ಇ
|
'ಇದು ಒಂದು ಸ್ವರಾಕ್ಷರ. ಇ ಕನ್ನಡ ವರ್ಣಮಾಲೆಯ ಮೂರನೆಯ ಅಕ್ಷರವಾಗಿದೆ. ಇ ಕನ್ನಡದ ಹೃಸ್ವ ಸ್ವರ ಅಕ್ಷರ. ನಾಮಿಸ್ವರಗಳಲ್ಲಿ ಇ ಮತ್ತು ಈ ಜೊತೆ ಸೇರುತ್ತವೆ. ಹಾಗಾಗಿ ಸವರ್ಣಗಳಲ್ಲಿ ಇ ಅಕ್ಷರದ ಪಾತ್ರವೂ ಇದೆ.[೧] ಈ ಅಕ್ಷರ ಪೂರ್ವ-ಸಂವೃತ ಅಗೋಳ ಹ್ರಸ್ವಸ್ವರವನ್ನು ಸೂಚಿಸುತ್ತದೆ.
ಚಾರಿತ್ರಿಕ ಹಿನ್ನೆಲೆ
[ಬದಲಾಯಿಸಿ]ಕನ್ನಡ ವರ್ಣಮಾಲೆಯ ಮೂರನೆಯ ಅಕ್ಷರವಾದ ಇ ಕಾರ ಕ್ರಿ.ಪೂ. ಮೂರನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ತ್ರಿಕೋಣಾಕಾರದ ಮೂರು ಬಿಂದುಗಳ ರೂಪದಲ್ಲಿತ್ತು. ಅನಂತರ ಕ್ರಿ.ಶ. ಎರಡನೆಯ ಶತಮಾನದ ಶಾತವಾಹನರ ಕಾಲದಲ್ಲಿ ರೂಪದಲ್ಲಿ ವಿಶೇಷ ಬದಲಾವಣೆಗಳು ಆಗದಿದ್ದರೂ ಬಿಂದುಗಳು ದೊಡ್ಡದಾದುವು. ಐದನೆಯ ಶತಮಾನದ ಕದಂಬರ ಕಾಲದಲ್ಲಿ ಒಂದು ಬಿಂದು ಮಾಯವಾಗಿ ಸೇರಿಕೊಂಡ ಎರಡು ಖಂಡ ವೃತ್ತಗಳ ಕೆಳಭಾಗದಲ್ಲಿ ಎರಡು ಬಿಂದುಗಳು ಮುಂದುವರಿದವು. ಮುಂದಿನ ಶತಮಾನದಲ್ಲಿ ಖಂಡ ವೃತ್ತಗಳು ಅಗಲವಾದವು. ಒಂಬತ್ತನೆಯ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿ ಬಲಭಾಗದ ಖಂಡವೃತ್ತ ಕೆಳಗಿನವರೆಗೂ ಹರಿದು ಅಕ್ಷರಕ್ಕೆ ಒಂದು ಹೊಸ ರೂಪವೇ ಬಂತು. ಎರಡು ಬಿಂದುಗಳು ಮಾತ್ರ ಹಾಗೆಯೆ ಮುಂದುವರಿದುವು. ಹನ್ನೊಂದನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಲಿಪಿಯಲ್ಲಿ ಈ ಎರಡು ಬಿಂದುಗಳೂ ಬಲಭಾಗದ ಖಂಡವೃತ್ತಕ್ಕೆ ಸೇರಿ ಕೆಳಭಾಗದ ತುದಿಯಲ್ಲಿ ಒಂದು ಕೊಂಡಿಯ ಆಕಾರವನ್ನು ಹೊಂದಿದುವು. ಹದಿಮೂರನೆಯ ಶತಮಾನದ ಸಮಯಕ್ಕೆ ಅಕ್ಷರದ ಆಕಾರ ಸ್ಥಿರಗೊಂಡಿತು. ಬಲಭಾಗದ ಕೊಂಡಿಯತುದಿ ಕೆಳಕ್ಕೆ ಬಾಗಿತು. ಅನಂತರ ವಿಶೇಷ ಬದಲಾವಣೆಗಳಿಲ್ಲದೇ ಇದೇ ರೂಪ ಮುಂದುವರಿದಿದೆ.[೨]
ಶಾಸ್ತ್ರೀಯ ವಿವರ
[ಬದಲಾಯಿಸಿ]ಈ ಅಕ್ಷರ ಪೂರ್ವ-ಸಂವೃತ ಅಗೋಳ ಹ್ರಸ್ವಸ್ವರವನ್ನು ಸೂಚಿಸುತ್ತದೆ.
ಸ್ವರಾಕ್ಷರಗಳು ಎಂದರೇನು ?
[ಬದಲಾಯಿಸಿ]- ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
- ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
ಹೃಸ್ವಸ್ವರ
[ಬದಲಾಯಿಸಿ]ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಅ, ಇ, ಉ, ಋ, ಲುೃ. ಎ, ಒ - ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಎ ಅಕ್ಷರವೂ ಒಂದಾಗಿದೆ.
ಕನ್ನಡದ ನಾವಿ ಸ್ವರಗಳು
[ಬದಲಾಯಿಸಿ]ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.
ಹೃಸ್ವಸ್ವರ | ದೀರ್ಘಸ್ವರ |
---|---|
ಅ | ಆ |
ಇ | ಈ |
ಉ | ಊ |
ಎ | ಏ |
ಒ | ಓ |
ಇ ಕನ್ನಡ ಅಕ್ಷರದ ಬರವಣಿಗೆ ಮತ್ತು ಉಚ್ಚಾರಣೆ ವಿಧಾನ
[ಬದಲಾಯಿಸಿ]ಕನ್ನಡ | ದೇವನಾಗರಿ | ISO 15919 ಸಂಕೇತ | ಬರೆಯುವ ವಿಧಾನ | ಉಚ್ಚಾರಣೆ ವಿಧಾನ |
---|---|---|---|---|
ಇ | इ | i |
- ಪ್ರಾಣಿ ಸಂಬಂಧಿ ಪದ : ಇಲಿ
- ಮನುಷ್ಯ ಸಂ
ಬಂಧಿ ಪದ :
- ಸಸ್ಯ ಸಂಬಂಧಿ ಪದ :
ಇ ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು
[ಬದಲಾಯಿಸಿ]- ಇಪ್ಪತ್ತು. ಇಪ್ಪತ್ತರಿಂದ ಇಪ್ಪತ್ತೊಂಬತ್ತು ಸಂಖ್ಯೆ ವರೆಗೆ ಒಟ್ಟು ೧೦ ಸಂಖ್ಯಾವಾಚಿಗಳು ಕನ್ನಡದಲ್ಲಿ ಬಳಕೆಯಲ್ಲಿವೆ.