ಮೋಹನ್ ಭಾಗವತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಹನ್ ಭಾಗವತ್
Dr. mohan rao Bhagwat1.jpg
ಜನನ (1950-09-11) ೧೧ ಸೆಪ್ಟೆಂಬರ್ ೧೯೫೦ (ವಯಸ್ಸು ೭೨)
ರಾಷ್ಟ್ರೀಯತೆಭಾರತ
ಉದ್ಯೋಗSarsanghchalak (RSS Chief)
OrganizationRashtriya Swayamsevak Sangh
Term21 March 2009 – Incumbent
Predecessorಕೆ. ಎಸ್. ಸುದರ್ಶನ್

ಡಾ.ಮೋಹನ್ ಮಧುಕರ್ ಭಾಗವತ್[೧] ಅವರು ಮೋಹನ್ ಭಾಗವತ್[೨] ಎಂಬ ಹೆಸರಿನಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್) ನಲ್ಲಿ ಪ್ರಸಿದ್ದರಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರನೇ ಸರಸಂಘಚಾಲಕರು[೩]. ಅವಿವಾಹಿತರಾಗಿದ್ದುಕೊಂಡೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಣಾಭಾವದಿಂದ ತೊಡಗಿಸಿಕೊಂಡಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಹುಟ್ಟಿದ್ದು ಸೆಪ್ಟೆಂಬರ್ ೧೧, ೧೯೫೦, ಮಹಾರಾಷ್ಟ್ರದ ಚಂದ್ರಪುರದಲ್ಲಿ. ಅವರ ಇಡೀ ಕುಟುಂಬವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್)ದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದೆ. ಮನೆಯ ಹಿರಿಯ ಮಗನಾಗಿ, ನಾಗಪುರದ ಲೋಕಮಾನ್ಯ ತಿಲಕ್ ವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ ಪಡೆದು ೧೯೭೫ನೇ ಇಸವಿಯಲ್ಲಿ ಆರ್.ಎಸ್.ಎಸ್‍ನ ಸರಸಂಘಚಾಲಕರಾದರು. ೧೯೭೭ರಲ್ಲಿ ಅವರು ಆರ್.ಎಸ್.ಎಸ್‍ನ ಪ್ರಚಾರಕರಾದರು.

ಆರ್.ಎಸ್.ಎಸ್‍ನ ಕಾರ್ಯಕರ್ತರಾಗಿ[ಬದಲಾಯಿಸಿ]

೧೯೭೭ರಲ್ಲಿ ಅವರು ಆರ್.ಎಸ್.ಎಸ್‍ನ ಪ್ರಚಾರಕರಾದ ಅವರು ಇದುವರೆವಿಗೂ ತಮ್ಮನ್ನು ಸಕ್ರಿಯವಾಗಿ ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್.ಎಸ್.ಎಸ್‍ನ ಮುಖ್ಯಸ್ಥ[೪][೫]ರಾದ ಅವರು ಹಿಂದುತ್ವವನ್ನು ಉಳಿಸಿಕೊಳ್ಳಲು, ಹಿಂದುತ್ವದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ತಮ್ಮ ನೇರ ನಡೆ ನುಡಿಗಳಿಂದ ಆರ್.ಎಸ್.ಎಸ್‍ನ ಕಾರ್ಯಕರ್ತರ ಮನವನ್ನಲ್ಲದೆ, ಸಮಾಜದ ಜನಮನವನ್ನು ಗೆದ್ದಿದ್ದಾರೆ[೬].

ಭದ್ರತೆ[ಬದಲಾಯಿಸಿ]

 • ಮೋಹನ್ ಭಾಗವತ್‍ಗೆ ಜೀವ ಬೆದರಿಕೆ ಇರುವುದರಿಂದ ವಿಶೇಷ ತರಭೇತಿ ಪಡೆದಿರುವ ಕಮಾಂಡೋಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‍ಭಾಗವತ್ ಅವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಪ್ಲಸ್ ಭದ್ರತೆ ನೀಡಿದೆ. ಸಿ.ಐ.ಎಸ್.ಎಫ್ ನ ವಿಶೇಷ ಕಮಾಂಡೋಗಳಿರುವ ತಂಡವೊಂದು ಮೋಹನ್‍ಭಾಗವತ್‍ಗೆ ಸೆಕ್ಯೂರಿಟಿ ನೀಡಲಿದೆ.
 • ನಾಗಪುರದಲ್ಲಿರುವ ಆರ್.ಎಸ್.ಎಸ್ ಪ್ರಧಾನ ಕಚೇರಿ ಸೇರಿದಂತೆ ದೇಶಾದ್ಯಂತ ಮೋಹನ್‍ಭಾಗವತ್ ಎಲ್ಲಿ ಸಂಚರಿಸಿದರೂ ಝಡ್ ಪ್ಲಸ್ ಭದ್ರತೆ ಇರುತ್ತದೆ. ಕೇಂದ್ರದಲ್ಲಿ ಯು.ಪಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ 2013 ರಲ್ಲಿ ಮೊದಲ ಬಾರಿಗೆ ಮನವಿ ಸಲ್ಲಿಸಲಾಗಿತ್ತು, ಆದರೆ ಆಗ ಸಿಐಎಸ್ಎಫ್ ಝಡ್ ಪ್ಲಸ್ ಭದ್ರತೆಯನ್ನು ನಿರಾಕರಿಸಿತ್ತು.
 • ಪ್ರಸ್ತುತ ಅಂದರೆ ಅಧಿಕಾರದಲ್ಲಿರುವ ಎನ್.ಡಿ. ಎ ಸರ್ಕಾರ ಮತ್ತೆ ಆ ಮನವಿಯನ್ನು ಪರಿಶೀಲಿಸಿದ ಕೇಂದ್ರ ಗೃಹ ಸಚಿವಾಲಯ ಝಡ್ ಪ್ಲಸ್ ಭದ್ರತೆಗೆ ಅನುಮತಿ ನೀಡಿದೆ. ಸುಮಾರು 60 ಕಮಾಂಡೋಗಳಿರುವ ತಂಡ ಮೋಹನ್ ಭಾಗವತ್‍ಗೆ ದಿನದ 24 ಗಂಟೆಯೂ ಭದ್ರತೆ ಒದಗಿಸಲಿದ್ದಾರೆ.

ಮೋಹನ್‍ಭಾಗವತ್ ಅವರ ಭಾಷಣದ ತುಣುಕು[ಬದಲಾಯಿಸಿ]

 • ದೇಶದ ಸಮಸ್ಯೆಗಳು ಸಾವಿರಾರು ವರ್ಷಗಳಷ್ಟು ಹಿಂದಿನದ್ದಾಗಿದೆ. ಇದಕ್ಕೆ ಅನೇಕ ಮಹನೀಯರು ಸಾಕಷ್ಟು ಶ್ರಮಿಸಿದ್ದಾರೆ. ಆದರೂ ಸಹ ಸಮಸ್ಯೆಗಳನ್ನು ಹೊರಹಾಕುವ ನಿಟ್ಟಿನಲ್ಲಿ ಇನ್ನೂ ಸಫಲತೆ ಕಾಣಲಾಗಿಲ್ಲ. ಹೀಗಾಗಿ ಸಮಸ್ಯೆ ಎದುರಿಸುತ್ತಲೇ ಇದ್ದೇವೆ. ದೇಶದ ಜ್ವಲಂತ ಸಮಸ್ಯೆಗೆ ವೇಗದ ಪರಿಹಾರ ಕಾರ್ಯ ನಡೆಯಬೇಕಿದೆ ಎಂದರು. ಕಾರ್ಯಕ್ಷಮತೆ ಬೇರೆ ಭಾರತದ ಭವ್ಯತೆಗಾಗಿ ಸ್ವಾಮಿ ವಿವೇಕಾನಂದರು ಶ್ರಮಿಸಿದ್ದಾರೆ.
 • ಕಾರ್ಯಕ್ಷಮತೆ ಬೇರೆ ಬೇರೆ ರೀತಿಯಾಗಿದ್ದಾರೂ ಸಹ ಫಲಿತಾಂಶ ಒಂದೇ ಆಗಿರುತ್ತದೆ. ದೇಶದ ಸಮಸ್ಯೆಗಳಿಗೆ ಅಂಜದೆ ಅವುಗಳನ್ನು ಎದುರಿಸಿದರೆ, ಸಮಸ್ಯೆಗಳು ನಮ್ಮಿಂದ ದೂರ ಸರಿಯುತ್ತವೆ. ಎಷ್ಟೇ ಸಮಸ್ಯೆಗಳಿದ್ದರೂ ಸಹ ಭಾರತ ಹಿಂದು ರಾಷ್ಟ್ರವಾಗಿ, ಇಂದಿಗೂ ಸಹ ಎದ್ದು ನಿಂತಿದೆ. ದೇಶದ ಉನ್ನತಿ ಎಂದರೆ ಸ್ವಯಂ ಶಕ್ತಿಯಿಂದ ಮಾತ್ರ ಎಂದು ನುಡಿದರು.
 • ಭಾರತಕ್ಕೆ ಎಲ್ಲವೂ ಇದೆ. ಆದರೆ ಸಂಘಟನೆ ವಿಚಾರವಾಗಿ ಮಾತ್ರ ಸ್ವಲ್ಪ ದೂರವಾಗಿದೆ. ಇದನ್ನು ಎಲ್ಲರೂ ಕಲಿಯಬೇಕಿದೆ. ಸಂಘಟನೆ ಸಲುವಾಗಿ ಅವಿರತವಾಗಿ ಶ್ರಮಿಸಿ ಅದಕ್ಕೆ ಒಂದು ರೂಪ ನೀಡಿದವರು ಸಂಘ ಸಂಸ್ಥಾಪಕ ಡಾಕ್ಟರ ಹೆಡ್ಗೇವಾರ್. ಅವರ ಪರಿಶ್ರಮದ ಫಲವಾಗಿ ದೇಶದಲ್ಲಿ ಸಂಘಟನೆ ಹಳ್ಳಿ ಹಳ್ಳಿಗಳಿಗೆ ತಲುಪಿದೆ. ಸಂಘಟನೆ ಯಾರ ವಿರೋಧಿಯಲ್ಲ.
 • ಜನಪರ ಕೆಲಸ, ಸೇವಾ ಮನಭಾವದಿಂದ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಇದೆಲ್ಲದರ ಮುಖ್ಯ ಉದ್ದೇಶ ಸಂಘಟನೆ. ಕಾರ್ಯಕರ್ತರು ಸಮಾಜವನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು, ಮನದಲ್ಲಿ ದೃಢ ವಿಶ್ವಾಸ ಇಟ್ಟು ಕೊಂಡು ಮುಂದುವರೆಯುತ್ತಾರೆ ಎಂದರು. ಸಮಾಜ ಜಗೃತವಾಗಿರಬೇಕು. ಈ ವಿಶ್ವಾಸ ನೀಡುವುದು ಸಂಘ ಮಾತ್ರ.
 • 1925 ರಲ್ಲಿ ಪ್ರಾರಂಭವಾದ ಸಂಘ ಕಾರ್ಯ ತನ್ನ ಎಲ್ಲಾ ಕ್ಷೇತ್ರಗಳಲ್ಲಿ ಅಗ್ರಗಣ್ಯವಾಗಿ ಹೊರಹೊಮ್ಮಿದೆ. ದೇಶದಲ್ಲಿ ಸಂಘದಿಂದ 1.50 ಲಕ್ಷ ಸೇವಾ ಕಾರ್ಯಗಳು ನಡೆದಿವೆ. ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯನ್ನು ಆಚರಿಸುವ ಜೊತೆಗೆ ಅವರ ಸಂದೇಶಗಳನ್ನು ಜನತೆಗೆ ಮುಟ್ಟಿಸುವ ಕಾರ್ಯ ಸಂಘ ಮಾಡುತ್ತಿದೆ ಎಂದು ತಿಳಿಸಿದರು.

ಉಲ್ಲೇಖಗಳು[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2016-03-05. Retrieved 2016-01-16.
 2. http://hindi.webdunia.com/famous-personalities-profile/%E0%A4%AE%E0%A5%8B%E0%A4%B9%E0%A4%A8-%E0%A4%AD%E0%A4%BE%E0%A4%97%E0%A4%B5%E0%A4%A4-%E0%A4%AA%E0%A5%8D%E0%A4%B0%E0%A5%8B%E0%A4%AB%E0%A4%BE%E0%A4%87%E0%A4%B2-113010800101_1.htm
 3. ww.astrosage.com/2016/
 4. https://www.youtube.com/watch?v=Ybn_hZ5kmus
 5. http://timesofindia.indiatimes.com/topic/RSS-chief-Mohan-Bhagwat
 6. http://timesofindia.indiatimes.com/topic/RSS-chief-Mohan-Bhagwat