ಪನಿಯ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪನಿಯಾ
പണിയ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಕೇರಳ ರಾಜ್ಯ
ಒಟ್ಟು 
ಮಾತನಾಡುವವರು:
೨೩,೦೦೦
ಭಾಷಾ ಕುಟುಂಬ:
 ದಕ್ಷಿಣ
  ತಮಿಳು-ಕನ್ನಡ
   ತಮಿಳು-ಕೊಡಗು
    ತಮಿಳು-ಮಲಯಾಳಂ
     ಮಲಯಾಳಂ ಭಾಷೆಗಳು
      ರವುಲಿಕ್
       ಪನಿಯಾ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: pcg

ಭಾರತದಲ್ಲಿ ಮಾತನಾಡುವ ಮಲಯಾಳಂ ಭಾಷೆಗಳಲ್ಲಿ ಪನಿಯಾ ಕೂಡ ಒಂದು. ಕೇರಳ ರಾಜ್ಯದಲ್ಲಿ ಬಹುಸಂಖ್ಯಾತ ಭಾಷಿಕರನ್ನು ಹೊಂದಿರುವ ಪರಿಶಿಷ್ಟ ಬುಡಕಟ್ಟಿನ ಪಾನಿಯಾ ಜನರು ಇದನ್ನು ಮಾತನಾಡುತ್ತಾರೆ. ಈ ಭಾಷೆಯನ್ನು ಪನಿಯಾ, ಪನಿಯನ್ ಮತ್ತು ಪನ್ಯಾಹ್ ಎಂದೂ ಕರೆಯುತ್ತಾರೆ. ಇದು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದೆ. ೧೯೮೧ರ ಜನಗಣತಿಯ ಪ್ರಕಾರ, ಕೇರಳದಲ್ಲಿ ೫೬,೮೫೨, ತಮಿಳುನಾಡಿನಲ್ಲಿ ೬,೩೯೩, ಕರ್ನಾಟಕದಲ್ಲಿ ೪೮೨ ಸೇರಿದಂತೆ ೬೩,೮೨೭ ಜನರು ಪನಿಯಾವನ್ನು ಮಾತನಾಡುತ್ತಾರೆ. [೧] ಇದನ್ನು ಮಾತನಾಡುವವರಲ್ಲಿ ಹೆಚ್ಚಿನವರು ಕೇರಳದ ವಯನಾಡ್, ಕೋಝಿಕ್ಕೋಡ್, ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ನೀಲಗಿರಿ ಬೆಟ್ಟಗಳ ಪಶ್ಚಿಮದಲ್ಲಿ ಕಂಡುಬರುತ್ತಾರೆ.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "A Hand Book of Population Statistics - Census 1981". Registrar General & Census Commissioner, India. 1988.

ಇತರ ಬಾಹ್ಯ ಲಿಂಕ್‌ಗಳು[ಬದಲಾಯಿಸಿ]