ಗ
ಗೋಚರ
|
ಗ, ಕನ್ನಡ ವರ್ಣಮಾಲೆಯ ಕ-ವರ್ಗದ ಮೂರನೇ ಅಕ್ಷರವಾಗಿದೆ. ಈ ಅಕ್ಷರ ಕಂಠ ಘೋಷ ಸ್ಪರ್ಶ ಧ್ವನಿ. ಅಲ್ಪಪ್ರಾಣಾಕ್ಷರ.
ಚಾರಿತ್ರಿಕ ಹಿನ್ನೆಲೆ
[ಬದಲಾಯಿಸಿ]ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಕೆಳಭಾಗದ ರೇಖೆಯಿಲ್ಲದಿರುವ ಸಮಭುಜ ತ್ರಿಕೋನದಂತೆ ಕಾಣುವ ಮೌರ್ಯರ ಕಾಲದ ಈ ಅಕ್ಷರದ ಸ್ವರೂಪ ಶಾತವಾಹನ ಕಾಲದಲ್ಲಿ ದುಂಡಗಾಗಿ ಹಿಡಿ ಮತ್ತು ನಾಲೆ ಇಲ್ಲದ ಘಂಟಾಕೃತಿಯನ್ನು ತಾಳುತ್ತದೆ. ಕದಂಬರ ಶಾಸನಗಳಲ್ಲಿ ಪೇಟಿಕಾಶಿರದ ತಲೆಕಟ್ಟು ಬಂದು ಸೇರುತ್ತದೆ. ಅಲ್ಲಿಂದ ಮುಂದೆ ಈ ಅಕ್ಷರ ಹೆಚ್ಚು ಬದಲಾವಣೆಗಳಿಲ್ಲದೆ ಮುಂದುವರಿದು ಈಗಿರುವ ರೂಪವನ್ನು ತಾಳುತ್ತದೆ. ಪ್ರಾಚೀನ ಬ್ರಾಹ್ಮೀ ಲಿಪಿಯಿಂದ ಹೆಚ್ಚು ಬದಲಾವಣೆ ಹೊಂದದ ಅಕ್ಷರಗಳಲ್ಲಿ ಇದು ಮುಖ್ಯವಾದುದು. ಈ ಅಕ್ಷರ ಕಂಠ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: