ವ್ಯಂಜನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗೆ ಭಿನ್ನ.

ಭಾರತೀಯ ಭಾಷೆಗಳಲ್ಲಿ ವ್ಯಂಜನಗಳು[ಬದಲಾಯಿಸಿ]

ವ್ಯಂಜನಗಳಲ್ಲಿ ಎರಡು ವಿಧ.

  1. ವರ್ಗೀಯ ವ್ಯಂಜನ
  2. ಅವರ್ಗೀಯ ವ್ಯಂಜನ.

'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ.

'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು.

ಅಲ್ಪಪ್ರಾಣ[ಬದಲಾಯಿಸಿ]

ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್

ಮಹಾಪ್ರಾಣ[ಬದಲಾಯಿಸಿ]

ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್

"https://kn.wikipedia.org/w/index.php?title=ವ್ಯಂಜನ&oldid=572135" ಇಂದ ಪಡೆಯಲ್ಪಟ್ಟಿದೆ