ಚರ್ಚೆಪುಟ:ಜಮ್ಮು ಮತ್ತು ಕಾಶ್ಮೀರ

ವಿಕಿಪೀಡಿಯ ಇಂದ
Jump to navigation Jump to search

ಜಮ್ಮು ಮತ್ತು ಕಶ್ಮೀರ ಎಂದಿರುವ ಈ ಲೇಖನವನ್ನು "ಜಮ್ಮು ಮತ್ತು ಕಾಶ್ಮೀರ" ಎಂದರೆ ಸೂಕ್ತವಲ್ಲವೆ? ಬಳಕೆಯಲ್ಲಿ ಕಶ್ಮೀರ್, ಕಾಶ್ಮೀರ್ ಎನ್ನಲಾಗುತ್ತದೆ. ಕನ್ನಡದಲ್ಲಿ, ಕರ್ನಾಟಕದಲ್ಲಿನ ವಿವಿಧ ಮಾಧ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ "ಕಾಶ್ಮೀರ" ಎಂದು ಕರೆಯಲಾಗುತ್ತದೆ. ನಿಮ್ಮೆಲ್ಲರ ಅಭಿಪ್ರಾಯ ತಿಳಿಸಿ. - ಮನ|Mana Talk - Contribs ೧೯:೦೫, ೨ September ೨೦೦೬ (UTC)

ಕನ್ನಡದಲ್ಲಿ "ಕಾಶ್ಮೀರ" ಸಾಮಾನ್ಯವಾಗಿ ಬಳಕೆಯಲ್ಲಿರುವುದರಿಂದ, ಅದೇ ಹೆಚ್ಚು ಸೂಕ್ತವೆನಿಸುತ್ತದೆ. Naveenbm ೦೨:೫೧, ೩ September ೨೦೦೬ (UTC)ನವೀನ್
ಈ ಲೇಖನವನ್ನು ಜಮ್ಮು ಮತ್ತು ಕಾಶ್ಮೀರ ಎಂದು ಬದಲಾಯಿಸುವೆ. ಯಾರದ್ದಾದರೂ ವಿರೋಧವಿದ್ದರೆ ದಯವಿಟ್ಟು ತಿಳಿಸಿ. - ಮನ|Mana Talk - Contribs ೧೮:೧೧, ೩ September ೨೦೦೬ (UTC)

ಪ್ರಚಲಿತ ರಾಜಕೀಯ ವಿಷಯಗಳ ಪ್ರಸ್ತುತತೆ ಬಗ್ಗೆ[ಬದಲಾಯಿಸಿ]

ಇದು ಜಮ್ಮ ಮತ್ತು ಕಾಶ್ಮೀರ ರಾಜ್ಯದ ಬಗ್ಗೆ ಇರುವ ಪುಟವಾಗಿದ್ದು ಇಲ್ಲಿ ರಾಜಕೀಯ ಬೆಳವಣಿಗೆಗಳನ್ನು, ನಿರ್ದಿಷ್ಟ ಅವಧಿಯ ವಿಧಾನಸಭಾ ಬಲಾಬಲಗಳನ್ನು, ರಾಜಕೀಯ ಪಕ್ಷ ವ್ಯಕ್ತಿಗಳ ಬಗ್ಗೆ ಬರೆಯುವುದು ಸರಿಯಲ್ಲ. ಇದು ಪ್ರಚಲಿತ ವಿಷಯಕ್ಕೆ ಇರುವ ಪುಟವಲ್ಲ. ಜಮ್ಮುಕಾಶ್ಮೀರ ರಾಜ್ಯದ ಇತಿಹಾಸ, ಭೌಗೋಳಿಕತೆ, ಜನಾಂಗ, ಪ್ರಕೃತಿ, ಭಾಷೆ, ಪ್ರವಾಸಿ ಸ್ಥಳಗಳು, ಶಿಕ್ಷಣ, ಆರ್ಥಿಕತೆ, ರಾಜಕೀಯ ಇತ್ಯಾದಿ ವಿಷಯಗಳ ಬಗ್ಗೆ ಜನೆರಲ್ ಆಗಿ ಬರೆಯಬೇಕು. ಅದರಲ್ಲಿ ಸಾಂದರ್ಭಿಕವಾಗಿ ಪ್ರಚಲಿತ ವಿದ್ಯಮಾನಗಳನ್ನು ಅಗತ್ಯವಿದ್ದಲ್ಲಿ ಉಲ್ಲೇಖಿಸಬಹುದು. ಈಗ 2014 ಚುನಾವಣೆ, ವಿಧಾನಸಭೆ, ಸರ್ಕಾರ ರಚನೆ ವಿಷಯಗಳನ್ನು ಬರೆಯಲಾಗಿದೆ. ಮುಂದಿನ ಅವಧಿಯ ಸರ್ಕಾರ ಬಂದಾಗ ಇವೆಲ್ಲಾ ಹಳೆಯದಾಗುತ್ತವೆ. ಈ ಪುಟದಲ್ಲಿ ಆಗ ಬದಲಾಯಿಸದಿದ್ದಲ್ಲಿ ಹಾಗೇ ಹಳೆಯ ವಿವರಗಳು ಉಳಿಯುತ್ತವೆ. ರಾಜ್ಯ ಅಂದರೆ ಬರೀ ರಾಜಕೀಯವಲ್ಲ. ಹಾಗಾಗಿ ಪ್ರಚಲಿತ, ಬದಲಾಗುವ ವಿಷಯಗಳನ್ನು ಆದಷ್ಟೂ ಕಡಿಮೆ ಮಾಡಿ ಆ ರಾಜ್ಯದ ಬಗ್ಗೆ ವಿಷಯಗಳನ್ನು ಬರೆಯಬೇಕು. ಕೊನೇಪಕ್ಷ ಇಂಗ್ಲೀಶ್ ವಿಕಿಯನ್ನಾದರೂ ನೋಡಿ ತಿಳಿದುಕೊಳ್ಳಬಹುದು.--Vikas Hegde (ಚರ್ಚೆ) ೦೮:೫೦, ೬ ಏಪ್ರಿಲ್ ೨೦೧೬ (UTC)

ಸರಿ[ಬದಲಾಯಿಸಿ]

  • ಜಮ್ಮ ಮತ್ತು ಕಾಶ್ಮೀರ ರಾಜ್ಯದ ರಾಜಕೀಯ ವಿಷಯ ತುಂಬಲು ವಿಷಯ ಕಡಿಮೆ ಇದ್ದುದರಿಂದ ಮತ್ತು ಆ ಪುಟದಲ್ಲಿ ಯಾವುದೇ ಹೆಚ್ಚು ವಿಷಯವಿಲ್ಲದೆ ಇದ್ದುರಿಂದ ಹುಡುಕಲು ಸುಲಭವೆಮದು, ಅದಕ್ಕೇ 'ಸರ್ಕಾರಮತ್ತು ಆಡಳಿತ' ಅದರ ಒಂದು ವಿಭಾಗ- ಹೇಗಿದ್ದರೂ ಇರಬೇಕಾಗುವುದೆಂಬ ಕಾರಣಕ್ಕೆ ವಿವರ ಹಾಕಿದೆ. ಜಮ್ಮ ಮತ್ತು ಕಾಶ್ಮೀರದ ವಿವರ ಹಾಕಿದನಂತರ ಈ ವಿವರಗಳನ್ನು ಹೊಸ ಪುಟಕ್ಕಿ ಹಾಕಬಹುದು. ಅದಕ್ಕಾಗಿ ೧.ಜಮ್ಮ ಮತ್ತು ಕಾಶ್ಮೀರ ಸರ್ಕಾರ; ೨.ಜಮ್ಮ ಮತ್ತು ಕಾಶ್ಮೀರ ವಿಧಾನ ಸಭೆ; ೩.ಜಮ್ಮ ಮತ್ತು ಕಾಶ್ಮೀರ ವಿಧಾನ ಸಭೆ ಚುನಾವಣೆ ೨೦೦೯ ಮತ್ತು ೪.ಜಮ್ಮ ಮತ್ತು ಕಾಶ್ಮೀರ ವಿಧಾನ ಸಭೆ ಚುನಾವಣೆ ೨೦೧೪; ೫.ಮೆಹಬೂಬಾ ಮುಫ್ತಿ, ಎಂದು ಐದು ಪುಟ ತೆರೆಯಬೇಕಾಗುವುದು. ಅಷ್ಟು ವ್ಯವಧಾನವಿಲ್ಲದ್ದರಿಂದ ಒಂದೇ ಕಡೆ ಹಾಕಿದೆ. ಈಗಲೂ ಚುನಾವನಣೆ ವಿಷಯ ಮತ್ತು ಸರ್ಕಾರ ರಚನೆ ವಿಷಯಗಳಿಗೆ ಬೇರೆ ಪುಟ ಮಾಡಬಹುದು. ಅದು ಚಿಕ್ಕ(ಚುಟುಕ) ಪುಟವಾಗುವುದು. ಜಮ್ಮ ಮತ್ತು ಕಾಶ್ಮೀರದ ವಿವರ ಯಾರಾದರೂ ತುಂಬಿದರೆ (ಬಹಳವಿದೆ-ಸಂದಿಗ್ಧವಿದೆ), ಈ ವಿವರಗಳನ್ನು ಸ್ಥಳಾಂತರಿಸಬಹುದು. Bschandrasgr (ಚರ್ಚೆ) ೧೧:೪೪, ೬ ಏಪ್ರಿಲ್ ೨೦೧೬ (UTC)

ರದ್ದುಮಾಡುವ ಪರಿಣತರು[ಬದಲಾಯಿಸಿ]

  • ರಾಜಕೀಯ ಮತ್ತು ಸರ್ಕಾರ : ಈ ವಿಚಾರ ಇಂಗ್ಲಿಷ ವಿಭಾಗದಲ್ಲಿದೆ. ಈ ವಷಯದ ವಿವರಗಳನ್ನು ಬೇರೆ ಪುಟಕ್ಕೂ ಹಾಕದೆ ಅಳಿಸಿದ್ದಾರೆ, ಇದು ಅಹಂಕಾರ ಮತ್ತು ಹೊಟ್ಟೆಕಿಚ್ಚಿನ ನೆಡೆ ಇರಬಹುದು. ತಾವೂ ಮಾಡುವುದಿಲ್ಲ, ಬೇರೆಯವರು ಮಾಡಿದ್ದನ್ನೂ ಸಹಿಸುವುದಿಲ್ಲ. ಸುಲಭವಾಗಿ ಬೇರೆ ಪೊಟಕ್ಕೆ ಹಾಕಬಹುದಿತ್ತು. ಆ ಕೆಲಸ ಮಾಡದೆ, ಆದರೆ ಅಳಿಸಿದ್ದಾರೆ ವಿಕಾಸ ಹೆಗಡೆ ಎನ್ನುವ ಯಜಮಾನ ಸಂಪಾದಕರು ಅಳಿಸಿದ್ದಾರೆ. ಬೇಕಾದವರು ಇಂಗ್ಲಿಷ್ ಪುಟ ನೋಡಬೇಕು. ಈ ಬಗೆಯ ನೆಡವಳಿಕೆಯಿಂದ ಕನ್ನಡಕ್ಕೆ ಸಂಪಾದಕರ ಕೊರತೆ ಉಂಟಾಗಿದೆ. ಪ್ರಸ್ತುತ ವಿಷಯಗಳನ್ನು ಅಪ್‍ಡೆಟ್ ಮಅಡುವ ಸಂಪಾದಕರೇ ಇಲ್ಲ. ಕನ್ನಡ ವಿಕಿ ಬಡವಾಗಲು ಈ ಬಗೆಯ ಧೋರಣೆಯೇ ಕಾರಣ. 'ಜಮ್ಮ ಮತ್ತು ಕಾಶ್ಮೀರ' ಈ ಲೇಖನಕ್ಕೆ ಒಂದೇ ಒಂದು ಉಲ್ಲೇಖವಿಲ್ಲ ಅದರ ಬಗೆಗೆ ಆ ಯಜಮಾನ ಸಂಪಾದಕರಿಗೆ ಗಮನವಿಲ್ಲ. ಅವರೇ ಉಲ್ಲೇಕ ಹುಡುಕಿ ಹಾಕಬಹುದಿತ್ತು ಅದನ್ನೂ ಮಾಡಿಲ್ಲ. ಕನ್ನಡ ಅಭಿವೃದ್ಧಿಗಿಂತ ತಮ್ಮ ಯಜಮಾನಿಕೆಯೇ ಮುಖ್ಯ ಎಂದು ಭಾವಿಸಿದಂತೆ ತೋರುವುದು. ಈಗ ಪ್ರಸ್ತುತ ಬೆಳವಣಿಗೆಯನ್ನು ಹಾಕಲು ಪುಟವೇ ಇಲ್ಲದಂತಾಗಿದೆ. Bschandrasgr (ಚರ್ಚೆ) ೦೯:೦೯, ೨೦ ಜೂನ್ ೨೦೧೮ (UTC)