ಪಾಲಿಯನ್ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಲಿಯನ್
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಕೇರಳ
ಒಟ್ಟು 
ಮಾತನಾಡುವವರು:
೯,೫೦೦
ಭಾಷಾ ಕುಟುಂಬ:
 ದಕ್ಷಿಣ
  ದಕ್ಷಿಣ 1
   ತಮಿಳು-ಕನ್ನಡ
    ತಮಿಳು–ಕೊತ
     ತಮಿಳು–ತೊದ
      ತಮಿಳು-ಇರುಳ
       ತಮಿಳು–ಕೊಡವಉರಳಿ
        ತಮಿಳುಮಲಯಾಳಂ
         ತಮಿಳು
          ತಮಿಳು–ಪಾಲಿಯನ್
           ಪಾಲಿಯನ್
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: pcf

ಪಾಲಿಯನ್ ಕೇರಳದ ದ್ರಾವಿಡ ಭಾಷೆಯಾಗಿದ್ದು ಅದು ತಮಿಳಿಗೆ ನಿಕಟ ಸಂಬಂಧ ಹೊಂದಿದೆ. ಈ ಭಾಷೆಯನ್ನು ಪಾಲಿಯನ್ ಸಮುದಾಯದವರು ಮಾತನಾಡುತ್ತಾರೆ.[೧],[೨]

ಪಾಲಿಯನ್ನರ ಐತಿಹಾಸಿಕ ಹಿನ್ನಲೆ[ಬದಲಾಯಿಸಿ]

ಪಾಲಿಯನ್ನರು ತಮಿಳುನಾಡಿನಿಂದ ವಲಸೆ ಬಂದ ಆದಿವಾಸಿ ದ್ರಾವಿಡ ಜನರು, ಪಶ್ಚಿಮ ಘಟ್ಟಗಳ ಪರ್ವತಗಳ ಮಳೆಕಾಡು, ವಿಶೇಷವಾಗಿ ಕೇರಳದಲ್ಲಿ ವಾಸವಾಗಿದ್ದಾರೆ. ಕೇರಳವು ಇಡುಕ್ಕಿ ಜಿಲ್ಲೆಯ ಪೀರುಮೇಡು ಮತ್ತು ಉಡುಂಬಂಚೋಳ ತಾಲೂಕುಗಳಲ್ಲಿ ವಾಸಿಸುವ ಇವರು ಮೂಲತ‍ಃ ತಮಿಳುನಾಡಿನ ಮಧುರೈ ಜಿಲ್ಲೆಯ ಗುಡಲ್ಲೂರಿನಿಂದ ಬಂದು ನೆಲೆ. ಇವರು ವಲಸೆ ಬಂದು ಅರ್ಧ ಶತಮಾನದಲ್ಲಿ ನೆಲೆಸಿದ ಪ್ರದೇಶವನ್ನು ಕೃಷಿ ಪ್ರದೇಶವನ್ನಾಗಿ ಬದಲಾಯಿಸಿದರು. ಸಾಂಪ್ರದಾಯಿಕವಾಗಿ ಅವರು ಅಲೆಮಾರಿಗಳು ಬೇಟೆಗಾರರು, ಜೇನು ಬೇಟೆಗಾರರು ಮತ್ತು ಆಹಾರ ಹುಡುಕುವವರು. 1960 ರ ದಶಕದ ಆರಂಭದಲ್ಲಿ ಪಾಲಿಯನ್ನರು ಬಂಡೆಯ ಬಿರುಕುಗಳು ಮತ್ತು ಗುಹೆಗಳಲ್ಲಿ ವಾಸಿಸುತ್ತಿದ್ದರು. ಕ್ರಮೇಣ, ಹೆಚ್ಚಿನವರು ಕಾಡಿನ ವ್ಯಾಪಾರಿಗಳಾಗಿ ರೂಪಾಂತರಗೊಂಡಿದ್ದಾರೆ.[೩]

ಜನಸಂಖ್ಯೆ[ಬದಲಾಯಿಸಿ]

ಕೇರಳದ ಇತರ ಬುಡಕಟ್ಟುಗಳುಲ್ಲಿ ಇಡುಕ್ಕಿ ಜಿಲ್ಲೆಯ ಪಾಲಿಯನ್ ಬುಡಕಟ್ಟು ಸಮುದಾಯದ ಜನಸಂಖ್ಯೆಯು ಬಹಳ ಕಡಿಮೆ. 1991ರ ಜನಗಣತಿಯ ಪ್ರಕಾರ ಕೇರಳದಲ್ಲಿ ಅವರ ಜನಸಂಖ್ಯೆಯು 1442 ಆಗಿತ್ತು. 1999ರ ಐಟಿಡಿಪಿ ವರದಿ ಪ್ರಕಾರ ಇಡುಕ್ಕಿ ಜಿಲ್ಲೆಯಲ್ಲಿ 383 ಪಾಲಿಯನ್ ಕುಟುಂಬಗಳಿವೆ.[೪] 2001 ರ ಜನಗಣತಿಯ ಪ್ರಕಾರ, ಇಡುಕ್ಕಿಯಲ್ಲಿ ಪಾಲಿಯನ್‌ನ ಒಟ್ಟು ಜನಸಂಖ್ಯೆಯು 1709 ಅಂದರೆ 0.47 % ರಾಜ್ಯದ ಪರಿಶಿಷ್ಟ ಜನಸಂಖ್ಯೆ. 2011ರ ಜನಗಣತಿ ಇವರ ಒಟ್ಟು ಜನಸಂಖ್ಯೆ 1464 ಎಂದು ಅಂದಾಜಿಸಬಹುದು, ಅಂದರೆ ಇದು ಒಟ್ಟು ಪರಿಶಿಷ್ಟ ಪಂಗಡಗಳಲ್ಲಿ 0.43% ರಷ್ಟಿದೆ.[೫]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2024-01-26. Retrieved 2024-01-26.
  2. https://www.southasiabibles.com/resource/language/paliyan
  3. "ಆರ್ಕೈವ್ ನಕಲು" (PDF). Archived from the original (PDF) on 2024-01-26. Retrieved 2024-01-26.
  4. "PeopleGroups.org - Palliyan of India". peoplegroups.org.
  5. "Ethnologue". iiab.me.