ವಿಷಯಕ್ಕೆ ಹೋಗು

ಯೋಗವಾಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಯೋಗವಾಹ ಅಕ್ಷರಗಳನ್ನು ಅಕ್ಷರಮಾಲೆಯ ಶುದ್ಧಾಕ್ಷರಗಳು ಎಂದು ಕರೆಯುವುದಕ್ಕಿಂತ ಭಾಷೆಯಲ್ಲಿ ಕೇಳಿ ಬರುವ ಧ್ವನಿಗಳು ಯೋಗವಾಹಗಳು ಎಂದು ಮನ್ನಣೆ ನೀಡಲಾಗಿದೆ.[]

ಯೋಗವಾಹದ ವಿಧಗಳು

[ಬದಲಾಯಿಸಿ]

ಕೇಶಿರಾಜ ಯೋಗವಾಹಗಳನ್ನು ಸ್ವರಗಳಿಂದ ಪ್ರತ್ಯೇಕವಾಗಿ ವಿಭಾಗಿಸಿ, ನಾಲ್ಕು ಭಾಗ ಮಾಡಿಕೊಳ್ಳುತ್ತಾನೆ.[]

ಅನುಸ್ವಾರ

[ಬದಲಾಯಿಸಿ]
  • ‘ಂ’ - ಉದಾ : ಅಂ, ಡಂ, ಕಂ, ಗಂ. ಪದಗಳಲ್ಲಿ - ಅಂಗಳ,ಗಂಡು, ಕಂದ
  • ಅನುಸ್ವಾರಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.

ವಿಸರ್ಗ

[ಬದಲಾಯಿಸಿ]
  • ‘ಃ’ - ಉದಾ : ಅಃ, ಕಃ.
  • ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ವಿಸರ್ಗವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.

ಜಿಹ್ವಾಮೂಲೀಯ

[ಬದಲಾಯಿಸಿ]
  • ‘x್ಕ’ – ೦ಃಕ.
  • ಜಿಹ್ವಾಮೂಲೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪ್ರಾತ ಃಕಾಲ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ‘ಉಫ್’ ಎಂಬಲ್ಲಿ ಕೇಳಿ ಬರುವಧ್ವನಿಯೇ ಜಿಹ್ವಾಮೂಲೀಯ. ಉದಾ: ಅಂತ ಃಕರಣ, ಮನ ಃಕಷಾಯ. ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ.

ಉಪಾದ್ಮಾನೀಯ

[ಬದಲಾಯಿಸಿ]
  • (ಓಷ್ಠ್ಯ) ಪಿ -
  • ಉಪದ್ಮಾನೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪಯ ಃಪಾನ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಉಪಾದ್ಮಾನೀಯಕ್ಕೆ ಉದಾ: ಃಪ / ಪಿ - ತಪ ಃಫಲ, ಪುನ ಃಪುನಃ . ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ.

ಅನುಸ್ವಾರ, ವಿಸರ್ಗಗಳು ಸ್ವರಾಂಗ ವ್ಯಂಜನಾಂಗವಾದರೂ ಭಾಷಾಬಳಕೆಯಲ್ಲಿ ಅವುಗಳಿಗೆ ಸ್ವತಂತ್ರ ಧ್ವನಿಮಾ ವ್ಯವಸ್ಥೆಯಿಲ್ಲ. ಆದರೂ ಕೇಶಿರಾಜನ ಇವು ನಾಲ್ಕೂ ಯೋಗವಾಹಗಳು.

ಉಲ್ಲೇಖ

[ಬದಲಾಯಿಸಿ]
  1. https://www.omniref.com/ruby/gems/scylla/0.4.1/files/source_texts/kannada.txt
  2. "ಆರ್ಕೈವ್ ನಕಲು". Archived from the original on 2016-10-19. Retrieved 2015-12-27.
"https://kn.wikipedia.org/w/index.php?title=ಯೋಗವಾಹ&oldid=1116374" ಇಂದ ಪಡೆಯಲ್ಪಟ್ಟಿದೆ