ಸಂಶೋಧನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಲಿನ್ ಲೆವಿ ವಾರ್ನರ್, ರಿಸರ್ಚ್ ಹೊಲ್ಡಿಂಗ್ ದಿ ಟಾರ್ಚ್ ಆಫ್ ನಾಲೇಜ್(1896). ಲೈಬ್ರರಿ ಆಫ್ ಕಾಂಗ್ರೆಸ್ ಥಾಮಸ್ ಜೆಫರ್ಸನ್ ಬಿಲ್ಡಿಂಗ, ವಾಶಿಂಗ್ಟನ್, D.C.

ಸಂಶೋಧನೆ ಎಂಬುದನ್ನು ಜ್ಞಾನದ ಸಲುವಾಗಿ ನಡೆಸುವ ಹುಡುಕಾಟ ಎಂದು ವ್ಯಾಖ್ಯಾನಿಸಬಹುದು,ಅಥವಾ ಮುಕ್ತ ಮನಸ್ಸಿನಿಂದ ಯಾವುದೇ ಶಿಸ್ತುಬದ್ದ ಶೋಧನೆ,ತನಿಖೆ ಮೂಲಕ ನವೀನ ಸಂಗತಿಗಳ ಹುಟ್ಟುಹಾಕಿ ಹೊಸ ಅಥವಾ ಅಸ್ತಿತ್ವದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.ಒಂದು ವೈಜ್ಞಾನಿಕ ಪದ್ದತಿಯಂತೆ ಹೊಸ ಸಿದ್ದಾಂತಗಳ ಅಭಿವೃದ್ಧಿಪಡಿಸುವಿಕೆಯೇ ಸಂಶೋಧನೆಯಾಗಿದೆ. ಮೂಲಭೂತ ಸಂಶೋಧನೆಯ ಪ್ರಾಥಮಿಕ ಉದ್ದೇಶವೆಂದರೆ, (ಅದನ್ನು ಅನ್ವಯಿಕ ಸಂಶೋಧನೆಗೆ ವಿರೋಧವೆನ್ನಲಾಗುತ್ತದೆ.)ಆವಿಷ್ಕಾರಗೊಳಿಸುವಿಕೆ,ವಿವರವಾಗಿ ಅರ್ಥೈಸುವಿಕೆ ಮತ್ತು ಅಭಿವೃದ್ಧಿ ಮೂಲಕ ಮನುಷ್ಯನ ಜ್ಞಾನವನ್ನು ನಿರ್ಧಿಷ್ಟ ಪದ್ದತಿ ಮತ್ತು ಶಿಸ್ತುಗಳಿಗೆ ಅಳವಡಿಸುವುದೇ ಆಗಿದೆ.ನಮ್ಮ ಜಗತ್ತು ಮತ್ತು ಬ್ರಹ್ಮಾಂಡದಲ್ಲಿನ ವೈಜ್ಞಾನಿಕ ಭೌತಿಕ ವಸ್ತುಗಳ ಮೇಲೆ ವಿಸ್ತಾರವಾದ ತಿಳಿವಳಿಕೆ ಪಡೆಯುವುದು.

ವೈಜ್ಞಾನಿಕ ಸಂಶೋಧನೆ ಯು ವೈಜ್ಞಾನಿಕ ಪದ್ದತಿಯ ಅಳವಡಿಕೆಯನ್ನು ಅವಲಂಬಿಸಿದೆ.ಈ ಮೂಲಕ ಅದು ಕುತೂಹಲವನ್ನು ಬಡಿದೆಬ್ಬಿಸಿ ಫಲಿತಾಂಶಕ್ಕಾಗಿ ಸಜ್ಜುಗೊಳಿಸುತ್ತದೆ. ಇಂತಹ ಸಂಶೋಧನೆಯು ವೈಜ್ಞಾನಿಕ ಮಾಹಿತಿ ಮತ್ತು ನಿಸರ್ಗದ ಸಿದ್ದಾಂತಗಳ ವಿವರಣೆಯನ್ನು ಒದಗಿಸುತ್ತದೆ.ಅಲ್ಲದೇ ನಮ್ಮ ಸುತ್ತಲಿನ ಜಗತ್ತಿನ ಬಗೆಗಿನ ಮೂಲಭೂತ ಅಂಶಗಳನ್ನು ಪರಿಚಯಿಸುತ್ತದೆ. ಇದು ಪ್ರಾಯೋಗಿಕ ಅಳವಡಿಕೆಗಳನ್ನು ಸಾಧ್ಯವಾಗಿಸುತ್ತದೆ. ವೈಜ್ಞಾನಿಕ ಸಂಶೋಧನೆಗೆ ಸಾರ್ವಜನಿಕ ಪ್ರಾಧಿಕಾರಗಳು,ದತ್ತಿನಿಧಿ ಸಂಘಟನೆಗಳು ಮತ್ತು ಖಾಸಗಿ ಸಮುದಾಯಗಳು ಅಂದರೆ ಇದರಲ್ಲಿ ಹಲವು ಕಂಪನಿಗಳೂ ಸೇರಿ ನಿಧಿ ನೆರವನ್ನು ಒದಗಿಸುತ್ತವೆ. ವೈಜ್ಞಾನಿಕ ಸಂಶೋಧನೆಯನ್ನು ವಿವಿಧ ಬಗೆಗಳಲ್ಲಿ ಉಪವರ್ಗೀಕರಣ ಮಾಡಬಹುದು.ಅವುಗಳ ಶೈಕ್ಷಣಿಕ ಮತ್ತು ಅನ್ವಯಿಕೆಯ ವಿಧಾನಗಳ ಮೇಲೆಯೂ ವಿಂಗಡಿಸಬಹುದಾಗಿದೆ.

ಕಲಾತ್ಮಕ ಸಂಶೋಧನೆ ಕೂಡ 'ಪ್ರಾಯೋಗಿಕ-ಆಧಾರದ ಸಂಶೋಧನೆ',ಎನಿಸಿದೆ.ಇಲ್ಲಿ ಸೃಜನಾತ್ಮಕ ವಿಷಯಗಳು ತಮ್ಮದೇ ಆದ ವಿಶಿಷ್ಟ ರೂಪ-ಆಕಾರ ತಾಳಿ ಈ ಕಾರ್ಯಶೀಲತೆಗೆ ಒತ್ತು ನೀಡುತ್ತವೆ.ಇದನ್ನೇ ನಾವು ಸಂಶೋಧನೆ ಮತ್ತು ಸಂಶೋಧನಾ ವಿಷಯ-ಭೌತಿಕ ಉದ್ದೇಶ ಎಂದು ಪರಿಗಣಿಸುತ್ತೇವೆ. ಇದು ವೈಚಾರಿಕ ನೆಲೆಯಲ್ಲಿ ಚರ್ಚಾಸ್ಪದ ವಿಷಯವಾಗಿದೆ.ಸಂಶೋಧನೆಯಲ್ಲಿ ಪರ್ಯಾಯವನ್ನು ಕಲ್ಪಿಸುವುದಲ್ಲದೇ ಪರಿಶುದ್ಧವಾದ ವೈಜ್ಞಾನಿಕ ವಿಷಯಗಳನ್ನು ತೆರೆದಿಡುತ್ತದೆ.ಸಂಶೋಧನೆಯಲ್ಲಿನ ಜ್ಞಾನ ಮತ್ತು ಸತ್ಯದ ಅಂಶಗಳನ್ನು ವೈಜ್ಞಾನಿಕ ವಿಧಾನಗಳಲ್ಲಿ ಹುಡುಕಾಟಕ್ಕೆ ದಾರಿ ಮಾಡಿ ಕೊಡುತ್ತದೆ.

ಐತಿಹಾಸಿಕ ಸಂಶೋಧನೆ ಯು ಐತಿಹಾಸಿಕ ಪದ್ದತಿ ಮೇರೆಗೆ ಹೊಸ ರೂಪ ಪಡೆಯುತ್ತದೆ.

ಸಾಮಾನ್ಯವಾಗಿ ಉಪಯೋಗಿಸುವ ಪದಗುಚ್ಛ, ನನ್ನ ಸಂಶೋಧನೆ ಕೂಡ ಸಂಪೂರ್ಣ ವ್ಯಕ್ತಿಗತ,ಸಂಗ್ರಹಿತ ಮಾಹಿತಿ ವರ್ಣನೆ ಇಲ್ಲವೇ ವಿಶಿಷ್ಟ ವಿಷಯ-ವಸ್ತುವಿನ ಬಗ್ಗೆ ಅಂತಹ ಯಾವುದೇ ನಿರ್ಬಂಧವಿರದೇ ಬಿಡಿ ಬಿಡಿಯಾದ ವಿವರ ಒದಗಿಸುತ್ತದೆ.

ವ್ಯುತ್ಪತ್ತಿ[ಬದಲಾಯಿಸಿ]

ಈ ಪದ ಸಂಶೋಧನೆ ಎಂಬುದು ಲ್ಯಾಟಿನ್ ಭಾಷೆಯ ರೀ ಮತ್ತು ಸರ್ಚ್Re ಮತ್ತು Search ,ಅಂದರೆ ಪುನರ್ ಶೋಧಿಸು,ಎನ್ನುವುದಾಗಿದೆ.ಇದನ್ನು ಗಹನವಾಗಿ ಹುಡುಕುತ್ತಾ ಹೋದರೆ "ಚೆರ್ಚೆರ್ "ಇದರರ್ಥ "ಹೊಸದಕ್ಕಾಗಿ ಎದುರು ನೋಡು" ಅಥವಾ "ಸಂಶೋಧಿಸು".

ಸಂಶೋಧನೆ ಕಾರ್ಯವಿಧಾನಗಳು[ಬದಲಾಯಿಸಿ]

ವೈಜ್ಞಾನಿಕ ಸಂಶೋಧನೆ[ಬದಲಾಯಿಸಿ]

ಸಾಮಾನ್ಯ ಅರ್ಥದಲ್ಲಿ ಸಂಶೋಧನೆ ಬಗ್ಗೆ ತಿಳಿಯಬೇಕೆಂದರೆ ಅದಕ್ಕಾಗಿ ನಿಗದಿತ ರಾಚನಿಕ ಕಾರ್ಯವಿಧಾನವನ್ನು ಅನುಸರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಯ್ದುಕೊಂಡ ವಿಷಯದ ಮಜಲು ಮತ್ತು ಸಂಶೋಧಕನ ಮೇಲೆ ಈ ಸಂಶೋಧನೆ ಅವಲಂಬಿತವಾಗಿರುತ್ತದೆ.ಹೀಗೆ ಈ ಕೆಳಗೆ ನಮೂದಿಸಿದ ಹಂತಗಳು ಬಹುತೇಕ ಔಪಚಾರಿಕ ಸಂಶೋಧನೆಗೆ ಅಗತ್ಯವೆನಿಸಿವೆ.ಇವುಗಳಲ್ಲಿ ಮೂಲಭೂತ ಆಧಾರ ಮತ್ತು ಅನ್ವಯಿಕೆಗಳು ಇದರ ಭಾಗಗಳಾಗಿವೆ:

  1. ಅವಲೋಕನಗಳು ಮತ್ತು ವಿಷಯಗಳ ರಚನೆ
  2. ಸಿದ್ಧಾಂತ (ಆಧಾರ ಕಲ್ಪನೆ)
  3. ಪರಿಕಲ್ಪನಾತ್ಮಕ ವ್ಯಾಖ್ಯೆಗಳು
  4. ಕಾರ್ಯಾತ್ಮಕ ವ್ಯಾಖ್ಯೆ
  5. ಅಂಕಿ ಅಂಶ ಸಂಗ್ರಹ
  6. ಅಂಕಿ ಅಂಶ ವಿಶ್ಲೇಷಣೆ
  7. ಶೋಧನೆ, ಆಧಾರ ಕಲ್ಪನೆಗಳ ಪರಿಷ್ಕರಣೆ
  8. ಉಪಸಂಹಾರ, ಅಗತ್ಯವಾದರೆ ಪುನರಾವರ್ತನೆ

ಸಾಮಾನ್ಯವಾದ ತಪ್ಪು ಕಲ್ಪನೆ ಎಂದರೆ ಇಂತಹ ಪದ್ದತಿ ಮೂಲಕ ಆಧಾರ ಕಲ್ಪನೆಗಳನ್ನು ಪುರಾವೆಗಳೊಂದಿಗೆ ಸಾಧಿಸಬಹುದು ಅಥವಾ ಪರೀಕ್ಷಿಸಬಹುದೆಂಬುದಾಗಿದೆ. ವ್ಯಾಪಕವಾಗಿ ಈ ಆಧಾರ ಕಲ್ಪನೆಯ ಸಿದ್ದಾಂತವನ್ನು ಭವಿಷ್ಯತ್ ನ ಮುನ್ಸೂಚನೆಗಳಿಗಾಗಿ ಬಳಸಲಾಗುತ್ತದೆ.ಇದನ್ನು ಒಂದು ಪ್ರಯೋಗದಿಂದ ಬರುವ ಫಲಿತಾಂಶವನ್ನು ನಿರೀಕ್ಷಿಸಿ ಅಂದಾಜಿಸಬಹುದಾಗಿದೆ. ಒಂದು ವೇಳೆ ಫಲಿತಾಂಶವು ಆಧಾರ ಕಲ್ಪನೆಯ ಸಿದ್ದಾಂತಕ್ಕೆ ಅಸ್ಥಿರತೆ ತಂದಿದ್ದೇ ಆದರೆ ಇಂತಹ ಸಿದ್ದಾಂತವನ್ನು ನಿರಾಕರಿಸಲಾಗುತ್ತದೆ. ಆದಾಗ್ಯೂ, ಫಲಿತಾಂಶವು ಸಿದ್ದಾಂತದೊಂದಿಗೆ ಒಂದು ವೇಳೆ ಸ್ಥಿರತೆ ಹೊಂದಿದ್ದರೆ ಆಗ ಪ್ರಯೋಗವು ಆಧಾರ ಕಲ್ಪನೆ ಸಿದ್ದಾಂತಕ್ಕೆ ಪೂರಕವಾಗಿ ಅಥವಾ ಬೆಂಬಲವಾಗಿ ಇರುತ್ತದೆ. ಇಲ್ಲಿ ಇಂತಹ ಕಾಳಜಿಪೂರ್ವಕ ಭಾಷೆ ಬಳಕೆಗೆ ಕಾರಣವೆಂದರೆ, ಸಂಶೋಧಕರು ಪರ್ಯಾಯ ಸಿದ್ದಾಂತವನ್ನು ತಮ್ಮ ಅವಲೋಕನಗಳೊಂದಿಗೆ ಗುರುತಿಸಲು ಸಾಧ್ಯವಾಗುತ್ತದೆ.ಹಲವು ಬಾರಿ ಪ್ರಯೋಗಗಳೊಂದಿಗೆ ಸಹ ಇದು ಸ್ಥಿರತೆ ಸಾಧಿಸುತ್ತದೆ. ಅಂದರೆ ಇಂತಹ ಪ್ರಕರಣದಲ್ಲಿ ಸಿದ್ದಾಂತವು ಎಂದಿಗೂ ರುಜುವಾತಾಗಲಾರದು.ಆದರೆ ವೈಜ್ಞಾನಿಕ ಪರೀಕ್ಷೆಗೆ ಒಳಪಟ್ಟ ನಂತರ ವಿವಿಧ ಹಂತಗಳಲ್ಲಿ ಅದು ಪರಿಷ್ಕೃತಗೊಂಡು ವ್ಯಾಪಕವಾಗಿ ಒಂದು ಸತ್ಯದ ಸಂಶೋಧನೆ ಎಂದಾಗಬಹುದು.ಹೀಗೆ ಅದರ ವೈಶಾಲ್ಯತೆಯು ಸಮಯ ಕಳೆದಂತೆ ಹೆಚ್ಚಲೂ ಕಾರಣವಾಗುತ್ತದೆ. ಒಂದು ಉಪಯುಕ್ತವಾದ ಸಿದ್ದಾಂತವು ಮುನ್ಸೂಚನೆಯನ್ನು ಅನುಮತಿಸುತ್ತದೆ.ಇದು ನಿಖರ ಅವಲೋಕನದ ಪರಿಧಿಯೊಳಗೆ ಆ ಕಾಲಮಾನವನ್ನು ತಿಳಿಸಿ,ಮುನ್ಸೂಚನೆಯನ್ನು ಪರೀಕ್ಷೆಗೊಳಪಡಿಸುತ್ತದೆ. ಕಾಲ ಕಳೆದಂತೆ ಅವಲೋಕನದ ನಿಖರತೆಯಲ್ಲಿ ಸುಧಾರಣೆಯಾದಂತೆ ಆಧಾರ ಕಲ್ಪನೆಯ ಸಿದ್ದಾಂತಕ್ಕೆ ನಿಶ್ಚಿತ ಭವಿಷ್ಯವನ್ನು ಸೂಚಿಸಲು ಸಾಧ್ಯವಾಗುವುದಿಲ್ಲ. ಇಂತಹ ಪ್ರಕರಣದಲ್ಲಿ ಹೊಸ ಸಿದ್ದಾಂತವು ಹಳೆಯದಕ್ಕೆ ಸವಾಲಾಗಿ ನಿಲ್ಲುತ್ತದೆ.ಅಂದರೆ ಹೊಸ ಆಧಾರ ಕಲ್ಪನೆಯು ಹಿಂದಿನದಗಿಂತಲೂ ಹೆಚ್ಚು ನಿರ್ಧಿಷ್ಟತೆ ಒದಗಿಸುತ್ತದೆ.ಹೊಸದು ಈಗ ಅಧಿಕ ನಿಖರ ಮುನ್ಸೂಚನೆಗೆ ಪೂರಕವಾಗಿರುತ್ತದೆ.ಇಲ್ಲಿ ಕಾಲಕ್ರಮೇಣದ ಅಧ್ಯಯನಕ್ಕೆ ಸಮಯಾವಕಾಶ ನೀಡುವುದರಿಂದ ಸಂಶೋಧನೆ ಮತ್ತಷ್ಟು ಸ್ಪಷ್ಟವಾಗುತ್ತದೆ.

ಕಲಾತ್ಮಕ ಸಂಶೋಧನೆ[ಬದಲಾಯಿಸಿ]

ಈ ಕಲೆ ಆಧರಿಸಿದ ಸಂಶೋಧನೆಯು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತದೆ.ಇದು ವಸ್ತು ವೈವಿಧ್ಯತೆ ಒಳಗೊಂಡಿದ್ದರೂ ಶಾಸ್ತ್ರೀಯ ವೈಜ್ಞಾನಿಕ ಪದ್ದತಿಗಳು ಇದನ್ನು ವಿರೋಧಿಸುತ್ತವೆ. ಅದರ ನೈಜತೆಯಂತೆಯೇ ಅದರ ಗುಣಾತ್ಮಕ ಸಂಶೋಧನೆಯ ಉಪಯೋಗದಿಂದಾಗಿ ಇದು ಸಾಮಾಜಿಕ ವಿಜ್ಞಾನಗಳಿಗೆ ಸಮನಾಗಿದೆ.ಅದಲ್ಲದೇ ಆಂತರಿಕ ವಸ್ತುವಿಷಯ ವೈವಿಧ್ಯತೆಯು ಅದನ್ನು ಅಳೆಯಲು ಮತ್ತು ವಿಮರ್ಶಾತ್ಮಕ ವಿಶ್ಲೇಷಣೆಗೆ ಒಂದು ಸಾಧನವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಐತಿಹಾಸಿಕ ವಿಧಾನ[ಬದಲಾಯಿಸಿ]

ಈ ಐತಿಹಾಸಿಕ ಪದ್ದತಿಯು ಇತಿಹಾಸಕಾರರು ಬಳಸುವ ಐತಿಹಾಸಿಕ ಸಂಪನ್ಮೂಲದ ತಂತ್ರಗಾರಿಕೆಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಿರುತ್ತದೆ.ಅದರ ಜೊತೆಗೆ ಸಂಶೋಧನೆಗೆ ಬೇಕಾದ ಇನ್ನಿತರ ಪುರಾವೆ ಮತ್ತು ಇತಿಹಾಸ ಬರೆಹದ ಅನುಕೂಲತೆ ಒಳಗೊಂಡಿರುತ್ತದೆ. ಇತಿಹಾಸಕಾರರು ಸಾಮಾನ್ಯವಾಗಿ ವಿವಿಧ ಇತಿಹಾಸ ಮಾರ್ಗಸೂಚಿಗಳನ್ನು ತಮ್ಮ ಕಾರ್ಯದ ಅವಧಿಯಲ್ಲಿ ಅನುಸರಿಸುತ್ತಾರೆ.ಅವರ ಈ ಕಾರ್ಯತತ್ಪರತೆಯು ಬಾಹ್ಯ ಟೀಕೆ,ಆಂತರಿಕ ಟೀಕೆ ಮತ್ತು ಸಮನ್ವಯತೆ ಎಂಬ ಶೀರ್ಷೆಕೆಗಳಡಿ ಇವು ಪ್ರಕಟಗೊಳ್ಳುತ್ತವೆ. ಇದು ಅತ್ಯಧಿಕ ಟೀಕೆ ಮತ್ತು ಗ್ರಂಥ ಪಠ್ಯ ಟೀಕೆಯನ್ನೊಳಗೊಂಡಿದೆ. ಹಾಗಾಗಿಯೂ ಇದರಲ್ಲಿ ವಿಷಯ ವೈವಿಧ್ಯತೆ ಇರುತ್ತದೆ.ಅದೂ ಕೂಡ ಆಯಾ ವಸ್ತು-ವಿಷಯಕ್ಕನುಗುಣವಾಗಿ ಅವಲಂಬನೆಯಾಗಿರುತ್ತದೆ.ವಿಷಯ ಪರಿಕಲ್ಪನೆಗಳು ಔಪಚಾರಿಕ ಐತಿಹಾಸಿಕ ಸಂಶೋಧನೆಯ ಭಾಗವಾಗಿರುತ್ತವೆ:

  • ಉಗಮಸ್ಥಾನದ ದಿನಾಂಕದ ಗುರುತಿಸುವಿಕೆ
  • ಸ್ಥಳೀಕರಣದ ಸಾಕ್ಷಿ
  • ಕರ್ತೃತ್ವದ ಗುರುತಿಸುವಿಕೆ
  • ಅಂಕಿ ಅಂಶಗಳ ವಿಶ್ಲೇಷಣೆ
  • ಸಮಗ್ರತೆಯ ಗುರುತಿಸುವಿಕೆ
  • ಆ ಸ್ಥಳಕ್ಕೆ ಸೇರಿದ್ದೆಂಬುದರ ಬಗೆಗಿನ ಸಾಕ್ಷ್ಯದ ನಂಬಿಕೆ

ಸಂಶೋಧನಾ ವಿಧಾನಗಳು[ಬದಲಾಯಿಸಿ]

ಸಂಶೋಧನಾ ಪ್ರಕ್ರಿಯೆಯ ಮುಖ್ಯ ಗುರಿಯೆಂದರೆ ಹೊಸ ಜ್ಞಾನವನ್ನು ಬೆಳಕಿಗೆ ತರುವುದು. ಈ ಪ್ರಕ್ರಿಯೆಯು ಮೂರು ಆಕಾರಗಳನ್ನು ಪಡೆಯುತ್ತದೆ,(ಈಗಾಗಲೇ ಚರ್ಚಿಸಿದಂತೆ ಇವುಗಳ ನಡುವಿನ ಗಡಿಗಳು ಅಸ್ಪಷ್ಟವಾಗಿರಬಹುದು):

  • ಪರಿಶೋಧನಾತ್ಮಕ ಸಂಶೋಧನೆ , ಇದು ಹೊಸ ಸಮಸ್ಯೆಗಳಿಗೆ ಒಂದು ರಚನಾತ್ಮಕ ಚೌಕಟ್ಟು ಒದಗಿಸಿ ಹೊಸ ಸಮಸ್ಯೆಗಳನ್ನು ಗುರ್ತಿಸುತ್ತದೆ.
  • ರಚನಾತ್ಮಕ ಸಂಶೋಧನೆ, ಇದು ಸಮಸ್ಯೆಯೊಂದಕ್ಕೆ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ.
  • ಪ್ರಾಯೋಗಿಕ ಸಂಶೋಧನೆ, ಇದು ಪರಿಹಾರದ ಕಾರ್ಯಸಾಧ್ಯತೆ ಬಗ್ಗೆ ಪರೀಕ್ಷೆಗೆ ಸಾಕ್ಷಿ ಒದಗಿಸುತ್ತದೆ.
ನ್ಯುಯಾರ್ಕ್ ಸಾರ್ವಜನಿಕ ಗ್ರಂಥಾಲಯದಲ್ಲಿರುವ ಸಂಶೋಧನಾ ಕೊಠಡಿ,ಎರಡನೆಯ ಸಂಶೋಧನೆ ಪ್ರಗತಿಯಲ್ಲಿರುವುದು.

ಸಂಶೋಧನೆ ಕೂಡ ಎರಡು ವಿಶಿಷ್ಟ ಪ್ರಕಾರಗಳಲ್ಲಿ ನಡೆಯುತ್ತದೆ:

  • ಪ್ರಾಥಮಿಕ ಸಂಶೋಧನೆ (ಇನ್ನೂ ಅಸ್ತಿತ್ವದಲ್ಲಿರದ ಅಂಕಿಅಂಶಗಳ ಸಂಗ್ರಹ)
  • ದ್ವಿತೀಯಸಂಶೋಧನೆ (ಸಾರ ಸಂಗ್ರಹ, ತಾಳೆ ನೋಡುವುದು ಮತ್ತು/ಅಥವಾ ಅಸ್ತಿತ್ವದಲ್ಲಿರುವ ಸಂಶೋಧನೆಯನ್ನು ಸಮನ್ವಯಗೊಳಿಸುವಿಕೆ)

ಸಾಮಾಜಿಕ ವಿಜ್ಞಾನಗಳಲ್ಲಿ ಮತ್ತು ನಂತರದ ಇನ್ನುಳಿದ ವಿಧಾನಗಳಲ್ಲಿ ಈ ಕೆಳಗಿನ ಎರಡು ಸಂಶೋಧನಾ ಪದ್ದತಿಗಳನ್ನು ಅನುಸರಿಸಲಾಗುತ್ತದೆ.ಇದು ವಸ್ತುವಿಷಯದ ಮೂಲಭೂತ ಅಂಶಗಳನ್ನು ಅವಲಂಬಿಸಿರುತ್ತದೆ.ಅದಲ್ಲದೇ ಸಂಶೋಧನೆಯ ಗುರಿಯ ಮೇಲೆ ಕೂಡ ಇದು ಆಧಾರವಾಗಿರುತ್ತದೆ:

  • ಗುಣಾತ್ಮಕ ಸಂಶೋಧನೆ (ಮಾನವ ನಡವಳಿಕೆಗಳ ಅರ್ಥೈಸುವಿಕೆ ಮತ್ತು ಇಂತಹ ನಡವಳಿಕೆಗಳನ್ನು ನಿಯಂತ್ರಿಸುವ ಕಾರಣಗಳು)
  • ಪರಿಮಾಣಾತ್ಮಕ ಸಂಶೋಧನೆ (ಪರಿಮಾಣಾತ್ಮಕ ಅಂಶಗಳನ್ನು ಶಿಸ್ತುಬದ್ದಿನಿಂದ ಶೋಧನೆಗೆ ಒಳಪಡಿಸುವುದು ಮತ್ತು ಅದರ ವಿದ್ಯಮಾನ ಹಾಗು ಅವುಗಳ ಸಂಬಂಧ)

ಸಂಶೋಧನೆಯನ್ನು ಹೆಚ್ಚಾಗಿ ಮರಳುಗಡಿಯಾರದ ರಾಚನಿಕ ಸಂಶೋಧನೆ ಮಾದರಿಯಲ್ಲಿ ಮಾಡಲಾಗುತ್ತದೆ.[೧] ಈ ಮರಳುಗಡಿಯಾರ ಮಾದರಿಯು ವಿಶಾಲ ದೃಷ್ಟಿಕೋನದ ಮೂಲಕ ಸಂಶೋಧನೆ ಕೈಗೊಳ್ಳಲಾಗುತ್ತದೆ.ಇಲ್ಲಿ ಸಂಶೋಧನೆಯನ್ನು ಅಗತ್ಯ ಮಾಹಿತಿ ಮೂಲಕ ಯೋಜನಾ ಪದ್ದತಿಗಣುಗುಣವಾಗಿ ನಡೆಸಲಾಗುತ್ತದೆ.(ಮರಳುಗದಿಯಾರದ ಕಂಠದಂತೆ)ನಂತರ ಅದು ಸಂಶೋಧನೆಯನ್ನು ಚರ್ಚೆ ಮತ್ತು ಫಲಿತಾಂಶಗಳ ರೂಪದಲ್ಲಿ ವಿಸ್ತರಿಸಲಾಗುತ್ತದೆ.

ಪ್ರಕಟಣೆ[ಬದಲಾಯಿಸಿ]

ಶೈಕ್ಷಣಿಕ ಪ್ರಕಟನೆಯು ಶೈಕ್ಷಣಿಕ ಪ್ರತಿಭಾವಂತರಿಗೆ ಅವರ ಶಿಕ್ಷಣದ ಗೋಚರ ಪರಿಷ್ಕರಣೆ ಮೂಲಕ ಇದನ್ನು ವ್ಯಾಪಕ ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ 'ಪದ್ದತಿಯು' ಬಹುತೇಕ ಸುಸಂಘಟಿತವಾಗಿಲ್ಲ, ಹೀಗಾಗಿ ಇದು ಶೀರ್ಷಿಕೆಯನ್ನು ಪೂರ್ಣಗೊಳಿಸಲಾರದು;ಇದು ಸಾಮಾನ್ಯವಾಗಿ ಆಯಾ ಕ್ಷೇತ್ರಕ್ಕೆ ತಕ್ಕಂತೆ ಮತ್ತು ಯಾವಾಗಲೂ ಬದಲಾವಣೆಗೆ ಒಳಪಟ್ಟಿರುತ್ತದೆ,ಹೆಚ್ಚಾಗಿ ನಿಧಾನವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಬಹುತೇಕ ಶೈಕ್ಷಣಿಕ ಸಿದ್ದತೆಯು ಜರ್ನಲ್ ಗಳಲ್ಲಿ ಲೇಖನ ಅಥವಾ ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಪ್ರಕಟನೆಯಲ್ಲಿ, ಸಾಮಾನ್ಯವಾಗಿ ಸಂಕ್ಷಿಪ್ತ STM ನ್ನು ಶೈಕ್ಷಣಿಕ ಪ್ರಕಟನೆಗಳಾದ ವಿಜ್ಞಾನ, ತಂತ್ರಜ್ಞಾನ, ಮತ್ತು ಔಷದಿ ವಿಭಾಗಗಳಲ್ಲಿ ಬಳಸಲಾಗುತ್ತದೆ.

ಬಹಳಷ್ಟು ಸಂಸ್ಥಾಪಿತ ಶೈಕ್ಷಣಿಕ ಕ್ಷೇತ್ರಗಳು ತಮ್ಮದೇ ಆದ ಜರ್ನಲ್ಸ್ ಗಳು ಹಾಗು ಪ್ರಕಟಣಾ ವಿಭಾಗಗಳನ್ನು ಹೊಂದಿವೆ.ಆದಾಗ್ಯೂ ಕೆಲವು ಶೈಕ್ಷಣಿಕ ಜರ್ನಲ್ ಗಳು ತಮ್ಮದೇ ಆದ ಆಂತರಿಕ ಶಿಸ್ತುಗಳನ್ನು ಪಡೆದಿವೆ.ಹೀಗೆ ಅವು ವಿವಿಧ ರಂಗಗಳಲ್ಲಿನ ವಿಷಯಗಳನ್ನು ವಿಶಿಷ್ಟವಾದ ಅಥವಾ ಉಪಕ್ಷೇತ್ರಗಳಲ್ಲಿ ಪ್ರಕಟಿಸುತ್ತವೆ. ಇಂತಹ ಪ್ರಕಾರದ ಪ್ರಕಟನೆಗಳು ಜ್ಞಾನದ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ,ಇಲ್ಲವೆ ಒಂದು ಕ್ಷೇತ್ರದಿಂದ ಇನ್ನೊಂದಕ್ಕೆ ತಾಗುವ ಕ್ಷೇತ್ರಗಳಿಗೆ ಪೂರಕವಾಗಿವೆ;ಇಲ್ಲಿ ಮುದ್ರಣ ಮಾಧ್ಯಮದಿಂದ ಎಲೆಕ್ಟ್ರಾನಿಕ್ ರೂಪದ ವರೆಗೂ ಇದು ಪ್ರಕಟನೆ ಪಡೆಯುತ್ತದೆ. ವ್ಯವಹಾರಿಕ ಮಾದರಿಗಳು ಎಲೆಕ್ಟ್ರಾನಿಕ್ ಪರಿಸರದಲ್ಲಿ ವಿಭಿನ್ನವಾಗಿರುತ್ತವೆ. ಆದ್ದರಿಂದ ಆರಂಭಿಕ 1990 ರಿಂದ ಎಲೆಕ್ಟ್ರಾನಿಕ್ ಸಂಪನ್ಮೂಲಗಳಿಗೆ ಪರವಾನಿಗೆ ನೀಡಲಾಗಿದೆ.ವಿಶೇಷವಾಗಿ ಈ ಕ್ಷೇತ್ರದಲ್ಲಿ ಜರ್ನಲ್ಸ್ ಗಳು ಸಾಮಾನ್ಯವಾಗಿವೆ. ಸದ್ಯ ಪ್ರಮುಖ ಪ್ರವೃತ್ತಿ ಎಂದರೆ ಸಾಮಾನ್ಯವಾಗಿ ಪ್ರತಿಭಾನ್ವಿತರಿಗಾಗಿರುವ ಜರ್ನಲ್ಸ್ ಗಳಿಗೆ ಅವುಗಳಿಗಾಗಿ ಮುಕ್ತ ಪ್ರವೇಶ ಇರುತ್ತವೆ. ಇದರಲ್ಲಿ ಎರಡು ಪ್ರಮುಖ ಮುಕ್ತ ಪ್ರವೇಶದ ಪ್ರಕಾರಗಳಿವೆ,ಒಂದರಲ್ಲಿ ಜರ್ನಲ್ಸ್ ಗಳಲ್ಲಿ ಪ್ರಕಟವಾದ ಅದೇ ಸಮಯದಿಂದ ಲೇಖನಗಳಿಗೆ ಉಚಿತವಾದ ಪ್ರವೇಶದ ಅವಕಾಶವಿರುತ್ತದೆ.ಅದಲ್ಲದೇ ಸ್ವಯಂ-ದಾಖಲಿಸುವಿಕೆ,ಇಲ್ಲಿ ಕರ್ತೃ ತನ್ನ ಬರೆಹವನ್ನು ವೆಬ್ ಮೇಲೆ ಉಚಿತವಾಗಿ ದೊರೆಯುವಂತೆ ಮಾಡುತ್ತಾನೆ.

ಸಂಶೋಧನಾ ಧನಸಹಾಯ[ಬದಲಾಯಿಸಿ]

ಬಹುತೇಕ ವೈಜ್ಞಾನಿಕ ಸಂಶೋಧನೆಗೆ ಎರಡು ಪ್ರಮುಖ ಮೂಲಗಳಿಂದ ಧನ ಸಹಾಯ ಬರುತ್ತದೆ:ಕಾರ್ಪೊರೇಟ್ ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಗಳಿಂದ;ಅಲ್ಲದೇ ಸರ್ಕಾರಿ ಸಂಶೋಧನಾ ಕೌನ್ಸಿಲ್ ಗಳಿಂದ ಉದಾಹರಣೆಗೆ,USA[೨] ನಲ್ಲಿರುವ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಮತ್ತು UK ನಲ್ಲಿರುವ ದಿ ಮೆಡಿಕಲ್ ರಿಸರ್ಚ್ ಕೌನ್ಸಿಲ್ ನಿಂದ ಬರುತ್ತದೆ.ಇವುಗಳನ್ನು ಪ್ರಾಥಮಿಕವಾಗಿ ವಿಶ್ವವಿದ್ಯಾಲಯಗಳ ಮೂಲಕ ಹಾಗು ಕೆಲವನ್ನು ಮಿಲಿಟರಿ ಗುತ್ತಿಗೆದಾರರ ಮುಖಾಂತರ ನಿರ್ವಹಿಸಲಾಗುತ್ತದೆ. ಹಲವು ಹಿರಿಯ ಸಂಶೋಧಕರು (ಉದಾಹರಣೆಗೆ ಗುಂಪಿನ ನಾಯಕರು) ತಮ್ಮ ಅತ್ಯಧಿಕ ಸಮಯವನ್ನು ಸಂಶೋಧನೆಗಳಿಗೆ ಅನುದಾನ ಬೇಡಲು ವ್ಯಯಿಸುತ್ತಾರೆ. ಈ ಅನುದಾನಗಳು ಕೇವಲ ಸಂಶೋಧಕರಿಗೆ ತಮ್ಮ ಸಂಶೋಧನೆ ಕೈಗೊಳ್ಳಲು ಮಾತ್ರವಲ್ಲದೇ ಅವರ ಪ್ರತಿಭೆಯ ಮೂಲಗಳಾಗಿವೆ.

ಇವನ್ನೂ ಗಮನಿಸಿ‌[ಬದಲಾಯಿಸಿ]

ಆಕಸ್ಮಿಕ ಸಂಶೋಧನೆಗಳು[ಬದಲಾಯಿಸಿ]

ಉಲ್ಲೇಖಗಳು‌[ಬದಲಾಯಿಸಿ]

  1. ಟ್ರೊಚಿಮ್, W.M.K, (2006). ರಿಸರ್ಚ್ ಮೆಥೆಡ್ಸ್ ನಾಲೇಜ್ ಬೇಸ್.
  2. "US Scientific Grant Awards Database". Archived from the original on 2010-11-06. Retrieved 2011-04-27.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಫ್ರೆಶ್ ವಾಟರ್, ಡಿ., ಶೆರ್ವುಡ್, ಜಿ. & ಡ್ರುರಿ, ವಿ. (2006) ಇಂಟರ್ ನ್ಯಾಶನಲ್ ರಿಸರ್ಚ್ ಕೊಲ್ಯಾಬ್ರೇಶನ್. ಇಶ್ಯುಸ್, ಬೆನೆಫಿಟ್ಸ್ ಅಂಡ್ ಚಾಲೇಂಜಿಸ್ ಆಫ್ ದಿ ಗ್ಲೊಬಲ್ ನೆಟ್ವರ್ಕ್. ಜರ್ನಲ್ ಆಫ್ ರಿಸರ್ಚ್ ಇನ್ ನರ್ಸಿಂಗ್, 11 (4), pp 9295–303.
"https://kn.wikipedia.org/w/index.php?title=ಸಂಶೋಧನೆ&oldid=1196982" ಇಂದ ಪಡೆಯಲ್ಪಟ್ಟಿದೆ