ವಿಷಯಕ್ಕೆ ಹೋಗು

ಕುಮಾರಜೀವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಮಾರಜೀವ
ಜನನ334 CE
ಮರಣ413 CE
ವೃತ್ತಿ(ಗಳು)Buddhist monk, scholar, and translator
Known forTranslation of Buddhist texts written in Sanskrit to Chinese.

ಕುಮಾರ ಜೀವ ಚೀನದಲ್ಲಿ ಬೌದ್ಧಧರ್ಮದ ಪ್ರಸಾರಕ್ಕೆ ಮುಖ್ಯ ಕಾರಣನಾದ ಬೌದ್ಧಭಿಕ್ಷು. 4ನೆಯ ಶತಮಾನದವ.

ಬಾಲ್ಯ[ಬದಲಾಯಿಸಿ]

ತಂದೆ ಕುಮಾರಾಯನ [೧][೨][೩] , ಭಾರತೀಯ; ತಾಯಿ ಜೀವಾ, ಕುಚಿನಗರದ ರಾಜಕುಮಾರಿ. ಬಂಧುದತ್ತನ ಮಾರ್ಗದರ್ಶನದಲ್ಲಿ ಕಾಶ್ಮೀರ ಮತ್ತು ಕ್ಯಾಷ್ಭರ್‍ಗಳಲ್ಲಿ ಬೌದ್ಧಸಾಹಿತ್ಯ-ತತ್ತ್ವಶಾಸ್ತ್ರಗಳನ್ನೂ ಗೊಕ್ಕುಕದಲ್ಲಿ ಮಹಾಯಾನ ಬೌದ್ಧದರ್ಶನವನ್ನೂ ಅಧ್ಯಯನ ಮಾಡಿ ಅನಂತರ ಕುಚಿನಗರದ ವಿಹಾರದಲ್ಲಿ ಭಿಕ್ಷುವಾಗಿದ್ದ.

ಪ್ರಸಿದ್ಧಿ[ಬದಲಾಯಿಸಿ]

The Statue of Kumārajīva in front of the Kizil Caves in Kuqa County, Xinjiang, China

ಮಧ್ಯ ಏಷ್ಯದಲ್ಲೆಲ್ಲ ಇವನ ಪಾಂಡಿತ್ಯ ಪ್ರಸಿದ್ಧವಾಗಿತ್ತು. 383 ರಲ್ಲಿ ಚೀನೀಯರು ಕುಚಿನಗರದ ಮೇಲೆ ದಾಳಿ ಮಾಡಿದಾಗ ಕುಮಾರ ಜೀವನನ್ನು ಸೆರೆ ಹಿಡಿದು ಚೀನಕ್ಕೊಯ್ದರು. ಅಲ್ಲಿಯ ಚಕ್ರವರ್ತಿ ಇವನ ವಿದ್ವತ್ತಿಗೆ ಮಾರು ಹೋಗಿ ಇವನನ್ನು 401 ರಲ್ಲಿ ತನ್ನ ರಾಜಧಾನಿಗೆ ಕರೆಸಿಕೊಂಡು ತನ್ನ ಗುರುವಾಗಿ ನೇಮಿಸಿಕೊಂಡ, ಅಲ್ಲಿ ಇವನು 412 ರ ವರೆಗೆ ಇದ್ದು ನೂರಕ್ಕೂ ಹೆಚ್ಚು ಸಂಸ್ಕತ ಬೌದ್ಧ ಗ್ರಂಥಗಳನ್ನು ಚೀನೀ ಭಾಷೆಗೆ ಪರಿವರ್ತಿಸಿದ. ಮಹಾಯಾನ ತತ್ತ್ವಗಳನ್ನು ಚೀನೀಯರಿಗೆ ಬೋಧಿಸಿದವರಲ್ಲಿ ಈತ ಮೊದಲಿಗ. ಸದ್ಧರ್ಮ ಪುಂಡರೀಕ, ಸೂತ್ರಾಲಂಕಾರ, ವಜ್ರಚ್ಛೇದಿತಾ ಗ್ರಂಥಗಳ ಅನುವಾದಗಳು ಪ್ರಸಿದ್ಧವಾಗಿವೆ. ಮಧ್ಯಶಾಖೆಯ ಹಲವು ಗ್ರಂಥಗಳನ್ನೂ ಪರಿವರ್ತನೆ ಮಾಡಿದ್ದಾನೆ. ಕುಮಾರಜೀವ 413 ರಲ್ಲಿ ಚೀನದಲ್ಲಿ ತೀರಿಕೊಂಡ. ಸೆಂಗ್‍ಚ ಓ (384-414) ಮತ್ತು ತ ಓ-ಷೆಂಗ್ (ಸು.434)-ಇವರು ಕುಮಾರಜೀವನ ಪ್ರಮುಖ ಶಿಷ್ಯರು.

ಉಲ್ಲೇಖಗಳು[ಬದಲಾಯಿಸಿ]

  1. Upinder Singh, A History of Ancient and Early Medieval India: From the Stone Age to the 12th Century, Pearson Education India (2008), p. 523
  2. Moti Chandra, Trade and Trade Routes in Ancient India, Abhinav Publications (1977), p. 180
  3. David Howard Smith, Chinese Religions From 1000 B.C. to the Present Day, Weidenfeld & Nicolson (1971), p. 115

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Works by ಕುಮಾರಜೀವ at Project Gutenberg

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: