ಥ
ಗೋಚರ
|
ಥ, ಕನ್ನಡ ವರ್ಣಮಾಲೆಯ ತ-ವರ್ಗದ ಎರಡನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಮಹಾಪ್ರಾಣ.
ಚಾರಿತ್ರಿಕ ಹಿನ್ನೆಲೆ
[ಬದಲಾಯಿಸಿ]ಬ್ರಾಹ್ಮೀಲಿಪಿಯಲ್ಲಿದು ಒಂದು ವೃತ್ತವಾಗಿ ನಡುಬಿಂದುವಿನೊಡನೆ ಕಾಣಿಸಿಕೊಳ್ಳುತ್ತದೆ. ಕದಂಬರ ಕಾಲಕ್ಕೆ ಆಯಾಕಾರವಾಗುತ್ತದೆ. ಗಂಗರ ಕಾಲಕ್ಕೆ ಆಯಾಕಾರದ ತಳದಲ್ಲಿ ಹೊಕ್ಕಳು ಕಾಣಿಸಿಕೊಳ್ಳತ್ತದೆ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಅಸ್ಪಷ್ಟವಾಗಿ ಕಾಣತೊಡಗಿದ ತಲೆಕಟ್ಟು ಮುಂದಿನ ಎರಡು ಶತಮಾನಗಳಲ್ಲಿ ಸುಸ್ಪಷ್ಟವಾಗುತ್ತದೆ. ವಿಜಯನಗರದ ಕಾಲದಲ್ಲಿ ಹೊಕ್ಕಳು ಸೀಳಿರುವುದನ್ನು ಗಮನಿಸಬೇಕು. ಅಂದಿಗೆ ಈ ಅಕ್ಷರಕ್ಕೆ ಇಂದಿನ ರೂಪ ಸಿದ್ಧಿಸಿದಂತಾಯಿತು. ಮುಂದೆ ಇದೇ ರೂಪ ನಡೆದು ಬಂದಿದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: