ವೈದ್ಯಕೀಯ
|ಹಿಂದೂ ದರ್ಮದ ವೈದ್ಯಕೀಯ ಪದ್ದತಿಯಾದ ಆಯುರ್ವೇದವನ್ನು ಪರಿಚಯಿಸಿದ ದೇವ ಧನ್ವಂತರೀ.
ವೈದ್ಯಕೀಯ/ವೈದ್ಯಕೀಯಶಾಸ್ತ್ರ ರೋಗಗಳನ್ನು ,ಗಾಯಗಳನ್ನು ಗುಣಪಡಿಸುವ ಒಂದು ಪ್ರಾಚೀನ ಕಲೆ ಅಥವಾಾ ವಿಜ್ಞಾನ. ಇದರಲ್ಲಿ ಪ್ರಾಣಿಗಳ ಮತ್ತು ಮನುಷ್ಯರ ರೋಗಗಳನ್ನು ಅವುಗಳನ್ನು ಗುಣಪಡಿಸಲು ಉಪಯೋಗಿಸುವ ಔಷದಗಳ ಬಗ್ಗೆ, ರೋಗ ನಿಯಂತ್ರಣ, ಶಸ್ತ್ರಕ್ರಿಯೆ ಬಗ್ಗೆ ಬೇರೆ ಬೇರೆಯಾಗಿ ಅಧ್ಯಯನ ಮಾಡಲಾಗುತ್ತದೆ. ಈ ಕಲೆಗಳಲ್ಲಿ ನಾನಾ ರೀತಿಯವು ಇವೆ. ನಮ್ಮ ಭಾರತೀಯರ ಅಥವಾಾ ಹಿಂದೂಗಳ ಮೂಲ ಪದ್ದತಿಯಂತೆ ಆಯುರ್ವೇದವೂ ಒಂದು. "ಯುನಾನ್" ಅಥವಾ ಗ್ರೀಸ್ ದೀಶದಲ್ಲಿ ಹುಟ್ಟಿ ಬೆಳೆದು ಬಂದ ಯುನಾನಿ ಪದ್ದತಿ, ಜರ್ಮನಿ ದೇಶದಲ್ಲಿ ಹುಟ್ಟಿ ಬೆಳೆದು ಬಂದ ಹೊಮಿಯೋಪತಿ ಪದ್ದತಿ ಮತ್ತು ಆಂಗ್ಲ ಪದ್ದತಿಯಾದ ಅಲೋಪತಿ ಪ್ರಮುಖ ವೈದ್ಯ ಪದ್ದತಿಗಳು.
ಪ್ರಾಣಿಗಳ ವೈದ್ಯಕೀಯಶಾಸ್ತ್ರವನ್ನು ಅಧ್ಯಯನ ಮಾಡಿದವರನ್ನು ಪ್ರಾಣಿ/ಪಶು ವೈದ್ಯರೆಂದು ಮತ್ತು ಮನುಷ್ಯರ ವೈದ್ಯಕೀಯಶಾಸ್ತ್ರವನ್ನು ಅಧ್ಯಯನ ಮಾಡಿದವರನ್ನು ವೈದ್ಯ ಎಂದು ಕರೆಯಲಾಗುತ್ತದೆ.
ಅಲೋಪತಿ ವೈದ್ಯ ಪದ್ದತಿಯನ್ನು ಅಧ್ಯಯನ ಮಾಡಲು ಎಮ್.ಬಿ.ಬಿ.ಎಸ್ ಪದವಿಯನ್ನು ಹೊಂದಬೇಕು. ಇದನ್ನು ಕರ್ನಾಟಕ ರಾಜ್ಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿಧ್ಯಾಲಯವು ನೀಡುತ್ತದೆ.
} ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿಗೆ ಪ್ರಚಲಿತದಲ್ಲಿರುವುದು ಅಲೋಪಥಿ (ಎಮ್.ಬಿ.ಬಿ.ಎಸ್) ಮಾತ್ರ. ಇದರಲ್ಲಿ ವಿವಿಧ ಶಾಖೆಗಳಿದ್ದು ಮಾನವನ ದೇಹದ ಎಲ್ಲಾ ಅಂಗಗಳನ್ನು ವಿಂಗಡಿಸಿ ಮಾಡಲಾಗಿದೆ. ಅವುಗಳಲ್ಲಿ ಪ್ರಮುಖವು ಈ ಕೆಳಕಂಡ ಪಟ್ಟಿಯಲ್ಲಿ ಕೊಡಲಾಗಿದೆ.ಪದ್ದತಿ | ಪದವಿ |
---|---|
ಅಲೋಪಥಿ | ಎಮ್.ಬಿ.ಬಿ.ಎಸ್ |
ಆಯುರ್ವೇದ | ಬಿ.ಎ.ಎಮ್.ಎಸ್ |
ಹೊಮಿಯೋಪತಿ | ಬಿ.ಎಚ್.ಎಮ್.ಎಸ್ |
ಯುನಾನಿ | ಬಿ.ಯು.ಎಮ್.ಎಸ್ |
ನೇಚರೋಪತಿ | ಬಿ.ಎನ್.ಎಮ್.ಎಸ್ |
ಅಂಗ | ಶಾಖೆ |
---|---|
ಹೃದಯ | ಹೃದ್ರೋಗ ತಜ್ಞರು (ಕಾರ್ಡಿಯಾಲಜಿಸ್ಟ್) |
ಕಣ್ಣು | ನೇತ್ರ ತಜ್ಞರು (ಆಪ್ತಲಾಜಮಿಸ್ಟ್) |
ಎಲುಬು ಮತ್ತು ಕೀಲು | ಎಲುಬು ಮತ್ತು ಕೀಲು ತಜ್ಞರು |
ಸ್ತ್ರೀ, ಪ್ರಸೂತಿ | ಸ್ತ್ರೀ ರೋಗ ತಜ್ಞರು (ಗೈನಕಾಲಜಿಸ್ಟ್) |
ಮಕ್ಕಳು | ಮಕ್ಕಳ ತಜ್ಞರು( ಪೀಡಿಯಾಟ್ರೀಶಿಯನ್) |