ರಾಜತರಂಗಿಣಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ರಾಜತರಂಗಿಣಿ ಕಾಶ್ಮೀರದ ಬ್ರಾಹ್ಮಣ ಕಲ್ಹಣನಿಂದ ಕ್ರಿ.ಶ. ೧೨ನೇ ಶತಮಾನದಲ್ಲಿ ಸಂಸ್ಕೃತದಲ್ಲಿ ಬರೆಯಲ್ಪಟ್ಟ, ವಾಯವ್ಯ ಭಾರತೀಯ ಉಪಖಂಡದ, ವಿಶೇಷವಾಗಿ ಕಾಶ್ಮೀರದ ರಾಜರ, ಒಂದು ಛಂದೋಬದ್ಧ ಐತಿಹಾಸಿಕ ಕಾಲಾನುಕ್ರಮ. ಈ ಕೃತಿಯು ಸಾಮಾನ್ಯವಾಗಿ ಕಾಶ್ಮೀರದ ಪರಂಪರೆಯನ್ನು ದಾಖಲಿಸುತ್ತದೆ, ಆದರೆ ರಾಜತರಂಗಿಣಿಯ ೧೨೦ ಪದ್ಯಗಳು ರಾಜ ಅನಂತದೇವನ ಪುತ್ರ ರಾಜ ಕಲಶನ ಆಳ್ವಿಕೆಯಲ್ಲಿ ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ದುರಾಡಳಿತವನ್ನು ವಿವರಿಸುತ್ತವೆ. ಮುಂಚಿನ ಪುಸ್ತಕಗಳು ತಮ್ಮ ಕಾಲಗಣನೆಯಲ್ಲಿ ನಿಖರವಾಗಿಲ್ಲವಾದರೂ, ಅವು ಮುಂಚಿನ ಕಾಶ್ಮೀರ ಮತ್ತು ಭಾರತೀಯ ಉಪಖಂಡದ ವಾಯವ್ಯ ಭಾಗಗಳಲ್ಲಿನ ಅದರ ನೆರೆರಾಜ್ಯಗಳ ಬಗ್ಗೆ ಮಾಹಿತಿಯ ಒಂದು ಅಮೂಲ್ಯ ಮೂಲವನ್ನು ಒದಗಿಸುತ್ತವೆ, ಮತ್ತು ನಂತರದ ಇತಿಹಾಸಕಾರರು ಹಾಗು ಜನಾಂಗ ವರ್ಣನಕಾರರಿಂದ ವ್ಯಾಪಕವಾಗಿ ಉಲ್ಲೇಖಿಸಲಾಗುತ್ತವೆ.

ಇನ್ನಷ್ಟು ವಿವರಗಳಿಗೆ ಕಲ್ಹಣ ಲೇಖನವನ್ನು ನೋಡಿ