2014ರ ಅಕ್ಟೋಬರ್ ಹರಿಯಾನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ
ಹರಿಯಾನ 2014-ಬಿಜೆಪಿ-47(33.2%); ಕಾಂ:-15(20.6%); ಐಎನ್.ಎಲ.ಡಿ-19(24.1%;ಎಚ್.ಜೆ.ಸಿ.-2(7.5%);ಸ್ವತಂತ್ರ-5(10.6%);ಇತರೆ-2(7.5%)ನೋಟ-0.4%)
ಪಾರ್ಟಿ/ಇಸವಿ | ಸ್ಥಾನ | ಶೇ. | ಸ್ಥಾನ | ಶೇ.+/- |
---|---|---|---|---|
ಕಾಂ-2009 | 41 | 35.12%? | 2014:-15 (20.6% | -15.೦6% |
ಬಿಜೆಪಿ-2009 | 4 | ? | 2014:-47(33.2%) | +29%?% |
ಐಎನ್.ಎಲ್.ಡಿ-2009 | 30 | 31%? | 2014ಐಎನ್.ಎಲ್.ಡಿ.:-19 (24.1) | -7? |
ಹರಿಯಾಣ -90: 2014=ಬಿಜೆಪಿ -47(33.2%); ಕಾಂಗ್ರೆಸ್.-15 (20.6%-);ಐಎನ್.ಎಲ್.ಡಿ.-19 (24.1%)ಎಚ್ಜೆಸಿ-2(3.6%);ಪಕ್ಷೇತರರು -5(10.6%) ; ಇತರರು-2(7.5%)ನೊಟಾ-0.4%) 2009=ಬಿಜೆಪಿ -4; ಕಾಂಗ್ರೆಸ್.-41;ಐಎನ್.ಎಲ್.ಡಿ.-30 ; ಎಚ್ಜೆಸಿ-6;ಪಕ್ಷೇತರರು -6 ; ಇತರರು-9.
- ಕಾಂ=2009-35.12%/2014-20.6
- ಪಂಚಕುಲ: ಹರಿಯಾಣದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮನೋಹರಲಾಲ್ ಖಟ್ಟರ್ ದಿ. ೨೬-೧೦-೨೦೧೪ ರ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಕಪ್ತಾನ್‌ಸಿಂಗ್ ಸೋಲಂಕಿ ಪ್ರಮಾಣವಚನ ಬೋಧಿಸಿದರು.
- ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ‌್ಯಕರ್ತರಾಗಿರುವ, 60 ವರ್ಷ ವಯಸ್ಸಿನ ಖಟ್ಟರ್ ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 40 ವರ್ಷಗಳಿಂದ ಆರೆಸ್ಸೆಸ್ ನಂಟು ಹೊಂದಿರುವ ಅವರ ಮೋದಿ ಅವರ ಆಪ್ತರೂ ಹೌದು. ರೋಹ್ಟಕ್ ಜಿಲ್ಲೆಯಲ್ಲಿ ಜನಿಸಿದ ಅವರು ಅವಿವಾಹಿತರು. 1980ರಲ್ಲಿ ಪೂರ್ಣಾವಧಿ ಪ್ರಚಾರಕರಾಗಿ ಆರೆಸ್ಸೆಸ್ ಪ್ರವೇಶಿಸಿದ ಅವರು 14 ವರ್ಷ ಅಲ್ಲಿ ಸೇವೆ ಸಲ್ಲಿಸಿ ಬಳಿಕ 1994ರಲ್ಲಿ ಹರಿಯಾಣ ಬಿಜೆಪಿ ಪ್ರಧಾನ ಕಾರ‌್ಯದರ್ಶಿಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
- ಹರಿಯಾಣ ರಾಜ್ಯ ರೂಪುಗೊಂಡು 48 ವರ್ಷ ಕಳೆದಿದ್ದು ಇದೇ ಮೊದಲ ಬಾರಿ ಪಂಜಾಬಿಯೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಲ್ ಕ್ಷೇತ್ರದಿಂದ ಆಯ್ಕೆಯಾಗಿರುವ ಖಟ್ಟರ್ ಅ. 21ರಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.
- ಮಹಾರಾಷ್ಟ್ರ:288:
2014=ಬಿಜೆಪಿ -122(27.8%); ಕಾಂಗ್ರೆಸ್.-42? (17.9%) ; ಶಿವ ಸೇನಾ-63.(19.4%) ಎನ್.ಸಿಪಿ.-41(17.3%)-2(3.6%);ಪಕ್ಷೇತರರು -7(4.7%) ; ಇತರರು-12(9%)ನೊಟಾ-0.4%)ಎಂ.ಎಸ್.ಎಸ್.-1 (3.1%)
- ಇತ್ತೀಚೆಗೆ, ಶಾಸಕ ಗೋವಿಂದ್ ರಾಥೋಡ್ ಅವರು ಹೃದಯಾಘಾತದಿಂದ ಅಸುನೀಗಿರುವುದರಿಂದ ಕಮಲ ಪಕ್ಷದ ಬಲ ಈಗ 121ಕ್ಕೆ ಇಳಿದಿದೆ. ಶಿವಸೇನೆ 63, ಕಾಂಗ್ರೆಸ್ 44, ಎನ್‌ಸಿಪಿ 41 ಜನಪ್ರತಿನಿಧಿಗಳನ್ನು ಪಡೆದಿವೆ. (ಕಾಂಗ್ರೆಸ್ 44+ಎನ್‌ಸಿಪಿ 41=35.2% ಆಗುತ್ತದೆ. ಮಿತ್ರಕೂಟವಿಲ್ಲದೆ ಕಡಿಮೆ ಸ್ಥಾನ ಬಂದಿದೆ)
ಮಹಾರಾಷ್ಟ್ರ | ಗೆಲವು(ಶೇ.ಗಳಿಸಿದ ವೋಟು)
16-10-2014 ಅಕ್ಟೋಬರ್ ಮತದಾನವಾಗಿ 19-10-2014ರಂದು ಎಣಿಕೆಯಾದ ಫಲಿತಾಂಶ |
---|---|
ಬಿಜೆಪಿ | 122 (27.8%)(-1, ಮೃತ)=121 |
ಕಾಂ. | 44 (42) (17.9%) |
ಎನ್ಸಿಪಿ | 41 (17.3%) |
ಎಸ್.ಎಸ್. | 63 (19.4%) |
ಎಮ್.ಎನ್.ಎಸ್ | 1 (3.1%) |
ಪಕ್ಷೇತರರು | 7 (4.7%) |
ಇತರೆ | 12(9%) |
ನೋಟಾ | 0.4% |
- Oct 28, 2014ರಂದು ಮಹಾರಾಷ್ಟ್ರ ವಿಧಾನಸಭೆಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ದೇವೇಂದ್ರ ಫಡ್ನವಿಸ್ ದೇವೇಂದ್ರ ಫಡ್ನವಿಸ್ ಅವರು ಆಯ್ಕೆಯಾಗಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದಿ.31-10-2014 ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಫಡ್ನವಿಸ್ ಅವರು ಮಹಾರಾಷ್ಟ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಸಿಎಂ ಗಾದಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದವರು.
2009=ಬಿಜೆಪಿ -46; ಕಾಂ-82; ಎನ್.ಸಿಪಿ.-44; ಎಂ.ಎಸ್.ಎಸ್. 13;ಪಕ್ಷೇತರರು 24;ಇತರರು -17.
ವರ್ಷ | ಬಿಜೆಪಿ-ಸ್ಪರ್ದೇ | ಗೆಲವು | ಶೇಕಡಾ ವೋಟು |
---|---|---|---|
1980 | 145 | 14 | 9.38%ಶೇ. |
1985 | 67 | 16 | 7.25% |
1990 | 104 | 42 | 10.71% |
1995. | 116 | 65 | 12.80% |
1999 | 117 | 56 | 14.54% |
2004 | 111 | 54 | 13.67% |
2009 | 119 | 46 | 14.02% |
2014 | 288 | 122 | 27.8% |
1970ರ ಜುಲೈ 22 ರಂದು ಜನಿಸಿದ ದೇವೇಂದ್ರ ಫಡ್ನವಿಸ್ ಅವರದ್ದು ಮೂಲತಃ ರಾಜಕಾರಣದ ಕುಟುಂಬ. ದೇಶಸ್ತ ಬ್ರಾಹ್ಮಣ ಸಮುದಾಯದ ಈ ನಾಯಕನ ತಂದೆಯ ಹೆಸರು ಗಂಗಾಧರರಾವ್ ಫಡ್ನವೀಸ್. ತಾಯಿ ಹೆಸರು ಸರಿತಾ ಫಡ್ನವೀಸ್. ಅಮರಾವತಿಯ ಇವರು ಸದ್ಯ 'ವಿದರ್ಭ ಹೌಸಿಂಗ್ ಸೊಸೈಟಿ'ಯ ನಿರ್ದೇಶಕಿ. ಗಂಗಾಧರ ರಾವ್ ಫಡ್ನವೀಸ್ ಅವರು ಜನಸಂಘ, ಆ ನಂತರ ಬಿಜೆಪಿಯಿಂದ ನಾಗ್ಪುರದ ಎಂಎಲ್‌ಸಿ ಆಗಿದ್ದರು.
- ಶೈಕ್ಷಣಿಕ ಅರ್ಹತೆ
1986-87ರಲ್ಲಿ ಧರ್ಮಪೀಠ ಜ್ಯೂನಿಯರ್ ಕಾಲೇಜಿನಲ್ಲಿ ವ್ಯಾಸಂಗ. ನಂತರ ನಾಗ್ಪುರ ಕಾನೂನು ಕಾಲೇಜಿನಿಂದ ಪದವಿ. ಬರ್ಲಿನ್‌ನ 'ಜರ್ಮನ್ ಫೌಂಡೇಶನ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್' ಸಂಸ್ಥೆಯಿಂದ 'ಬ್ಯೂಸಿನೆಸ್ ಮ್ಯಾನೇಜ್‌ಮೆಂಟ್'ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವರು. ಆರ್ಥಿಕ ವಿಷಯಗಳ ಕುರಿತು ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ.
- ಕುಟುಂಬ
- 2006ರಲ್ಲಿ ಅಮೃತಾ ರಾಣೆ ಅವರನ್ನು ಧರ್ಮಪತ್ನಿಯಾಗಿ ವರಿಸಿದ ದೇವೇಂದ್ರ ಫಡ್ನವೀಸ್ ದಂಪತಿಗೆ ದಿವಿಜಾ ಎಂಬ ಮಗಳಿದ್ದಾಳೆ. ಅಮೃತಾ ಅವರು ಸದ್ಯ ನಾಗ್ಪುರದ ಎಕ್ಸಿಸ್ ಬ್ಯಾಂಕ್‌ನಲ್ಲಿ ಬ್ರ್ಯಾಂಚ್ ಮಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ತಂದೆ-ತಾಯಿ ಇಬ್ಬರೂ ವೃತ್ತಿಯಲ್ಲಿ ವೈದ್ಯರು. ನಿಭಾಯಿಸಿದ ಪ್ರಮುಖ ಹುದ್ದೆಗಳು
- 2013: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ
- 2010: ಮಹಾರಾಷ್ಟ್ರ ಬಿಜೆಪಿ ಘಟಕದ ಪ್ರಧಾನ ಕಾರ‌್ಯದರ್ಶಿ
- 2001: ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ
- 1999: ಮೊದಲಬಾರಿಗೆ ಶಾಸಕರಾಗಿ ಆಯ್ಕೆ, ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಜಯ
- 1994: ಭಾರತೀಯ ಜನತಾ ಯುವ ಮೋರ್ಚಾದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ
- 1992: ಭಾರತೀಯ ಜನತಾ ಯುವ ಮೋರ್ಚಾದ ನಾಗ್ಪುರ ಘಟಕದ ಅಧ್ಯಕ್ಷ
ನೋಡಿ
[ಬದಲಾಯಿಸಿ]ಆಧಾರ:ಟೈಮ್ಸ್ ಆಫ್ ಇಂಡಿಯಾ/ವಿಜಯವಾಣಿ/ಪ್ರಜಾವಾಣಿ-ಸುದ್ದಿ - ೨೦-೧೦-೨೦೧೪;ವಿಜಯವಾಣಿ-೨೯-೧೦-೨೦೧೪