೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ//,ಡಿಸೆಂ ಬರ್ ೧೦, ೨೦೧೫ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ವರ್ಷದ ವಿವಿಧ ಕ್ಷೇತ್ರಗಳ ನೊಬೆಲ್ ವಿಜೇತರ ವಿವರ ಹಾಗೂ ಅವರ ಸಾಧನೆಗಳ ಬಗ್ಗೆ ಒಂದು ಕಿರು ನೋಟ ಇಲ್ಲಿದೆ.

ಭೌತಶಾಸ್ತ್ರ[ಬದಲಾಯಿಸಿ]

ಬ್ರಹ್ಮಾಂಡದ ಸೃಷ್ಟಿಗೆ ಕಾರಣವಾದ ಮೂಲಭೂತ ಕಣಗಳ ಪೈಕಿ ಒಂದು ರೂಪದ ನ್ಯೂಟ್ರಿನೊ ಎಂಬ ಹೆಸರಿನ ಸಣ್ಣ ಕಣಗಳ ಕುರಿತು ಹೊಸ ಬೆಳಕು ಚೆಲ್ಲಿರುವ ಜಪಾನಿನ ಟಕಾಕಿ ಕಜಿಟಾ

ಟಕಾಕಿ ಕಜಿಟಾ

ಹಾಗೂ ಕೆನಡಾದ ಆರ್ತರ್ ಬಿ ಮೆಕ್ ಡೊನಾಲ್ಡ್

ಆರ್ತರ್ ಬಿ ಮೆಕ್ ಡೊನಾಲ್ಡ್

ಅವರು ಈ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಎಲೆಕ್ಟ್ರಿಕ್ ಚಾರ್ಜ್ ಇಲ್ಲದ, ಸೂರ್ಯ, ನಕ್ಷತ್ರ ಹಾಗೂ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ನಡೆಯುವ ಪರಮಾಣು ಪ್ರಕ್ರಿಯೆಯಲ್ಲಿ ಸೃಷ್ಟಿಯಾಗುವ ನ್ಯೂಟ್ರಿನೊ ಕಣಗಳು ಊಸರವಳ್ಳಿಯಂತೆ ಅಲ್ಲಿ ಕಾಣಿಸಿಕೊಂಡು ಇಲ್ಲಿ ಮಾಯವಾಗಿದ್ದವು.ಈ ಕಣಗಳು ಎಲ್ಲಿ ಹೋಗುತ್ತಿದ್ದವು ಎಂಬುದೇ ವಿಜ್ಞಾನಿಗಳಿಗೆ ತಿಳಿಯುತ್ತಿರಲಿಲ್ಲ. ಈ ಚಮತ್ಕಾರಿ ಕಣಗಳು ದ್ರವ್ಯರಾಶಿ ಹೊಂದಿದ್ದು, ಇವು ಆಗಾಗ್ಗೆ ಅಸ್ತಿತ್ವ ಅಥವಾ ರೂಪವನ್ನು ಬದಲು ಮಾಡಿಕೊಳ್ಳುತ್ತವೆ ಎಂದು ವಿವರಿಸಿದ್ದರು.

ಟಕಾಕಿ ಅವರು ಟೋಕಿಯೊ ವಿವಿಯಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದರೆ, ಮೆಕ್ ಡೊನಾಲ್ಡ್ ಅವರು ಕೆನಡಾದ ಕಿಂಗ್ ಸ್ಟನ್ ವಿವಿಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯೂಟ್ರಿನೊ ಕಣಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಭೂಮಿಯ ಮೇಲೆ ಅಥವಾ ಬ್ರಹ್ಮಾಂಡದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಬೆಳಕಿನ ಕಣಗಳು (ಫೋಟಾನ್ ಎಂದು ಕರೆಯುತ್ತಾರೆ). ಇದರ ನಂತರದ ಸ್ಥಾನ ನ್ಯೂಟ್ರಿನೊಗಳದ್ದು. ೧೯೬೦ರಿಂದಲೂ ಈ ಕಣಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದ ವಿಜಾನಿಗಳು, ಸೂರ್ಯ ಮತ್ತು ಇನ್ನಿತರ ನಕ್ಷತ್ರಗಳಲ್ಲಿ ನಡೆಯುವ ಪರಮಾಣು ಪ್ರಕ್ರಿಯೆಯ ಪ್ರಮಾಣವನ್ನು ಅಂದಾಜಿಸಿ ಭೂಮಿಯ ಮೇಲೆ ಇಷ್ಟು ನ್ಯೂಟ್ರಿನೊಗಳು ಇರಬಹುದು ಎಂದು ಅಂದಾಜಿಸುತ್ತಿದ್ದರು. ಆದರೆ, ಅವನ್ನು ಲೆಕ್ಕ ಹಾಕುವಾಗ ಮಾತ್ರ ಅಂದಾಜಿಸಿದ್ದಕ್ಕಿಂತ ಎರಡು ಅಥವಾ ಮೂರು ಪಟ್ಟುಕಣಗಳು ನಾಪತ್ತೆಯಾಗುತ್ತಿದ್ದವು. ಇವು ಎಲ್ಲಿ ಹೋದವು ಎಂಬ ಯಕ್ಷಪ್ರಶ್ನೆವಿಜ್ಞಾನಿಗಳನ್ನು ಕಾಡುತ್ತಿತ್ತು. ಆಗ ನೆರವಿಗೆ ಬಂದವರು ಟಕಾಕಿ ಮತ್ತು ಮೆಕ್ ಡೊನಾಲ್ಡ್. ನ್ಯೂಟ್ರಿನೊ ಕಣಗಳು ಸೂರ್ಯನಿಂದ ಭೂಮಿಯತ್ತ ಧಾವಿಸುವಾಗ ರೂಪ ಬದಲಿಸಿಕೊಲ್ಳುತ್ತವೆ. ಒಮ್ಮೆ ಇವು ಮೌನ್ ನ್ಯೂಟ್ರಿನೊಗಳಂತೆ ಕಾಣಿಸಿಕೊಂಡರೆ, ಮತ್ತೊಮ್ಮೆ ಇವು ಟಾವ್ ನ್ಯೂಟ್ರಿನೊಗಳ ರೂಪು ಎತ್ತುತ್ತವೆ. ಯಾವುದೇ ರೂಪದಲ್ಲಿ ಇದ್ದರೂ ಇವು ನ್ಯೂಟ್ರಿನೊಗಳೇ ಎಂದು ಇವರು ಸಾಕ್ಷಸಮೇತ ವಿವರಿಸಿದರು. ಆಗ ನ್ಯೂಟ್ರಿನೊಗಳ ಒಳಮರ್ಮ ಜಗತ್ತಿಗೆ ಅರ್ಥವಾಗಿ ನಾಪತ್ತೆಯಾಗುತ್ತಿದ್ದ ನ್ಯೂಟ್ರಿನೊಗಳ ಲೆಕ್ಕ ಸಿಕ್ಕಿತ್ತು.

ರಸಾಯನಶಾಸ್ತ್ರ[ಬದಲಾಯಿಸಿ]

'ಜಖಂಗೊಂಡಿರುವ ವಂಶವಾಹಿಗಳ ದುರಸ್ತಿಗೆ ಕೋಶಗಳನ್ನು ಬಳಸುವ ವ್ಯವಸ್ಥೆ' ಕುರಿತ ಅಧ್ಯಯನಕ್ಕೆ ಈ ಬಾರಿಯ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪುರಸ್ಕಾರ ಒಲಿದಿದೆ. ಈ ಕ್ಷೇತ್ರದಲ್ಲಿ ದುಡಿದ ವಿಜ್ಞಾನಿಗಳಾದ ಸ್ವೀಡನ್ನಿನ ಥಾಮಸ್ ಲಿಂಡಾಲ್,[೧] ಅಮೇರಿಕದ ಪೌಲ್ ಮಾಡ್ರಿಚ್

ಪೌಲ್ ಮಾಡ್ರಿಚ್

,ಯುಎಸ್-ಟರ್ಕಿಶ್ ವಿಜಾನಿ ಅಜೀಜ್ ಸಾನ್ಸರ್ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಥಾಮಸ್ ಲಿಂಡಾಲ್

ಥಾಮಸ್ ಲಿಂಡಾಲ್

ಬ್ರಿಟನ್ನಿನ ಎಮಿರೈಟರ್ಸ್ ಗ್ರೂಪಿನ ಕ್ಯಾನ್ಸರ್ ಸಂಶೋಧನೆ ವಿಭಾಗದ ನಿರ್ದೇಶಕರಾಗಿದ್ದಾರೆ. ಉಳಿದ ಇಬ್ಬರು ಅಮೇರಿಕದ ಉತ್ತರ ಕ್ಯಾರೋಲಿನಾದಲ್ಲಿ ನೆಲೆಸಿದ್ದಾರೆ. ೧೯೪೬ರಲ್ಲಿ ಜನಿಸಿದ ಮಾಡ್ರಿಚ್ ಹಾವರ್ಡ್ ಹ್ಯೂಸ್ ವೈದ್ಯಕೀಯ ಸಂಸ್ಥೆಯಲ್ಲಿ ಸಂಶೋಧಕರಾಗಿಯೂ, ಡ್ಯೂಕ್ ವಿವಿಯಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಜೀಜ್ ಸಾನ್ಸರ್ ಅವರು ಯೂನಿವರ್ಸಿಟಿ ಆಫ್ ನಾರ್ಥ್ ಕ್ಯಾರೋಲಿನಾ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಪ್ರೊಫೆಸರ್ ಆಗಿದ್ದಾರೆ.

ಜೀನುಗಳಲ್ಲಿ ತಲೆಮಾರುಗಳ ಮಾಹಿತಿಯನ್ನು ರೂಪಿಸುವಾಗ ಆಗಬಹುದಾದ ತಪ್ಪುಗಳನ್ನು ತಡೆಯಲು ಕೋಶಗಳು ಹೇಗೆ ತಮ್ಮ ಡಿಎನ್ಎಯನ್ನು ಸ್ವಯಂ ದುರಸ್ತಿಪಡಿಸುತ್ತವೆ ಎಂಬುದರ ಕುರಿತ ಅಧ್ಯಯನ ಇದಾಗಿದ್ದು, ಜೀನೋಮುಗಳ ಸಮಗ್ರತೆ ಕಾಯ್ದುಕೊಳ್ಳುವ ವಿಜ್ಞಾನವನ್ನು ಅಣುಗಳ ಕಾರ್ಯಮಟ್ಟದಲ್ಲಿ ವಿವರಿಸುತ್ತದೆ. ಹರಡಿಟ್ಟರೆ ಕೆಲವೇ ಅಡಿಗಳಷ್ಟು ಉದ್ದವಾಗಿ ನಿಲ್ಲಬಲ್ಲ ಡಿಎನ್ಎಗಳನ್ನು ಒಳಗೊಂಡ ಏಕಕೋಶದಿಂದ ಆರಂಭವಾಗುವ ಮನುಷ್ಯನ ದೇಹದ ಬೆಳವಣಿಗೆಯು, ವಂಶವಾಹಿಗಳ ಮಾಹಿತಿ ಹೊತ್ತ ಜೀನುಗಳು ಕ್ಸೆರಾಕ್ಸ್ ಆಗುತ್ತ ಸಾಗಿದಂತೆಲ್ಲ ಹೆಚ್ಚುತ್ತ ಸಾಗುತ್ತವೆ. ಪರಿಣಾಮವಾಗಿ ೨೫೦ಕ್ಕೂ ಹೆಚ್ಚು ಬಾರಿ ಸೂರ್ಯನ ಬಳಿ ಹೋಗಿ ತಿರುಗಿ ಬರುವಷ್ಟು ಉದ್ದದ ಡಿಎನ್ಎಗಳು ನಮ್ಮ ದೇಹದಲ್ಲಿವೆ. ಸಂಶೋಧನೆಯ ವಿವರ:ಸಾವಿರಾರು ವರ್ಷಗಳಿದ,ಹಲವಾರು ತಲೆಮಾರುಗಳಿಂದ ಮನುಷ್ಯ ಹೇಗೆ ಬೆಳವಣಿಗೆಯಾಗುತ್ತ ಬಂದ ಎಂಬ ಪ್ರಶ್ನೆಗೆ ಉತ್ತರಿಸಲು ನೆರವಾಗುವ ವಂಶವಾಹಿಗಳ ಕುರಿತ ಮಾಹಿತಿ ನಮ್ಮ ದೇಹದಲ್ಲಿ ಹರಿದುಬಂದಿದೆ. ದೇಹದ ಹೊರಗಿನ ಹಾಗೂ ಒಳಗಿನ ಹಲವಾರು ಆಕ್ರಮಣಗಳಿಗೆ ಗುರಿಯಾಗಿಯೂ ಅವುಗಳಲ್ಲಿರುವ ಮಾಹಿತಿ ಹಾಳಾಗದಂತೆ ಉಳಿಯುತ್ತಾ ಬಂದಿರುವುದು ಅಚ್ಚರಿಯೇ ಸರಿ. ಪ್ರತಿದಿನ ಲಕ್ಷಾಂತರ ಬಾರಿ ನಡೆಯುವ ಕೋಶ ವಿಭಜನೆ ಪ್ರಕ್ರಿಯೆಯಲ್ಲಿ ಹಾನಿಗೊಳಗಾದ ಡಿಎನ್ಎಯೇ ಪ್ರತಿರೂಪ ಹೊಂದಿ ಈ ನ್ಯೂನ್ಯತೆಯ ಪ್ರಮಾನ ದೇಹದಲ್ಲಿ ಹೆಚ್ಚಬಹುದು.ಸಿಗರೇಟಿನ ಹೊಗೆಯಲ್ಲಿರುವ ಸಣ್ಣ ರಾಸಾಯನಿಕ ಕಣಗಳು ಡಿಎನ್ಎ ಮೇಲೆ ಕುಳಿತು ಪಡಿಯಚ್ಚು ತಯಾರಿಕಾ ಕಾರ್ಯದಲ್ಲಿ ಅಡ್ಡಪಡಿಸಬಹುದು.

ಸಾಹಿತ್ಯ[ಬದಲಾಯಿಸಿ]

ಸೋವಿಯತ್ ಒಕ್ಕೂಟದಿಂದ ಪ್ರತ್ಯೇಕಗೊಂಡ ತನ್ನ ತವರು ಬೆಲಾರಸ್ನ ಹೊಸ ಅಸ್ತಿತ್ವದ ಹುಡುಕಾಟ ಮತ್ತು ಎರಡನೇ ಜಾಗತಿಕ ಯುದ್ದದಿಂದ ಘಾಸಿಗೊಂಡ ಹೃದಯಗಳ ಮಾನವೀಯತೆಯ ಹುಡುಕಾಟವನ್ನು ತಮ್ಮ ಕಾದಂಬರಿಗಳಲ್ಲಿ ಸೆರೆಹಿಡಿದ ಸ್ವೆಟ್ಲಾನಾ ಅಲೆಕ್ಸೀವಿಕ್ ಅವರಿಗೆ ಈ ಬಾರಿಯ ಸಾಹಿತ್ಯನೊಬೆಲ್ ಪ್ರಶಸ್ತಿ ನೀಡಲಾಗಿದೆ. ೬೭ ವರ್ಷದ ಅಲೆಕ್ಸೀವಿಕ್ ತಮ್ಮ ಬರಹಗಳಲ್ಲಿ ಚಿತ್ರಿಸಿದ ಎರಡನೇ ಜಾಗತಿಕ ಯುದ್ದದ ಪ್ರತ್ಯಕ್ಷ ಸಾಕ್ಷಿಗಳ ನೋವು, ನರಳಿಕೆ ಹಾಗೂ ಚರ್ನೊಬಿಲ್ ದುರಂತದ ಭಾವನಾತ್ಮಕ ಬರವಣಿಗೆ ಅಂತರಾಷ್ಟೀಯ ಮಾನ್ಯತೆಗಳಿಸಿದ್ದು, ಮಾನವ ನಿರ್ಮಿತ ದುರಂತಗಳೆಡೆಗೆ ಜಗತ್ತಿನ ಕಣ್ಣು ತೆರೆಸಿದೆ.ಈ ಎರಡು ದುರಂತಗಳಿಗೆ ಸಾಕ್ಷಿಯಾದವರ ನೋವಿಗೆ ಅಕ್ಷರ ರೂಪ ಕೊಟ್ಟ ಅಲೆಕ್ಸೀವಿಕ್ ಕೃತಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅವರನ್ನು ಹಲವು ಅಂತರಾಷ್ಟೀಯ ಪ್ರಶಸ್ತಿಗಳು ಹುಡುಕಿ ಬಂದಿವೆ. ರಷ್ಯಾದ ಆಕ್ರಮಣಕಾರಿ ನೀತಿಗಳ ವಿರೋಧಯಾಗಿದ್ದರೂ ರಷ್ಯನ್ ಭಾಷೆಯಲ್ಲಿ ಬರೆಯುವ ಅಲೆಕ್ಸೀವಿಕ್ ಕೃತಿಗಳು ಅವರು ತವರು ಬೆಲಾರಾಸ್ನಲ್ಲೇ. ನಿಷೇಧಕ್ಕೆ ಒಳಗಾಗಿದ್ದು ವಿಪರ್ಯಾಸ. ದೀರ್ಘ ಕಾಲದಿಂದ ಬೆಲಾರಸ್ ಆಳುತ್ತಿರುವ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಸರ್ವಾಧಿಕಾರ ಜತೆಗಿನ ಅಲೆಕ್ಸೀವಿಕ್ ಗುದ್ದಟ ಇದಕ್ಕೆ ಕಾರಣ. ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ೧೧ನೇ ಮಹಿಳಾ ಲೇಖಕಿ ಅಲೆಕ್ಸೀವಿಕ್.

ಶಾಂತಿ[ಬದಲಾಯಿಸಿ]

ಉತ್ತರ ಆಫ್ರಿಕಾದ ಪುಟ್ಟ ದೇಶ ಟ್ಯುನೀಸಿಯಾ ಆಂತರಿಕ ಸಂಘರ್ಷದಿಂದ ಬೆಂದಿ ಹೋಗುತ್ತಿದ್ದ ವಿಷಯ ಗಳಿಗೆಯಲ್ಲಿ ಪ್ರಜಾಸತ್ತೆಯ ಮೌಲ್ಯವನ್ನು ಜನತೆಯಲ್ಲಿ ಬಿತ್ತುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಟ್ಯುನೀಸಿಯಾ ರಾಷ್ಟ್ರೀಯ ಸಂವಾದ ಸಮೂಹ ಸಂಸ್ಥೆಗೆ ಈ ಬಾರಿಯ ಶಾಂತಿ ನೊಬೆಲ್ ದೊರೆತಿದೆ. ೨೦೧೧ರಲ್ಲಿ ಅರಬ್ ದೇಶಗಳು ಪ್ರಜಾಸತ್ತೆಗಾಗಿ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಜಾಸ್ಮಿನ್ ಕ್ರಾಂತಿಯ ಸಮಯ ಟ್ಯುನೀಸಿಯಾದಲ್ಲೂ ಪ್ರಜಾಪ್ರಭುತ್ವ ಪರ ಹೋರಾಟಗಳು ಕವು ಪಡೆದು ರಾಜಕೀಯ ಹತ್ಯಾಕಾಂಡಗಳು ವ್ಯಾಪಕ ಹಿಂಸಾಚಾರ ಎಗ್ಗಿಲ್ಲದೆ ನಡೆಯುತ್ತಿದ್ದವು. ಅಂಥ ಸಮಯದಲ್ಲಿ,೨೦೧೩ರಲ್ಲಿ ಹುಟ್ಟಿದ್ದು ರಾಷ್ಟ್ರೀಯ ಸಂವಾದ ಸಮೂಹ.ಇಡೀ ದೇಶದ ರಾಜಕೀಯ ಪಕ್ಷಗಳು ಮತ್ತು ಎಲ್ಲ ಜನಪರ ಸಂಘಟನೆಗಳನ್ನು ಒಗ್ಗೂಡಿಸಿ ಸಂಧಾನ ನಡೆಸುವ ಮೂಲಕ ಇದು ಟ್ಯುನೀಸಿಯಾದಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳುವಂತೆ ಮಾಡಿತು. ಮಾನವ ಹಕ್ಕುಗಳನ್ನು ರಕ್ಷಿಸುವ ಸಂವಿಧಾನಾತ್ಮಕ ಹೊಸ ಸರಕಾರವನ್ನು ರವಿಸಿತು. ಟ್ಯುನೀಸಿಯಾದಲ್ಲಿ ಇತ್ತೀಚೆಗಷ್ಟೆ ಜಾರಿಯಾಗಿರುವ ಪ್ರಜಾಸತ್ತೆ ಆಳವಾಗಿ ಬೇರುಬಿಡುವ ವತಾವರಣ ಕಲ್ಪಿಸಲು ಜನತೆಯನ್ನು ಉತ್ತೇಜಿಸುವ ಸಲುವಾಗಿ ಶಾಂತಿ ನೊಬೆಲ್ ನೀಡಲಾಗುತ್ತಿದೆ. ಸೇನಾಡಳಿತ,ಸರ್ವಾಧಿಕಾರ,ಚಕ್ರಾಧಿಪತ್ಯ,ಧರ್ಮಪ್ರಭುತ್ವ ಮುಂತಾದ ವ್ಯವಸ್ಥೆಗಳನ್ನು ಹೊಂದಿರುವ ಇತರ ದೇಶಗಳು ಪ್ರಜಾಪ್ರಭುತ್ವದ ಹೋರಾಟವನ್ನು ರೂಪಿಸಿಕೊಳ್ಳಲು ಟ್ಯುನೀಸಿಯಾ ಮಾದರಿಯಾಗಲಿ. ಮಧ್ಯ ಪ್ರಾಚ್ಯ,ಉತ್ತರ ಆಫ್ರಿಕ ಜಗತ್ತಿನ ಇತರೆಡೆ ಶಾಂತಿ ಮತ್ತು ಪ್ರಜಾಸತ್ತೆ ಬಕಗೊಳ್ಳಲು ಈ ಪ್ರಶಸ್ತಿ ಪ್ರೋತ್ಸಾಹ ನೀಡಲಿ ಎಂಬ್ ಆಶಯ ಈ ಬಾರಿಯ ಶಾಂತಿ ನೊಬೆಲ್ನದ್ದು.

ವೈದ್ಯಕೀಯ[ಬದಲಾಯಿಸಿ]

ಅಮೇರಿಕದ ವಿಲಿಯಂ ಕ್ಯಾಂಪ್ ಬೆಲ್

ವಿಲಿಯಂ ಕ್ಯಾಂಪ್ ಬೆಲ್

ಜಪಾನಿನ ಸತೋಷಿ ಒಮುರಾ ಮತ್ತು ಚೀನಾದ ಯು ಯು ಟು ಈ ಬಾರಿಯ ವೈದ್ಯಕೀಯ ಈ ಬಾರಿಯ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕ್ಯಾಂಪ್ ಬೆಲ್ ಮತ್ತು ಒಮುರಾ ಅವರು ರಭಸದಿಂದ ಹರಿಯುವ ನದಿಯಲ್ಲಿ ಹುಟ್ಟಿ ಬೆಳೆಯುವ ಕೊಕ್ಕೆ ಹುಳುಗಲಳಿಂದ ತಗಲುವ ಚರ್ಮದ ಸೋಂಕು ಮತ್ತು ನಂತರ ಇದು ಕಣ್ಣಿಗೆ ಹರಡಿ ಅಂಧತ್ವಕ್ಕೆ ಕಾರಣವಾಗುವ 'ರಿವರ್ ಬ್ಲೆಡ್ ನೆಸ್ ಮತ್ತು ಲಿಂಫ್ಯಾಟಿಕ್ ಫಿಲಾರಿಯಾಸಿಸ್' ಎಂಬ ಕಾಯಿಲೆಗೆ ಔಷದ ಸಂಶೋಧಿಸಿದ್ದಾರೆ. ಟು ಅವರು ಎಂಥದ್ದೇ ಪರಿಣಮಕಾರಿ ಔಷದಿಗೂ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವ ಮಲೇರಿಯಾ ಗಿಡಮೂಲಿಕೆ ಪತ್ತೆಹಚ್ಚಿದ್ದು, ಅದನ್ನೊಂದು ಗುಳಿಗೆ ರೂಪದ ಔಷದವನ್ನಾಗಿ ಅಭಿವೃದ್ದಿಪಡಿಸಿದ್ದಾರೆ. ರೋಗದ ಕುರಿತು:'ರಿವರ್ ಮತ್ತು ಲಿಂಬ್ಲೈಂಡ್ ನೆಸ್ ಮತ್ತು ಫ್ಯಾಟಿಕ್ ಫಿಲಾರಿಯಾಸಿಸ್' ಎಂಬ ಸೋಂಕು ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಹರಡುತ್ತದೆ. ಆಫ್ರಿಕಾ,ಲ್ಯಾಟಿನ್ ಅಮೆರಿಕ ಮತ್ತು ಯೆಮನ ನ ೧.೭ ಕೋಟಿಗೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ರಭಸವಾಗಿ ಹರಿಯುವ ನದಿಯಲ್ಲೇ ಜೇವ ತಳೆದು ಸಂತತಿ ವೃದ್ದಿ ಮಾಡಿಕೊಳ್ಳುವ ಫಿಲೇರಿಯಲ್ ವರ್ಮ್ ಅಥವಾ ರೌಂಡ್ ವರ್ಮ್ ಅಥವಾ ಕೊಕ್ಕೆ ಹುಳು ದೇಹದೊಳಕ್ಕೆ ಸೇರಿದರೆ ಈ ಸೋಂಕು ಉಂಟಾಗುತ್ತದೆ. ಕಪ್ಪುನೊಣದ ಮೂಲಕ ಇದು ಹರಡುತ್ತದೆ. ಚರ್ಮದಲ್ಲಿ ತುರಿಕೆ, ಉರಿಯೂತ, ಬೊಬ್ಬೆಗಳು ಕಾಣಿಸಿಕೊಂಡತಾಗಿ ನಿಧಾನವಾಗಿ ಕಣ್ಣಿಗೆ ಹರಡಿ ಶಾಶ್ವತ ಅಂಧತ್ವ ತರುತ್ತದೆ. ರಿವರ್ ಬ್ಲೆಡ್ ನೆಸ್ ಕಾಯಿಲೆ ಸಾಮಾನ್ಯವಾಗಿ ಬಡದೇಶಗಳಲ್ಲಿ ಕಾಣಿಸಿಕೊಳ್ಳುವುದರಿಂದ ಮತ್ತು ಸಿರಿವಂತ ದೇಶಗಳಲ್ಲಿ ಈ ಔಷದಿಗಳಿಗೆ ಮಾರುಕಟ್ಟೆ ಇಲ್ಲದಿರುವುದರಿಂದ ರಿವರ್ ಕಾಯಿಲೆ ಬ್ಲೈಂಡ್ ನೆಸ್ ಗೆ ಔಷದ ಉತ್ಪಾದಿಸುವ ಗೋಜಿಗೆ ಔಷದ ಕಂಪೆನಿಗಳು ಹೋಗಿರಲಿಲ್ಲ. ಅಂಥ ಸಮಯದಲ್ಲಿ ಈ ಅಪಾಯಕಾರಿ ರೋಗಕ್ಕೆ ವಿಲಿಯಂ ಕ್ಯಾಂಪ್ ಬೆಲ್ ಮತ್ತು ಜಪಾನಿನ ಸತೋಷಿ ಒಮುರಾ ಅವರು ದಶಕಗಳ ಕಾಲ ಸಂಶೋಧನೆ ನಡೆಸಿ "ಐವರ್ ಮೆಕ್ಟಿನ್ಸ್" ಎಂಬ ಔಷದವನ್ನು ೧೯೮೭ರಲ್ಲಿ ಕಂಡು ಹಿಡಿದರು. ಈ ಹಿಂದೆ ರಿವರ್ ಬ್ಲೈಂಡ್ ನೆಸ್ಗೆ ನೀಡಲಾಗುತ್ತಿದ್ದ ಔಷದಿಗಳಿಂದ ಅಪಾಯಕಾರಿ ಅಡ್ಡ ಪರಿಣಾಮಗಳು ಉಂಟಾಗುತ್ತಿದ್ದವು. ಆದರೆ ಐವರ್ ಮೆಕ್ಟಿನ್ ಎಂಬ ಗುಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲದ ಪರಿಣಾಮಕಾರಿ ಔಷಧವಾಗಿದೆ. ಐವರ್ ಮೆಕ್ಟಿನ್ ಔಷಧವು ರೋಗಕಾರಕ ಕೊಕ್ಕೆಹುಳು ಬಲಿತಿದ್ದರೆ ಅದನ್ನು ಕೊಲ್ಲಲಾರದು. ಹೀಗಾಗಿ ರಿವರ್ ಬ್ಲೈಂಡ್ ನೆಸ್ ಸಂಪೂರ್ಣವಾಗಿ ವಾಸಿಯಾಗಬೇಕಾದರೆ ಐವರ್ ಮೆಕ್ಟಿನ್ಸ್ ಮಾತ್ರೆಗಳನ್ನು ವರ್ಷಕ್ಕೆ ಒಂದು ಬಾರಿಯಂತೆ ಸತತ ೧೮ ವರ್ಷಗಳ ಕಾಲ ತೆಗೆದುಕ್ಕೊಳ್ಳಬೇಕು. ಈ ಸೋಂಕು ನಿರ್ಮೂಲನೆಗೊಳಿಸುವವರೆಗೆ ಐವರ್ ಮೆಕ್ಟಿನ್ಸ್ ಮಾತ್ರೆಗಳನ್ನು ಉತ್ಪಾದಿಸಿ ಉಚಿತವಾಗಿ ಹಂಚುವುದಾಗಿ ಔಷದ ಉತ್ಪಾದಕರ ಕಂಪೆನಿ "ಮರ್ಕ್"ವಾಗ್ದಾನ ನೀಡಿದೆ.

ಅರ್ಥಶಾಸ್ತ್ರ[ಬದಲಾಯಿಸಿ]

ಬಡವರ ಕಲ್ಯಾಣ ಕುರಿತು ಮಹತ್ವದ ಸಂಶೋಧನೆ ನಡೆಸಿದ ಅಮೇರಿಕದ ನ್ಯೂಜೆರ್ಸಿಯ ಪ್ರಿನ್ಸ್ ಟನ್ ವಿವಿ ಪ್ರೊಫೆಸರ್ಡೀಟನ್

ಡೀಟನ್

ಅವರು ಪ್ರಸಕ್ತ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ಕಾಟ್ ಲೆಂಡ್ ಮೂಲದವರಾದ ಮೈಕ್ರೊ ಎಕಾನಾಮಿಸ್ಟ್ ಡೀಟನ್ ಅವರು ಹುಟ್ಟಿದ್ದು ಈಡನ್ ಬರ್ಗ್ನಲ್ಲಿ.ವೃತ್ತಿ ಜೇವನ ಆರಂಭಿಸಿದ್ದು ಪ್ರಿನ್ಸ್ ಟನ್ ವಿವಿಯಲ್ಲಿ. ೧೯೮೩ರಿಂದಲೂ ಅವರು ಇದೇ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಪಾಠ ಮಾಡುತ್ತಿದ್ದಾರೆ. ಗ್ರಾಹಕರು ತಮ್ಮ ಗಳಿಕೆಯಲ್ಲಿ ಯಾವ ಸರಕಿನ ಮೇಲೆ ಎಷ್ಟು ಹಣ ಖರ್ಚು ಮಾಡುತ್ತಾರೆ. ಜನರು ಎಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಎಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ,ಹಾಗೂ ಕಲ್ಯಾಣ ಮತ್ತು ಬಡತನವನ್ನು ಅಳೆಯುವ ಮಾಪನಗಳು ಯಾವುವು ಎಂಬ ಕುರಿತು ಡೀಟನ್ ಅವರು ನಡೆಸಿರುವ ಸಮಗ್ರ ಅಧ್ಯಯನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

೧.http://news13.in/archives/24516 ೨.http://vijaykarnataka.indiatimes.com/news/world/sahitya-nobel-to-svetlana-alexievich/articleshow/49279450.cms ೩.http://www.uccindia.org/%E0%B2%B5%E0%B3%88%E0%B2%A6%E0%B3%8D%E0%B2%AF%E0%B2%95%E0%B3%80%E0%B2%AF-%E0%B2%A8%E0%B3%8A%E0%B2%AC%E0%B3%86%E0%B2%B2%E0%B3%8D-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF/ ೪.https://www.nobelprize.org/nobel_prizes/chemistry/laureates/2015/lindahl-photo.html ೫.https://www.nobelprize.org/nobel_prizes/economic-sciences/laureates/2015/deaton-facts.html