ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಕನ್ನಡ ವರ್ಣಮಾಲೆಯ ಏಳನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.

ಚಾರಿತ್ರಿಕ ಹಿನ್ನೆಲೆ[ಬದಲಾಯಿಸಿ]

ಕನ್ನಡ ವರ್ಣಮಾಲೆಯ ಏಳನೆಯ ಅಕ್ಷರ. ಇದರ ಬ್ರಾಹ್ಮೀಲಿಪಿಯ ಸ್ವರೂಪ ದೊರಕಿಲ್ಲ. ಸಾಮಾನ್ಯವಾಗಿ ಕನ್ನಡದಲ್ಲಿ ಈ ಅಕ್ಷರದ ಬಳಕೆ ಬಹು ಕಡಿಮೆ. ಋಷಿ, ಋಣ ಮುಂತಾದ ಸಂಸ್ಕೃತದ ಶಬ್ದಗಳು ಬಂದಾಗ ಮಾತ್ರ ಇದರ ಉಪಯೋಗ. ಅಲ್ಲೂ ತದ್ಭವ ರೂಪಗಳಾದ ರಿಸಿ, ರಿಣ ಮುಂತಾದುವು ಬಂದು ಬಿಡುತ್ತವೆ. ವ್ಯಂಜನದೊಂದಿಗೆ ಸೇರಿ ಬಂದಾಗ ಮಾತೃಕೆ, ಗೃಹ ಮೊದಲಾದ ಶಬ್ದಗಳಲ್ಲಿ ಇದರ ನಿಷ್ಕೃಷ್ಟ ಉಪಯೋಗ ಉಂಟು. ವರ್ಣಮಾಲೆಯ ಎಂಟನೆಯ ಅಕ್ಷರವಾದ ಋಕಾರದ ಬಳಕೆಯಂತೂ ಕನ್ನಡದಲ್ಲಿ ಇಲ್ಲವೇ ಇಲ್ಲ. ಸಂಸ್ಕೃತದಲ್ಲಿ ಈ ಅಕ್ಷರದಿಂದ ಮೊದಲಾಗುವ ಪದಗಳು ತೀರ ವಿರಳ. ಕ್ರಿ.ಶ. ಆರನೆಯ ಶತಮಾನದ ಕದಂಬರಾಜ ಇಮ್ಮಡಿ ಕೃಷ್ಣವರ್ಮನ ಶಾಸನದಲ್ಲಿ ದೊರಕಿರುವ, ಋ ಕಾರದ ರೂಪವೇ ಬಹಶಃ ಅತಿ ಪ್ರಾಚೀನವಾದುದೆಂದು ಹೇಳಬಹುದು. ಕದಂಬ ಕಾಲದ ಈ ಅಕ್ಷರದ ಸ್ವರೂಪ, ಅದೇ ಕಾಲದ ಮ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುತ್ತದೆ. ಕ್ರಿ.ಶ. ಹನ್ನೆರಡನೆಯ ಶತಮಾನದ ಕಲ್ಯಾಣಿ ಚಾಲುಕ್ಯಶಾಸನಗಳಲ್ಲಿ, ಈ ಅಕ್ಷರ ಭು ಎಂಬುದನ್ನು ಬಹುವಾಗಿ ಹೋಲುತ್ತದೆ. ಇದೇ ರೂಪ ಮುಂದುವರಿದು ಕ್ರಿ.ಶ. ಹದಿನೆಂಟನೆಯ ಶತಮಾನದಲ್ಲಿ ಈಗಿರುವ ರೂಪಕ್ಕೆ ಬಹು ಸಮೀಪವಾಗಿ ಕಂಡರೂ ಒಂದು ಕೊಂಡಿ ಹೆಚ್ಚಾಗಿರುವುದನ್ನು ಗಮನಿಸಬೇಕು.[೧]

ಭಾಷಾವಿಜ್ಞಾನದ ವಿವರ[ಬದಲಾಯಿಸಿ]

ಕನ್ನಡ ವರ್ಣಮಾಲೆಯ ಏಳು ಎಂಟನೆಯ ಅಕ್ಷರಗಳಾದ ಹ್ರಸ್ವ ದೀರ್ಘ ಋ,Iೂ, ವ್ಯಂಜನ ಹಾಗೂ ಅರ್ಧ ಸ್ವರ ಲಕ್ಷಣಗಳನ್ನೊಳಗೊಂಡ ಮೃದು ಧ್ವನಿಗಳನ್ನು ಸೂಚಿಸುತ್ತವೆ.


ಸ್ವರಾಕ್ಷರಗಳು ಎಂದರೇನು ?[ಬದಲಾಯಿಸಿ]

  1. ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.[೨]
  2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,

ಹೃಸ್ವಸ್ವರ[ಬದಲಾಯಿಸಿ]

ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು  : ಅ, ಇ, ಉ, ಋ, ಲುೃ. ಎ, ಒ - ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಅಕ್ಷರವೂ ಒಂದಾಗಿದೆ.

ಅಕ್ಷರವನ್ನು ಉಚ್ಚರಿಸುವ ವಿಧಾನ[ಬದಲಾಯಿಸಿ]

ಕನ್ನಡ ದೇವನಾಗರಿ ISO 15919 ಸಂಕೇತೊ ಬರೆಪುನ ವಿದಾನೊ ಪನ್ಪುನ ವಿದಾನೊ
ru

ದಿಂದ ಆರಂಭವಾಗುವ ನಾಮಪದಗಳು[ಬದಲಾಯಿಸಿ]

  • ಪ್ರಾಣಿ ಸಂಬಂಧಿ ಪದ : ಋಷಭ
  • ಮನುಷ್ಯ ಸಂಬಂಧಿ ಪದ : ಋಷ್ಯಶೃಂಗ
  • ಸಸ್ಯ ಸಂಬಂಧಿ ಪದ :

ಉಲ್ಲೇಖ[ಬದಲಾಯಿಸಿ]

  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಋ
  2. ಕೇಶಿರಾಜಶಬ್ದಮಣಿದರ್ಪಣ


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಋ&oldid=1201794" ಇಂದ ಪಡೆಯಲ್ಪಟ್ಟಿದೆ