ಸ್ವರ
ಸ್ವರವೆಂಬುದು ಭಾಷೆ, ವ್ಯಾಕರಣ ಮತ್ತು ಸಂಗೀತದಲ್ಲಿ ಕಂಡು ಬರುವ ಪದ. ಸಂಗೀತ ಕ್ಷೇತ್ರದಲ್ಲಿ ಸ್ವರ (ಸಂಗೀತ) ಎಂಬ ಪದ ಬಳಕೆಯಲ್ಲಿದೆ.
ಸ್ವರಾಕ್ಷರಗಳು ಎಂದರೇನು ?
[ಬದಲಾಯಿಸಿ]ಕೇಶಿರಾಜ ಕನ್ನಡದಲ್ಲಿ ೧೪ ಸ್ವರಗಳಿವೆ ಎಂದು ಅಭಿಪ್ರಾಯಪಡುತ್ತಾನೆ.
- ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
- ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
ಌ - ಇದು 'ಲುೃ ಗೆ ಹತ್ತಿರದ ಉಚ್ಛಾರ ಹೊಂದಿದೆ
ವಿಧಗಳು
[ಬದಲಾಯಿಸಿ]ಸ್ವರಗಳನ್ನು ನಾಲ್ಕು ವಿಭಾಗ ಮಾಡಬಹುದು.
ಹ್ರಸ್ವಸ್ವರ
[ಬದಲಾಯಿಸಿ]ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಎ. ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ.
ದೀರ್ಘಸ್ವರ
[ಬದಲಾಯಿಸಿ]ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.,ಏ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಅಕ್ಷರಗಳು ಎಂದು ಕರೆಯುತ್ತಾರೆ.
ಸಂಧ್ಯಕ್ಷರ
[ಬದಲಾಯಿಸಿ]ಪ್ಲುತ
[ಬದಲಾಯಿಸಿ]ದೀರ್ಘಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರ. ಉದಾ: ಅಣ್ಣಾಽಽ, ತಮ್ಮಾಽಽ, ಹಾ! ರಾಮಾ!
ಸವರ್ಣಗಳು
[ಬದಲಾಯಿಸಿ]ಕೇಶಿರಾಜನು ಅ,ಆ - ಇ,ಈ - ಉ,ಊ - ಋ,ಋೂ - ಲುೃ,ಲೂೃ ಅಕ್ಷರಗಳ ಜೋಡಿಗಳನ್ನು ಸವರ್ಣ/ಸಮಾನಅಕ್ಷರಗಳೆಂದು ಕರೆದಿದ್ದಾನೆ. ಅಲ್ಲದೆಯೆ, ಎ,ಏ – ಒ,ಓ ಎಂಬ ಅಕ್ಷರಗಳು ಸವರ್ಣ/ಸಮಾನ ಅಕ್ಷರಗಳೆಂದು ಹೇಳಿ ಕನ್ನಡಕ್ಕೆ ವಿಶಿಷ್ಟವಾಗಿರುವ ಕೆಲವು ಅಕ್ಷರಗಳನ್ನು ಗುರುತಿಸಿದ್ದಾನೆ. ಅ. ಆ. ಎಂಬ ವರ್ಣಗಳನ್ನು ಬಿಟ್ಟು ಉಳಿದ ಸ್ವರಗಳು ‘ನಾಮಿ’ ಸ್ವರಗಳು.
ಅನುಸ್ವಾರ ಮತ್ತು ವಿಸರ್ಗ
[ಬದಲಾಯಿಸಿ]ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ವಂಜನಾಂಗವೆಂದೂ ಕರೆಯಲಾಗಿದೆ. (ಅಂ-ಅನುಸ್ವಾರ, ಅ ಃವಿಸರ್ಗ)