ಂ
ಗೋಚರ
| |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಅಂ ಕನ್ನಡ ವರ್ಣಮಾಲೆಯ ಮೊದಲನೇ ಯೋಗವಾಹಕವಾಗಿದೆ. ಇದರ ಉಚ್ಚಾರಣೆಯು ಇದರ ನಂತರ ಬರುವ ವ್ಯಂಜನಾಕ್ಷರದ ಮೇಲೆ ಅವಲಂಬಿಸಿರುತ್ತದೆ. ಯೋಗವಾಹ ಅಕ್ಷರಗಳನ್ನು ಅಕ್ಷರಮಾಲೆಯ ಶುದ್ಧಾಕ್ಷರಗಳು ಎಂದು ಕರೆಯುವುದಕ್ಕಿಂತ ಭಾಷೆಯಲ್ಲಿ ಕೇಳಿ ಬರುವ ಧ್ವನಿಗಳು ಯೋಗವಾಹಗಳು ಎಂದು ಮನ್ನಣೆ ನೀಡಲಾಗಿದೆ.
ಕೇಶಿರಾಜ ಯೋಗವಾಹಗಳನ್ನು ಸ್ವರಗಳಿಂದ ಪ್ರತ್ಯೇಕವಾಗಿ ವಿಭಾಗಿಸಿ, ನಾಲ್ಕು ಭಾಗ ಮಾಡಿಕೊಳ್ಳುತ್ತಾನೆ.[೧]
ಅನುಸ್ವಾರ
[ಬದಲಾಯಿಸಿ]- ‘೦’ - ಉದಾ : ಅಂ, ಡಂ, ಕಂ, ಗಂ. ಪದಗಳಲ್ಲಿ - ಅಂಗಳ,ಗಂಡು, ಕಂದ
- ಅನುಸ್ವಾರಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.
| ಅಕ್ಷರ ಸಂಯೊಗ | ಸ್ವರ ಸಂಯೊಗ | ಪದ |
|---|---|---|
| ಅಂ + ಕ | ಅ + ಙ್ + ಕ | ಅಂಕ |
| ಅಂ + ಚೆ | ಅ + ಞ್ + ಚೆ | ಅಂಚೆ |
| ಅಂ + ಟು | ಅ + ಣ್ + ಟು | ಅಂಟು |
| ಕಾಂ + ತಿ | ಕಾ + ನ್ + ತಿ | ಕಾಂತಿ |
| ಕೆಂ + ಪು | ಕೆ +ಮ್ + ಪು | ಕೆಂಪು |
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-10-19. Retrieved 2020-09-09.