ವಿಷಯಕ್ಕೆ ಹೋಗು

ಕಾಶ್ಮೀರ

Coordinates: 34°30′N 76°00′E / 34.5°N 76°E / 34.5; 76
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

34°30′N 76°00′E / 34.5°N 76°E / 34.5; 76

ಚಿತ್ರ:Kashmir region-map 2004.jpg
ಪೀರ‍್ ಪಂಜಾಲ್‌ ಶ್ರೇಣಿ ಹಾಗೂ ಕಾಶ್ಮೀರ ಕಣಿವೆಯನ್ನು ತೋರಿಸುತ್ತಿರುವ ಕಾಶ್ಮೀರ ವಲಯದ ಒಂದು ಭೂಪಟ.
ವಿಶ್ವದಲ್ಲಿನ 9ನೇ ಅತಿ ಎತ್ತರದ ಶಿಖರವಾಗಿರುವ ಮತ್ತು ಚಾರಣಿಗರಿಗೆ ಅತ್ಯಂತ ಅಪಾಯಕಾರಿ ಶಿಖರಗಳಲ್ಲಿ ಒಂದೆನಿಸಿದ ನಂಗಾ ಪರ್ವತ ಉತ್ತರ ಭಾಗದ ಪ್ರದೇಶಗಳಲ್ಲಿದೆ.

ಕಾಶ್ಮೀರ ವು (ಬಾಲ್ಟಿ: کشمیر; ಡೊಗ್ರಿ: कश्मीर, ಗೋಜ್ರಿ: کشمیر; ಪೂಂಛಿ/ಚೈಭಾಲಿ: کشمیر; ಕಾಶ್ಮೀರi: कॅशीर, کٔشِیر; ಲಡಾಖ್‌i: ཀཤམིར; ಷೀನಾ: کشمیر; ‌ಉಯ್ಘರ‍್:كەشمىر) ಭಾರತದ ಉಪಖಂಡದ ವಾಯವ್ಯ ವಲಯದಲ್ಲಿದೆ. 19ನೇ ಶತಮಾನದ ಮಧ್ಯದವರೆಗೂ, ಮಹಾನ್ ಹಿಮಾಲಯ ಶ್ರೇಣಿ ಮತ್ತು ಪೀರ‍್ ಪಂಜಾಲ್‌ ಶ್ರೇಣಿಯ[ಸೂಕ್ತ ಉಲ್ಲೇಖನ ಬೇಕು] ನಡುವೆ ಹಬ್ಬಿಕೊಂಡಿರುವ ಕಣಿವೆಗಷ್ಟೇ "ಕಾಶ್ಮೀರ" ಎಂಬ ಪದವನ್ನು ಅನ್ವಯಿಸಲಾಗುತ್ತಿತ್ತು. ಅಲ್ಲಿಂದೀಚೆಗೆ, ಭಾರತದ ಆಡಳಿತದ ನಿಯಂತ್ರಣಕ್ಕೆ ಒಳಪಟ್ಟಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಇಂದು ಒಳಗೊಂಡಿರುವ ವಿಶಾಲವಾದ ಪ್ರದೇಶಕ್ಕೆ ಆ ಹೆಸರನ್ನು ಬಳಸುತ್ತಾ ಬರಲಾಗಿದೆ. ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್‌; ಪಾಕಿಸ್ತಾನದ-ಆಡಳಿತ ನಿಯಂತ್ರಣವಿರುವ ಉತ್ತರ ಭಾಗದ ಪ್ರದೇಶಗಳು ಮತ್ತು ಅಜಾದ್‌ ಕಾಶ್ಮೀರ್‌ನ ಪ್ರಾಂತ್ಯಗಳು, ಮತ್ತು ಚೀನಿಯರ-ಆಡಳಿತಕ್ಕೊಳಪಟ್ಟಿರುವ ಅಕ್ಸಾಯ್‌ ಚಿನ್‌ ಮತ್ತು ಟ್ರಾನ್ಸ್-ಕರಕೋರಂ ಟ್ರಾಕ್ಟ್ ವಲಯಗಳನ್ನು ಈ ವಿಶಾಲವಾದ ಪ್ರದೇಶವು ಒಳಗೊಂಡಿದೆ. ಈ ಸಮಗ್ರ ಭೌಗೋಳಿಕ ಪ್ರದೇಶವನ್ನು ಉಲ್ಲೇಖಿಸಲು, ವಿಶ್ವಸಂಸ್ಥೆ[೧] ಮತ್ತು ಹಲವಾರು ಮೂಲಗಳು ಜಮ್ಮು ಮತ್ತು ಕಾಶ್ಮೀರ ಎಂಬ ಅಂಕಿತವನ್ನೇ ಬಳಸುತ್ತವೆ.

ಮೊದಲ ಸಹಸ್ರಮಾನದ ಮೊದಲರ್ಧ ಭಾಗದಲ್ಲಿ, ಕಾಶ್ಮೀರವು ಹಿಂದುಧರ್ಮದ ಒಂದು ಪ್ರಮುಖ ಕೇಂದ್ರವಾಗಿ ಮತ್ತು ನಂತರ ಬೌದ್ಧಧರ್ಮದ ಕೇಂದ್ರವಾಗಿ ಮಾರ್ಪಟ್ಟಿತು; ಇನ್ನೂ ನಂತರದಲ್ಲಿ, ಒಂಬತ್ತನೇ ಶತಮಾನದಲ್ಲಿ, ಈ ವಲಯದಲ್ಲಿ ಕಾಶ್ಮೀರ ಶೈವಧರ್ಮ ಹುಟ್ಟಿಕೊಂಡಿತು.[೨] 1349ರಲ್ಲಿ, ಷಾಹ್‌ ಮೀರ್‌ ಎಂಬಾತ ಕಾಶ್ಮೀರದ ಮೊಟ್ಟಮೊದಲ ಮುಸ್ಲಿಂ ಆಡಳಿತಗಾರನಾದ ಮತ್ತು ಸಲಾಟಿನ್-ಇ-ಕಾಶ್ಮೀರ್‌ ರೇಖೆಯನ್ನು ಉದ್ಘಾಟಿಸಿದ.[೩] ನಂತರದ ಐದು ಶತಮಾನಗಳವರೆಗೆ ಮುಸ್ಲಿಂ ಸಾರ್ವಭೌಮ ರಾಜರುಗಳೇ ಕಾಶ್ಮೀರವನ್ನು ಆಳಿದರು. ಅವರಲ್ಲಿ, 1751ರವರೆಗೆ ಆಳಿದ ಮುಘಲರು, ಹಾಗೂ ಅದಾದ ನಂತರದಲ್ಲಿ, 1820ರವರೆಗೆ ಆಳಿದ ಆಫ್ಘನ್‌ ದುರಾನಿಗಳು ಸೇರಿದ್ದಾರೆ.[೩] ಅದೇ ವರ್ಷ, ರಣಜಿತ್‌ ಸಿಂಗ್‌ ನೇತೃತ್ವದಡಿಯಲ್ಲಿ ಸಿಖ್ಖರು ಕಾಶ್ಮೀರವನ್ನು ವಶಪಡಿಸಿಕೊಂಡರು. 1846ರಲ್ಲಿ, ಅಮೃತಸರ ಒಪ್ಪಂದದ ಅಡಿಯಲ್ಲಿ ಬ್ರಿಟಿಷರಿಂದ ಈ ವಲಯವನ್ನು ಖರೀದಿಸಿದ ನಂತರ, ಗುಲಾಬ್‌ ಸಿಂಗ್‌ನ ಅಡಿಯಲ್ಲಿ ಡೋಗ್ರಾಗಳು ಹೊಸ ಆಡಳಿತಗಾರರಾಗಿ ಮಾರ್ಪಟ್ಟರು.

ಬ್ರಿಟಿಷ್‌ ಸಿಂಹಾಸನದ ಸಾರ್ವಭೌಮತೆ ಯ (ಅಥವಾ ರಕ್ಷಣೆಯ) ಅಡಿಯಲ್ಲಿನ ಡೋಗ್ರಾ ಆಡಳಿತವು 1947ರವರೆಗೆ ನಡೆಯಿತು. ನಂತರ ಹಿಂದಿನ ರಾಜ ಸಂಸ್ಥಾನವು ಒಂದು ವಿವಾದಿತ ಪ್ರಾಂತ್ಯವಾಗಿ ಮಾರ್ಪಟ್ಟು, ಈಗ ಮೂರು ದೇಶಗಳ ಆಡಳಿತಕ್ಕೆ ಒಳಪಟ್ಟಿದೆ. ಅವೆಂದರೆ: ಭಾರತ, ಪಾಕಿಸ್ತಾನ, ಮತ್ತು ಚೀನಾದ ಪ್ರಜಾಪ್ರಭುತ್ವವಾದಿ ಗಣರಾಜ್ಯ.

ವ್ಯುತ್ಪತ್ತಿ ಶಾಸ್ತ್ರ[ಬದಲಾಯಿಸಿ]

ಭವಾನ್‌ ಸಮೀಪವಿರುವ, ಮಾರ್ತಾಂಡ ಅಥವಾ ಸೂರ್ಯನ ದೇವಸ್ಥಾನ ಮತ್ತು ಪ್ರಾಕಾರದ ಸಾರ್ವತ್ರಿಕ ನೋಟ.ದೇವಸ್ಥಾನದ ಸಂಭವನೀಯ ದಿನಾಂಕ 490-555 A.D. ಕಂಬಸಾಲಿನ ಸಂಭವನೀಯ ದಿನಾಂಕ 693-729 A.D 1868ರಲ್ಲಿ ಜಾನ್ ಬರ್ಕ್‌‌ರಿಂದ ತೆಗೆಯಲ್ಪಟ್ಟಿರುವ, ಜಮ್ಮು & ಕಾಶ್ಮೀರದಲ್ಲಿನ ಮಾರ್ತಾಂಡ್‌ನಲ್ಲಿನ ಸೂರ್ಯ ದೇವಸ್ಥಾನದ ಛಾಯಾಚಿತ್ರ.

ಕಣಿವೆಯ ಮೂಲವು ನೀರಿನಿಂದ ಬಂದಿದೆ ಎಂದು ನೀಲಮಾತಾ ಪುರಾಣವು ವಿವರಿಸುತ್ತದೆ. ಇದರ ಪ್ರಕಾರ, ಕಾ ಎಂದರೆ "ನೀರು" ಮತ್ತು ಶ್ಮೀರ ಎಂದರೆ "ನಿರ್ಜಲೀಕರಿಸುವುದು" ಎಂದರ್ಥ. ಆದ್ದರಿಂದ, ಕಾಶ್ಮೀರ ಎಂದರೆ, "ನೀರಿನಿಂದ ನಿರ್ಜಲೀಕರಿಸಲ್ಪಟ್ಟ ಒಂದು ಭೂಮಿ" ಎಂದರ್ಥ. ಕಾಶ್ಯಪ್‌-ಮೀರ್‌ ಅಥವಾ ಕಾಶ್ಯಪ್‌ಮೀರ್‌ ಅಥವಾ ಕಾಶ್ಯಪ್‌ಮೇರು ಎಂಬುದರ ಸಂಕುಚನಗೊಳಿಸಿದ ರೂಪವೇ ಕಾಶ್ಮೀರವಾಗಿರಬಹುದು ಎಂದು ಹೇಳುವ ಮತ್ತೊಂದು ಸಿದ್ಧಾಂತ ಅಥವಾ ಅಭಿಪ್ರಾಯವೂ ಚಾಲ್ತಿಯಲ್ಲಿದೆ. ಆದಿಕಾಲದ ಸತೀಸರ್‌ ಸರೋವರದ ನೀರನ್ನು ಬರಿದುಮಾಡಿದ ಎಂದು ಹೇಳಲಾಗುವ "ಕಾಶ್ಯಪ ಋಷಿಯ ಸಮುದ್ರ ಅಥವಾ ಪರ್ವತ"ವು ಅದರ ವಶವಾಗುವುದಕ್ಕೆ ಮುಂಚೆ ಕಾಶ್ಮೀರ ಎನಿಸಿಕೊಂಡಿತ್ತು ಎಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಈ ಕಣಿವೆಯು ಉಮಾಳ ಸಾಕಾರರೂಪವೆಂಬಂತೆ ಪರಿಗಣಿಸಿ ಇದಕ್ಕೆ ಕಾಶ್ಮೀರ ಎಂಬ ಹೆಸರನ್ನು ನೀಲಮಾತಾ ಪುರಾಣ ವು ನೀಡಿದ್ದು, ಅದೇ ಈಗ ಕಾಶ್ಮೀರ ಎಂದು ವಿಶ್ವದೆಲ್ಲೆಡೆ ಜನಜನಿತವಾಗಿದೆ. ಆದಾಗ್ಯೂ, ಕಾಶ್ಮೀರ‍್‌ ಎಂಬ ಪದದಿಂದ ಉಚ್ಚರಣಾನುರೂಪವಾಗಿ ಜನ್ಯವಾಗಿರುವ ಕಾಶಿರ‍್ ಎಂಬ ಹೆಸರಿನಿಂದ ಕಾಶ್ಮೀರಿಗಳು ಇದನ್ನು ಕರೆಯುತ್ತಾರೆ ಎಂದು ಔರೆಲ್‌ ಸ್ಟೀನ್‌ ಎಂಬಾತ ರಾಜತರಂಗಿಣಿ ಎಂಬ ಕೃತಿಯಲ್ಲಿ ತಾನು ನೀಡಿರುವ ಪರಿಚಯ ಬರಹದಲ್ಲಿ ತಿಳಿಸಿದ್ದಾನೆ.

12ನೇ ಶತಮಾನದಲ್ಲಿ ಕಲ್ಹಣ ನಿಂದ ಬರೆಯಲ್ಪಟ್ಟಿರುವ ಕಾಶ್ಮೀರದ ಒಂದು ಇತಿಹಾಸ ಕೃತಿಯಾದ ರಾಜತರಂಗಿಣಿ ಯಲ್ಲಿ, ಕಾಶ್ಮೀರದ ಕಣಿವೆಯು ಹಿಂದೊಮ್ಮೆ ಒಂದು ಸರೋವರವಾಗಿತ್ತು ಎಂದು ತಿಳಿಸಲಾಗಿದೆ. ಬ್ರಹ್ಮನ ಮಗ ಮರೀಚಿಯ ಮಗನಾದ ಕಶ್ಯಪ ಎಂಬ ಮಹಾನ್ ಋಷಿ ಅಥವಾ ಮುನಿಯು, ಬಾರಾಮುಲ್ಲಾದಲ್ಲಿನ (ವರಾಹ-ಮೂಲ ) ಬೆಟ್ಟಗುಟ್ಟಗಳಲ್ಲಿನ ಅಂತರವನ್ನು ಕಡಿದುಹಾಕುವ ಮೂಲಕ ಇದನ್ನು ಬರಿದುಮಾಡಿದ. ಕ್ಯಾಶ್ಮೀರ‍್ ಎಂಬುದು ಕಾಶ್ಮೀರ ಎಂಬ ಹೆಸರಿನ ಮತ್ತೊಂದು ಉಚ್ಚಾರಣಾ ವಿಧಾನ ಅಥವಾ ಕಾಗುಣಿತವಾಗಿದೆ.[೪]

ಇತಿಹಾಸ[ಬದಲಾಯಿಸಿ]

ಕಾಶ್ಮೀರದಲ್ಲಿನ ಬೌದ್ಧಧರ್ಮ ಮತ್ತು ಹಿಂದೂಧರ್ಮ[ಬದಲಾಯಿಸಿ]

ಬಾರಾಮುಲ್ಲಾ ಸಮೀಪವಿರುವ ಉತ್ಖನನಕ್ಕೊಳಗಾಗದ ಬೌದ್ಧ ಸ್ತೂಪದ ಸಾರ್ವತ್ರಿಕ ನೋಟ. ಶಿಖರದ ಮೇಲೆ ಎರಡು ಆಕೃತಿಗಳು ನಿಂತಿರುವ, ಮತ್ತು ಅಳೆಯುವ ಪಟ್ಟಿಗಳೊಂದಿಗೆ ತಳದಲ್ಲಿ ನಿಂತಿರುವ ಮತ್ತೊಂದು ಆಕೃತಿಯನ್ನು ಒಳಗೊಂಡಿರುವ ಈ ಛಾಯಾಚಿತ್ರವು 1868ರಲ್ಲಿ ಜಾನ್‌ ಬರ್ಕ್‌ರಿಂದ ತೆಗೆಯಲ್ಪಟ್ಟಿತು. ನಂತರ ಉತ್ಖನನ ಮಾಡಲಾದ ಸ್ತೂಪವು 500 CEನಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ.

ಶ್ರೀನಗರ ಎಂಬ ನಗರವನ್ನು ಸಂಸ್ಥಾಪಿಸಿದ ಕೀರ್ತಿ ಮೌರ್ಯ ವಂಶದ ಚಕ್ರವರ್ತಿ ಅಶೋಕನಿಗೆ ಸಲ್ಲುತ್ತದೆ. ಕಾಶ್ಮೀರದಲ್ಲಿ ಆ ಕಾಲಕ್ಕೆ ಪ್ರಾಯಶಃ ಸರ್ವಾಷ್ಟಿವಾದನ ಶಾಲೆಯ ಪ್ರಾಬಲ್ಯವಿತ್ತಾದ್ದರಿಂದ, ಅದು ಒಂದು ಕಾಲಕ್ಕೆ ಕಲಿಕೆಗೆ ಸಂಬಂಧಿಸಿದ ಬೌದ್ಧಧರ್ಮೀಯ ಪೀಠವಾಗಿತ್ತು. ಪೂರ್ವ ಮತ್ತು ಮಧ್ಯ ಏಷ್ಯಾದ ಬೌದ್ಧ ಸನ್ಯಾಸಿಗಳು ಈ ರಾಜ್ಯಕ್ಕೆ ಭೇಟಿ ನೀಡಿದ್ದರು ಎಂಬುದಕ್ಕೆ ದಾಖಲೆಗಳಿವೆ. 4ನೇ ಶತಮಾನದ ADಯ ಅಂತ್ಯದ ವೇಳೆಗೆ, ಭಾರತದ ಗಣ್ಯ ಕುಟುಂಬವೊಂದರಲ್ಲಿ ಜನಿಸಿದ ಕುಮಾರಜೀವ ಎಂಬ ಸುಪ್ರಸಿದ್ಧ ಕುಚಾನೀ ಸನ್ಯಾಸಿಯು, ಕಾಶ್ಮೀರದಲ್ಲಿ ಬಂಧುದತ್ತರ ಮಾರ್ಗದರ್ಶನದಡಿಯಲ್ಲಿ ದೀರ್ಘಾಗಮ ಮತ್ತು ಮಧ್ಯಾಗಮ ಶಾಸ್ತ್ರಗಳನ್ನು ಅಧ್ಯಯನ ಮಾಡಿದ. ನಂತರದಲ್ಲಿ ಆತ ಓರ್ವ ಸಮೃದ್ಧಶೀಲ ಭಾಷಾಂತರನಾಗಿ ರೂಪುಗೊಳ್ಳುವುದರ ಮೂಲಕ ಬೌದ್ಧಧರ್ಮವನ್ನು ಚೀನಾ ದೇಶಕ್ಕೆ ಕೊಂಡೊಯ್ಯುವಲ್ಲಿ ನೆರವಾದ. ಆತನ ತಾಯಿಯಾದ ಜೀವಾ ಕಾಶ್ಮೀರದಲ್ಲೇ ಉಳಿದುಕೊಂಡಳು ಎಂದು ಹೇಳಲಾಗುತ್ತದೆ. ವಿಮಲಾಕ್ಷ, ಎಂಬ ಓರ್ವ ಸರ್ವಾಷ್ಟಿವಾದನ ಬೌದ್ಧ ಸನ್ಯಾಸಿಯು ಕಾಶ್ಮೀರದಿಂದ ಕುಚಾಗೆ ಪ್ರಯಾಣಬೆಳೆಸಿ, ಅಲ್ಲಿನ ವಿನಯಪೀಠಕ ದಲ್ಲಿ ಕುಮಾರಜೀವನಿಗೆ ಬೋಧನೆ ಮಾಡಿದ.

8ನೇ ಶತಮಾನದ CEನ ಅಂತ್ಯ ಅಥವಾ 9ನೇ ಶತಮಾನದ CEನ ಆರಂಭದಲ್ಲಿ, ಆದಿ ಶಂಕರರು ಕಾಶ್ಮೀರದಲ್ಲಿ ಮುಂಚೆಯಿಂದಲೂ ಅಸ್ತಿತ್ವದಲ್ಲಿದ್ದSarvajñapīṭha ಶಾರದಾ ಪೀಠಕ್ಕೆ ಭೇಟಿನೀಡಿದ್ದರು. ಈ ದೇವಸ್ಥಾನವು ನಾಲ್ಕು ಬಾಗಿಲುಗಳನ್ನು ಹೊಂದಿದ್ದು, ನಾಲ್ಕು ಪ್ರಧಾನ ದಿಕ್ಕುಗಳಿಂದ ಬರುವ ವಿದ್ವಾಂಸರಿಗಾಗಿ ಅದು ಮೀಸಲಾಗಿತ್ತು ಎಂದು ಮಾಧವೀಯ ಶಂಕರವಿಜಯಂ ಕೃತಿಯು ಹೇಳುತ್ತದೆ. ದಕ್ಷಿಣ ದಿಕ್ಕಿನ ಬಾಗಿಲು (ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಿದ್ದುದು) ಎಂದಿಗೂ ತೆರೆದೇ ಇರಲಿಲ್ಲ. ದಕ್ಷಿಣ ಭಾರತದಿಂದ ಯಾವುದೇ ವಿದ್ವಾಂಸರೂ ಸರ್ವಜ್ಞ ಪೀಠವನ್ನು ಪ್ರವೇಶಿಸಿರಲಿಲ್ಲ ಎಂಬುದನ್ನು ಇದು ಸೂಚಿಸುತ್ತಿತ್ತು. ಮೀಮಾಂಸೆ, ವೇದಾಂತ ಮತ್ತು ಹಿಂದೂ ತತ್ತ್ವಶಾಸ್ತ್ರದ ಇತರ ಶಾಖೆಗಳಂಥ ವೈವಿಧ್ಯಮಯ ವಿದ್ವತ್ಪೂರ್ಣ ವಿಷಯಗಳೆಲ್ಲದರಲ್ಲಿಯೂ ಅಲ್ಲಿನ ಎಲ್ಲಾ ವಿದ್ವಾಂಸರನ್ನೂ ಚರ್ಚೆಯಲ್ಲಿ ಸೋಲಿಸುವ ಮೂಲಕ, ಆದಿ ಶಂಕರರು ದಕ್ಷಿಣ ದಿಕ್ಕಿನ ಬಾಗಿಲನ್ನು ತೆರೆದದ್ದೇ ಅಲ್ಲದೇ, ಆ ದೇವಸ್ಥಾನದ ಇಂದ್ರಿಯಾತೀತ ಜ್ಞಾನದ ಸಿಂಹಾಸನವನ್ನು ಆರೋಹಣ ಮಾಡಿದರು.[೫]

ಅಭಿನವಗುಪ್ತ (ಸುಮಾರು 950 - 1020 AD[೬][೭]) ಎಂಬುವವ ಭಾರತದ ಮಹೋನ್ನತ ದಾರ್ಶನಿಕರು, ಅನುಭಾವಿಗಳು ಮತ್ತು ಸೌಂದರ್ಯ ಮೀಮಾಂಸಕರಲ್ಲಿ ಒಬ್ಬನಾಗಿದ್ದ. ಅವನನ್ನು ಓರ್ವ ಪ್ರಮುಖ ಸಂಗೀತಗಾರ, ಕವಿ, ನಾಟಕಕಾರ, ಭಾಷ್ಯಕಾರ, ದೇವತಾಶಾಸ್ತ್ರಜ್ಞ, ಮತ್ತು ತರ್ಕಚತುರ ಎಂದೂ ಪರಿಗಣಿಸಲಾಗಿತ್ತು.[೮][೯] - ಈ ಬಹುಮುಖ ಪಂಡಿತ ಭಾರತದ ಸಂಸ್ಕೃತಿಯ ಮೇಲೆ ಪ್ರಬಲವಾದ ಪ್ರಭಾವವನ್ನು ಬೀರಿದ ಎನ್ನಬಹುದು.[೧೦][೧೧]

ಕಾಶ್ಮೀರದ ಕಣಿವೆ[೧೨] ಯಲ್ಲಿನ ವಿದ್ವಾಂಸರು ಮತ್ತು ಅನುಭಾವಿಗಳ ಕುಟುಂಬದಲ್ಲಿ ಜನಿಸಿದ ಆತ, ಹದಿನೈದಕ್ಕೂ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಹಾಗೂ ಗುರುಗಳ ಮಾರ್ಗದರ್ಶನದಡಿಯಲ್ಲಿ, ಅವನ ಕಾಲದ ತತ್ತ್ವಶಾಸ್ತ್ರ ಹಾಗೂ ಕಲೆಯ ಎಲ್ಲಾ ಪಂಥಗಳನ್ನೂ ಅಭ್ಯಾಸ ಮಾಡಿದ.[೧೩] ತನ್ನ ಸುದೀರ್ಘ ಜೀವನದ ಅವಧಿಯಲ್ಲಿ ಆತ 35ಕ್ಕೂ ಹೆಚ್ಚಿನ ಕೃತಿಗಳನ್ನು ಸಂಪೂರ್ಣಗೊಳಿಸಿದ್ದು, ಅವುಗಳ ಪೈಕಿ ಅತಿ ದೊಡ್ಡದು ಹಾಗೂ ಹೆಚ್ಚು ಪ್ರಖ್ಯಾತವಾಗಿರುವುದು ತಂತ್ರಲೋಕ ಎಂಬ ಕೃತಿ. ತ್ರೈಕ ಮತ್ತು ಕೌಲಗಳ (ಇಂದು ಇದು ಕಾಶ್ಮೀರ ಶೈವಧರ್ಮ ಎಂದು ಹೆಸರಾಗಿದೆ) ಎಲ್ಲಾ ತಾತ್ವಿಕ ಮತ್ತು ಕಾರ್ಯಸಾಧ್ಯ ಅಥವಾ ಪ್ರಾಯೋಗಿಕ ಮಗ್ಗಲುಗಳ ಮೇಲೆ ಬೆಳಕು ಚೆಲ್ಲಿರುವ ಈ ಕೃತಿಯು ಒಂದು ವಿಶ್ವಕೋಶೀಯ ಪ್ರಕರಣಗ್ರಂಥವಾಗಿದೆ. ಭರತ ಮುನಿಯ ನಾಟ್ಯಶಾಸ್ತ್ರ ಮೇಲಿನ ಈತನ ಸುಪ್ರಸಿದ್ಧ ಅಭಿನವಭಾರತಿ ಭಾಷ್ಯ ಅಥವಾ ವ್ಯಾಖ್ಯಾನವು ಸೌಂದರ್ಯಮೀಮಾಂಸೆಯ ತತ್ತ್ವಶಾಸ್ತ್ರದ ಕ್ಷೇತ್ರದಲ್ಲಿನ ಈತನ ಅತ್ಯಂತ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ.[೧೪]

ಮುಸ್ಲಿಂ ಆಡಳಿತ[ಬದಲಾಯಿಸಿ]

ಶ್ರೀನಗರದಲ್ಲಿನ ಝೀನ್-ಉಲ್-ಅಬ್-ಉದ್-ದೀನ್‌ರವರ ಗೋರಿಯ (ಹಿಂದೊಮ್ಮೆ ಒಂದು ಹಿಂದೂ ದೇವಸ್ಥಾನವಾಗಿತ್ತು) ಪ್ರಾಕಾರದ ಪ್ರವೇಶದ್ವಾರ.ಸಂಭವನೀಯ ದಿನಾಂಕ A.D. 400 ರಿಂದ 500, 1868. ಜಾನ್‌ ಬರ್ಕ್‌. ಓರಿಯೆಂಟಲ್ ಅಂಡ್ ಇಂಡಿಯಾ ಆಫೀಸ್ ಕಲೆಕ್ಷನ್‌. ಬ್ರಿಟಿಷ್ ಲೈಬ್ರರಿ.

ಕಾಶ್ಮೀರದ ಮುಸ್ಲಿಮರು ಹಾಗೂ ಹಿಂದೂಗಳು ಸೌಹಾರ್ದತೆಯಲ್ಲಿ ಜೀವನ ಸಾಗಿಸುತ್ತಿದ್ದರು. ಏಕೆಂದರೆ, ಕಾಶ್ಮೀರದಲ್ಲಿನ ಮುಸ್ಲಿಮರು ಅನುಸರಿಸುತ್ತಿದ್ದ ಸೂಫಿ-ಮಹಮ್ಮದೀಯ ಜೀವನಮಾರ್ಗವು ಕಾಶ್ಮೀರಿ ಪಂಡಿತರ ಋಷಿ ಸಂಪ್ರದಾಯದೊಂದಿಗೆ ಪೂರಕವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಸ್ಥಳೀಯ ಸಾಧು-ಸಂತರನ್ನು ಪೂಜಿಸುವ ಹಾಗೂ ಒಂದೇ ಪವಿತ್ರ ಸ್ಥಳಗಳಲ್ಲಿ ಪ್ರಾರ್ಥಿಸುವ ಸಮನ್ವಯ ಸಂಸ್ಕೃತಿಯ ಕಡೆಗೆ ಇದು ಕರೆದೊಯ್ದಿತು.[ಸೂಕ್ತ ಉಲ್ಲೇಖನ ಬೇಕು]. ಆ ಸಮಯದಲ್ಲಿ ಕಶ್ಘರ‍್ ಲಡಾಖ್‌ನ ರಾಜಕುಮಾರನಾಗಿದ್ದ ರಿಂಚನ್‌ ಷಾನನ್ನು ಮಹಮ್ಮದೀಯ ಜೀವನಶೈಲಿಗೆ ಪರಿರ್ತಿಸುವಲ್ಲಿ ಯಶಸ್ವಿಯಾದ ಪ್ರಖ್ಯಾತ ಸೂಫಿಸಂತ ಬುಲ್‌ಬುಲ್‌ ಷಾ, ಸೂಫಿಯಾನಾ ಎಂಬ ಸಂಯೋಜಿತ ಸಂಸ್ಕೃತಿಯ ಸಂಸ್ಥಾಪನೆಗೆ ಕಾರಣನಾದ. ಈ ಆಡಳಿತದ ಅಡಿಯಲ್ಲಿ, ಮುಸ್ಲಿಂ, ಹಿಂದೂ ಮತ್ತು ಬೌದ್ಧ ಕಾಶ್ಮೀರಿಗಳು ಸಾಮಾನ್ಯವಾಗಿ ನೆಮ್ಮದಿಯಿಂದ ಸಹಜೀವನ ನಡೆಸಿದ್ದರು. ಆದಾಗ್ಯೂ, ಕಾಲಾನಂತರದಲ್ಲಿ ಸೂಫಿಯಾನಾ ಆಡಳಿತವು ಸಂಪೂರ್ಣವಾಗಿ ಮುಸ್ಲಿಂ ಸಾರ್ವಭೌಮರಿಗೆ ದಾರಿಮಾಡಿಕೊಟ್ಟಿತು.

ಸುಲ್ತಾನ್ ಝೈನ್-ಉಲ್-ಅಬಿದಿನ್‌ನಂತಹ (ಸುಮಾರು 1423-1474) ಕೆಲವೊಂದು ಕಾಶ್ಮೀರಿ ಆಡಳಿತಗಾರರು ಅಕ್ಬರ್‌ನನ್ನು ಹೋಲುವ ರೀತಿಯಲ್ಲಿ ಸರ್ವಧರ್ಮ ಸಹಿಷ್ಣುಗಳಾಗಿದ್ದರು. ಆದರೂ, ಕಾಶ್ಮೀರದ ಹಲವಾರು ಮುಸ್ಲಿಂ ಆಡಳಿತಗಾರರು ಪರಧರ್ಮಸಹಿಷ್ಣುಗಳಾಗಿರಲಿಲ್ಲ. ಇಂಥವರ ಪೈಕಿ ಕಾಶ್ಮೀರದ ಸುಲ್ತಾನ್ ಸಿಕಂದರ‍್ ಬಟ್ಷಿಕಾನ್ (AD 1389-1413) ಅತ್ಯಂತ ನೀಚ ಎಂದು ಪರಿಗಣಿಸಲ್ಪಟ್ಟಿದ್ದಾನೆ. ಆತನ ಅನೇಕ ದುಷ್ಕೃತ್ಯಗಳನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಸಿಕಂದರ್‌ನು ಹಿಂದೂಗಳಿಗೆ ಉಪದ್ರವ ಕೊಟ್ಟು ಗೋಳಾಡಿಸಿದ್ದೇ ಅಲ್ಲದೇ, ಕಾಶ್ಮೀರದಲ್ಲಿ ಮುಸ್ಲಿಮರನ್ನು ಹೊರತುಪಡಿಸಿದ ಯಾರನ್ನೇ ಆಗಲಿ ಗಡೀಪಾರು ಮಾಡುವ ಆದೇಶವನ್ನು ಜಾರಿಮಾಡಿದ ಎಂದು ತಾರೀಖ್-ಇ-ಫರಿಶ್ತಾ ಕೃತಿಯು ದಾಖಲಿಸುತ್ತದೆ. ಎಲ್ಲಾ "ಬಂಗಾರದ ಮತ್ತು ಬೆಳ್ಳಿಯ ಮೂರ್ತಿಗಳನ್ನು" ಒಡೆದುಹಾಕುವಂತೆಯೂ ಆತ ಆಜ್ಞೆಮಾಡಿದ. ತಾರೀಖ್-ಇ-ಫರಿಶ್ತಾ ಕೃತಿಯು ತನ್ನ ಅಭಿಪ್ರಾಯವನ್ನು ಮುಂದುವರೆಸುತ್ತಾ, "ಬಹುಪಾಲು ಬ್ರಾಹ್ಮಣರು ತಮ್ಮ ಧರ್ಮವನ್ನು ತೊರೆಯುವ ಅಥವಾ ತಮ್ಮ ದೇಶವನ್ನು ತೊರೆಯುವ ಬದಲಿಗೆ ಸ್ವತಃ ವಿಷ ಸೇವಿಸಿದರೆ, ಮತ್ತೆ ಕೆಲವರು ತಮ್ಮ ಸ್ವಂತ ಮನೆಗಳಿಂದ ಹೊರಬಿದ್ದು ಗುಳೆಹೊರಟರು, ಇನ್ನು ಕೆಲವರು ತಪ್ಪಿಸಿಕೊಂಡರು. ಬ್ರಾಹ್ಮಣರು ದೇಶಬಿಟ್ಟು ಹೋದ ನಂತರ, ಕಾಶ್ಮೀರದಲ್ಲಿನ ಎಲ್ಲಾ ದೇವಾಸ್ಥಾನಗಳನ್ನು ಕೆಡವಿ ಉರುಳಿಸಬೇಕೆಂದು ಸಿಕಂದರ‍್ ಆಜ್ಞೆಮಾಡಿದ. ಕಾಶ್ಮೀರದಲ್ಲಿನ ಎಲ್ಲಾ ಮೂರ್ತಿಗಳನ್ನೂ ಒಡೆದುಹಾಕುವ ಮೂಲಕ, ‘ವಿಗ್ರಹಗಳ ಭಂಜಕ’ಎಂಬ ಬಿರುದನ್ನು (ಸಿಕಂದರ‍್) ಸಂಪಾದಿಸಿದ" ಎಂದು ತಿಳಿಸುತ್ತದೆ.[೧೫]

ಕಾಶ್ಮೀರದ ರಾಜರ ಕುರಿತಾದ ರಾಜತರಂಗಿಣಿ ಎಂಬ ಛಂದೋಬದ್ಧ ದಾಖಲೆ ಪುಸ್ತಕವು ಇದುವರೆಗೆ ಪತ್ತೆಯಾಗಿರುವ ಸಂಸ್ಕೃತದ ಏಕೈಕ ಸಂಯೋಜಿತ ಕೃತಿಯಾಗಿದೆ ಎಂದು ಪ್ರೊಫೆಸರ‍್ ಎಚ್‌.ಎಚ್‌. ವಿಲ್ಸನ್‌ ದೃಢವಾಗಿ ಪ್ರತಿಪಾದಿಸಿದ್ದು, ಯಾವುದೇ ಔಚಿತ್ಯ ಅಥವಾ ಯುಕ್ತತೆಯೊಂದಿಗಿನ ಅಂಕಿತದ "ಇತಿಹಾಸ"ವನ್ನು ಈ ಕೃತಿಗೆ ಅನ್ವಯಿಸಬಹುದಾಗಿದೆ. 1588ರಲ್ಲಿ ಕಾಶ್ಮೀರವನ್ನು ಅಕ್ಬರ್‌ನು ಆಕ್ರಮಿಸಿದ ಸಂದರ್ಭದಲ್ಲಿ, ಈ ಕೃತಿಯ ಒಂದು ಪ್ರತಿಯನ್ನು ಚಕ್ರವರ್ತಿಗೆ ಅರ್ಪಿಸಿದಾಗ ಮುಸ್ಲಿಮರಿಗೆ ಇದರ ಕುರಿತು ಮೊಟ್ಟಮೊದಲಿಗೆ ತಿಳಿದುಬಂತು. ಅವನ ಆದೇಶದ ಅನುಸಾರ ಈ ಕೃತಿಯನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಲಾಯಿತು. ಈ ಪರ್ಷಿಯನ್ ಭಾಷಾಂತರಿತ ಕೃತಿಯಿಂದ ಆಯ್ದುಕೊಳ್ಳಲಾಗಿರುವ ಅದರ ಹೂರಣದ ಅಥವಾ ವಿಷಯಸೂಚಿಯ ಸಾರಾಂಶವನ್ನು ಐನ್-ಇ-ಅಕ್ಬರಿ ಕೃತಿಯಲ್ಲಿ ಅಬುಲ್ ಫಜಲ್ ನೀಡಿದ್ದಾನೆ. ರಾಜತರಂಗಿಣಿ ಕೃತಿಯು ಸುಮಾರು 12ನೇ ಶತಮಾನದ ಮಧ್ಯಭಾಗದಲ್ಲಿ ಕಲ್ಹಣನಿಂದ ಬರೆಯಲ್ಪಟ್ಟಿತು. ಆರು ಪುಸ್ತಕಗಳ ರೂಪದಲ್ಲಿರುವ ಅವನ ಕೃತಿಯು ಈಗ ಅಲಭ್ಯವಾಗಿರುವ ಪ್ರಾಚೀನ ಬರಹಗಳ ಬಳಕೆಯನ್ನು ಮಾಡಿಕೊಂಡಿದೆ.

ಕಾಶ್ಮೀರದ ಚರಿತ್ರಾ ಲೇಖನಗಳನ್ನು ದಾಖಲಿಸುವ ನಾಲ್ಕು ಚರಿತ್ರೆಗಳ ಒಂದು ಸರಣಿಯ ಪೈಕಿ ರಾಜತರಂಗಿಣಿ ಕೃತಿ ಮೊದಲನೆಯದು. ಅತಿ ಮುಂಚಿನ ಕಾಲದ ಸಾಂಪ್ರದಾಯಿಕ ಚರಿತ್ರೆಯ ಒಂದು ವ್ಯಾಖ್ಯಾನದೊಂದಿಗೆ ಪ್ರಾರಂಭಿಸಿ, ಸಂಗ್ರಾಮ ದೇವನ, (ಸುಮಾರು 1006 AD) ಆಳ್ವಿಕೆಯ ಅವಧಿಯವರೆಗೆ ರಾಜತರಂಗಿಣಿ ಯು ವಿವರಗಳನ್ನು ನೀಡುತ್ತದೆ. ಜೋನರಾಜನಿಂದ ರಚಿಸಲ್ಪಟ್ಟಿರುವ ಎರಡನೇ ಕೃತಿಯು, ಕಲ್ಹಣ ಯಾವ ಭಾಗದಲ್ಲಿ ನಿಲ್ಲಿಸಿದ್ದನೋ ಅಲ್ಲಿಂದ ಚರಿತ್ರೆಯನ್ನು ಮುಂದುವರಿಸುತ್ತದೆ ಮತ್ತು ಮುಸ್ಲಿಂ ಆಳ್ವಿಕೆಯ ಅವಧಿಯನ್ನು ಪ್ರವೇಶಿಸಿ, ಝೈನ್-ಉಲ್-ಅಬ್-ಅದ್-ದೀನ್‌ನ, 1412 ಆಳ್ವಿಕೆಯ ಅವಧಿಯವರೆಗಿನ ಆಳ್ವಿಕೆಗಳ ವಿವರಗಳನ್ನು ನೀಡುತ್ತದೆ. ಪಿ. ಶ್ರೀವರ ಎಂಬಾತ 1486ರಲ್ಲಿ ಫಾಹ್ ಷಾಹ್‌ನ ಸೇರ್ಪಡೆಯವರೆಗೆ ದಾಖಲಾತಿಯನ್ನು ಮುಂದುವರೆಸಿದ. ಪ್ರಾಜ್ಞಿಯಾ ಭಟ್ಟ ಎಂಬಾತನಿಂದ ರಚಿಸಲ್ಪಟ್ಟ ರಾಜಾವಳಿಪಾಠಕ ಎಂಬ ಹೆಸರಿನ ನಾಲ್ಕನೇ ಕೃತಿಯು, 1588ರ ವೇಳೆಗೆ ಅಸ್ತಿತ್ವ ಕಂಡಿದ್ದ ಮೊಘಲ್‌ ಚಕ್ರವರ್ತಿ ಅಕ್ಬರ್‌ನ ಆಡಳಿತಕ್ಕೊಳಪಟ್ಟ ಪ್ರದೇಶಗಳಲ್ಲಿ ಕಾಶ್ಮೀರದ ಸೇರ್ಪಡೆಯಾಗುವ ಕಾಲದವರೆಗಿನ ಚರಿತ್ರೆಯನ್ನು ಸಂಪೂರ್ಣಗೊಳಿಸುತ್ತದೆ.

ಸಿಖ್ ಆಡಳಿತ ಮತ್ತು ರಾಜ ಸಂಸ್ಥಾನ[ಬದಲಾಯಿಸಿ]

ಚಿತ್ರ:NWFP-Kashmir1909-a.jpg
ಕಾಶ್ಮೀರ ಮತ್ತು ಜಮ್ಮುವಿನ ರಾಜರ ಸಂಸ್ಥಾನದ 1909ರ ಭೂಪಟ. ಪ್ರಾಂತ್ಯಗಳು, ಪ್ರಮುಖ ನಗರಗಳು, ನದಿಗಳು, ಮತ್ತು ಪರ್ವತಗಳ ಹೆಸರುಗಳಿಗೆ ಕೆಂಪು ಬಣ್ಣದಲ್ಲಿ ಅಡಿಗೆರೆ ಹಾಕಲಾಗಿದೆ.

19ನೇ ಶತಮಾನದ ಆರಂಭದ ವೇಳೆಗೆ, ಆಫ್ಘಾನಿಸ್ತಾನದ ದುರಾನಿ ಚಕ್ರಾಧಿಪತ್ಯ, ಮತ್ತು ಮುಘಲರು ಹಾಗೂ ಆಫ್ಘನ್ನರ ಅಡಿಯಲ್ಲಿನ ನಾಲ್ಕು ಶತಮಾನಗಳ ಮುಸ್ಲಿಂ ಆಡಳಿತದ ನಿಯಂತ್ರಣದಿಂದ, ಜಯಶಾಲಿಯಾದ ಸಿಖ್‌ ಸೇನಾನಿಗಳಿಗೆ ಕಾಶ್ಮೀರ ಕಣಿವೆಯು ಹಸ್ತಾಂತರವಾಗಿತ್ತು. ಇದಕ್ಕೂ ಮುಂಚೆ 1780ರಲ್ಲಿ, ಜಮ್ಮುವಿನ ರಾಜನಾಗಿದ್ದ ರಣಜಿತ್‌ ದೇವ್‌ನ ಮರಣಾನಂತರ, ಜಮ್ಮು ರಾಜ್ಯವನ್ನು (ಕಾಶ್ಮೀರ ಕಣಿವೆಯ ದಕ್ಷಿಣದ ಭಾಗ) ಲಾಹೋರ್‌ನ ರಣಜಿತ್‌ ಸಿಂಗ್‌ನ ನೇತೃತ್ವದಲ್ಲಿ ಸಿಖ್ಖರು ವಶಪಡಿಸಿಕೊಂಡರು ಮತ್ತು ಇದಾದ ನಂತರ, 1846ರವರೆಗೆ ಈ ಭಾಗವು ಸಿಖ್ಖರ ಅಧಿಕಾರದ ಬಲಕ್ಕೆ ಒಂದು ಅಧೀನರಾಜ್ಯವಾಗಿ ಮಾರ್ಪಟ್ಟಿತು.[೧೬] ಆನಂತರ, ರಣಜಿತ್ ದೇವ್‌ನ ಸೋದರಮೊಮ್ಮಗ ಗುಲಾಬ್‌ ಸಿಂಗ್‌ನು, ರಣಜಿತ್‌ ಸಿಂಗ್‌ನ ಆಸ್ಥಾನದಲ್ಲಿ ಸೇವಾವಕಾಶವನ್ನು ಪಡೆದ. ನಂತರದ ಆಂದೋಳನಗಳಲ್ಲಿ, ಅದರಲ್ಲೂ ವಿಶೇಷವಾಗಿ 1819ರಲ್ಲಿ ಸಿಖ್ಖರ ಸೇನೆಯಿಂದ ಕಾಶ್ಮೀರ ಕಣಿವೆಯ ಸೇರ್ಪಡೆಯಾಗುವ ಸಂದರ್ಭದಲ್ಲಿ ಆತ ತನ್ನ ಮಹತ್ವವನ್ನು ತೋರಿಸಿಕೊಂಡ. ಗುಲಾಬ್‌ ಸಿಂಗ್‌ನ ಈ ತೆರನಾದ ಸೇವೆಗಳನ್ನು ಪರಿಗಣಿಸಿ ಆತನನ್ನು 1820ರಲ್ಲಿ ಜಮ್ಮುವಿನ ಮಂಡಲಾಧಿಪತಿಯನ್ನಾಗಿ ನೇಮಿಸಲಾಯಿತು.

ಝೊರಾವರ‍್ ಸಿಂಗ್ ಎಂಬ ತನ್ನ ಅಧಿಕಾರಿಯ ನೆರವಿನೊಂದಿಗೆ, ಜಮ್ಮುವಿನ ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿದ್ದ ಪ್ರದೇಶಗಳಾದ ಲಡಾಖ್‌ ಮತ್ತು ಬಾಲ್ಟಿಸ್ತಾನ್‌ಗಳನ್ನು ಶೀಘ್ರದಲ್ಲಿಯೇ ಗುಲಾಬ್‌ ಸಿಂಗ್‌ ವಶಪಡಿಸಿಕೊಂಡ.[೧೬] 1845ರಲ್ಲಿ, ಮೊದಲನೇ ಆಂಗ್ಲೋ-ಸಿಖ್ ಯುದ್ಧವು ಪ್ರಾರಂಭವಾಯಿತು, ಮತ್ತು ಸರ‍್ ಹೆನ್ರಿ ಲಾರೆನ್ಸ್‌ನ ಓರ್ವ ಪ್ರಯೋಜನಕಾರಿ ಮಧ್ಯವರ್ತಿ ಹಾಗೂ ನಂಬಿಕಸ್ತ ಸಲಹೆಗಾರನಾಗಿ ಆತ ಕಾಣಿಸಿಕೊಂಡ ಸೋಬ್ರಾನ್‌ನ ಕದನದವರೆಗೆ (1846) ತಾನು ತಟಸ್ಥನಾಗಿರುವಂತೆ ಗುಲಾಬ್‌ ಸಿಂಗ್‌ ಸಂಚು ರೂಪಿಸಿದ.

ಎರಡು ಒಪ್ಪಂದಗಳು ತೀರ್ಮಾನವಾಗಿದ್ದವು. ಮೊದಲನೆಯ ಒಪ್ಪಂದದ ವೇಳೆಗೆ, ಒಂದು ಕೋಟಿ ರೂಪಾಯಿಗಳಷ್ಟಕ್ಕೆ ಸಮನಾದ ನಷ್ಟ ಪರಿಹಾರಧನವಾಗಿ, ಬಿಯಾಸ್‌ ಮತ್ತು ಇಂಡಸ್‌ ನಡುವಿನ ಬೆಟ್ಟದ ದೇಶಗಳನ್ನು ಲಾಹೋರ್‌ ಸಂಸ್ಥಾನವು (ಅಂದರೆ ಪಶ್ಚಿಮ ಪಂಜಾಬ್‌) ಬ್ರಿಟಿಷರಿಗೆ ಹಸ್ತಾಂತರಿಸಿತು; ಎರಡನೆಯ ಒಪ್ಪಂದದ ವೇಳೆಗೆ[೧೭], ಇಂಡಸ್‌ನ ಪೂರ್ವ ಮತ್ತು ರಾವಿಯ ಪಶ್ಚಿಮದಲ್ಲಿ ಸ್ಥಿತವಾಗಿರುವ ಗುಡ್ಡಗಾಡು ಅಥವಾ ಪರ್ವತಶ್ರೇಣಿಯನ್ನೊಳಗೊಂಡ ದೇಶವನ್ನು (ಅಂದರೆ ಕಾಶ್ಮೀರದ ಕಣಿವೆ) 75 ಲಕ್ಷ ರೂಪಾಯಿಗಳಿಗೆ ಪ್ರತಿಯಾಗಿ ಬ್ರಿಟಿಷರು ಗುಲಾಬ್‌ ಸಿಂಗ್‌ನಿಗೆ ವರ್ಗಾಯಿಸಿದರು.[೧೬] 1857ರಲ್ಲಿ ಗುಲಾಬ್‌ ಸಿಂಗ್‌ನ ಮರಣಾನಂತರ ಅವನ ಮಗ ರಣಬೀರ‍್ ಸಿಂಗ್‌ನು, ಹಂಝಾ, ಗಿಲ್‌ಗಿಟ್‌ ಮತ್ತು ನಗರ್‌ಗಳ ಅಮೀರನ ಅಧಿಕಾರ ವ್ಯಾಪ್ತಿಯ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಿದ.

ಚಿತ್ರ:Gulab singh1847.jpg
ಕಾಶ್ಮೀರದ ಪ್ರಾಂತ್ಯಗಳನ್ನು ಖರೀದಿಸುವ ಮೂಲಕ ಮಹಾರಾಜನಾಗಿ ಮಾರ್ಪಟ್ಟ, ಮಹಾರಾಜ ಗುಲಾಬ್ ಸಿಂಗ್‌ನು ಅಮೃತಸರ ಒಪ್ಪಂದಕ್ಕೆ ಸಹಿಹಾಕಿದ ಒಂದು ವರ್ಷದ ನಂತರ 1847ರಲ್ಲಿ ತೆಗೆಯಲಾದ ಆತನ ಭಾವಚಿತ್ರ. "ಇಂಡಸ್ ನದಿಯ ಪೂರ್ವದಿಕ್ಕಿಗೆ ಮತ್ತು ರಾವಿ ನದಿಯ ಪಶ್ಚಿಮ ದಿಕ್ಕಿಗೆ" ಇದ್ದ ಈ ಪ್ರಾಂತ್ಯವನ್ನು [೧೮] ಲಕ್ಷ ರೂಪಾಯಿಗಳನ್ನು ನೀಡಿ ಬ್ರಿಟಿಷರಿಂದ ಆತ ಖರೀದಿಸಿದ (ಕಲಾವಿದ: ಜೇಮ್ಸ್‌ ಡಫೀಲ್ಡ್‌ ಹಾರ್ಡಿಂಗ್).

ಕಾಶ್ಮೀರ ಮತ್ತು ಜಮ್ಮುವಿನ ರಾಜ ಸಂಸ್ಥಾನ ವು (ಆಗ ಇದನ್ನು ಹೀಗೆಯೇ ಕರೆಯಲಾಗುತ್ತಿತ್ತು) 1820 ಮತ್ತು 1858ರ ನಡುವೆ ರಚಿಸಲ್ಪಟ್ಟಿತು ಮತ್ತು "ಅದರ ಸಂಯೋಜನೆಯು ಒಂದು ರೀತಿಯಲ್ಲಿ ಕೃತಕವಾಗಿತ್ತು. ಅದರ ಅಭಿವೃದ್ಧಿ ಸ್ವರೂಪ ಅಪೂರ್ಣವಾಗಿತ್ತು. ಅಂದರೆ, ತನ್ನದೇ ಆದ ಒಂದು ಸಂಪೂರ್ಣ ಸುಸಂಬದ್ಧ ಗುರುತು ಅದಕ್ಕೆ ದಕ್ಕಲಿಲ್ಲ. ಭಿನ್ನಜಾತಿಯ ಮೂಲಗಳಿಂದ ಇದು ರೂಪುಗೊಂಡಿದ್ದೇ ಇದರ ಹಿಂದಿದ್ದ ಒಂದು ಆಂಶಿಕ ಕಾರಣವಾಗಿತ್ತು. ಮತ್ತೊಂದು ಆಂಶಿಕ ಕಾರಣವೆಂದರೆ, ಚಕ್ರಾಧಿಪತ್ಯದ ಮಿತಿಗಳಿಗೆ ಸಂಬಂಧಿಸಿದಂತೆ ಅದು ಅನುಭವಕ್ಕೆ ತಂದುಕೊಂಡ ನಿರಂಕುಶ ವರ್ತನೆಯಾಗಿತ್ತು."[೧೯] ಭಿನ್ನವಾದ ವಲಯಗಳು, ಧರ್ಮಗಳು, ಮತ್ತು ಜನಾಂಗೀಯತೆಗಳನ್ನು ಇದು ಸಂಯೋಜಿಸಿತು: ಪೂರ್ವಭಾಗದಲ್ಲಿ, ಲಡಾಖ್‌ ಜನಾಂಗೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಟಿಬೆಟ್‌ನಂತೆಯೇ ಇತ್ತು ಹಾಗೂ ಇದರ ನಿವಾಸಿಗಳು ಬೌದ್ಧಧರ್ಮವನ್ನು ಅನುಸರಿಸಿದರು; ದಕ್ಷಿಣ ಭಾಗದಲ್ಲಿ, ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರ ಸಮ್ಮಿಶ್ರ ಜನಸಂಖ್ಯೆಯನ್ನು ಜಮ್ಮು ಹೊಂದಿತ್ತು; ಅತಿಹೆಚ್ಚಿನ ಜನಸಂಖ್ಯೆಯಿಂದ ತುಂಬಿತುಳುಕುತ್ತಿದ್ದ ಮಧ್ಯಭಾಗದ ಕಾಶ್ಮೀರ ಕಣಿವೆಯಲ್ಲಿ, ಸುನ್ನಿ ಮುಸ್ಲಿಮರ ಜನಸಂಖ್ಯೆ ಅಗಾಧ ಪ್ರಮಾಣದಲ್ಲಿತ್ತಾದರೂ, ಪುಟ್ಟದಾಗಿದ್ದರೂ ಪ್ರಭಾವಶಾಲಿಯಾದ ಹಿಂದೂ ಅಲ್ಪಸಂಖ್ಯಾತರಾದ ಕಾಶ್ಮೀರಿ ಬ್ರಾಹ್ಮಣರು ಅಥವಾ ಪಂಡಿತರು ಅಲ್ಲಿದ್ದರು; ಈಶಾನ್ಯ ಭಾಗದಲ್ಲಿದ್ದ, ಜನನಿಬಿಡತೆ ಹೊಂದಿಲ್ಲದ ಬಾಲ್ಟಿಸ್ತಾನ್‌ನಲ್ಲಿ ಲಡಾಖ್‌ನೊಂದಿಗೆ ಜನಸಂಖ್ಯೆಯು ಜನಾಂಗೀಯ ಸಂಬಂಧವನ್ನು ಹೊಂದಿದ್ದರೂ, ಅದು ಅಭ್ಯಾಸಮಾಡಿದ್ದು ಷಿಯಾ ಇಸ್ಲಾಂನ ಆಚರಣೆಗಳನ್ನು; ಉತ್ತರ ಭಾಗದಲ್ಲಿದ್ದ, ನಿಬಿಡವಾದ ಜನಸಂಖ್ಯೆಯನ್ನು ಹೊಂದಿದ್ದ ಗಿಲ್‌ಗಿಟ್‌ ಪ್ರದೇಶವು ವೈವಿಧ್ಯಮಯ ಪ್ರದೇಶವಾಗಿದ್ದು, ಬಹುಪಾಲು ಷಿಯಾ ಸಮೂಹಗಳನ್ನು ಒಳಗೊಂಡಿತ್ತು; ಮತ್ತು ಪಶ್ಚಿಮ ಭಾಗದಲ್ಲಿದ್ದ ಪೂಂಛ್‌ ಪ್ರದೇಶವು ಮುಸ್ಲಿಮರಿಂದ ತುಂಬಿದ್ದರೂ, ಕಾಶ್ಮೀರ ಕಣಿವೆಗಿಂತ ಭಿನ್ನವಾದ ಜನಾಂಗೀಯತೆಯನ್ನು ಹೊಂದಿತ್ತು.[೧೯] ಬ್ರಿಟಿಷರ ಪಾಳಯದಲ್ಲಿ ಕಾಶ್ಮೀರವು ಗುರುತಿಸಿಕೊಂಡ 1857ರ ಭಾರತದ ದಂಗೆಯ ನಂತರ, ಮತ್ತು ಗ್ರೇಟ್‌ ಬ್ರಿಟನ್‌ ನೇರ ಆಡಳಿತವನ್ನು ವಹಿಸಿಕೊಂಡ ನಂತರದ ಬೆಳವಣಿಗೆಯಲ್ಲಿ, ಕಾಶ್ಮೀರದ ರಾಜ ಸಂಸ್ಥಾನವು ಬ್ರಿಟಿಷ್ ಸಾಮ್ರಾಜ್ಯದ ಸಾರ್ವಭೌಮತ್ವದ ಅಡಿಯಲ್ಲಿ ಬಂದಿತು.

1947 ಮತ್ತು 1948ರ ವರ್ಷ[ಬದಲಾಯಿಸಿ]

ಭಾರತೀಯ ಸಾಮ್ರಾಜ್ಯದ 1901ರ ಜನಗಣತಿಯಲ್ಲಿನ, ಜಿಲ್ಲಾವಾರು ಅನುಸಾರವಾಗಿ ಚಾಲ್ತಿಯಲ್ಲಿರುವ ಧರ್ಮಗಳು

1925ರಲ್ಲಿ ಕಾಶ್ಮೀರದ ಸಿಂಹಾಸನವನ್ನು ಆರೋಹಣಮಾಡಿದ್ದ ರಣಬೀರ‍್ ಸಿಂಗ್‌ನ ಮೊಮ್ಮಗ ಹರಿ ಸಿಂಗ್, ಉಪಖಂಡದಲ್ಲಿನ ಬ್ರಿಟಿಷರ ಆಳ್ವಿಕೆಯು ಸಮಾಪ್ತವಾದ ನಂತರ ಮತ್ತು ಅದರ ತರುವಾಯ ಬ್ರಿಟಿಷರ ನಿಯಂತ್ರಣದಲ್ಲಿದ್ದ ಭಾರತದ ಸಾಮ್ರಾಜ್ಯವು ಸ್ವತಂತ್ರವಾದ ಹೊಸ ಭಾರತದ ಒಕ್ಕೂಟ ಮತ್ತು ಪಾಕಿಸ್ತಾನದ ರಾಷ್ಟ್ರಗಳಾಗಿ ವಿಭಜನೆಗೆ ಒಳಗಾದ ಸಮಯದಲ್ಲಿ 1947ರಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಾರ್ವಭೌಮನಾಗಿದ್ದ. ಪಾಕಿಸ್ತಾನ ಅಥವಾ ಭಾರತವನ್ನು ಆಯ್ಕೆಮಾಡಿಕೊಳ್ಳುವ, ಅಥವಾ ವಿಶೇಷ ಸನ್ನಿವೇಶಗಳಲ್ಲಿ ಸ್ವತಂತ್ರವಾಗಿ ಉಳಿಯುವ ಆಯ್ಕೆಯನ್ನು ರಾಜ ಸಂಸ್ಥಾನದ ಆಡಳಿತಗಾರರಿಗೆ ನೀಡಬೇಕು ಎಂಬುದಕ್ಕೆ ವಿಭಜನಾ ಪ್ರಕ್ರಿಯೆಗಾಗಿರುವ ಪಕ್ಷಗಳ ಸ್ಥಾನದಲ್ಲಿದ್ದ ಎರಡೂ ದೇಶಗಳು ಒಪ್ಪಿದ್ದವು.

1947ರಲ್ಲಿ, ಕಾಶ್ಮೀರದ ಜನಸಂಖ್ಯೆಯ "ಶೇಕಡಾ 77ರಷ್ಟು ಭಾಗವು ಮುಸ್ಲಿಮರಿಂದ ಕೂಡಿತ್ತು ಮತ್ತು ತನ್ನೊಂದು ಗಡಿಯನ್ನು ಅದು ಪಾಕಿಸ್ತಾನದೊಂದಿಗೆ ಹಂಚಿಕೊಂಡಿತ್ತು. ಆದ್ದರಿಂದ, ಬ್ರಿಟಿಷ್‌ ಸಾರ್ವಭೌಮತೆಯು ಆಗಸ್ಟ್‌ನ 14-15ರಂದು ಕೊನೆಗೊಂಡಾಗ, ಮಹಾರಾಜನು ಪಾಕಿಸ್ತಾನವನ್ನು ಅಂಗೀಕರಿಸಬಹುದು ಅಥವಾ ಪಾಕಿಸ್ತಾನಕ್ಕೆ ಸೇರಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ರೀತಿ ಮಾಡಲು ಆತ ಹಿಂದುಮುಂದು ನೋಡಿದಾಗ, ತನ್ನ ಆಡಳಿತಗಾರನನ್ನು ಬೆದರಿಸಿ ಇದಕ್ಕೆ ಒಪ್ಪಿಸುವ ಅಥವಾ ಶರಣಾಗತನನ್ನಾಗಿಸುವ ಅಸ್ತ್ರವಾಗಿ ಪಾಕಿಸ್ತಾನವು ಗೆರಿಲ್ಲಾ ದಾಳಿಯನ್ನು ಪ್ರಾರಂಭಿಸಿತು. ಇದರ ಬದಲಿಗೆ ಮೌಂಟ್‌ಬ್ಯಾಟನ್‌ರನ್ನು[೨೦] ಭೇಟಿಮಾಡಿದ ಮಹಾರಾಜ ಸಹಾಯಕ್ಕಾಗಿ ಮನವಿ ಸಲ್ಲಿಸಿದ ಮತ್ತು ಆಡಳಿತಗಾರನು ಭಾರತಕ್ಕೆ ಸೇರಿಕೊಳ್ಳಬೇಕು ಎಂಬ ಷರತ್ತಿನ ಮೇಲೆ ಸದರಿ ಗೌರ್ನರ‍್-ಜನರಲ್‌ ಒಪ್ಪಿಗೆ ನೀಡಿದರು."[೨೧] ಸೇರ್ಪಡೆಯ ದಸ್ತಾವೇಜು ಒಪ್ಪಂದಕ್ಕೆ ಮಹಾರಾಜನು ಸಹಿ ಹಾಕುತ್ತಿದ್ದಂತೆ, "ಭಾರತೀಯ ಯೋಧರು ಕಾಶ್ಮೀರವನ್ನು ಪ್ರವೇಶಿಸಿದ್ದೇ ಅಲ್ಲದೇ, ರಾಜ್ಯದ ಸಾಕಷ್ಟು ಭಾಗಗಳಿಂದ ಪಾಕಿಸ್ತಾನಿ-ಪ್ರಾಯೋಜಿತ ಅನಿಯತ ಸೈನಿಕರು ಅಥವಾ ದಂಗೆಕೋರರನ್ನು ಓಡಿಸಿದರು. ಈ ಜಗಳದ ಮಧ್ಯಸ್ಥಿಕೆಯನ್ನು ವಹಿಸಲು ಆಗ ವಿಶ್ವಸಂಸ್ಥೆಯನ್ನು ಆಹ್ವಾನಿಸಲಾಯಿತು. ಕಾಶ್ಮೀರಿಗಳ ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು UN ನಿಯೋಗವು ಒತ್ತಾಯಿಸಿದರೆ, ರಾಜ್ಯದ ಎಲ್ಲಾ ಭಾಗಗಳಿಂದ ಅನಿಯತ ಸೈನಿಕರು ಅಥವಾ ದಂಗೆಕೋರರನ್ನು ಖಾಲಿಮಾಡಿಸುವ ತನಕ ಯಾವುದೇ ಜನಮತಸಂಗ್ರಹವು ನಡೆಯುವುದು ಸಾಧ್ಯವಿಲ್ಲ ಎಂದು ಭಾರತವು ಒತ್ತಾಯಿಸಿತು."[೨೧]

1948ರ ಕೊನೆಯ ದಿನಗಳಲ್ಲಿ, UN ನಿಯೋಗದ ಆಶ್ರಯದಲ್ಲಿ ಕದನವಿರಾಮವೊಂದಕ್ಕೆ ಒಪ್ಪಿಗೆ ನೀಡಲಾಯಿತು; ಆದರೂ, UN ಮುಂದಿಟ್ಟಿದ್ದ ಬೇಡಿಕೆಯಂತೆ ಬಹಿರಂಗ ಜನಾಭಿಪ್ರಾಯವನ್ನು ಎಂದಿಗೂ ನಡೆಸಲಿಲ್ಲವಾದ್ದರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟವು,[೨೧] ಮತ್ತು ಇದರ ಪರಿಣಾಮವಾಗಿ 1965 ಮತ್ತು 1999ರಲ್ಲಿ ಕಾಶ್ಮೀರದ ಕುರಿತಾಗಿ ಮತ್ತೆರಡು ಯುದ್ಧಗಳಾದವು. ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜ ಸಂಸ್ಥಾನದ ಸುಮಾರು ಅರ್ಧದಷ್ಟು ಪ್ರದೇಶದ ನಿಯಂತ್ರಣವನ್ನು ಭಾರತ ಹೊಂದಿದ್ದರೆ, ಈ ವಲಯದ ಮೂರನೇ ಒಂದು ಭಾಗದ ನಿಯಂತ್ರಣವು ಪಾಕಿಸ್ತಾನದ ಬಳಿಯಿದ್ದು, ಅದನ್ನು ಉತ್ತರ ಭಾಗದ ಪ್ರದೇಶಗಳು ಮತ್ತು ಅಜಾದ್‌ ಕಾಶ್ಮೀರ ಎಂದು ಕರೆಯಲಾಗುತ್ತದೆ. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದ ಪ್ರಕಾರ, "1947ರ ವಿಭಜನೆಗೆ ಮುಂಚಿತವಾಗಿ ಕಾಶ್ಮೀರದಲ್ಲಿ ನಿಚ್ಚಳವಾದ ಮುಸ್ಲಿಂ ಸಂಖ್ಯಾಬಾಹುಳ್ಯವಿದ್ದರೂ ಮತ್ತು ಪಂಜಾಬ್‌ನ (ಪಾಕಿಸ್ತಾನದಲ್ಲಿರುವುದು) ಮುಸ್ಲಿಂ-ಸಂಖ್ಯಾಬಾಹುಳ್ಯದ ಪ್ರದೇಶದೊಂದಿಗಿನ ಅದರ ಆರ್ಥಿಕ, ಸಾಂಸ್ಕೃತಿಕ, ಮತ್ತು ಭೌಗೋಳಿಕ ಸಂಪರ್ಕವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲು ಸಾಧ್ಯವಿದ್ದರೂ ಸಹ, ವಿಭಜನೆಯ ಅವಧಿಯಲ್ಲಿನ ಹಾಗೂ ನಂತರದ ರಾಜಕೀಯ ಬೆಳವಣಿಗೆಗಳು ಈ ವಲಯದ ಒಂದು ವಿಭಾಗೀಕರಣಕ್ಕೆ ಕಾರಣವಾದವು. ಮೂಲತಃ ಮುಸ್ಲಿಂ ವಾತಾವರಣವಿದ್ದರೂ ಸಹ, ಕಡಿಮೆ ಜನಬಾಹುಳ್ಯತೆಯ, ಪ್ರವೇಶಾವಕಾಶದ ಕೊರತೆಯ, ಮತ್ತು ಆರ್ಥಿಕವಾಗಿ ಬೆಳವಣಿಗೆ ಕಾಣದ ಪ್ರಾಂತ್ಯವು ಪಾಕಿಸ್ತಾನದ ಪಾಲಿಗೆ ಬಂತು. ಕಾಶ್ಮೀರದ ಕಣಿವೆಯಲ್ಲಿ ಸ್ಥಿತವಾಗಿರುವ ಮತ್ತು ಸಂಪೂರ್ಣ ವಲಯದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯಾಬಾಹುಳ್ಯ ಹೊಂದಿದೆಯೆಂದು ಅಂದಾಜಿಸಲಾಗಿರುವ ಅತಿದೊಡ್ಡ ಮುಸ್ಲಿಂ ಸಮೂಹವು, ಝೀಲಂ ಕಣಿವೆಯ ಮಾರ್ಗದ ಮೂಲಕವಿರುವ ಅದರ ಮುಂಚಿನ ಹೊರಹರಿವಿನ ದಾರಿಗಳು ಮುಚ್ಚಲ್ಪಟ್ಟಿರುವುದರಿಂದ, ಭಾರತದ-ಆಡಳಿತ ನಿರ್ವಹಣೆಯಿರುವ ಪ್ರಾಂತ್ಯದಲ್ಲಿ ನೆಲೆಗೊಂಡಿತು.[೨೨]

ಕುನ್‌ಲುನ್‌ ಪರ್ವತಗಳನ್ನು ದಾಟಲು, ಅಕ್ಸಾಯ್‌ ಚಿನ್‌ನಲ್ಲಿನ ಸಂದೆ ಪಟ್ಟಣದ ಸಮೀಪ, ತನ್ನ ಉಗಮ ಸ್ಥಾನದಿಂದ ಉತ್ತರಕ್ಕೆ ಹರಿಯುವ ಕಾರಾಕಾಶ್ ನದಿ (ಕಪ್ಪು ಮಾಸಲು ಹಸಿರು ನದಿ).

UN ಭದ್ರತಾ ಮಂಡಳಿಯು 1948ರ ಜನವರಿ 20ರಂದು ನಿರ್ಣಯ 39ನ್ನು ಅನುಮೋದಿಸಿ, ಈ ತಿಕ್ಕಾಟದ ಕುರಿತು ತನಿಖೆ ನಡೆಸಲು ಒಂದು ವಿಶೇಷ ಆಯೋಗವನ್ನು ಸ್ಥಾಪಿಸಿತು. ಆಯೋಗದ ಶಿಫಾರಸಿನ ತರುವಾಯ, ಭದ್ರತಾ ಮಂಡಳಿಯು 1948ರ ಏಪ್ರಿಲ್‌ 21ರಂದು ನೀಡಿದ ತನ್ನ ಠರಾವು 47ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಆಕ್ರಮಿಸಿರುವ ಪಾಕಿಸ್ತಾನಿ ಸೇನೆಯು ಅಲ್ಲಿಂದ ಹಿಂದೆಗೆಯಬೇಕು ಎಂದು ಆದೇಶಿಸಿತು. ಅಷ್ಟೇ ಅಲ್ಲ, ಕಾಶ್ಮೀರವನ್ನು ಭಾರತಕ್ಕೆ ಸೇರಿಸಬೇಕೋ ಅಥವಾ ಪಾಕಿಸ್ತಾನಕ್ಕೆ ಸೇರಿಸಬೇಕೋ ಎಂಬುದನ್ನು, UNನ ಮೇಲ್ವಿಚಾರಣೆಯ ಅಡಿಯಲ್ಲಿನ ಒಂದು ಬಹಿರಂಗ ಜನಾಭಿಪ್ರಾಯದ ಅನುಸಾರ ನಿರ್ಧರಿಸಬೇಕು ಎಂಬುದೂ ಅದರ ನಿರ್ಧಾರವಾಗಿತ್ತು.

1948ರ ನಂತರದ ಬೆಳವಣಿಗೆಗಳು[ಬದಲಾಯಿಸಿ]

ಕಾಶ್ಮೀರದ ಸ್ಥಳ ಸ್ವರೂಪದ ಭೂಪಟ.

ಕಾಶ್ಮೀರದ ಮುಂಚಿನ ರಾಜ ಸಂಸ್ಥಾನದ ಪೂರ್ವಭಾಗದ ವಲಯವೂ ಸಹ ಗಡಿವಿವಾದದಿಂದ ಸುತ್ತುವರಿಯಲ್ಪಟ್ಟಿತ್ತು. 19ನೇ ಶತಮಾನದ ಅಂತ್ಯ- ಮತ್ತು 20ನೇ ಶತಮಾನದ ಆರಂಭದಲ್ಲಿ ಕಾಶ್ಮೀರದ ಉತ್ತರದ ಗಡಿಪ್ರದೇಶಗಳ ಕುರಿತು ಗ್ರೇಟ್ ಬ್ರಿಟನ್, ಆಫ್ಘಾನಿಸ್ತಾನ ಮತ್ತು ರಷ್ಯಾದ ನಡುವಣ ಒಂದಷ್ಟು ಗಡಿ ಒಪ್ಪಂದಗಳು ಸಹಿಹಾಕಲ್ಪಟ್ಟವಾದರೂ, ಈ ಒಪ್ಪಂದಗಳನ್ನು ಚೀನಾ ಎಂದಿಗೂ ಪುರಸ್ಕರಿಸಲಿಲ್ಲ, ಮತ್ತು 1949ರಲ್ಲಿ ಕಮ್ಯುನಿಸ್ಟ್‌ ಆಡಳಿತ ವಿಧಾನಕ್ಕೆ ಬದಲಾದಾಗಲೂ ಚೀನಾದ ಅಧಿಕೃತ ನಿಲುವು ಬದಲಾಗಲಿಲ್ಲ. 1950ರ ದಶಕದ ಮಧ್ಯಭಾಗದ ವೇಳೆಗೆ, ಚೀನಾದ ಸೇನೆಯು ಲಡಾಖ್‌ನ ಈಶಾನ್ಯ ಭಾಗವನ್ನು ಪ್ರವೇಶಿಸಿತ್ತು.[೨೨]

"ಕ್ಸಿನ್‌ಜಿಯಾಂಗ್‌ ಮತ್ತು ಪಶ್ಚಿಮ ಟಿಬೆಟ್‌ ನಡುವಣ ಉತ್ತಮವಾದ ಸಂವಹನೆಯನ್ನು ಉಂಟುಮಾಡಲು, 1956–57ರ ಹೊತ್ತಿಗೆ ಸೇನೆಯಾಗಲೇ ಅಕ್ಸಾಯ್‌ ಚಿನ್‌ ಪ್ರದೇಶದ ಮೂಲಕ ಒಂದು ಸೇನಾ ರಸ್ತೆಯ ನಿರ್ಮಾಣಕಾರ್ಯವನ್ನು ಮುಗಿಸಿಯಾಗಿತ್ತು.

ಈ ರಸ್ತೆಯನ್ನು ಭಾರತವು ತಡವಾಗಿ ಪತ್ತೆಹಚ್ಚಿದ್ದರಿಂದಾಗಿ ಎರಡೂ ದೇಶಗಳ ನಡುವಿನ ಗಡಿಸಂಬಂಧಿ ಘರ್ಷಣೆಗಳು ಪ್ರಾರಂಭವಾದವು. ಕೊನೆಗೆ ಇದು 1962ರ ಅಕ್ಟೋಬರ್‌ನಲ್ಲಿ ನಡೆದ ಸೈನೋ-ಭಾರತೀಯ ಯುದ್ಧದಲ್ಲಿ ಪರ್ಯವಸಾನಗೊಂಡಿತು."[೨೨] 1950ರ ದಶಕದ ಆರಂಭದಿಂದಲೂ ಅಕ್ಸಾಯ್‌ ಚಿನ್‌ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಮತ್ತು, ಇದರ ಜೊತೆಗೆ, ಹೆಚ್ಚೂಕಮ್ಮಿ ಪ್ರಾಂತ್ಯದ 8%ನಷ್ಟು ವಿಸ್ತಾರವಿರುವ ಪಕ್ಕದ ವಲಯವಾದ, ಟ್ರಾನ್ಸ್‌-ಕರಕೋರಮ್ ಟ್ರಾಕ್ಟ್‌ನ್ನು 1963ರಲ್ಲಿ ಪಾಕಿಸ್ತಾನವು ಚೀನಾಕ್ಕೆ ಬಿಟ್ಟುಕೊಡಬೇಕಾಗಿ ಬಂತು. ಈ ಮಧ್ಯೆ, ಭಾರತದ ಹಿಡಿತದಲ್ಲಿದ್ದ ಜಮ್ಮು & ಕಾಶ್ಮೀರದಲ್ಲಿ ಚುನಾವಣೆಗಳನ್ನು ನಡೆಸಲಾಯಿತು. ಇದರ ಪರಿಣಾಮವಾಗಿ ಹೊರಹೊಮ್ಮಿದ ಷೇಕ್ ಅಬ್ದುಲ್ಲಾ ಎಂಬ ಜನಪ್ರಿಯ ಮುಸ್ಲಿಂ ನಾಯಕ ನ್ಯಾಷನಲ್ ಕಾನ್ಫರೆನ್ಸ್‌ ಎಂಬ ತನ್ನ ಪಕ್ಷದೊಂದಿಗೆ ಒಟ್ಟಾರೆಯಾಗಿ ಭಾರತವನ್ನು ಬೆಂಬಲಿಸಿದ. ಚುನಾಯಿತಗೊಂಡ ಸಂವಿಧಾನರಚಕ ಮಂಡಳಿಯು ಮೊಟ್ಟಮೊದಲ ಬಾರಿಗೆ 1951ರ ಅಕ್ಟೋಬರ್‌ 31ರಂದು ಶ್ರೀನಗರದಲ್ಲಿ ಸಭೆಸೇರಿತು.[೨೩] ನಂತರ ರಾಜ್ಯದ ಸಂವಿಧಾನರಚಕ ಮಂಡಳಿಯು 1954ರ ಫೆಬ್ರವರಿ 6ರಂದು ಭಾರತದ ಒಕ್ಕೂಟಕ್ಕೆ ರಾಜ್ಯದ ಸೇರ್ಪಡೆಯನ್ನು ಊರ್ಜಿತಗೊಳಿಸಿತು ಮತ್ತು ಕೆಲವೊಂದು ವಿನಾಯಿತಿಗಳು ಹಾಗೂ ಮಾರ್ಪಾಡುಗಳೊಂದಿಗಿನ ಕೇಂದ್ರ ಸಂವಿಧಾನವನ್ನು ರಾಜ್ಯಕ್ಕೆ ವಿಸ್ತರಿಸುವ, ಭಾರತದ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿನ ಸಂವಿಧಾನ (J&Kಗೆ ಅನ್ವಯಿಸುವ) ಆದೇಶವನ್ನು ತರುವಾಯ ಭಾರತದ ರಾಷ್ಟ್ರಪತಿಯವರು ಜಾರಿಮಾಡಿದರು. 1957ರ ಜನವರಿ 26ರಂದು ರಾಜ್ಯದ್ದೇ ಆದ ಸಂವಿಧಾನವು ಜಾರಿಗೆ ಬಂತು. ಇದರ ಅಡಿಯಲ್ಲಿ, ಅದೇ ವರ್ಷ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ ರಾಜ್ಯದ ಶಾಸನಸಭೆಗೆ ಮೊಟ್ಟಮೊದಲಬಾರಿಗೆ ಚುನಾವಣೆಗಳನ್ನು ನಡೆಸಲಾಯಿತು. ಭಾರತದ ಒಕ್ಕೂಟಕ್ಕೆ ರಾಜ್ಯದ ಸೇರ್ಪಡೆಯ ಕುರಿತಾದ ಊರ್ಜಿತಗೊಳಿಸುವಿಕೆ ಅಥವಾ ಅಂಗೀಕಾರವನ್ನು ಈ ಸಂವಿಧಾನವು ಮುಂದೆ ಪುನರುಚ್ಚರಿಸಿತು.[೨೩] ಆದಾಗ್ಯೂ, ಈ ಜನಾಭಿಪ್ರಾಯದ ಅಲೆಯನ್ನು ಪಾಕಿಸ್ತಾನವು ಗುರುತಿಸಲಿಲ್ಲ. ಹೀಗಾಗಿ ಜನರ ಬಯಕೆಯೇನು ಎಂಬುದನ್ನು ದೃಢಪಡಿಸಿಕೊಳ್ಳಲು ಒಂದು ಬಹಿರಂಗ ಜನಾಭಿಪ್ರಾಯ ನಡೆಯಬೇಕು ಎಂದು ಅದು ಒತ್ತಾಯಿಸುತ್ತಲೇ ಬಂದಿತು. ತನ್ನ ನಿಯಂತ್ರಣದಲ್ಲಿರುವ ಪಶ್ಚಿಮದಲ್ಲಿನ ಒಂದು ಪುಟ್ಟ ಭಾಗದಲ್ಲಿ ಅಜಾದ್‌ ಕಾಶ್ಮೀರ ಎಂಬ ಹೆಸರಿನ ತನ್ನದೇ ಸ್ವಂತ ಕಾಶ್ಮೀರವನ್ನು ಪಾಕಿಸ್ತಾನವು ಹುಟ್ಟುಹಾಕಿತು. ಮುಂಚೆಯಿದ್ದ ಸಂಸ್ಥಾನದಲ್ಲಿ ಉತ್ತರ ಭಾಗದ ಪ್ರದೇಶಗಳು ಎಂಬ ಹೆಸರಿನ ಒಂದು ಪ್ರಾಂತ್ಯವಾಗಿದ್ದ, ವಾಯವ್ಯದಲ್ಲಿನ ಪಾಕಿಸ್ತಾನಿ ಕಾಶ್ಮೀರದ ಅತಿದೊಡ್ಡ ವಲಯವು ಯಾವುದೇ ಸ್ಥಾನಮಾನವನ್ನು ಹೊಂದಿರುವುದರ ಕುರಿತಾಗಿ ಒಟ್ಟಾರೆಯಾಗಿ ಪಾಕಿಸ್ತಾನಿ ಕಾನೂನುಗಳು ಮತ್ತು ಸಂವಿಧಾನದಲ್ಲಿ ನಮೂದಿಸಲ್ಪಟ್ಟಿರಲಿಲ್ಲ. ಉತ್ತರದ ಭಾಗದ ಪ್ರದೇಶಗಳ ಜನರು ಪಾಕಿಸ್ತಾನೀಯರು ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯದೊಂದಿಗೆ ಅವರಿಗೆ ಯಾವ ಸಂಬಂಧವೂ ಇಲ್ಲ ಎಂದು 1982ರಲ್ಲಿ ಪಾಕಿಸ್ತಾನಿ ಅಧ್ಯಕ್ಷ ಜನರಲ್‌ ಜಿಯಾ ಉಲ್‌ ಹಕ್‌ ಪ್ರಕಟಿಸಿದರು.[೨೪]

ಪ್ರಸಕ್ತ ಸ್ಥಾನಮಾನ ಮತ್ತು ರಾಜಕೀಯ ವಿಭಾಗಗಳು[ಬದಲಾಯಿಸಿ]

ಜನಭರಿತ ಕಾಶ್ಮೀರ ಕಣಿವೆ (ಕಂದು),[೨೫] ಜಮ್ಮು ಮತ್ತು ಲಡಾಖ್‌ಗಳು ಭಾರತದಿಂದ ನಿಯಂತ್ರಿಸಲ್ಪಡುತ್ತಿರುವ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ‍್ನಲ್ಲಿವೆ.

ಪ್ರಾದೇಶಿಕ ವಿವಾದವೊಂದರಲ್ಲಿ ವಲಯವು ಮೂರು ದೇಶಗಳ ನಡುವಣ ವಿಭಾಗಿಸಲ್ಪಟ್ಟಿದೆ: ಪಾಕಿಸ್ತಾನವು ವಾಯವ್ಯ ಭಾಗವನ್ನು (ಉತ್ತರ ಭಾಗದ ಪ್ರದೇಶಗಳು ಮತ್ತು ಅಜಾದ್‌ ಕಾಶ್ಮೀರ) ನಿಯಂತ್ರಿಸಿದರೆ, ಭಾರತವು ಕೇಂದ್ರೀಯ ಮತ್ತು ದಕ್ಷಿಣ ಭಾಗವನ್ನು (ಜಮ್ಮು ಮತ್ತು ಕಾಶ್ಮೀರ) ಹಾಗೂ ಲಡಾಖ್‌‌ನ್ನು ನಿಯಂತ್ರಿಸುತ್ತದೆ, ಮತ್ತು ಚೀನಾವು ಈಶಾನ್ಯ ಭಾಗವನ್ನು (ಅಕ್ಸಾಯ್‌ ಚಿನ್‌ ಮತ್ತು ಟ್ರಾನ್ಸ್‌-ಕರಕೋರಂ ಟ್ರಾಕ್ಟ್‌) ನಿಯಂತ್ರಿಸುತ್ತದೆ.

ಸಾಲ್ಟೋರೋ ಬೆಟ್ಟದ ಬೆನ್ನೇಣಿನ ಕಣಿವೆಯನ್ನು ಒಳಗೊಂಡಂತೆ ಸಿಯಾಚಿನ್ ಹಿಮನದಿ ಪ್ರದೇಶದ ಬಹುಭಾಗವನ್ನು ಭಾರತವು ನಿಯಂತ್ರಿಸಿದರೆ, ಸಾಲ್ಟೋರೋ ಬೆಟ್ಟದ ಬೆನ್ನೇಣಿನ ಕಣಿವೆಯ ಸ್ವಲ್ಪವೇ ನೈರುತ್ಯ ದಿಕ್ಕಿಗಿರುವ ಕೆಳಗಿನ ಪ್ರಾಂತ್ಯವನ್ನು ಪಾಕಿಸ್ತಾನವು ನಿಯಂತ್ರಿಸುತ್ತದೆ. ವಿವಾದಿತ ಪ್ರಾಂತ್ಯವನ್ನು ಭಾರತವು ನಿಯಂತ್ರಿಸಿದರೆ141,338 km2 (54,571 sq mi), ಪಾಕಿಸ್ತಾನ 85,846 km2 (33,145 sq mi) ಮತ್ತು ಚೀನಾ, ಉಳಿದ ಭಾಗವನ್ನು ನಿಯಂತ್ರಿಸುತ್ತವೆ 37,555 km2 (14,500 sq mi).

ಜಮ್ಮು ಮತ್ತು ಅಜಾದ್‌ ಕಾಶ್ಮೀರ, ಪೀರ‍್ ಪಂಜಾಲ್‌ ಶ್ರೇಣಿಯ ಆಚೆಗೆ ಸ್ಥಿತವಾಗಿವೆ, ಮತ್ತು ಅವು ಕ್ರಮವಾಗಿ ಭಾರತದ ಮತ್ತು ಪಾಕಿಸ್ತಾನದ ನಿಯಂತ್ರಣದ ಅಡಿಯಲ್ಲಿವೆ. ಇವು ಜನದಟ್ಟಣೆಯ ವಲಯಗಳಾಗಿವೆ. ಜಮ್ಮು, ಮುಝಾಫರಾಬಾದ್‌ ಮತ್ತು ರಾವಲಕೋಟ್‌ ಇಲ್ಲಿನ ಪ್ರಮುಖ ನಗರಗಳಾಗಿವೆ. ಉತ್ತರ ಭಾಗದ ಪ್ರದೇಶಗಳು ಎಂದು ಹಿಂದೆ ಕರೆಯಲಾಗುತ್ತಿದ್ದ ಗಿಲ್‌ಗಿಟ್‌-ಬಾಲ್ಟಿಸ್ತಾನ್‌ಗಳು ಉತ್ತರದ ತುತ್ತತುದಿಯಲ್ಲಿನ ಪ್ರದೇಶಗಳ ಒಂದು ಸಮೂಹವಾಗಿದ್ದು, ಅದರ ಗಡಿಭಾಗದಲ್ಲಿ ಕಾರಕೋರಂ, ಪಶ್ಚಿಮ ಹಿಮಾಲಯ ಶ್ರೇಣಿಗಳು, ಪಾಮಿರ್‌, ಮತ್ತು ಹಿಂದೂ ಕುಶ್‌ ಪರ್ವತಶ್ರೇಣಿಗಳಿವೆ. ಗಿಲ್‌ಗಿಟ್‌ನಲ್ಲಿ ಆಡಳಿತಾತ್ಮಕ ಕೇಂದ್ರವನ್ನು ಹೊಂದಿರುವ ಉತ್ತರ ಭಾಗದ ಪ್ರದೇಶಗಳು, 72,971 km²ನಷ್ಟು (ಅಂದರೆ 28,174 mi²ನಷ್ಟು) ವಿಸ್ತೀರ್ಣದ ಪ್ರದೇಶವನ್ನು ವ್ಯಾಪಿಸಿದೆ ಮತ್ತು 1,000,000ಕ್ಕೆ ಸಮೀಪಿಸುತ್ತಿರುವ ಜನಸಂಖ್ಯೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಸ್ಕಾರ್ದು ಎಂಬುದು ಮತ್ತೊಂದು ಪ್ರಮುಖ ನಗರ.

ಲಡಾಖ್‌, ಪೂರ್ವದಿಕ್ಕಿಗಿರುವ ಒಂದು ವಲಯವಾಗಿದ್ದು, ಉತ್ತರದಲ್ಲಿರುವ ಕುನ್‌ಲುನ್‌ ಪರ್ವತಶ್ರೇಣಿ ಮತ್ತು ದಕ್ಷಿಣದಲ್ಲಿರುವ ಪ್ರಮುಖವಾದ ಮಹೋನ್ನತ ಹಿಮಾಲಯ ಪರ್ವತ ಶ್ರೇಣಿಯ ನಡುವೆ ಸ್ಥಿತವಾಗಿದೆ.[೨೬] ಲೆಹ್‌ ಮತ್ತು ಕಾರ್ಗಿಲ್‌ ಇಲ್ಲಿನ ಪ್ರಮುಖ ನಗರಗಳಾಗಿವೆ. ಇದು ಭಾರತದ ಆಡಳಿತದ ಅಡಿಯಲ್ಲಿದ್ದು, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದೆ. ಇದು ಈ ಪ್ರದೇಶದಲ್ಲೇ ಅತಿ ವಿರಳವಾದ ಜನಸಾಂದ್ರತೆಯನ್ನು ಹೊಂದಿದ ವಲಯಗಳ ಪೈಕಿ ಒಂದಾಗಿದ್ದು, ಮುಖ್ಯವಾಗಿ ಇಂಡೋ-ಆರ್ಯನ್ ಮತ್ತು ಟಿಬೆಟ್‌ಗೆ ಸೇರಿದ ಪೀಳಿಗೆಯಿಂದ ಬಂದ ಜನರು ಇಲ್ಲಿ ವಾಸವಾಗಿದ್ದಾರೆ.[೨೬]

ಅಕ್ಸಾಯ್‌ ಚಿನ್‌, ವಿಶಾಲವಾಗಿರುವ ಒಂದು ಅತ್ಯುನ್ನತ ಉಪ್ಪಿನ ಮರುಭೂಮಿಯಾಗಿದ್ದು ಅದರ ಉನ್ನತಿಯು ....ವರೆಗಿನ ಎತ್ತರವನ್ನು ಮುಟ್ಟುತ್ತದೆ5,000 metres (16,000 ft). ಭೌಗೋಳಿಕವಾಗಿ ಟಿಬೆಟ್ಟಿನ ಪ್ರಸ್ತಭೂಮಿಯ ಭಾಗವಾಗಿರುವ ಅಕ್ಸಾಯ್‌ ಚಿನ್ ಪ್ರದೇಶವು‌, ಸೋಡಾ ಸಮತಲ ಭೂಮಿ ಎಂದೂ ಉಲ್ಲೇಖಿಸಲ್ಪಡುತ್ತದೆ. ಈ ವಲಯದಲ್ಲಿ ಜನರ ವಾಸ ಇಲ್ಲವೇ ಇಲ್ಲ ಎನ್ನಬಹುದಾದ್ದರಿಂದ ಯಾವುದೇ ಖಾಯಂ ನೆಲೆಗಳನ್ನು ಇದು ಹೊಂದಿಲ್ಲ. ಈ ವಲಯಗಳು ತಂತಮ್ಮ ಹಕ್ಕುದಾರರು ಕಾರ್ಯರೂಪಕ್ಕೆ ತಂದಿರುವಂತೆ ಬಳಕೆಯಲ್ಲಿರುವುದರಿಂದ, ಭಾರತವಾಗಲೀ ಅಥವಾ ಪಾಕಿಸ್ತಾನವಾಗಲೀ ಪರಸ್ಪರರು ಹಕ್ಕುಸಾಧಿಸಿರುವ ಪ್ರದೇಶಗಳ ಸೇರ್ಪಡೆಯ ಕುರಿತು ಔಪಚಾರಿಕವಾಗಿ ಗುರುತಿಸಿಲ್ಲ. 1963ರಲ್ಲಿನ ಟ್ರಾನ್ಸ್‌-ಕರಕೋರಮ್ ಟ್ರಾಕ್ಟ್‌ನಲ್ಲಿ ಪಾಕಿಸ್ತಾನದಿಂದ ಚೀನಾಕ್ಕೆ "ಬಿಟ್ಟುಕೊಡಲ್ಪಟ್ಟ" ಪ್ರದೇಶವೂ ಸೇರಿದಂತೆ ಭಾರತವು ಹಕ್ಕು ಸಾಧಿಸುತ್ತಿರುವ ಪ್ರದೇಶಗಳು, ಅದರ ಪ್ರಾಂತ್ಯದ ಒಂದು ಭಾಗವಾಗಿದ್ದರೆ, ಅಕ್ಸಾಯ್‌ ಚಿನ್‌ ಮತ್ತು ಟ್ರಾನ್ಸ್‌-ಕರಕೋರಮ್ ಟ್ರಾಕ್ಟ್‌ಗಳನ್ನು ಹೊರತುಪಡಿಸಿದ ಸಂಪೂರ್ಣ ವಲಯದ ಮೇಲೆ ಪಾಕಿಸ್ತಾನವು ತನ್ನ ಹಕ್ಕು ಸಾಧಿಸುತ್ತಿದೆ. ಈ ಪ್ರಾಂತ್ಯದ ಕುರಿತಾಗಿಯೇ ಎರಡೂ ದೇಶಗಳು ಹಲವಾರು ಘೋಷಿತ ಯುದ್ಧಗಳನ್ನು ನಡೆಸಿವೆ. 1947ರ ಭಾರತ-ಪಾಕಿಸ್ತಾನದ ಯುದ್ಧವು ಇಂದಿನ ಕಚ್ಚಾ ಅಥವಾ ಸ್ಥೂಲವಾದ ಗಡಿರೇಖೆಗಳ ಸ್ಥಾಪನೆಗೆ ಕಾರಣವಾಗಿದ್ದು, ಪಾಕಿಸ್ತಾನವು ಸುಮಾರು ಕಾಶ್ಮೀರದ ಮೂರನೇ ಒಂದು ಭಾಗವನ್ನು ಪಟ್ಟಾಗಿ ಹಿಡಿದುಕೊಂಡಿದ್ದರೆ, ಭಾರತವು ಅರ್ಧದಷ್ಟು ಭಾಗವನ್ನು ಹಿಡಿದುಕೊಂಡಿದೆ. ವಿಶ್ವಸಂಸ್ಥೆಯು ಹುಟ್ಟುಹಾಕಿರುವ ಒಂದು ವಿಭಜಕ ನಿಯಂತ್ರಣ ರೇಖೆಯಿಂದಾಗಿ ಈ ಹಿಡುವಳಿ ಪ್ರದೇಶಗಳು ಪ್ರತ್ಯೇಕಿಸಲ್ಪಟ್ಟಿವೆ. 1965ರ ಭಾರತ-ಪಾಕಿಸ್ತಾನದ ಯುದ್ಧವು ಒಂದು ಇಕ್ಕಟ್ಟಿನ ಸ್ಥಿತಿ ಮತ್ತು UN-ರಾಜಿ ಒಪ್ಪಂದದ ಒಂದು ಕದನವಿರಾಮಕ್ಕೆ ಕಾರಣವಾಗಿದೆ.

ಕಾಶ್ಮೀರ ಕಣಿವೆ[ಬದಲಾಯಿಸಿ]

ಉಪಗ್ರಹದಿಂದ ಕಂಡುಬಂದಂತೆ ಕಾಶ್ಮೀರ ಕಣಿವೆ. ಹಿಮದಿಂದ ಆವೃತವಾದ ಪೀರ‍್ ಪಂಜಾಲ್ ಶ್ರೇಣಿಯು ಕಣಿವೆಯನ್ನು ಸಮತಟ್ಟು ಪ್ರದೇಶಗಳಿಂದ ಬೇರ್ಪಡಿಸುತ್ತದೆ.

ಕಾಶ್ಮೀರ ಕಣಿವೆ ಅಥವಾ ಕಾಶ್ಮೀರದ ಕಣಿವೆ ಯು ಹಿಮಾಲಯ ಪರ್ವತ ಶ್ರೇಣಿ ಹಾಗೂ ಪೀರ‍್ ಪಂಜಾಲ್‌ ಶ್ರೇಣಿಯ ನಡುವಿನ ಒಂದು ಕಣಿವೆಯಾಗಿದೆ. ಇದು ಸುಮಾರು 135 ಕಿಮೀ ಉದ್ದ ಹಾಗೂ 32 ಕಿಮೀ ಅಗಲವಿದ್ದು, ಝೀಲಂ ನದಿಯಿಂದ ರೂಪುಗೊಂಡಿದೆ.[೨೫] ಜಹಾಂಗೀರ‍್ ರಾಜನು ಇದನ್ನು "ಭೂಮಿಯ ಮೇಲಿನ ಸ್ವರ್ಗ" ಎಂದು ಕರೆದಿದ್ದ. ಪ್ರಸ್ತುತ ಇದು ಸುಮಾರು 4 ದಶಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಅದರ ಬಹುಪಾಲು ಮುಸ್ಲಿಂ ಜನಾಂಗದಿಂದ ಕೂಡಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ಭಾರತದ ಆಡಳಿತ ವ್ಯವಸ್ಥೆಯೊಳಗಡೆ ಇದು ಸಂಪೂರ್ಣವಾಗಿ ಸ್ಥಿತವಾಗಿದೆ. ಶ್ರೀನಗರವು ಇದರ ಪ್ರಮುಖ ನಗರವಷ್ಟೇ ಅಲ್ಲ, ರಾಜ್ಯದ ಬೇಸಿಗೆ ರಾಜಧಾನಿ ಕೂಡಾ. ಇತರ ಮುಖ್ಯ ನಗರಗಳೆಂದರೆ ಅನಂತ್‌ನಾಗ್ ಮತ್ತು ಬಾರಾಮುಲ್ಲಾ. ತಿಕ್ಕಾಟದ ಕಾರಣದಿಂದಾಗಿ 1989ರಿಂದಲೂ ಅಲ್ಲಿ ಸಶಸ್ತ್ರ ದಂಗೆಯೇಳುವಿಕೆಯು ಕಂಡುಬರುತ್ತಿದೆ. NH 1Aಮೇಲಿನಿಂದ ಜಮ್ಮುವಿಗೆ ಹೋಗುವಾಗ ಸಿಗುವ ಖಾಝಿಗುಂಡ್‌ ಸಮೀಪವಿರುವ ಬನಿಹಾಲ್ ಸುರಂಗದ ಮೂಲಕ ಭಾರತದ ಇತರ ಭಾಗಗಳಿಗೆ ಇದು ಪ್ರವೇಶವನ್ನು ಹೊಂದಿದ್ದು, ಅದು ಚಳಿಗಾಲದಲ್ಲಿ ಹಿಮಸುರಿತದಿಂದ ಅಡ್ಡಿಪಡಿಸಲ್ಪಡುತ್ತದೆ. ಕಣಿವೆಯಲ್ಲಿರುವ ಜನಪ್ರಿಯ ಪ್ರವಾಸೀ ತಾಣಗಳೆಂದರೆ, ಗುಲ್‌ಮಾರ್ಗ್‌, ‌ದಾಲ್ ಸರೋವರ, ಪಹಲ್‌ಗಾಮ್, ಅಮರನಾಥ ದೇವಸ್ಥಾನ ಇತ್ಯಾದಿ.

ಜನಸಂಖ್ಯಾ ವಿಚಾರ[ಬದಲಾಯಿಸಿ]

ಬ್ರಿಟಿಷ್ ಭಾರತದ ಸಾಮ್ರಾಜ್ಯದ 1901ರ ಜನಗಣತಿಯಲ್ಲಿ, ಕಾಶ್ಮೀರ ಮತ್ತು ಜಮ್ಮು ವಿನ ರಾಜ ಸಂಸ್ಥಾನದ ಒಟ್ಟಾರೆ ಜನಸಂಖ್ಯೆಯ ಪೈಕಿ ಮುಸ್ಲಿಮರು 74.16%ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದರೆ, ಹಿಂದೂಗಳು 23.72%ನಷ್ಟು, ಮತ್ತು ಬೌದ್ಧರು 1.21%ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದರು. ಹಿಂದೂಗಳು ಮುಖ್ಯವಾಗಿ ಜಮ್ಮುವಿನಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದು, ಒಟ್ಟಾರೆ ಜನಸಂಖ್ಯೆಯಲ್ಲಿ 80%ಗಿಂತ ಸ್ವಲ್ಪ ಕಡಿಮೆ ಪಾಲು ಅವರದಾಗಿತ್ತು.[೨೭] ಕಾಶ್ಮೀರ ಕಣಿವೆಯಲ್ಲಿನ ಒಟ್ಟಾರೆ ಜನಸಂಖ್ಯೆಯ 93.6%ನಷ್ಟು ಭಾಗವು ಮುಸ್ಲಿಮರದಾಗಿದ್ದರೆ, ಹಿಂದೂಗಳದ್ದು 5.24%ನಷ್ಟು ಭಾಗವಾಗಿತ್ತು.[೨೭] ಈ ಶೇಕಡಾವಾರು ಪ್ರಮಾಣಗಳು ಕಳೆದ 100 ವರ್ಷಗಳಿಂದಲೂ ಸ್ಥಿರವಾಗಿಯೇ ಉಳಿದುಕೊಂಡು ಬಂದಿವೆ.[೨೮] ನಲವತ್ತು ವರ್ಷಗಳ ನಂತರ, ಬ್ರಿಟಿಷ್ ಭಾರತದ 1941ರ ಜನಗಣತಿಯಲ್ಲಿ, ಕಾಶ್ಮೀರ ಕಣಿವೆಯ ಜನಸಂಖ್ಯೆಯ 93.6%ನಷ್ಟು ಪಾಲು ಮುಸ್ಲಿಮರದಾಗಿದ್ದರೆ, ಹಿಂದೂಗಳದ್ದು 4%ನಷ್ಟು ಪಾಲಾಗಿತ್ತು.[೨೮] 2003ರಲ್ಲಿ, ಕಾಶ್ಮೀರ ಕಣಿವೆಯಲ್ಲಿನ ಮುಸ್ಲಿಮರ ಶೇಕಡಾವಾರು ಪ್ರಮಾಣವು 95%ನಷ್ಟಿದ್ದರೆ[೨೯], ಹಿಂದೂಗಳದ್ದು 4%ನಷ್ಟಿತ್ತು; ಅದೇ ವರ್ಷ, ಜಮ್ಮುವಿನಲ್ಲಿ ಹಿಂದೂಗಳ ಶೇಕಡಾವಾರು ಪ್ರಮಾಣವು 66%ನಷ್ಟಿದ್ದರೆ, ಮುಸ್ಲಿಮರದ್ದು 30%ನಷ್ಟಿತ್ತು.[೨೯] ಬ್ರಿಟಿಷ್‌ ಭಾರತದ ಸಾಮ್ರಾಜ್ಯದ 1901ರ ಜನಗಣತಿಯಲ್ಲಿ, ಕಾಶ್ಮೀರ ಮತ್ತು ಜಮ್ಮು ವಿನ ರಾಜ ಸಂಸ್ಥಾನದ ಜನಸಂಖ್ಯೆಯು 2,905,578ನಷ್ಟಿತ್ತು. ಇದರ ಪೈಕಿ 2,154,695ರಷ್ಟು ಜನ ಮುಸ್ಲಿಮರಾಗಿದ್ದರೆ (74.16%), 689,073ರಷ್ಟು ಜನ ಹಿಂದೂಗಳು (23.72%), 25,828ರಷ್ಟು ಜನ ಸಿಖ್ಖರು, ಹಾಗೂ 35,047ರಷ್ಟು ಮಂದಿ ಬೌದ್ಧಮತೀಯರಾಗಿದ್ದರು.

ಕ್ಯಾಶ್ಮೀರ‍್ ಶಾಲ್ ಕಾರ್ಖಾನೆಯಲ್ಲಿ ತೋರಿಸಲಾಗಿರುವ ಶಾಲು ತಯಾರಿಸುವ ಒಂದು ಮುಸ್ಲಿಂ ಕುಟುಂಬ, 1867, ಕ್ರೋಮೋಲಿತ್., ವಿಲಿಯಂ ಸಿಂಪ್ಸನ್.

ರಾಜ ಸಂಸ್ಥಾನದ ಮುಸ್ಲಿಮರ ಪೈಕಿ, ನಾಲ್ಕು ವಿಭಾಗಗಳು ದಾಖಲಿಸಲ್ಪಟ್ಟಿದ್ದವು: "ಷೇಖರು, ಸೈಯಿದ್‌ಗಳು, ಮುಘಲರು, ಮತ್ತು ಪಠಾಣರು. ಷೇಖರು, ಬಹುಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರು ಹಿಂದೂಗಳ ವಂಸಸ್ಥರಾಗಿದ್ದಾರೆ. ಆದರೆ, ಅವರ ಮೂಲಪುರುಷರ ಜಾತಿಯ ನಿಯಮಗಳ ಪೈಕಿ ಯಾವುದನ್ನೂ ಅವರು ಉಳಿಸಿಕೊಂಡಿಲ್ಲ.

ಕ್ರಮ್ಸ್‌ ಎಂದು ಹೇಳಲಾಗುವ ವಂಶನಾಮಗಳನ್ನು ಅವರು ಹೊಂದಿದ್ದಾರೆ..."[೨೭]ಕ್ರಮ್‌ ಹೆಸರುಗಳಲ್ಲಿ "ತಂತ್ರೆ," "ಷೇಕ್,", "ಭಟ್‌", "ಮಂಟು," "ಗನಾಯ್," "ದರ‍್," "ದಮಾರ‍್," "ಲೊನ್" ಇತ್ಯಾದಿಗಳು ಸೇರಿಕೊಂಡಿವೆ ಎಂದು ದಾಖಲಿಸಲ್ಪಟ್ಟಿದೆ. ಸೈಯಿದ್‌ಗಳನ್ನು ಸಹ ವಿಂಗಡಿಸಲಾಗಿದೆ ಎಂದು ದಾಖಲಿಸಲಾಗಿದೆ. "ಧರ್ಮದ ವೃತ್ತಿಯನ್ನು ಅನುಸರಿಸುವವರದ್ದು ಒಂದು ಗುಂಪು ಹಾಗೂ ಕೃಷಿ ಮತ್ತು ಇತರ ಜೀವನೋಪಾಯ ವೃತ್ತಿಗಳನ್ನು ಅನುಸರಿಸುವವರದ್ದು ಮತ್ತೊಂದು ಗುಂಪು ಎಂದು ಇವರನ್ನು ವಿಂಗಡಿಸಲಾಗಿದೆ. ಅವರ ಕ್ರಮ್‌ ಹೆಸರು "ಮೀರ‍್" ಎಂಬುದಾಗಿದೆ. ಓರ್ವ ಸೈಯಿದ್‌ ತನ್ನ ಸಂತ-ಸ್ವರೂಪದ ವೃತ್ತಿಯನ್ನು ಉಳಿಸಿಕೊಂಡರೆ, ಮೀರ್‌ ಎಂಬುದು ಒಂದು ಪೂರ್ವಪ್ರತ್ಯಯ ಅಥವಾ ಉಪಾಧಿಸೂಚಕವಾಗಿರುತ್ತದೆ; ಆತ ಕೃಷಿ ವೃತ್ತಿಯನ್ನು ಅವಲಂಬಿಸಿದರೆ, ಮೀರ‍್ ಎಂಬುದು ಆತನ ಹೆಸರಿಗೆ ಒಂದು ಸೇರಿಕೆ ಅಥವಾ ಉಪಸರ್ಗವಾಗಿರುತ್ತದೆ."[೨೭] "ಮೀರ‍್" ("ಮಿರ್ಜಾ"ದ ಒಂದು ಅಪಭ್ರಂಶ ರೂಪ), "ಬೇಗ್," "ಬಂದಿ," "ಬಚ್‌," ಮತ್ತು "ಆಶಯೇ"ನಂತಹ ಕ್ರಮ್ ಹೆಸರುಗಳನ್ನು ಹೊಂದಿ ದಾಖಲಿಸಲ್ಪಡುವ ಮಟ್ಟಿಗೆ ಮುಘಲರ ಸಂಖ್ಯೆಯು ಇರಲಿಲ್ಲ." ಅಂತಿಮವಾಗಿ, "ಮುಘಲರಿಗಿಂತ ಹೆಚ್ಚು ಸಂಖ್ಯಾಬಾಹುಳ್ಯವನ್ನು ಹೊಂದಿದ್ದ ಪಠಾಣರು,... ಕಣಿವೆಯ ನೈರುತ್ಯ ಭಾಗದಲ್ಲಿ ಮುಖ್ಯವಾಗಿ ಕಂಡುಬಂದಿದ್ದು, ಅಲ್ಲಿ ಪಠಾಣರ ವಸತಾಹತುಗಳು ಕಾಲಾನುಕಾಲಕ್ಕೆ ಕಂಡುಬಂದಿವೆ. ಈ ವಸಾಹತುಗಳ ಪೈಕಿ ಅತ್ಯಂತ ಕುತೂಹಲಕಾರಿಯಾದ ವಿಷಯವೆಂದರೆ, ಡ್ರಾಂಘೈಹಾಮಾದಲ್ಲಿನ ಕುಕಿ-ಖೇಲ್ ಅಫ್ರಿದಿಗಳು ಎಲ್ಲಾ ಹಳೆಯ ಸಂಪ್ರದಾಯ-ಆಚರಣೆಗಳನ್ನೂ ಉಳಿಸಿಕೊಂಡಿದ್ದಾರೆ ಮತ್ತು ಪಷ್ಟು ಭಾಷೆಯನ್ನು ಮಾತನಾಡುತ್ತಾರೆ" ಎಂದು ದಾಖಲಿಸಲ್ಪಟ್ಟಿದೆ.[೨೭]

ಹಿಂದೂಗಳು ಮುಖ್ಯವಾಗಿ ಜಮ್ಮುವಿನಲ್ಲಿ ಕಂಡುಬಂದಿದ್ದರು ಹಾಗೂ ಒಟ್ಟಾರೆ ಜನಸಂಖ್ಯೆಯ ಪೈಕಿ 80%ಗಿಂತ ಸ್ವಲ್ಪವೇ ಕಡಿಮೆ ಭಾಗವನ್ನು ಅವರು ಆಕ್ರಮಿಸಿಕೊಂಡಿದ್ದರು. ಕಾಶ್ಮೀರ ಕಣಿವೆ ಯಲ್ಲಿ, ಹಿಂದೂಗಳ ಪ್ರಾತಿನಿಧ್ಯವು "ಪ್ರತಿ 10,000ದಷ್ಟು ಜನಸಂಖ್ಯೆಯಲ್ಲಿ 524 ಸಂಖ್ಯೆಯಷ್ಟಿತ್ತು (ಅಂದರೆ 5.24%), ಮತ್ತು ಲಡಾಖ್‌ ಮತ್ತು ಗಿಲ್‌ಗಿಟ್‌ನ ಗಡಿನಾಡಿನ ವಝಾರಾಟ್ಸ್‌ ನಲ್ಲಿ ಪ್ರತಿ 10,000 ವ್ಯಕ್ತಿಗಳ ಪೈಕಿ ಕೇವಲ 94 ಮಂದಿ (0.94%) ಹಿಂದೂಗಳಾಗಿದ್ದರು."[೨೭] 1901ರ ಆದೇ ಜನಗಣತಿಯಲ್ಲಿ, ಕಾಶ್ಮೀರ ಕಣಿವೆಯಲ್ಲಿ, ದಾಖಲಿಸಲ್ಪಟ್ಟ ಒಟ್ಟು ಜನಸಂಖ್ಯೆಯು 1,157,394ರಷ್ಟಿತ್ತು. ಇದರ ಪೈಕಿ, ಮುಸ್ಲಿಮರ ಸಂಖ್ಯೆಯು 1,083,766, ಅಥವಾ 93.6%ನಷ್ಟಿದ್ದರೆ, ಹಿಂದೂಗಳ ಜನಸಂಖ್ಯೆಯು 60,641ರಷ್ಟಿತ್ತು.[೨೭] ಜಮ್ಮು ಪ್ರಾಂತ್ಯದ 626,177ನಷ್ಟು ಸಂಖ್ಯೆಯಲ್ಲಿದ್ದ (ಅಥವಾ ರಾಜ ಸಂಸ್ಥಾನದ ಹಿಂದೂ ಜನಸಂಖ್ಯೆಯ 90.87%ನಷ್ಟಿದ್ದ) ಹಿಂದೂಗಳ ಪೈಕಿ, ಜನಗಣತಿಯಲ್ಲಿ ದಾಖಲಿಸಲ್ಪಟ್ಟ ಅತಿ ಪ್ರಮುಖ ಜಾತಿಗಳ ವಿವರ ಹೀಗಿತ್ತು: "ಬ್ರಾಹ್ಮಣರು (186,000), ರಜಪೂತರು (167,000), ಖತ್ರಿಗಳು (48,000) ಮತ್ತು ಥಕ್ಕರ್‌ಗಳು (93,000)."[೨೭]

ಬ್ರಿಟಿಷ್ ಭಾರತದ ಸಾಮ್ರಾಜ್ಯದ 1911ರ ಜನಗಣತಿಯಲ್ಲಿ, ಕಾಶ್ಮೀರ ಮತ್ತು ಜಮ್ಮು ವಿನ ಒಟ್ಟು ಜನಸಂಖ್ಯೆಯು 3,158,126ರಷ್ಟಕ್ಕೆ ಏರಿತ್ತು. ಇದರ ಪೈಕಿ, 2,398,320ರಷ್ಟು (75.94%) ಸಂಖ್ಯೆಯ ಜನ ಮುಸ್ಲಿಮರಾಗಿದ್ದರು, 696,830ರಷ್ಟು (22.06%) ಸಂಖ್ಯೆಯ ಜನ ಹಿಂದೂಗಳಾಗಿದ್ದರು, 31,658ರಷ್ಟು (1%) ಜನ ಸಿಖ್ಖರಾಗಿದ್ದರು, ಮತ್ತು 36,512ರಷ್ಟು (1.16%) ಸಂಖ್ಯೆಯ ಜನ ಬೌದ್ಧರ ಪಂಗಡಕ್ಕೆ ಸೇರಿದ್ದರು. 1941ರಲ್ಲಿ ನಡೆದ ಬ್ರಿಟಿಷ್ ಭಾರತದ ಕೊನೆಯ ಜನಗಣತಿಯಲ್ಲಿ, ಕಾಶ್ಮೀರ ಮತ್ತು ಜಮ್ಮುವಿನ ಒಟ್ಟು ಜನಸಂಖ್ಯೆಯು (ಎರಡನೇ ಜಾಗತಿಕ ಸಮರದ ಪರಿಣಾಮವಾಗಿ ಈ ಸಂಖ್ಯೆಯನ್ನು 1931ರ ಜನಗಣತಿಯಿಂದ ಅಂದಾಜಿಸಲಾಗಿತ್ತು) 3,945,000ದಷ್ಟಿತ್ತು. ಇದರ ಪೈಕಿ, ಮುಸ್ಲಿಮರ ಒಟ್ಟು ಜನಸಂಖ್ಯೆಯು 2,997,000ದಷ್ಟಿತ್ತು (75.97%), ಹಿಂದೂಗಳ ಜನಸಂಖ್ಯೆ 808,000ದಷ್ಟಿತ್ತು (20.48%), ಮತ್ತು ಸಿಖ್ಖರದ್ದು 55,000ದಷ್ಟಿತ್ತು (1.39%).[೩೦]

ರಾಜಕೀಯ ವಿಜ್ಞಾನಿ ಅಲೆಕ್ಸಾಂಡರ‍್ ಎವಾನ್ಸ್‌ ಪ್ರಕಾರ, ಕಾಶ್ಮೀರಿ ಪಂಡಿತರು ಎಂದೂ ಕರೆಯಲಾಗುವ ಕಾಶ್ಮೀರ ಬ್ರಾಹ್ಮಣರ 160,000-170,000ದಷ್ಟು ಒಟ್ಟಾರೆ ಜನಸಂಖ್ಯೆಯ ಪೈಕಿ ಸುಮಾರು 95%ನಷ್ಟು ಮಂದಿ (ಅಂದರೆ ಸರಿ ಸುಮಾರಾಗಿ 150,000 ರಿಂದ 160,000ದಷ್ಟು ಮಂದಿ) "ಉಗ್ರಗಾಮಿ ಹಿಂಸಾಚಾರವು ರಾಜ್ಯವನ್ನು ಆವರಿಸಿದ್ದರಿಂದ" 1990ರಲ್ಲಿ ಕಾಶ್ಮೀರ ಕಣಿವೆಯನ್ನು ತೊರೆದರು.[೩೧] ಭಾರತದ ಕುರಿತಾದ CIA ಫ್ಯಾಕ್ಟ್‌ಬುಕ್‌ ಚಾಪ್ಟರ್‌ ಅನುಸಾರವಾಗಿ, ಸರಿ ಸುಮಾರಾಗಿ 300,000 ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರ‍ ರಾಜ್ಯದಿಂದ ಆಂತರಿಕವಾಗಿ ಸ್ಥಾನಪಲ್ಲಟಗೊಂಡಿದ್ದಾರೆ.[೩೨]

ಆಡಳಿತ ನಡೆಸುತ್ತಿರುವುದು ಪ್ರದೇಶ ಜನಸಂಖ್ಯೆ % ಮುಸ್ಲಿಂ % ಹಿಂದೂ % ಬೌದ್ಧ ಧರ್ಮೀಯ % ಇತರೆ
ಭಾರತ ಜಮ್ಮು ~3 ದಶಲಕ್ಷ 30% 66% 4%
ಕಾಶ್ಮೀರ ಕಣಿವೆ ~4 ದಶಲಕ್ಷ 95% 4%*
ಲಡಾಖ್‌ ~0.25 ದಶಲಕ್ಷ 46% ಷಿಯಾ 50% 3%
ಪಾಕಿಸ್ತಾನ ಉತ್ತರ ಭಾಗದ ಪ್ರದೇಶಗಳು ~1 ದಶಲಕ್ಷ 99%
ಅಜಾದ್‌ ಕಾಶ್ಮೀರ ~2.6 ದಶಲಕ್ಷ 100%
ಚೀನಾ ಅಕ್ಸಾಯ್‌ ಚಿನ್‌

ಸಂಸ್ಕೃತಿ ಮತ್ತು ಅಡುಗೆ ಪದ್ಧತಿ[ಬದಲಾಯಿಸಿ]

ಕಾರ್ಗಿಲ್, ಉತ್ತರ ಲಡಾಖ್‌ ಪ್ರದೇಶಗಳಿಂದ ಬಂದಿರುವ ಬ್ರೊಕ್ಪಾ ಮಹಿಳೆಯರು ಸ್ಥಳೀಯ ವಸ್ತ್ರಗಳಲ್ಲಿರುವುದು.

ದಮ್ ಆಲೂ (ಹೆಚ್ಚಿನ ಪ್ರಮಾಣದಲ್ಲಿ ಮಸಾಲೆ ಪದಾರ್ಥವನ್ನು ಸೇರಿಸಿ ಬೇಯಿಸಲಾದ ಆಲೂಗಡ್ಡೆಗಳು), ಝಮಾನ್ (‌ಒಂದು ಘನವಾದ ಮೃದುಗಿಣ್ಣು), ರೋಗನ್ ಜೋಶ್ (ಹೆಚ್ಚಿನ ಪ್ರಮಾಣದ ಮಸಾಲೆ ಪದಾರ್ಥದೊಂದಿಗೆ ಬೇಯಿಸಲಾದ ಕುರಿಮರಿ), ಝಾಮ್‌ ಡೊಡ್‌ (ಮೊಸರು), ಯಾಖಾಯ್ನ್‌ (ಲಘುವಾದ ಮಸಾಲೆ ಪದಾರ್ಥಗಳೊಂದಿಗೆ ಮೊಸರಿನಲ್ಲಿ ಬೇಯಿಸಲಾದ ಕುರಿಮರಿ), ಹಾಕ್‌ (ಬಸಳೆಯಂತ ಒಂದು ತರಕಾರಿ ಸೊಪ್ಪು), ರಿಸ್ಟಾ-ಗುಶ್ಟಾವಾ (ಟೊಮ್ಯಾಟೋ ಮತ್ತು ಮೊಸರಿನ ಪಲ್ಯದಲ್ಲಿನ ಕತ್ತರಿಸಿದ ಮಾಂಸದ ಉಂಡೆಗಳು) ಮತ್ತು ನಿಸ್ಸಂಶಯವಾಗಿ, ಏಷ್ಯಾದ ಸಂಸ್ಕೃತಿಗಳಿಗೆ ನಿರ್ದಿಷ್ಟವಾಗಿರುವ ವಿಶಿಷ್ಟವಾದ ಅನ್ನ ಇವುಗಳನ್ನು ಕಾಶ್ಮೀರಿ ಅಡುಗೆ ಪದ್ಧತಿಯು ಒಳಗೊಂಡಿದೆ. ಹಲವಾರು ವೈವಿಧ್ಯಮಯ ವಿಧಾನಗಳಲ್ಲಿ ಮಾಂಸ ಅಥವಾ ತರಕಾರಿಗಳನ್ನು, ಸಾಮಾನ್ಯವಾಗಿ ಕುರಿ-ಮಾಂಸವನ್ನು ಬೇಯಿಸುವುದನ್ನು ಸಾಂಪ್ರದಾಯಿಕ ವಾಜ್ವಾನ್‌ ಹಬ್ಬದೂಟವು ಒಳಗೊಳ್ಳುತ್ತದೆ.

ಮದ್ಯಸಾರ ಪಾನೀಯ ಮತ್ತು ದನದ ಮಾಂಸವನ್ನು ಕಾಶ್ಮೀರದಲ್ಲಿ ವ್ಯಾಪಕವಾಗಿ ಬಳಸುವುದಿಲ್ಲ. ಈ ವಲಯದಲ್ಲಿ ಚಹಾವನ್ನು ಮಾಡಲು ಎರಡು ವಿಶಿಷ್ಟ ಶೈಲಿಗಳನ್ನು ಅನುಸರಿಸಲಾಗುತ್ತದೆ: ನನ್‌ ಚಾಯ್‌, ಅಥವಾ ಉಪ್ಪಿನ ಚಹಾವು ನಸುಗೆಂಪು ಬಣ್ಣದಲ್ಲಿದ್ದು, ಸ್ಥಳೀಯರಲ್ಲಿ ಜನಪ್ರಿಯವಾಗಿದೆ; ಮತ್ತು ಹಬ್ಬದ ಸಂದರ್ಭಗಳಿಗೆಂದೇ ಮೀಸಲಾದ ಕಾಹ್‌ವಾಹ್‌ ಎಂಬ ಚಹಾವನ್ನು ಕೇಸರಿ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.

ಅರ್ಥ ವ್ಯವಸ್ಥೆ[ಬದಲಾಯಿಸಿ]

ಕಾಶ್ಮೀರಿ ಜನಸಂಖ್ಯೆಯ ದೊಡ್ಡ ವರ್ಗಗಳಿಗಾಗಿರುವ ಪ್ರಮುಖ ಆದಾಯದ ಮೂಲಗಳಲ್ಲಿ ಪ್ರವಾಸೋದ್ಯವೂ ಒಂದಾಗಿದೆ. ಇಲ್ಲಿ ತೋರಿಸಲಾಗಿರುವುದು ಶ್ರೀನಗರದಲ್ಲಿನ ಪ್ರಖ್ಯಾತ ದಾಲ್‌ ಸರೋವರ.
ಕರಕೊರಾಮ್ಸ್‌ನಲ್ಲಿನ ಪರ್ವತಾರೋಹಣ ಸಾಹಸ ಯಾತ್ರೆಗಳಿಗಾಗಿ ಉತ್ತರ ಭಾಗದ ಪ್ರದೇಶಗಳಲ್ಲಿರುವ ಸ್ಕಾರ್ದು ನಿರ್ಗಮನದ ತಾಣವಾಗಿದೆ.

ಕಾಶ್ಮೀರದ ಅರ್ಥವ್ಯವಸ್ಥೆಯು ಕೃಷಿಯ ಸುತ್ತ ಕೇಂದ್ರೀಕೃತವಾಗಿದೆ. ಅಕ್ಕಿಯು ಸಾಂಪ್ರದಾಯಿಕವಾಗಿ ಕಾಶ್ಮೀರ ಕಣಿವೆಯ ಪ್ರಮುಖ ಬೆಳೆಯಾಗಿತ್ತು ಮತ್ತು ಇದು ಜನರ ಮುಖ್ಯ ಆಹಾರವಾಗಿ ರೂಪುಗೊಂಡಿದೆ. ಇದರ ಜೊತೆಗೆ ಭಾರತದ ಮೆಕ್ಕೆಜೋಳ, ಗೋಧಿ, ಬಾರ್ಲಿ, ಮತ್ತು ತೋಕೆ ಗೋಧಿಯನ್ನೂ ಸಹ ಬೆಳೆಯಲಾಗುತ್ತಿತ್ತು. ಇಲ್ಲಿನ ಸಮಶೀತೋಷ್ಣ ಹವಾಮಾನವು ಶತಾವರಿ, ಪಲ್ಲೆಹೂವು, ಎಳೆದಂಟು ಮೂಲಿಕೆ, ಚಪ್ಪಟೆ ಹುರುಳಿಕಾಯಿ, ಕಡುಗೆಂಪು ಬಳ್ಳಿಯ ಅವರೆಗಳು, ಬೀಟ್‌ರೂಟ್‌, ಹೂಕೋಸು ಮತ್ತು ಎಲೆಕೋಸು ಇವೇ ಮೊದಲಾದ ಬೆಳೆಗಳಿಗೆ ಹೇಳಿಮಾಡಿಸಿದಂತಿದೆ. ಕಾಶ್ಮೀರ ಕಣಿವೆಯಲ್ಲಿ ಹಣ್ಣಿನ ಮರಗಳು ಸಾಮಾನ್ಯವಾಗಿದ್ದು, ಪೇರುಹಣ್ಣುಗಳು, ಸೇಬುಹಣ್ಣುಗಳು, ಪೀಚ್‌ಹಣ್ಣುಗಳು, ಮತ್ತು ಚೆರಿ ಹಣ್ಣುಗಳನ್ನು ಬೆಳೆಸಲಾದ ಹಣ್ಣಿನ ತೋಟಗಳು ನೀಡುತ್ತವೆ. ದೇವದಾರು, ಭದ್ರದಾರುಗಳು ಮತ್ತು ಪೀತದಾರುಗಳು, ಚೆನಾರ‍್ ಅಥವಾ ಪ್ಲೇನ್‌, ಮೇಪಲ್, ಭೂರ್ಜ ಮತ್ತು ಆಕ್ರೋಡು, ಸೇಬು, ಚೆರಿ ಇವೇ ಮೊದಲಾದವು ಇಲ್ಲಿನ ಪ್ರಮುಖ ಮರಗಳಾಗಿವೆ.

ಇತರ ವಲಯಗಳಿಗೆ ಮತ್ತು ರಾಷ್ಟ್ರಗಳಿಗೆ ಕ್ಯಾಶ್ಮೀರೀ ಉಣ್ಣೆಯು ರಫ್ತಾದಾಗ, ಐತಿಹಾಸಿಕವಾಗಿ ಕಾಶ್ಮೀರವು ವಿಶ್ವಾದ್ಯಂತ ಜನಪ್ರಿಯವಾಯಿತು (ಕ್ಯಾಶ್ಮೀರೀ ಮೇಕೆಗಳ ಸಂಖ್ಯೆಯು ಇಳಿಮುಖವಾಗಿರುವುದರಿಂದ ಹಾಗೂ ಚೀನಾದ ಕಡೆಯಿಂದ ಮಿತಿಮೀರಿದ ಸ್ಪರ್ಧೆಯು ಒಡ್ಡಲ್ಪಟ್ಟ ಕಾರಣದಿಂದ ರಫ್ತುಗಳು ಸ್ಥಗಿತಗೊಂಡಿವೆ). ಹೆಣಿಗೆ ಕೆಲಸ ಮತ್ತು ಪಾಶ್ಮಿನಾ ಶಾಲುಗಳು, ರೇಷ್ಮೆಯ ರತ್ನಗಂಬಳಿಗಳು, ರಗ್ಗುಗಳು, ಕುರ್ತಾಗಳನ್ನು ತಯಾರಿಸುವುದು, ಮತ್ತು ಕುಂಬಾರಿಕೆ ಇವೇ ಮೊದಲಾದ ಕುಸುರಿ ಕೆಲಸಗಳಲ್ಲಿ ಕಾಶ್ಮೀರಿಗಳು ಪ್ರವೀಣರಾಗಿದ್ದಾರೆ. ಕೇಸರಿಯೂ ಸಹ ಕಾಶ್ಮೀರದಲ್ಲಿ ಬೆಳೆಯಲ್ಪಡುತ್ತದೆ. ನೈಸರ್ಗಿಕವಾಗಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ಸಾವಯವ ಆಹಾರಗಳೆಂಬಂತೆ ಮಧ್ಯ ಪ್ರಾಚ್ಯ ದೇಶಗಳಿಗೆ ರಫ್ತುಮಾಡುವುದರ ಕುರಿತ ಪ್ರಯತ್ನಗಳೂ ಚಾಲ್ತಿಯಲ್ಲಿವೆ. ಬೆಳ್ಳಿಯ-ಕುಸುರಿ ಕೆಲಸ, ಪೇಪಿಯರ‍್ ಮಾಶೆ, ಮರದ-ಕೆತ್ತನೆ, ಮತ್ತು ರೇಷ್ಮೆಯ ನೇಯುವಿಕೆ ಇವೇ ಮೊದಲಾದವುಗಳಿಗೆ ಶ್ರೀನಗರವು ಹೆಸರುವಾಸಿಯಾಗಿದೆ.

2005ರ ಕಾಶ್ಮೀರ ಭೂಕಂಪದಿಂದ ಇಲ್ಲಿನ ಆರ್ಥಿಕತೆಯು ತೀವ್ರ ಹಾನಿಗೊಳಗಾಯಿತು. ಈ ಭೂಕಂಪದಿಂದಾಗಿ 2005ರ ಅಕ್ಟೋಬರ್‌ 8ರವರೆಗೆ, ಕಾಶ್ಮೀರದ ಪಾಕಿಸ್ತಾನಿ-ನಿಯಂತ್ರಿತ ಭಾಗದಲ್ಲಿ 70,000ಕ್ಕೂ ಹೆಚ್ಚಿನ ಸಾವುಗಳು ಸಂಭವಿಸಿವೆ ಮತ್ತು ಭಾರತದ ನಿಯಂತ್ರಣದಲ್ಲಿನ ಕಾಶ್ಮೀರದಲ್ಲಿ ಸುಮಾರು 1,500 ಸಾವುಗಳುಂಟಾಗಿವೆ. ಭಾರತದ-ಆಡಳಿತವಿರುವ ಕಾಶ್ಮೀರದ ಭಾಗವು ಹೈಡ್ರೋಕಾರ್ಬನ್ ಸಂಚಯನಗಳನ್ನು ಒಳಗೊಂಡ, ಸಾಮರ್ಥ್ಯದಿಂದೊಡಗೂಡಿದ ಸಮೃದ್ಧ ಬಂಡೆಗಳನ್ನು ಹೊಂದಿದೆ ಎಂದು ನಂಬಲಾಗಿದೆ.[೩೩][೩೪]

ಕಾಶ್ಮೀರದಲ್ಲಿನ ಪ್ರವಾಸೋದ್ಯಮದ ಇತಿಹಾಸ[ಬದಲಾಯಿಸಿ]

19ನೇ ಶತಮಾನದ ಆಡಳಿತದ ಅವಧಿಯಲ್ಲಿ, ತನ್ನ ಹವಾಗುಣದ ಕಾರಣದಿಂದಾಗಿ ಕಾಶ್ಮೀರವು ಒಂದು ಜನಪ್ರಿಯ ಪ್ರವಾಸಿ ತಾಣವಾಗಿ ಹೆಸರು ಪಡೆದಿತ್ತು. ಸರ್ಕಾರದ ವತಿಯಿಂದ ಪ್ರತಿವರ್ಷವೂ ಕೇವಲ 200 ಪಾಸುಗಳನ್ನು ನೀಡಲಾಗುತ್ತಿತ್ತು. ಭಾರತದ ನಿವಾಸಿಗಳ ಜೊತೆಜೊತೆಗೆ, ಐರೋಪ್ಯ ದೇಶಗಳ ಕ್ರೀಡಾಪಟುಗಳು ಹಾಗೂ ಪ್ರವಾಸಿಗರು ಅಲ್ಲಿಗೆ ಮುಕ್ತವಾಗಿ ಪ್ರಯಾಣ ಕೈಗೊಂಡಿದ್ದರು. ರಾವಲ್ಪಿಂಡಿಗೆ ಸಂಪರ್ಕಿಸಲಾದ ರೈಲುಮಾರ್ಗ, ಮತ್ತು ಆ ಎಡೆಯಿಂದ ಶ್ರೀನಗರಕ್ಕೆ ಇದ್ದ ಒಂದು ರಸ್ತೆಯು, ಕಾಶ್ಮೀರ ಕಣಿವೆಯ ಪ್ರವೇಶಾವಕಾಶವನ್ನು ಸುಲಭವಾಗಿಸಿದ್ದವು. ಜೂನ್‌ನ ಆರಂಭದಲ್ಲಿ ಶ್ರೀನಗರದಲ್ಲಿನ ತಾಪಮಾನವು ಹೆಚ್ಚಾದಾಗ, ಅಲ್ಲಿನ ನಿವಾಸಿಗಳು ಗುಲ್‌ಮಾರ್ಗ್‌ಗೆ ವಲಸೆ ಹೋದರು. ಈ ಪ್ರದೇಶವು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಒಂದು ಸೊಗಸುಗಾರಿಕೆಯ ಗಿರಿಧಾಮವಾಗಿತ್ತು. ಇಲ್ಲಿಗೆ ಭೇಟಿನೀಡುವವರ ಒಳಹರಿವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದಂತೆ, ಅದು ಕ್ರೀಡಾಪಟುಗಳಿಗಾಗಿರುವ ಆಟದ ಇಳಿಕೆಗೆ ಕಾರಣವಾಯಿತು. ವಿಶೇಷವಾದ ಆಟದ ಸಂರಕ್ಷಣಾ ನಿಯಮಗಳನ್ನು ಪರಿಚಯಿಸಲಾಯಿತು, ಮತ್ತು ನಲ್ಲಾಹ್‌ಗಳನ್ನು ಒಂದು ನಿದೇಶಿತ ಅವಧಿಗಳವರೆಗೆ, ಉರುಳಿಸಬೇಕಾದ ತಲೆಯ ಸಂಖ್ಯೆಯ ಮೇಲಿನ ಕಟ್ಟುಪಾಡಿನೊಂದಿಗೆ ಹೊರಕಳಿಸಲಾಯಿತು. ರಾವಲ್‌ಕೋಟ್‌ ಮತ್ತೊಂದು ಜನಪ್ರಿಯ ತಾಣವಾಗಿತ್ತು.

ಇದನ್ನೂ ನೋಡಿರಿ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. https://www.un.org/Depts/dpko/missions/unmogip/
 2. ಬಾಷಂ, ಎ.ಎಲ್. (2005) ದಿ ವಂಡರ‍್ ದಟ್ ವಾಸ್ ಇಂಡಿಯಾ , ಪಿಕಡಾರ್‌. ಪುಟಗಳು 572. ISBN 0-330-43909-X, ಪುಟ 110.
 3. ೩.೦ ೩.೧ ಇಂಪೀರಿಯಲ್ ಗೆಜೆಟಿಯರ‍್ ಆಫ್ ಇಂಡಿಯಾ, ಸಂಪುಟ 15 . 1908. ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌, ಆಕ್ಸ್‌ಫರ್ಡ್‌ ಮತ್ತು ಲಂಡನ್‌‌. ಪುಟಗಳು 93-95.
 4. "ಕಾಶ್ಮೀರ‍್." ದಿ ಆಕ್ಸ್‌ಫರ್ಡ್‌ ಇಂಗ್ಲಿಷ್ ಡಿಕ್ಷ್‌ನರಿ . 2ನೇ ಆವೃತ್ತಿ. 1989.
 5. Tapasyananda, Swami (2002). Sankara-Dig-Vijaya. pp. 186–195.
 6. ಟ್ರೈಯಾಡಿಕ್ಟ್ ಹಾರ್ಟ್‌ ಆಫ್ ಶಿವ, ಪಾಲ್ ಇ. ಮುಲ್ಲರ‍್-ಒರ್ಟೆಗಾ, ಪುಟ 12
 7. ಇಂಟ್ರಡಕ್ಷನ್ ಟು ದಿ ತಂತ್ರಲೋಕ, ನವಜೀವನ್ ರಾಸ್ತೋಗಿ, ಪುಟ 27
 8. ರೀ-ಆಕ್ಸೆಸಿಂಗ್ ಅಭಿನವಗುಪ್ತ, ನವಜೀವನ್ ರಾಸ್ತೋಗಿ, ಪುಟ 4
 9. ಕೀ ಟು ದಿ ವಿಡಿಯೋಸ್‌, ನಥಾಲಿಯಾ ಮಿಖೈಲೋವಾ, ಪುಟ 169
 10. ದಿ ಪ್ರತ್ಯಾಭಿಜ್ಞ ಫಿಲಾಸಫಿ, ಗಣೇಶ್ ವಾಸುದೇವ ಟಾಗೋರ‍್, ಪುಟ 12
 11. ಕಂಪ್ಯಾನಿಯನ್ ಟು ತಂತ್ರ, ಎಸ್.ಸಿ. ಬ್ಯಾನರ್ಜಿ, ಪುಟ 89
 12. ಡಾಕ್ಟ್ರೈನ್ ಆಫ್ ಡಿವೈನ್ ರೆಕಗ್ನಿಷನ್, ಕೆ. ಸಿ. ಪಾಂಡೆ, ಪುಟ V
 13. ಇಂಟ್ರಡಕ್ಷನ್ ಟು ದಿ ತಂತ್ರಲೋಕ, ನವಜೀವನ್ ರಾಸ್ತೋಗಿ, ಪುಟ 35
 14. ಲ್ಯೂಸ್ ಡೇ ತಂತ್ರ, ತಂತ್ರಲೋಕ, ಅಭಿನವಗುಪ್ತ, ರೇನಿಯೆರೊ ಗ್ನೋಲಿ, ಪುಟ LXXVII
 15. "ಹಿಸ್ಟರಿ ಆಫ್ ದಿ ರೈಸ್ ಆಫ್ ದಿ ಮಹೊಮೆಡನ್ ಪವರ‍್ ಇನ್ ಇಂಡಿಯಾ" ಎಂಬ ಶೀರ್ಷಿಕೆಯಡಿಯಲ್ಲಿ ಜಾನ್‌ ಬ್ರಿಗ್ಸ್‌ರಿಂದ ಅನುವಾದಿಸಲ್ಪಟ್ಟಿರುವ ಮುಹಮ್ಮದ್‌ ಕಾಸಿಮ್ ಹಿಂದು ಫರಿಶ್ತಾ : ತಾರೀಖ್-ಇ-ಫರಿಶ್ತಾ, 1829ರಲ್ಲಿ ಮೊದಲು ಪ್ರಕಟಗೊಂಡಿತು, ನವದೆಹಲಿ ಮರುಮುದ್ರಣ 1981.
 16. ೧೬.೦ ೧೬.೧ ೧೬.೨ ಇಂಪೀರಿಯಲ್ ಗೆಝೆಟಿಯರ‍್ ಆಫ್ ಇಂಡಿಯಾ, ಸಂಪುಟ 15 . 1908. "ಕಾಶ್ಮೀರ‍್: ಹಿಸ್ಟರಿ." ಪುಟಗಳು 94-95.
 17. ಅಮೃತ್‌ಸರ ಒಪ್ಪಂದ, 1846ರ ಮಾರ್ಚ್‌ 16 Archived 2009-01-05 ವೇಬ್ಯಾಕ್ ಮೆಷಿನ್ ನಲ್ಲಿ..
 18. From the text of the Treaty of Amritsar, signed ಮಾರ್ಚ್‌ 16, 1846.
 19. ೧೯.೦ ೧೯.೧ ಬೋವರ್ಸ್‌, ಪಾಲ್. 2004. "ಕಾಶ್ಮೀರ‍್" Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ.ಸಂಶೋಧನಾ ವರದಿ 4/28 Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ., ಇಂಟರ್‌ನ್ಯಾಷನಲ್ ಅಫೇರ್ಸ್‌ ಅಂಡ್ ಡಿಫೆನ್ಸ್, ಹೌಸ್ ಆಫ್ ಕಾಮನ್ಸ್ ಲೈಬ್ರರಿ, ಯುನೈಟೆಡ್ ಕಿಂಗ್‌ಡಂ.
 20. ಬ್ರಿಟಿಷ್‌ ಭಾರತದ ಕೊನೆಯ ವೈಸ್‌ರಾಯ್‌ ಆದ ವಿಸ್ಕೌಂಟ್ ಲೂಯಿಸ್‌ ಮೌಂಟ್‌ಬ್ಯಾಟ್ಟನ್‌, 1947 ರಿಂದ 1948ರವರೆಗೆ ಸ್ವತಂತ್ರ ಭಾರತದಲ್ಲಿ ಉಳಿದಿದ್ದರು, ಈ ಅವಧಿಯಲ್ಲಿ ಅವರು ಭಾರತ ಒಕ್ಕೂಟದ ಮೊದಲ ಗವರ್ನರ‍್-ಜನರಲ್‌ ಆಗಿ ಸೇವೆ ಸಲ್ಲಿಸಿದರು.
 21. ೨೧.೦ ೨೧.೧ ೨೧.೨ ಸ್ಟೀನ್, ಬರ್ಟನ್‌. 1998. ಎ ಹಿಸ್ಟರಿ ಆಫ್ ಇಂಡಿಯಾ . ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌. 432 ಪುಟಗಳು. ISBN 978-0-7513-2886-8 ಪುಟ 368.
 22. ೨೨.೦ ೨೨.೧ ೨೨.೨ ಕಾಶ್ಮೀರ‍್. (2007). ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿನದು. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಆನ್‌ಲೈನ್‌ ನಿಂದ 2007ರ ಮಾರ್ಚ್‌ 27ರಂದು ಮರುಸಂಪಾದಿಸಿದ್ದು.
 23. ೨೩.೦ ೨೩.೧ "Major Events". Jammu and Kashmir Government, India. Archived from the original on 2009-04-09. Retrieved 2007-01-09.
 24. "A Comprehensive Note on Jammu & Kashmir: The Northern Areas". Embassy of India, Washington D.C. Retrieved 2007-01-09.
 25. ೨೫.೦ ೨೫.೧ http://www.britannica.com/EBchecked/topic/312921/Vale-of-ಕಾಶ್ಮೀರ[ಶಾಶ್ವತವಾಗಿ ಮಡಿದ ಕೊಂಡಿ]
 26. ೨೬.೦ ೨೬.೧ Jina, Prem Singh (1996). Ladakh: The Land and the People. Indus Publishing. ISBN 8173870578.
 27. ೨೭.೦ ೨೭.೧ ೨೭.೨ ೨೭.೩ ೨೭.೪ ೨೭.೫ ೨೭.೬ ೨೭.೭ ಉಲ್ಲೇಖ ದೋಷ: Invalid <ref> tag; no text was provided for refs named imperialgazetteerkashmir
 28. ೨೮.೦ ೨೮.೧ ರೈ, ಮೃದು. 2004 ಹಿಂದು ರೂಲರ‍್, ಮುಸ್ಲಿಂ ಸಬ್ಜೆಕ್ಟ್ಸ್: ಇಸ್ಲಾಂ ಅಂಡ್ ದಿ ಹಿಸ್ಟರಿ ಆಫ್ ಕಾಶ್ಮೀರ್‌ . ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್‌. 320 ಪುಟಗಳು. ISBN 0-691-11688-1. ಪುಟ 37.
 29. ೨೯.೦ ೨೯.೧ BBC. 2003. ದಿ ಫ್ಯೂಚರ‍್ ಆಫ್ ಕಾಶ್ಮೀರ್‌? ಇನ್‌ ಡೆಪ್ತ್‌.
 30. ಬ್ರುಷ್ ಜೆ.ಇ. 1949. "ದಿ ಡಿಸ್ಟ್ರಿಬ್ಯೂಷನ್ ಆಫ್ ರಿಲಿಜಿಯಸ್ ಕಮ್ಯುನಿಟೀಸ್ ಇನ್ ಇಂಡಿಯಾ" ಆನ್ನಲ್ಸ್‌ ಆಫ್ ದಿ ಅಸೋಸಿಯೇಷನ್ ಆಫ್ ಅಮೆರಿಕನ್ ಜಿಯೋಗ್ರಾಫರ್ಸ್‌ , 39(2):81-98.
 31. ಎವಾನ್ಸ್, ಅಲೆಕ್ಸಾಂಡರ್‌. 2002. "ಎ ಡಿಪಾರ್ಚರ‍್ ಫ್ರಂ ಹಿಸ್ಟರಿ: ಕಾಶ್ಮೀರಿ ಪಂಡಿತ್ಸ್, 1990-2001" ಕಾಂಟೆಂಪರರಿ ಸೌತ್ ಏಷ್ಯಾ , 11(1):19-37.
 32. "CIA Factbook: ಭಾರತ–Transnational Issues". Archived from the original on 2008-06-11. Retrieved 2009-12-21.
 33. Iftikhar Gilani (2008-10-22). "Italian company to pursue oil exploration in Kashmir". Daily Times. Archived from the original on 2012-07-31. Retrieved 2009-11-20.
 34. Ishfaq-ul-Hassan (2008-02-22). [www.dnaindia.com/india/report_india-pakistan-to-explore-oil-jointly_1152227 "India, Pakistan to explore oil jointly"]. Daily News and Analysis. Retrieved 2009-11-20. {{cite web}}: Check |url= value (help)
 • Public Domain This article incorporates text from a publication now in the public domainChisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help); Missing or empty |title= (help)

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • ಬ್ಲಾಂಕ್, ಜೋನಾ. "ಕಾಶ್ಮೀರ‍್–ಫಂಡಮೆಂಟಲಿಸಮ್ ಟೇಕ್ಸ್ ರೂಟ್," ಫಾರಿನ್ ಅಫೇರ್ಸ್‌, 78,6 (1999ರ ನವೆಂಬರ‍್/ಡಿಸೆಂಬರ‍್): 36-42.
 • ಡ್ರೂ, ಫೆಡೆರಿಕ್. 1877. “ದಿ ನಾರ್ದರ್ನ್‌ ಬ್ಯಾರಿಯರ‍್ ಆಫ್ ಇಂಡಿಯಾ: ಎ ಪಾಪ್ಯುಲರ‍್ ಅಕೌಂಟ್ ಆಫ್ ದಿ ಜಮ್ಮು ಅಂಡ್ ಕಾಶ್ಮೀರ‍್ ಟೆರಿಟರೀಸ್ ವಿತ್ ಇಲ್ಲಸ್ಟ್ರೇಷನ್ಸ್; 1ನೇ ಆವೃತ್ತಿ; ಎಡ್ವರ್ಡ್ ಸ್ಟಾನ್‌ಫೋರ್ಡ್‌, ಲಂಡನ್‌. ಮರುಮುದ್ರಣ: ಲೈಟ್ & ಲೈಫ್ ಪಬ್ಲಿಷರ್ಸ್‌, ಜಮ್ಮು. 1971.
 • ಎವಾನ್ಸ್, ಅಲೆಕ್ಸಾಂಡರ್‌. ವೈ ಪೀಸ್ ವೋಂಟ್ ಕಮ್ ಟು ಕಾಶ್ಮೀರ್‌, ಕರೆಂಟ್ ಹಿಸ್ಟರಿ (ಸಂಪುಟ 100, ಸಂಖ್ಯೆ 645) ಏಪ್ರಿಲ್‌ 2001 ಪುಟ 170-175.
 • ಹುಸೇನ್, ಇಜಾಝ್ 1998. "ಕಾಶ್ಮೀರ‍್ ಡಿಸ್ಪ್ಯೂಟ್: ಆನ್ ಇಂಟರ್‌ನ್ಯಾಷನಲ್ ಲಾ ಪರ್‌ಸ್ಪೆಕ್ಟಿವ್", ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಕಿಸ್ತಾನ್ ಸ್ಟಡೀಸ್.
 • ಇರ್ಫಾನಿ, ಸುರೂಶ್ ಸಂಪಾದಿತ "ಫಿಫ್ಟಿ ಇಯರ್ಸ್‌ ಆಫ್‌ ದಿ ಕಾಶ್ಮೀರ‍್ ಡಿಸ್ಪ್ಯೂಟ್": ಮುಝಫರಾಬಾದ್‌ನಲ್ಲಿ ನಡೆಸಲಾದ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ನಡಾವಳಿಗಳನ್ನು ಆಧರಿಸಿದ್ದು, ಅಜಾದ್‌ ಜಮ್ಮು ಮತ್ತು ಕಾಶ್ಮೀರ ಆಗಸ್ಟ್ 24-25, 1997: ಯುನಿವರ್ಸಿಟಿ ಆಫ್ ಅಝಾದ್ ಜಮ್ಮು ಅಂಡ್ ಕಾಶ್ಮೀರ‍್, ಮುಝಫರಾಬಾದ್‌, AJK, 1997.
 • ಜೋಷಿ, ಮನೋಜ್ ಲಾಸ್ಟ್ ರೆಬೆಲಿಯನ್: ಕಾಶ್ಮೀರ್‌ ಇನ್‌ ದಿ ನೈಂಟೀಸ್‌ (ಪೆಂಗ್ವಿನ್, ನವದೆಹಲಿ, 1999).
 • ಖಾನ್, ಎಲ್. ಆಲಿ ದಿ ಕಾಶ್ಮೀರ‍್ ಡಿಸ್ಪ್ಯೂಟ್‌: ಎ ಪ್ಲಾನ್ ಫಾರ‍್ ರೀಜನಲ್ ಕೋಆಪರೇಷನ್ 31 ಕೊಲಂಬಿಯಾ ಜರ್ನಲ್ ಆಫ್ ಟ್ರಾನ್ಸ್‌ನ್ಯಾಷನಲ್ ಲಾ, 31, ಪುಟ 495 (1994).
 • ನೈಟ್‌, ಇ.ಎಫ್. 1893. ವೇರ‍್ ಥ್ರೀ ಎಂಪೈರ್ಸ್‌ ಮೀಟ್‌: ಎ ನೆರೇಟಿವ್ ಆಫ್ ರೀಸೆಂಟ್ ಟ್ರಾವಲ್‌ ಇನ್" ಕಾಶ್ಮೀರ‍್, ವೆಸ್ಟರ್ನ್‌ ಟಿಬೆಟ್, ಗಿಲ್ಗಿಟ್‌, ಅಂಡ್‌ ದಿ ಅಡ್‌ಜಾಯಿನಿಂಗ್‌ ಕಂಟ್ರೀಸ್‌ . ಲಾಂಗ್‌ಮನ್ಸ್‌, ಗ್ರೀನ್, ಅಂಡ್‌ ಕಂ., ಲಂಡನ್‌. ಮರುಮುದ್ರಣ: ಚೆಂಗ್ ವೆನ್ ಪಬ್ಲಿಷಿಂಗ್ ಕಂಪನಿ, ತೈಪಿ. 1971.
 • ಕೊಚ್ಲರ‍್, ಹಾನ್ಸ್‌. ದಿ ಕಾಶ್ಮೀರ‍್ ಪ್ರಾಬ್ಲಂ ಬಿಟ್ವೀನ್ ಲಾ ಅಂಡ್‌ ರಿಯಲ್‌ಪೊಲಿಟಿಕ್‌. ರಿಫ್ಲೆಕ್ಷನ್ಸ್‌ ಆನ್ ಎ ನೆಗೋಷಿಯೇಟೆಡ್‌ ಸೆಟ್ಲ್‌ಮೆಂಟ್‌ . "ಕಾಶ್ಮೀರ 2008ರ ಕುರಿತಾದ ಜಾಗತಿಕ ಚರ್ಚೆ"ಯಲ್ಲಿ ಮಾಡಲಾದ ಆಶಯಭಾಷಣ. ಯುರೋಪಿನ ಸಂಸತ್ತು, ಬ್ರಸೆಲ್ಸ್‌, 2008ರ ಏಪ್ರಿಲ್‌ 1.
 • ಲ್ಯಾಂಬ್, ಹೆರ್ಟಿಂಗ್‌ಫೋರ್ಡ್‌‌ಬರಿ, UK: ರಾಕ್ಸ್‌ಫೋರ್ಡ್‌ ಬುಕ್ಸ್‌,1994, "ಕಾಶ್ಮೀರ‍್: ಎ ಡಿಸ್ಪ್ಯೂಟೆಡ್‌ ಲೆಗಸಿ.
 • ಮೂರ್‌ಕ್ರಾಫ್ಟ್‌, ವಿಲಿಯಂ ಮತ್ತು ಟ್ರೆಬೆಕ್‌, ಜಾರ್ಜ್‌. 1841. ಟ್ರಾವೆಲ್ಸ್‌ ಇನ್‌ ದಿ ಹಿಮಾಲಯನ್ ಪ್ರಾವಿನ್ಸಸ್‌ ಆಫ್ ಹಿಂದೂಸ್ತಾನ್ ಅಂಡ್ ದಿ ಪಂಜಾಬ್‌; ಇನ್‌ ಲಡಾಖ್‌ ಅಂಡ್‌ ಕಾಶ್ಮೀರ‍್, ಇನ್ ಪೆಷಾವರ‍್, ಕಾಬುಲ್, ಕುಂದಝ್‌, ಅಂಡ್ ಬೊಖಾರ... ಫ್ರಂ 1819 ಟು 1825 , ಸಂಪುಟ II. ಮರುಮುದ್ರಣ: ನವದೆಹಲಿ, ಸಾಗರ‍್ ಪಬ್ಲಿಕೇಷನ್ಸ್‌, 1971.
 • ನೀವ್, ಅರ್ಥರ್‌. (ದಿನಾಂಕ ಗೊತ್ತಿಲ್ಲ). ದಿ ಟೂರಿಸ್ಟ್‌’ಸ್‌ ಗೈಡ್‌ ಟು ಕಾಶ್ಮೀರ‍್, ಲಡಾಖ್, ಸ್ಕಾರ್ಡೊ & ಕಂ . 18ನೇ ಆವೃತ್ತಿ. ಸಿವಿಲ್ ಅಂಡ್ ಮಿಲಿಟರಿ ಗೆಜೆಟ್‌, ಲಿ., ಲಾಹೋರ‍್. (ಈ ಆವೃತ್ತಿಯ ದಿನಾಂಕ ತಿಳಿದಿಲ್ಲ - ಆದರೆ 16ನೇ ಆವೃತ್ತಿಯು 1938ರಲ್ಲಿ ಪ್ರಕಟಗೊಂಡಿತು).
 • ಸ್ಕೋಫೀಲ್ಡ್‌, ವಿಕ್ಟೋರಿಯಾ. 1996. ಕಾಶ್ಮೀರ್ ಇನ್‌ ದಿ ಕ್ರಾಸ್‌ಫೈರ್‌ . ಲಂಡನ್‌: I B ಟೌರಿಸ್‌.
 • ಸ್ಟೀನ್, ಎಂ. ಔರೆಲ್‌. 1900. ಕಲ್ಹಣಾಸ್‌ ರಾಜತರಂಗಿಣಿ-ಎ ಕ್ರಾನಿಕಲ್ ಆಫ್ ದಿ ಕಿಂಗ್ಸ್‌ ಆಫ್ ಕಾಶ್ಮೀರ‍್ , 2 ಸಂಪುಟಗಳು. ಲಂಡನ್‌, ಎ. ಕಾನ್‌ಸ್ಟೇಬಲ್ & ಕಂ. ಲಿಮಿಟೆಡ್‌. 1900. ಮರುಮುದ್ರಣ, ದೆಹಲಿ, ಮೋತಿಲಾಲ್ ಬನಾರಸಿದಾಸ್‌, 1979.
 • ಯಂಗ್‌ಹಸ್ಬೆಂಡ್‌, ಫ್ರಾನ್ಸಿಸ್‌ ಅಂಡ್‌ ಮೋಲಿನ್ಯೂಕ್ಸ್‌, ಎಡ್ವರ್ಡ್‌ 1917. ಕಾಶ್ಮೀರ‍್ ಎ. & ಸಿ. ಬ್ಲಾಕ್‌, ಲಂಡನ್‌.
 • ನೊರೆಲ್ಲಿ-ಬಾಷ್‌ಲೆಟ್‌, ಪ್ಯಾಟ್ರೈಝಿಯಾ. "ಕಾಶ್ಮೀರ್‌ ಅಂಡ್‌ ದಿ ಕನ್ವರ್ಜೆನ್ಸ್‌ ಆಫ್ ಟೈಮ್, ಸ್ಪೇಸ್‌ ಅಂಡ್‌ ಡೆಸ್ಟಿನಿ", 2004; ISBN 0-945747-00-4. ’ಪ್ರಕಾಶ್‌’ನಲ್ಲಿ ನಾಲ್ಕು-ಭಾಗದ ಒಂದು ಸರಣಿಯಾಗಿ ಮೊದಲು ಪ್ರಕಟಿಸಲ್ಪಟ್ಟಿತು, ಮಾರ್ಚ್‌ 2002 - ಏಪ್ರಿಲ್‌ 2003, ಜಗತ್‌ ಗುರು ಭಗವಾನ್ ಗೋಪಿನಾಥ್ ಜಿ ಚಾಟಟಬಲ್ ಫೌಂಡೇಷನ್‌ನ ಒಂದು ಅವಲೋಕನ. [೧]
 • ಮುಹಮ್ಮದ್‌ ಅಯೂಬ್. ಆನ್ ಆರ್ಮಿ; ಇಟಾ ರೋಲ್ & ರೂಲ್ (ಎ ಹಿಸ್ಟರಿ ಆಫ್ ದಿ ಪಾಕಿಸ್ತಾನ್ ಆರ್ಮಿ ಫ್ರಂ ಇಂಡಿಪೆಂಡೆನ್ಸ್ ಟು ಕಾರ್ಗಿಲ್ 1947-1999) ರೋಸ್‌ಡಾಗ್ ಬುಕ್ಸ್‌, ಪಿಟ್ಸ್‌ಬರ್ಗ್‌, ಪೆನ್ಸಿಲ್ವೇನಿಯಾ USA 2005. ISBN 0-8059-9594-3.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕಾಶ್ಮೀರ&oldid=1202203" ಇಂದ ಪಡೆಯಲ್ಪಟ್ಟಿದೆ