರು ವರ್ಷ ಭಾರತದ ಆಡಳಿತ ನಡೆಸಿದ ಭಾರತೀಯ ಜನತಾ ಪಕ್ಷ ಈ ಸಂಸ್ಥೆಯ ರಾಜಕೀಯ ಮುಖ ಎಂದು ಹಲವರು ಪರಿಗಣಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]

ಸಂಘಟನೆ

[ಬದಲಾಯಿಸಿ]

ಒಂದು ಅಂದಾಜಿನ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರ ಸಂಖ್ಯೆಯು ೨೫ ರಿಂದ ೬೦ ಲಕ್ಷಗಳಷ್ಟಾಗಿರುತ್ತದೆ .[]

ಸರಸಂಘಚಾಲಕರು

[ಬದಲಾಯಿಸಿ]
೧೯೩೯ರಲ್ಲಿ ತೆಗೆದ ಚಿತ್ರದಲ್ಲಿ ಡಾ ಹೆಡಗೆವಾರ, ಗುರುಜಿ ಗೊಲ್ವಲ್ಕರ ಸೇರಿದಂತೆ ಆಗಿನ ಸಂಘದ ಹಿರಿಯ ನಾಯಕರು

ಈ ಸಂಘಟನೆಯ ರಾಷ್ಟ್ರೀಯ ಮಟ್ಟದ ಮುಖ್ಯಸ್ಥರನ್ನು ಸರಸಂಘಚಾಲಕ ಎಂದು ಕರೆಯುತ್ತಾರೆ. ಸಂಸ್ಥಾಪನೆಯ ದಿನದಿಂದ ಈಗಿನವರೆಗಿನ ಸರಸಂಘಚಾಲಕರ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ.

  • ಡಾ. ಕೇಶವ ಬಲಿರಾಂ ಹೆಡಗೆವಾರ್, ಸಂಸ್ಥಾಪಕರು, ೧೯೨೫-೧೯೩೦ ಮತ್ತು ೧೯೩೧-೧೯೪೦, ಇವರನ್ನು ಡಾಕ್ಟರ್ ಜೀ ಎಂತಲೂ ಕರೆಯಲಾಗುತ್ತದೆ.
  • ಡಾ. ಲಕ್ಷ್ಮಣ ವಾಮನ ಪರಾಂಜಪೆ, ೧೯೩೦-೧೯೩೧, ಈ ಸಂಧರ್ಭದಲ್ಲಿ ಡಾಕ್ಟರ್ ಜೀ ಅರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಜೈಲಿನಲ್ಲಿದ್ದರು.
  • ಶ್ರೀ ಮಾಧವ ಸದಾಶಿವ ಗೊಲ್ವಾಳ್ಕರ್, ೧೯೪೦-೧೯೭೩, ಇವರನ್ನು ಗುರೂಜಿ ಎಂತಲೂ ಕರೆಯಲಾಗುತ್ತದೆ.
  • ಶ್ರೀ ಮಧುಕರ್ ದತ್ತಾತ್ರೇಯ ದೇವರಸ್, ೧೯೭೩-೧೯೯೩, ಇವರನ್ನು ಬಾಳಾಸಾಹೇಬ್ ಎಂತಲೂ ಕರೆಯಲಾಗುತ್ತದೆ.
  • ಪ್ರೊ. ರಾಜೇಂದ್ರ ಸಿಂಗ್, ೧೯೯೩-೨೦೦೦, ಇವರನ್ನು ರಜ್ಜುಭೈಯ್ಯಾ ಎಂತಲೂ ಕರೆಯಲಾಗುತ್ತದೆ.
  • ಶ್ರೀ ಕುಪ್ಪಹಳ್ಳಿ ಸೀತಾರಾಮಯ್ಯ ಸುದರ್ಶನ್, ೨೦೦೦-೨೦೦೯.
  • ಡಾ. ಮೋಹನ ಮಧುಕರ ಭಾಗವತ, ೨೧ ಮಾರ್ಚ್ ೨೦೦೯ ರಿಂದ ಇಂದಿನವರೆಗೂ.

ಈ ಶಬ್ದಕ್ಕೆ ಕನ್ನಡದಲ್ಲಿ ಶಾಖೆ ಎಂದು ಅರ್ಥ ಬರುತ್ತದೆ. ಆರ್.ಎಸ್.ಎಸ್. (ರಾ.ಸ್ವ.ಸಂ.) ನ ಸಂಘಟಾತ್ಮಕ ಕಾರ್ಯವು ಶಾಖೆಗಳ ಮೂಲಕವೇ ನಡೆಯುತ್ತದೆ. ಶಾಖೆಗಳು ಪ್ರತಿನಿತ್ಯ ಒಂದು ಘಂಟೆ ಕಾಲ ಸಾರ್ವಜನಿಕ ಬಯಲು ಸ್ಥಳಗಳಲ್ಲಿ ನಡೆಸಲ್ಪಡುತ್ತವೆ. ಒಂದು ಅಂಕಿ ಅಂಶದ ಪ್ರಕಾರ, ರಾಷ್ಟ್ರಾದ್ಯಂತ ಭಾರತದಲ್ಲಿ ೬೦,೦೦೦ಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ.[].

ರಾ.ಸ್ವ.ಸಂ.ನ ಶಾಖೆಗಳಲ್ಲಿ ಸ್ವಯಂ ಸೇವಕರ ವ್ಯಕ್ತಿತ್ವ ನಿರ್ಮಾಣ ಹಾಗು ವಿಕಸನ ದೃಷ್ಟಿಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ದೈಹಿಕ ಸದೃಢತೆಗಾಗಿ ಯೋಗ ಮತ್ತು ವ್ಯಾಯಾಮ ಮಾಡುವದಲ್ಲದೆ ಆಟಗಳನ್ನು ಆಡಲಾಗುತ್ತದೆ. ನಾಗರಿಕ ಪ್ರಜ್ಞೆ, ಸಮಾಜ ಸೇವೆ, ಸಮುದಾಯ ಜೀವನ, ದೇಶಭಕ್ತಿ ಮೊದಲಾದ ಗುಣಗಳ ಬೆಳವಣಿಗೆಗಾಗಿ ಇನ್ನಿತರ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ.[] ಸ್ವಯಂಸೇವಕರಿಗೆ ಪ್ರಥಮ ಚಿಕಿತ್ಸೆ, ಅಪಾಯಕರ ಸನ್ನಿವೇಶಗಳಿಂದ ಜನರನ್ನು ರಕ್ಷಿಸುವದು ಮತ್ತು ಪುನರ್ವಸತಿಯಂತಹ ಚಟುವಟಿಕೆಗಳ ತರಭೇತಿ ನೀಡಲಾಗುತ್ತದೆ. ಶಾಖೆ ನಡೆಸಲ್ಪಡುವ ಗ್ರಾಮ ಅಥವಾ ಪ್ರದೇಶಗಳ ಸ್ವಚ್ಛತೆ ಹಾಗು ಅಭಿವೃದ್ಡಿ ಕೆಲಸಗಳಲ್ಲಿ ತೊಡಗುವಂತೆ ಸ್ವಯಂಸೇವಕರನ್ನು ಸಂಘವು ಪ್ರೋತ್ಸಾಹಿಸುತ್ತದೆ.[][]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಆಕರ/ಉಲ್ಲೇಖಗಳು

[ಬದಲಾಯಿಸಿ]
  1. Priti Gandhi (15 May 2014). "Rashtriya Swayamsewak Sangh: How the world's largest NGO has changed the face of Indian democracy". DNA India. Retrieved 1 December 2014.
  2. "Hindus to the fore". Archived from the original on 7 September 2017. Retrieved 10 September 2017.
  3. "Glorious 87: Rashtriya Swayamsevak Sangh turns 87 on today on Vijayadashami". Samvada. 24 October 2012. Archived from the original on 11 January 2015. Retrieved 1 December 2014.
  4. "Highest growth ever: RSS adds 5,000 new shakhas in last 12 months". The Indian Express. 16 March 2016. Archived from the original on 24 August 2016. Retrieved 30 August 2016.
  5. Bhatt, Chetan (2001). Hindu Nationalism: Origins, Ideologies and Modern Myths. New York: Berg Publishers. ISBN 1-85973-348-4.
  6. ರೀಡಿಫ್ ವಾರ್ತೆ - ಜುಲೈ ೨೩, ೨೦೦೪
  7. ೭.೦ ೭.೧ K. R. Malkani, The RSS story, Published by Impex India, 1980
  8. M. G. Chitkara, Rashtriya Swayamsevak Sangh: national upsurge, Published by APH Publishing, 2004, ISBN 8176484652, 9788176484657