ಎಸ್.ಜೈಶಂಕರ್
ಸುಬ್ರಹ್ಮಣ್ಯಂ ಜಯಶಂಕರ್ | |
---|---|
ಬಾಹ್ಯ ವ್ಯವಹಾರಿಕ ಸಚಿವಾಲಯ
| |
ಹಾಲಿ | |
ಅಧಿಕಾರ ಸ್ವೀಕಾರ ೩೦ ಮೇ ೨೦೧೯ | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಸುಷ್ಮಾ ಸ್ವರಾಜ್ |
೩೧ ವಿದೇಶಾಂಗ ಕಾರ್ಯದರ್ಶಿ
| |
ಅಧಿಕಾರ ಅವಧಿ ೨೮ ಜನವರಿ ೨೦೧೫ – ೨೮ ಜನವರಿ ೨೦೧೯ | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಸುಜಾತ ಸಿಂಗ್ |
ಉತ್ತರಾಧಿಕಾರಿ | ವಿಜಯ್ ಕೇಶವ ಗೋಖಲೆ |
ಯುಎಸ್ ನ ಭಾರತೀಯ ರಾಯಭಾರಿ
| |
ಅಧಿಕಾರ ಅವಧಿ ೧ ದಶಂಬರ, ೨೦೧೩ – ೨೮ ಜನವರಿ ೨೦೧೫ | |
ಪೂರ್ವಾಧಿಕಾರಿ | ನಿರುಪಮ ರಾವ್ |
ಉತ್ತರಾಧಿಕಾರಿ | ಅರುಣ್ ಕುಮಾರ್ ಸಿಂಗ್ |
ಚೀನಾದ ಭಾರತೀಯ ರಾಯಭಾರಿ
| |
ಅಧಿಕಾರ ಅವಧಿ ೧ ಜೂನ್ ೨೦೧೯ – ೧ ದಶಂಬರ್ ೨೦೧೩ | |
ಪೂರ್ವಾಧಿಕಾರಿ | ನಿರುಪಮ ರಾವ್ |
ಉತ್ತರಾಧಿಕಾರಿ | ಅಶೋಕ್ ಕಾಂತ |
ಸಿಂಗಾಪುರ್ ನ ಭಾರತೀಯ ಉನ್ನತ ಆಯುಕ್ತ
| |
ಅಧಿಕಾರ ಅವಧಿ ೧ ಜನವರಿ ೨೦೦೭ – ೧ ಜೂನ್ ೨೦೧೯ | |
ಉತ್ತರಾಧಿಕಾರಿ | ಟಿಸಿಎ ರಾಘವನ್ |
In Ambassador to the Czech Republicdian
| |
ಅಧಿಕಾರ ಅವಧಿ ೧ ಜನವರಿ ೨೦೦೧ – ೧ ಜನವರಿ ೨೦೦೪ | |
ಉತ್ತರಾಧಿಕಾರಿ | P.S. Raghavan |
ವೈಯಕ್ತಿಕ ಮಾಹಿತಿ | |
ಜನನ | ಜನವರಿ ೧, ೧೯೫೫ ದೆಹಲಿ, |
ಸಂಗಾತಿ(ಗಳು) | ಕ್ಯೋಕೊ ಜಯಶಂಕರ್ |
ಮಕ್ಕಳು | ೩ (ಧ್ರುವ, ಅರ್ಜುನ್,ಮೇಧಾ) |
ಅಭ್ಯಸಿಸಿದ ವಿದ್ಯಾಪೀಠ | ಸೇಂಟ್ ಸ್ಟೀಫನ್ಸ್ ಕಾಲೇಜು, ದೆಹಲಿ (ಬಿಎ) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ (ಎಂ.ಎ), ಎಂ.ಫಿಲ್, ಪಿ ಎಚ್ ಡಿ) |
ವೃತ್ತಿ | ರಾಯಭಾರಿ ರಾಜಕಾರಣಿ |
ಮಿಲಿಟರಿ ಸೇವೆ | |
ಪ್ರಶಸ್ತಿಗಳು | ಪದ್ಮಶ್ರೀ |
ಸುಬ್ರಹ್ಮಣ್ಯಂ ಜಯಶಂಕರ್ ರವರು ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ೧೯೭೭ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದರು. ಜನವರಿ ೨೦೧೫ ರಿಂದ ಜನವರಿ ೨೦೧೮ರವರೆಗೂ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಮೇರಿಕ (೨೦೧೪-೨೦೧೫), ಚೀನಾ (೨೦೦೯-೨೦೧೩) ಮತ್ತು ಝೆಕ್ ರಿಪಬ್ಲಿಕ್ (೨೦೦೧-೨೦೦೪) ದೇಶದಲ್ಲಿ ಭಾರತೀಯ ರಾಯಭಾರಿಯಾಗಿ ಹಾಗೂ ಸಿಂಗಪೂರ್ ಗೆ ಹೈಕಮಿಷನರ್ ಆಗಿ (೨೦೦೭-೨೦೦೯)ಸೇವೆ ಸಲ್ಲಿಸಿದ್ದಾರೆ. ಭಾರತ-ಅಮೇರಿಕ ನಾಗರಿಕ ಪರಮಾಣು ಒಪ್ಪಂದದ ಸಂಧಾನದಲ್ಲಿ ಜೈಶಂಕರ್ ರವರು ಪ್ರಮುಖ ಪಾತ್ರ ವಹಿಸಿದ್ದರು. ನಿವೃತ್ತಿಯ ಬಳಿಕ ಅವರು ಟಾಟಾ ಸನ್ಸ್ ಜಾಗತಿಕ ಕಾರ್ಪೊರೇಟ್ ವ್ಯವಹಾರಗಳ ಅಧ್ಯಕ್ಷರಾಗಿ ಸೇರಿದರು. ೨೦೧೯ರಲ್ಲಿ ಜೈಶಂಕರ್ ರವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ನೀಡಿ ಗೌರವಿಸಲಾಯಿತು. ಮೇ ೩೧, ೨೦೧೯ರಿಂದ ಮೋದಿಯವರ ಕ್ಯಾಬಿನೆಟ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಯಾಬಿನೆಟ್ ಮಟ್ಟದಲ್ಲಿ ಇವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೇತೃತ್ವವನ್ನು ವಹಿಸಿರುವ ಮೊದಲ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ.[೧]
ಹಿನ್ನೆಲೆ ಮತ್ತು ಶಿಕ್ಷಣ
[ಬದಲಾಯಿಸಿ]ಎಸ್. ಜೈಶಂಕರ್ ರವರು ಹೊಸದಿಲ್ಲಿಯಲ್ಲಿ ಜನಿಸಿದರು. ಅವರು ಭಾರತೀಯ ಕಾರ್ಯತಂತ್ರದ ಪ್ರಮುಖ ವಿಶ್ಲೇಷಕ, ನಿರೂಪಕ ಮತ್ತು ನಾಗರಿಕ ಸೇವಕ ಕೆ. ಸುಬ್ರಹ್ಮಣ್ಯಂ ಮತ್ತು ಸುಲೋಚನರವರ ಮಗನಾಗಿದ್ದಾರೆ. .[೨] ಅವರು ಶ್ರೀನಿವಾಸಪುರಿಯ ಕ್ಯಾಂಬ್ರಿಡ್ಜ್ ಸ್ಕೂಲ್ ನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು ಮತ್ತು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜ್ ನಿಂದ ಪದವಿ ಪಡೆದಿದ್ದಾರೆ. ಅವರು ಜವಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (JNU) ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಮತ್ತು ಅಂತರ್ರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಎಂ.ಫಿಲ್ ಮತ್ತು ಪಿ.ಹೆಚ್.ಡಿ.ಯನ್ನೂ ಪಡೆದಿದ್ದಾರೆ. ಅದಲ್ಲದೆ ಅವರು ಪರಮಾಣು ರಾಜತಂತ್ರದಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಹಿಂದಿ,ಇಂಗ್ಲಿಷ್ ಜೊತೆಗೆ, ಜೈಶಂಕರ್ ರವರು ತಮಿಳು, ರಷ್ಯನ್, ಮ್ಯಾಂಡರಿನ್, ಜಪಾನೀಸ್ ಮತ್ತು ಹಂಗೇರಿಯನ್ ಭಾಷೆಯನ್ನೂ ಮಾತನಾಡುತ್ತಾರೆ.
ವೃತ್ತಿಜೀವನ
[ಬದಲಾಯಿಸಿ]- ೧೯೭೭ - ಭಾರತೀಯ ವಿದೇಶಾಂಗ ಸೇವೆಗೆ ಸೇರಿಕೊಂಡರು
- ೧೯೭೯-೮೧ - ಮಾಸ್ಕೋದಲ್ಲಿ ಸೋವಿಯೆತ್ ಒಕ್ಕೂಟಕದ ಭಾರತೀಯ ಕಾರ್ಯಾಚರಣೆಯ ಎರಡನೇ ಮತ್ತು ಮೂರನೇ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
- ೧೯೮೫-೮೮ - ವಾಷಿಂಗ್ಟನ್ ಡಿ.ಸಿ.ಯಲ್ಲಿನ ಭಾರತೀಯ ದೂತವಾಸದ ಮೊದಲ ಕಾರ್ಯದರ್ಶಿಯಾದರು.
- ೧೯೮೮-೯೦ - ಶ್ರೀಲಂಕಾದಲ್ಲಿ ಭಾರತೀಯ ಶಾಂತಿರಕ್ಷಣೆ ಪಡೆಯ (ಐಪಿಕೆಎಫ್) ಪ್ರಥಮ ಕಾರ್ಯದರ್ಶಿಯಾಗಿ ಮತ್ತು ರಾಜಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
- ೧೯೯೦-೯೩ - ಅವರು ಬುಡಾಪೆಸ್ಟ್ ನ ಭಾರತೀಯ ಮಿಷನ್ ನಲ್ಲಿ ಸಲಹೆಗಾರರಾಗಿದ್ದರು (ವಾಣಿಜ್ಯ) .
ನವದೆಹಲಿಗೆ ಮರಳಿದ ಅವರು ವಿದೇಶಾಂಗ ಸಚಿವಾಲಯದ ನಿರ್ದೇಶಕರಾಗಿ (ಪೂರ್ವ ಯುರೋಪ್) ಸೇವೆ ಸಲ್ಲಿಸಿದರು.
- ೧೯೯೬-೨೦೦೦ -ಟೋಕಿಯೊದ ಭಾರತೀಯ ರಾಯಭಾರ ಕಚೇರಿಯಲ್ಲಿ ಜೈಶಂಕರ್ ರವರು ಉಪ ಮುಖ್ಯಸ್ಥರಾಗಿದ್ದರು. ಈ ಅವಧಿಯಲ್ಲಿ ಭಾರತ-ಪೋಕ್ರಾನ್ -೨ ಪರಮಾಣು ಪರೀಕ್ಷೆಗಳ ನಂತರ ಇಂಡೋ-ಜಪಾನ್ ಸಂಬಂಧಗಳಲ್ಲಿ ಕುಸಿತ ಕಂಡುಬಂದಿತ್ತು. ಆದರೆ ನಂತರ ಜಪಾನ್ ದೇಶದ ಅಂದಿನ ಪ್ರಧಾನಿ ಯೋಶಿರೋ ಮೊರಿ ಅವರು ಭಾರತಕ್ಕೆ ಭೇಟಿ ನೀಡಿದ ನಂತರ ಚೇತರಿಸಿಕೊಂಡಿತು
- ೨೦೦೦ - ಅವರು ಝೆಕ್ ರಿಪಬ್ಲಿಕ್ ರಾಷ್ಟ್ರಕ್ಕೆ ಭಾರತೀಯ ರಾಯಭಾರಿಯಾಗಿ ನೇಮಕಗೊಂಡರು.
- ೨೦೦೪-೦೭ - ಜೈಶಂಕರ್ ರವರು ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು.
- ೨೦೦೬-೦೭ - ಅಮೇರಿಕಾ ಸಂಯುಕ್ತ ಸಂಸ್ಥಾನದ ಜೊತೆಗೆ ೧೨೩ ಒಪ್ಪಂದದ ಸಮಾಲೋಚನೆಯ ಸಮಯದಲ್ಲಿ ಜೈಶಂಕರ್ ರವರು ಭಾರತೀಯ ತಂಡವನ್ನು ಮುನ್ನಡೆಸಿದರು.[೩]
- ೨೦೦೭-೦೯ - ಜೈಶಂಕರ್ ರವರು ಸಿಂಗಾಪುರಕ್ಕೆ ಭಾರತದ ಉನ್ನತ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
- ೨೦೦೯-೨೦೧೩ - ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.
- ೨೦೧೩ - ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಜೈಶಂಕರ್ ರವರ ಹೆಸರನ್ನು ಪರಿಗಣಿಸಲಾಗಿತ್ತು.
- ೨೦೧೫ - ಜೈಶಂಕರರನ್ನು ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
- ೨೦೧೯ - ಅವರನ್ನು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವರಾಗಿ ನೇಮಿಸಲಾಯಿತು[೪]
ಉಲ್ಲೇಖಗಳು
[ಬದಲಾಯಿಸಿ]- ↑ https://indianexpress.com/article/india/s-jaishankar-becomes-first-career-diplomat-to-be-appointed-external-affairs-minister-5758326/
- ↑ https://starsunfolded.com/s-jaishankar/
- ↑ https://www.indiatoday.in/amp/india/story/s-jaishankar-world-s-best-diplomats-us-experts-1544831-2019-06-08
- ↑ https://www.indiatoday.in/amp/india/story/s-jaishankar-external-affairs-ministry-1539349-2019-05-31