ವ
Jump to navigation
Jump to search
|
ವ, ಕನ್ನಡ ವರ್ಣಮಾಲೆಯ ಐದನೇ ಅವರ್ಗೀಯ ವ್ಯಂಜನವಾಗಿದೆ. ದಂತೋಷ್ಠ್ಯ ಘೋಷ ಸಂಘರ್ಷ ವ್ಯಂಜನ ಧ್ವನಿ.
ಚಾರಿತ್ರಿಕ ಹಿನ್ನೆಲೆ[ಬದಲಾಯಿಸಿ]
ಅಶೋಕನ ಕಾಲದ ಬ್ರಾಹ್ಮೀಲಿಪಿಯಲ್ಲಿ ಗುಂಡಾದ ಮತ್ತು ವೃತ್ತಾಕಾರದ ಅಕ್ಷರಗಳು ಬಹು ಕಡಮೆ. ಆದರೆ ವ ಎಂಬ ಅಕ್ಷರ ವೃತ್ತದ ಮೇಲೆ ಒಂದು ಸರಳರೇಖೆಯನ್ನುಳ್ಳದ್ದಾಗಿದೆ. ಸಾತವಾಹನ ಕಾಲದಲ್ಲಿ ಈ ವೃತ್ತ ತ್ರಿಕೋಣಾಕೃತಿಯಾಗಿ ಪರಿವರ್ತಿತವಾಗಿದೆ. ಕದಂಬ ಕಾಲದಲ್ಲಿ ಈ ತ್ರಿಕೋಣ ಅಗಲವಾಗಿ ಸರಳ ರೇಖೆಯ ಒಂದು ಭಾಗದಲ್ಲಿ ಮಾತ್ರ ಬರೆಯಲ್ಪಡುತ್ತದೆ. ರಾಷ್ಟ್ರಕೂಟ ಕಾಲ ದಲ್ಲಿ ಕೆಳಭಾಗದ ಕೊಂಡಿ ಪಕ್ಕದ ರೇಖೆಗೆ ಇನ್ನೂ ಸೇರಿಕೊಂಡಿರುವು ದನ್ನು ಗಮನಿಸ ಬಹುದು. ಇದು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಬದಲಾ ವಣೆಯನ್ನು ಹೊಂದುತ್ತದೆ. ಆಗ ಪಕ್ಕದ ರೇಖೆ ಕೆಳಭಾಗದ ಕೊಂಡಿಯೊಂದಿಗೆ ಸೇರಿರದೆ ಇರುವುದು ಗಮನಾರ್ಹ. ಕಳಚುರಿ, ಹೊಯ್ಸಳ ಮತ್ತು ಸೇವುಣರ ಕಾಲದಲ್ಲಿ ಈ ಕೊಂಡಿ ಇನ್ನೂ ಸಣ್ಣದಾಗಿ ಪಕ್ಕದ ರೇಖೆಯಿಂದ ದೂರ ಸರಿಯುತ್ತದೆ. ಇದೇ ರೂಪವೇ ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲಿಯೂ ಮುಂದುವರಿಯುತ್ತದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: