ಬೇಸಿಗೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇದರ other uses, see ಬೇಸಿಗೆ (disambiguation).
"Summery" redirects here. For the shortened version of an original, see Summary.
A field in summer.
ಟೆಂಪ್ಲೇಟು:Weather

ಸಮಶೀತೋಷ್ಣವಲಯದ ನಾಲ್ಕೂ ಋತುಗಳಲ್ಲಿ ವಸಂತ ಹಾಗೂ ಶರತ್ಕಾಲದ ನಡುವೆ ಬೇಸಿಗೆ ಯೆಂಬುದು ಅತಿ ಬೆಚ್ಚನೆಯ ಕಾಲವಾಗಿದೆ. ದೀರ್ಘಾವಧಿಯ ಹಗಲು ಹಾಗೂ ಅಲ್ಪಾವಧಿಯ ಇರುಳು ಬೇಸಿಗೆ ಕಾಲದ ವೈಶಿಷ್ಟ್ಯವಾಗಿದೆ. ಖಗೋಳವಿಜ್ಞಾನ ಮತ್ತು ವಲಯವಾರು ಹವಾಮಾನ ವಿಜ್ಞಾನಗಳನ್ನು ಆಧರಿಸಿ, ಋತುಗಳು ವಿವಿಧ ವಲಯಗಳಲ್ಲಿ ವಿವಿಧ ದಿನಾಂಕಗಳಂದು ಆರಂಭವಾಗುತ್ತವೆ. ಆದರೂ, ದಕ್ಷಿಣ ಗೋಲಾರ್ಧದಲ್ಲಿ ಬೇಸಿಗೆಯಾಗಿದ್ದರೆ ಉತ್ತರ ಗೋಲಾರ್ಧದಲ್ಲಿ ಚಳಿಗಾಲವಿರುತ್ತದೆ; ದಕ್ಷಿಣ ಗೋಲಾರ್ಧದಲ್ಲಿ ಚಳಿಗಾಲವಿದ್ದರೆ ಉತ್ತರ ಗೋಲಾರ್ಧದಲ್ಲಿ ಬೇಸಿಗೆ ಕಾಲವಿರುತ್ತದೆ. ಉಷ್ಣವಲಯ ಹಾಗೂ ಉಪ-ಉಷ್ಣವಲಯಗಳಲ್ಲಿ ಬೇಸಿಗೆಯಂದು ಮಳೆಯಾಗುವುದು. ಬೇಸಿಗೆ ಕಾಲದಂದು ಉಷ್ಣವಲಯದ ಚಂಡಮಾರುತಗಳು ಉಗಮಿಸಿ ಉಷ್ಣ ಮತ್ತು ಉಪ-ಉಷ್ಣವಲಯದ ಸಾಗರಗಳಲ್ಲಿ ಅಳೆಯುತ್ತವೆ. ಖಂಡಗಳ ಒಳನಾಡುಗಳಲ್ಲಿ, ಅಪರಾಹ್ನ ಅಥವಾ ಸಂಜೆಯ ವೇಳೆ ಆಲಿಕಲ್ಲು ಸಹಿತ ಗುಡುಗು-ಬಿರುಗಾಳಿ-ಮಳೆ ಸಂಭವಿಸಬಹುದು. ಅತಿಬೆಚ್ಚನೆಯ ಹವಾಮಾನ ಮತ್ತು ದೀರ್ಘಾವದಿಯ ದಿನಗಳ ಕಾರಣ, ಬೇಸಿಗೆಯ ಕಾಲದಲ್ಲಿ ಶಾಲೆಗಳಿಗೆ ರಜೆಯಿರುತ್ತದೆ.

ಬೇಸಿಗೆ ಕಾಲದ ಸಮಯ[ಬದಲಾಯಿಸಿ]

ಖಗೋಳ ಶಾಸ್ತ್ರದ ದೃಷ್ಟಿಯಿಂದ, ವಿಷುವತ್ಸಂಕ್ರಾಂತಿಗಳು ಮತ್ತು ಅಯನ ಸಂಕ್ರಾಂತಿಗಳು ಋತುಗಳ ಮಧ್ಯದಲ್ಲಿರುವವು. ಆದರೆ, ಸರಾಸರಿ ಉಷ್ಣಾಂಶಗಳ ಆಧಾರದ ಮೇಲೆ ವ್ಯತ್ಯಾಸವಾಗಬಹುದಾದ ಋತುವಾರು ಮಂದಗತಿಯ ಕಾರಣ, ಋತುವಿನ ಹವಾಲಕ್ಷಣದ ಆರಂಭವು ಖಾಗೋಳಿಕ ಋತುವಿನ ಆರಂಭದ ಹಲವು ವಾರಗಳ ನಂತರ ಸಂಭವಿಸುತ್ತದೆ. [೧] ಪವನಶಾಸ್ತ್ರಜ್ಞರ ಪ್ರಕಾರ, ಉತ್ತರ ಗೋಲಾರ್ಧದಲ್ಲಿ ಜೂನ್, ಜುಲೈ ಮತ್ತು ಆಗಸ್ಟ್‌ ತಿಂಗಳುಗಳು ಹಾಗೂ ದಕ್ಷಿಣ ಗೋಲಾರ್ಧದಲ್ಲಿ ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಬೇಸಿಗೆ ಕಾಲವು ಸಂಭವಿಸುತ್ತದೆ. [೨] ಬೇಸಿಗೆ ಕಾಲದ ಈ ಪವನಶಾಸ್ತ್ರೀಯ ವ್ಯಾಖ್ಯಾನವು, ದೀರ್ಘಾವದಿಯ, ಅತಿ ಬೆಚ್ಚಗಿನ ಹಗಲು ಮತ್ತು ಅಲ್ಪಾವಧಿಯ ಇರುಳನ್ನು ಹೊಂದಿರುವ ಋತುವೆಂಬ ಸಾಮಾನ್ಯ ಅನಿಸಿಕೆಗೆ ಸರಿಹೊಂದುತ್ತದೆ. ಖಾಗೋಳಿಕ ದೃಷ್ಟಿಯಿಂದ, ದಿನಗಳ ಅವಧಿಯು ವಿಷುವತ್ಸಂಕ್ರಾಂತಿಯಿಂದ ಅಯನ ಸಂಕ್ರಾಂತಿಯ ವರೆಗೆ ದೀರ್ಘಗೊಳ್ಳುತ್ತವೆ. ಅಯನ ಸಂಕ್ರಾಂತಿಯ ನಂತರ ಬೇಸಿಗೆಯ ದಿನಗಳು ಕ್ರಮತಃ ಕಡಿಮೆಯಾಗುತ್ತವೆ. ಇದರಿಂದಾಗಿ ಪವನಶಾಸ್ತ್ರೀಯ ಬೇಸಿಗೆಯು ಅತಿ ದೀರ್ಘಾವಧಿಯ ಹಗಲಿನತ್ತ ಸಾಗಿ, ಅಂದಿನಿಂದ ಹಗಲಿನ ಅವಧಿಯು ಕಡಿಮೆಯಾಗುತ್ತಾ ಹೋಗುತ್ತದೆ. ಬೇಸಿಗೆಯ ಹಗಲಿನ ಅವಧಿಯು ವಸಂತದ ಹಗಲಿನ ಅವಧಿಗಿಂತಲೂ ಹೆಚ್ಚಾಗಿರುತ್ತದೆ.


ಆಸ್ಟ್ರಿಯಾ, ಡೆನ್ಮಾರ್ಕ್‌ ಮತ್ತು ಅಂದಿನ USSRನಲ್ಲಿ ಋತುಗಳನ್ನು ಪವನಶಾಸ್ತ್ರೀಯವಾಗಿ ಅಳೆಯಲಾಗಿದೆ. ಇದೇ ರೀತಿಯನ್ನು ಯುನೈಟೆಡ್‌ ಕಿಂಗ್ಡಮ್‌ನಲ್ಲಿಯೂ ಸಹ ಬಳಸಲಾಗಿದೆ. ಇಲ್ಲಿ ಬೇಸಿಗೆ ಋತು ಮೇ ತಿಂಗಳ ಮಧ್ಯದಿಂದ ಆಗಸ್ಟ್ ತಿಂಗಳ ಮಧ್ಯದ ವರೆಗೆ ಎಂದು ತಿಳಿಯಲಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಷುವತ್ಸಂಕ್ರಾಂತಿಗಳು ಮತ್ತು ಅಯನಸಂಕ್ರಾಂತಿಗಳನ್ನು ಆಧರಿಸಿದ ವ್ಯಾಖ್ಯಾನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇಲ್ಲಿ ಹಲವು ವಲಯಗಳಲ್ಲಿ ಖಂಡೀಯ ಹವಾಗುಣಗಳನ್ನು ಹೊಂದಿದ್ದು, ಸುಮಾರು ಆರು ವಾರಗಳವರೆಗಿನ ಉಷ್ಣಾಂಶ ಮಂದಗತಿ ಇರುತ್ತದೆ.


ಆದರೂ, ಇತರೆಡೆ, ಋತುಗಳ ಆರಂಭಗಳ ಬದಲಿಗೆ ಮಧ್ಯಹಂತಗಳನ್ನು ಗುರುತಿಸಲು ಅಯನಸಂಕ್ರಾಂತಿಗಳು ಮತ್ತು ವಿಷುವತ್ಸಂಕ್ರಾಂತಿಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಚೀನೀ ಖಗೋಳವಿಜ್ಞಾನದಲ್ಲಿ, ಬೇಸಿಗೆಯು ಸುಮಾರು ೫ ಮೇ ರಂದು (jiéqì (ಸೌರ ಪದ) lìxià (立夏) ಎನ್ನಲಾದ, ಅರ್ಥಾತ್‌ 'ಬೇಸಿಗೆಯ ಸ್ಥಾಪನೆ') ಆರಂಭಗೊಂಡು ಸುಮಾರು ೬ ಆಗಸ್ಟ್‌ ರಂದು ಅಂತ್ಯಗೊಳ್ಳುತ್ತದೆ. ಪಾಶ್ಚಾತ್ಯ ಬಳಕೆಯ ಉದಾಹರಣೆಗೆ, ವಿಲಿಯಮ್‌ ಷೇಕ್‌ಸ್ಪಿಯರ್‌ನ ಎ ಮಿಡ್ಸಮ್ಮರ್‌ ನೈಟ್ಸ್‌ ಡ್ರೀಮ್ ‌ ಎಂಬ ನಾಟಕವನ್ನು ವರ್ಷದ ಅತ್ಯಲ್ಪಾವಧಿಯ ಇರುಳಲ್ಲಿ (ಬೇಸಿಗೆಯ ಅಯನಸಂಕ್ರಾಂತಿ) ನಡೆಸಲಾಗುತ್ತದೆ.

ಐರ್ಲೆಂಡ್‌ನಲ್ಲಿ, ರಾಷ್ಟ್ರೀಯ ಪವನಶಾಸ್ತ್ರೀಯ ಸೇವಾ ಸಂಸ್ಥೆ ಮೆಟ್‌ ಏರಿಯಾನ್‌ ಪ್ರಕಾರ, ಜೂನ್‌, ಜುಲೈ ಮತ್ತು ಆಗಸ್ಟ್‌ ಬೇಸಿಗೆಯ ತಿಂಗಳುಗಳಾಗಿವೆ. ಆದರೂ, ಐರಿಷ್‌ ಪಂಚಾಂಗದ ಪ್ರಕಾರ, ಬೇಸಿಗೆಯು ೧ ಮೇ ರಂದ ಆರಂಭಗೊಂದು, ೧ ಆಗಸ್ಟ್‌ಗೆ ಅಂತ್ಯಗೊಳ್ಳುತ್ತದೆ. ಐರ್ಲೆಂಡ್‌ನ ಶಾಲಾ ಪಠ್ಯಪುಸ್ತಕಗಳು ಬೇಸಿಗೆ ಆರಂಭದ ದಿನಾಂಕ ಕುರಿತು, ೧ ಜೂನ್‌ ಪವನಶಾಸ್ತ್ರೀಯ ವ್ಯಾಖ್ಯಾನದ ಬದಲಿಗೆ, ದಿನಾಂಕ ೧ ಮೇರಿಂದ ಆರಂಭಗೊಳ್ಳುವ ಸಾಂಸ್ಕೃತಿಕ ನಿಯಮವನ್ನು ಅನುಸರಿಸುತ್ತವೆ.


ಮುಂಗಾರು ಮೊದಲು ಆರಂಭವಾಗುವ ದಕ್ಷಿಣ ಮತ್ತು ಅಗ್ನೇಯ ಏಷ್ಯಾ ವಲಯಗಳಲ್ಲಿ ಬೇಸಿಗೆ ಕಾಲವು ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ಅಥವಾ ಜೂನ್‌ ತಿಂಗಳ ಆರಂಭದ ವರೆಗೆ ಇರುತ್ತದೆ. ಇದು ವರ್ಷದ ಅತಿ ಬೆಚ್ಚನೆಯ ಋತುವಾಗಿರುತ್ತದೆ. ಮುಂಗಾರು ಮಳೆಯು ಆರಂಭವಾಗುವುದರೊಂದಿಗೆ ಬೇಸಿಗೆಯು ಅಂತ್ಯಗೊಳ್ಳುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಅಮೆರಿಕಾ ಸಂಯುಕ್ತ ಸಂಸ್ಥಾನದ ಕೆಲವೆಡೆ, ಬೇಸಿಗೆ ಕಾಲವು ಮೇ ತಿಂಗಳ ಕೊನೆಯ ಸೋಮವಾರದಂದು (ಸ್ಮಾರಕ ದಿನ ವಾರಾಂತ್ಯ) ಆರಂಭಗೊಂಡು, ಸೆಪ್ಟೆಂಬರ್‌ ತಿಂಗಳ ಮೊದಲ ಸೋಮವಾರದಂದು (ಶ್ರಮಿಕ ದಿನ ವಾರಾಂತ್ಯ) ಅಂತ್ಯಗೊಳ್ಳುತ್ತದೆ. ಇದೇ ರೀತಿ, ಇನ್ನೊಂದು ಉಲ್ಲೇಖವು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಬೇಸಿಗೆಯ ರಜೆಗಳಿಗಾಗಿ ಮುಚ್ಚಿರುವ ಅವಧಿಯನ್ನು ಬೇಸಿಗೆ ಕಾಲ ಎನ್ನಲಾಗುತ್ತದೆ. ಈ ಅವಧಿಯು ಸಾಮಾನ್ಯವಾಗಿ ಜೂನ್‌ ತಿಂಗಳ ಆರಂಭಿಕ ಅಥವಾ ಮಧ್ಯದಲ್ಲಿ ಆರಂಭಗೊಂಡು ಆಗಸ್ಟ್‌ ತಿಂಗಳ ಅಪರಾರ್ಧ ಅಥವಾ ಸೆಪ್ಟೆಂಬರ್‌ ತಿಂಗಳ ಆರಂಭದ ತನಕ ಇರುತ್ತದೆ. ಶಾಲೆಯ ಇರುವ ಸ್ಥಳದ ಮೇಲೂ ಸಹ ಅವಲಂಬಿಸುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಬೇಸಿಗೆಯ ಅಯನಸಂಕ್ರಾಂತಿಯಿಂದ ಶರತ್ಕಾಲದ ವಿಷುವತ್ಸಂಕ್ರಾಂತಿಯ ವರೆಗಿನ ಕಾಲವನ್ನು ಬೇಸಿಗೆಯ ಋತುವೆಂದು ನಿರ್ಣಯಿಸಲಾಗುತ್ತದೆ. ref>http://www.petoskeynews.com/articles/2009/06/19/coming_up/doc4a3a502e0a8de215951583.txt</ref>[೩][೪][೫]

ಹವಾಮಾನ[ಬದಲಾಯಿಸಿ]

ಆಸ್ಟ್ರೇಲಿಯಾದ ಡಾರ್ವಿನ್‌ನಲ್ಲಿ ರಾತ್ರಿಯ ಹೊತ್ತು ತೇವವಾದ ಋತುಮಾನ ಚಂಡಮಾರುತ ಮಳೆ.

ಆರ್ದ್ರ ಋತುವು ಬೇಸಿಗೆಯ ಕಾಲದಲ್ಲಿ ಉಷ್ಣ ಮತ್ತು ಉಪ-ಉಷ್ಣ ವಲಯಗಳಲ್ಲಿ ಆರಂಭವಾಗುತ್ತದೆ. ಆರ್ದ್ರ ಋತುವಿನೊಂದಿಗೆ ಸಾಮಾನ್ಯವಾಗಿ ಬೀಸುವ ಗಾಳಿಯಲ್ಲಿ ಋತುವಾರು ಸ್ಥಳಾಂತರಣವಿದ್ದಲ್ಲಿ, ಮುಂಗಾರು ಎನ್ನಲಾಗುತ್ತದೆ. [೬]

ಹುಲ್ಲುಗಾಡಿನ ವಲಯಗಳಲ್ಲಿ ಸಸ್ಯವರ್ಗದ ಬೆಳವಣಿಗೆ ಆರ್ದ್ರ ಋತುವಿನಲ್ಲಿ ಹೆಚ್ಚಾಗಿರುತ್ತದೆ. [೭] ಆದರೂ ಸಹ, ಈ ಋತುವು ಆಹಾರ ಕೊರತೆಯ ಕಾಲವಾಗಿದ್ದು, ಫಸಲುಗಳು ಸಂಪೂರ್ಣವಾಗಿ ಬೆಳೆಯುವ ಮುಂಚೆ ಈ ಕೊರತೆಯುಂಟಾಗುತ್ತದೆ. [೮] ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿರುವ ಜನರಲ್ಲಿ ಕಾಲಕ್ಕನುಗುಣವಾಗಿ ದೇಹದ ತೂಕದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಆರ್ದ್ರತಾ ಋತುವಿನಲ್ಲಿ ತೂಕದಲ್ಲಿ ಇಳಿದು, ಮೊದಲ ಕುಯ್ಲಿನ ಸಮಯದಂದು ಪುನಃ ಹೆಚ್ಚಾಗುತ್ತದೆ. [೯] ಹೆಚ್ಚಿದ ಉಷ್ಣಾಂಶ ಮತ್ತು ಭಾರೀ ಮಳೆಯಾಗುವ ಕಾಲಗಳಲ್ಲಿ ಮಲೇರಿಯಾ ಸೋಂಕಿನ ಸಂಭವ ಹೆಚ್ಚಾಗುತ್ತದೆ. [೧೦]


ಆರ್ದ್ರ ಋತುವಿನ ಆರಂಭದಲ್ಲಿ ಹಸುಗಳು ಕರುಗಳಿಗೆ ಜನ್ಮ ನೀಡುತ್ತವೆ. [೧೧] ಮಳೆಗಾಲದ ಆರಂಭದಲ್ಲಿ ಮೆಕ್ಸಿಕೊ ದೇಶದಿಂದ ಮೊನಾರ್ಕ್‌ ಚಿಟ್ಟೆಗಳು ವಲಸೆ ಹೋಗುತ್ತವೆ. [೧೨] ಉಷ್ಣವಲಯಗಳಲ್ಲಿ ವಾಸಿಸುವ ಚಿಟ್ಟೆ ಪ್ರಭೇದಗಳು, ಪರಭಕ್ಷಕ ಪ್ರಾಣಿಗಳನ್ನು ದೂರವಿಡಲು ತಮ್ಮ ರೆಕ್ಕೆಗಳ ಮೇಲೆ ದೊಡ್ಡ ಗಾತ್ರದ ಚುಕ್ಕೆಗಳನ್ನು ಹೊಂದಿರುತ್ತವೆ. ಇಂತಹ ಚಿಟ್ಟೆಗಳು ಶುಷ್ಕ ಋತುಗಳಿಗಿಂತಲೂ ಹೆಚ್ಚಾಗಿ ಆರ್ದ್ರ ಋತುವಿನಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. [೧೩] ಉಷ್ಣವಲಯ ಹಾಗೂ ಉಪ-ಉಷ್ಣವಲಯಗಳ ಬೆಚ್ಚಗಿನ ಕ್ಷೇತ್ರಗಳಲ್ಲಿ, ಭಾರಿಮಳೆ ಕಾರಣ ಜೌಗು ಪ್ರದೇಶಗಳಲ್ಲಿ ಲವಣಾಂಶ ಕಡಿಮೆಯಾಗಿ, ಮೊಸಳೆಗಳು ಮೊಟ್ಟೆಯಿಡುವುದಕ್ಕೆ ಬಹಳ ಅನುಕೂಲಕರವಾಗುತ್ತದೆ. [೧೪] ಅರೊಯೊ ಟೋಡ್‌ ಎಂಬ ಇನ್ನೊಂದು ಪ್ರಭೇದವು, ಮಳೆಯಾಗಿ ಒಂದೆರಡು ತಿಂಗಳ ನಂತರ ಮೊಟ್ಟೆಯಿಡುತ್ತದೆ. [೧೫] ಆರ್ಮಡಿಲೊಗಳು (ಚಿಪ್ಪುಗವಚಿ) ಮತ್ತು ಗಿಲಿಕೆ ಹಾವುಗಳು ಇನ್ನೂ ಎತ್ತರದ ಪ್ರದೇಶಗಳನ್ನು ಇಚ್ಛಿಸುವವು. [೧೬]

ಆಗಸ್ಟ್‌ 1992ರ ಅಪರಾರ್ಧದಲ್ಲಿ ಹರಿಕೇನ್‌ ಲೆಸ್ಟರ್‌ನ ಚಿತ್ರ.

ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿ, ವಿಲಕ್ಷಣದ ಉಷ್ಣವಲಯದ ಚಂಡಮಾರುತದ ಕಾಲವು ೧ ಜೂನ್‌ನಿಂದ ೩೦ ನವೆಂಬರ್‌ ತನಕ ಇರುತ್ತದೆ. ಆಗಸ್ಟ್‌ ತಿಂಗಳ ಅಪರಾರ್ಧ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಇದು ಉತ್ತುಂಗದ ಹಂತ ತಲುಪುತ್ತದೆ. [೧೭] ದಿನಾಂಕ ೧೦ ಸೆಪ್ಟೆಂಬರ್‌ರಂದು ಅಟ್ಲಾಂಟಿಕ್‌ ಬಿರುಗಾಳಿ ಋತುವು ಶಿಖರವನ್ನು ತಲುಪುತ್ತದೆ. ಈಶಾನ್ಯ ಪ್ರಶಾಂತ (ಫೆಸಿಫಿಕ್‌) ಸಾಗರದಲ್ಲಿ ಹೆಚ್ಚಿನ ಚಟುವಟಿಕೆಗಳುಂಟು, ಆದರೆ ಅದು ಅಟ್ಲಾಂಟಿಕ್‌ನಂತೆಯೇ ಅದೇ ಅವಧಿಯಲ್ಲಿರುತ್ತದೆ. [೧೮] ವಾಯುವ್ಯ ಪ್ರಶಾಂತ ಸಾಗರದಲ್ಲಿ ಇಡೀ ವರ್ಷದಲ್ಲಿ ಉಷ್ಣವಲಯದ ಬಿರುಗಾಳಿಗಳು ಸಂಭವಿಸುತ್ತವೆ. ಫೆಬ್ರವರಿಯಲ್ಲಿ ಅದು ಕನಿಷ್ಠ ಹಂತ ತಲುಪಿ, ಸೆಪ್ಟೆಂಬರ್‌ ತಿಂಗಳ ಆರಂಭದಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ. ಉತ್ತರ ಭಾರತದ ತಗ್ಗು ಪ್ರದೇಶದಲ್ಲಿ, ಏಪ್ರಿಲ್‌ನಿಂದ ಡಿಸೆಂಬರ್‌ ತಿಂಗಳ ತನಕ ಬಿರುಗಾಳಿಗಳು ಸಾಮಾನ್ಯ, ಮೇ ಮತ್ತು ನವೆಂಬರ್‌ ತಿಂಗಳಲ್ಲಿ ಉತ್ತುಂಗವನ್ನು ತಲುಪುತ್ತದೆ. [೧೭] ದಕ್ಷಿಣ ಗೋಲಾರ್ಧದಲ್ಲಿ ಉಷ್ಣವಲಯದ ಬಿರುಗಾಳಿಯ ವರ್ಷವು ೧ ಜುಲೈ ಅಂದು ಆರಂಭವಾಗಿ, ಇಡೀ ವರ್ಷ ನಡೆಯುತ್ತದೆ. ದಿನಾಂಕ ೧ ನವೆಂಬರ್‌ರಂದು ಆರಂಭಗೊಂಡು ಫೆಬ್ರವರಿ ತಿಂಗಳ ಮಧ್ಯ ಅಥವಾ ಮಾರ್ಚ್‌ ತಿಂಗಳ ಆರಂಭದಲ್ಲಿ ಉತ್ತುಂಗಕ್ಕೇರಿ ಏಪ್ರಿಲ್‌ ತಿಂಗಳ ಅಂತ್ಯದ ವರೆಗೂ ನಡೆಯುವ‌ ಉಷ್ಣವಲಯ ಬಿರುಗಾಳಿ ಋತುವನ್ನೂ ಇದು ಒಳಗೊಳ್ಳುತ್ತದೆ. [೧೭][೧೯]

ಉತ್ತರ ಅಮೆರಿಕಾದ ಒಳ-ವಲಯದಾದ್ಯಂತ ಪರ್ವತಾಕಾರದ ಮೇಘರಾಶಿಗಳು ಮಾರ್ಚ್‌ ಮತ್ತು ಅಕ್ಟೋಬರ್‌ ತಿಂಗಳುಗಳ ನಡುವೆ, ಅಪರಾಹ್ನ ಮತ್ತು ಸಂಜೆಯ ಹೊತ್ತು ಆಲಿಕಲ್ಲಿನ ಮಳೆ ಸುರಿಸುತ್ತದೆ. ಮೇ ತಿಂಗಳಿಂದ ಸೆಪ್ಟೆಂಬರ್‌ ವರೆಗಿನ ಅವಧಿಯಲ್ಲಿ ಅಲಿಕಲ್ಲಿನ ಮಳೆಯ ಸಂಭವ ಹೆಚ್ಚು. ಅಮೆರಿಕಾ ಸಂಯುಕ್ತ ಸಂಸ್ಥಾನದ ವ್ಯೊಮಿಂಗ್‌ ಪ್ರಾಂತ್ಯದ ಚೆಯನ್‌ ಉತ್ತರ ಅಮೆರಿಕಾದಲ್ಲಿಯೇ ಅತಿ ಹೆಚ್ಚು ಆಲಿಕಲ್ಲಿನ ಮಳೆ ಸಂಭವಿಸುವ ನಗರವಾಗಿದೆ. ಇಲ್ಲಿ ಪ್ರತಿ ಋತುವಿಗೆ ಸರಾಸರಿ ಒಂಬತ್ತರಿಂದ ಹತ್ತು ಬಾರಿ ಆಲಿಕಲ್ಲಿನ ಮಳೆಯಾಗುವುದುಂಟು. [೨೦]


ನಿರ್ಮಾಣ ಚಟುವಟಿಕೆಗಳು[ಬದಲಾಯಿಸಿ]

ಎತ್ತರದ ಅಕ್ಷಾಂಶದ ಸ್ಥಳಗಳಲ್ಲಿ, ರಸ್ತೆ ದುರಸ್ತಿ ಚಟುವಟಿಕೆಗಳಿಗಾಗಿ ಬೇಸಿಗೆಯ ಋತು ಸೂಕ್ತವಾಗಿದೆ. ಏಕೆಂದರೆ ಚಳಿಗಾಲದ ತಿಂಗಳಲ್ಲಿ ಇಬ್ಬನಿ ಮತ್ತು ಹಿಮವು ಹಿಗ್ಗಿ ಕುಗ್ಗುವ ಕಾರಣ ರಸ್ತೆಗಳಲ್ಲಿ ಹೊಂಡಗಳುಂಟಾಗುತ್ತವೆ. ಗಾರೆ ಹಾಸುವಂತಹ ನಿರ್ಮಾಣ ಚಟುವಟಿಕೆಗಳು ಸಮರ್ಪಕವಾಗಿ ನಡೆಯಲು, ಕನಿಷ್ಠ ಉಷ್ಣಾಂಶಗಳ ಅಗತ್ಯವಿರುತ್ತದೆ. ಏಕೆಂದರೆ, ಜಲ್ಲಿಗಾರೆಯಂತಹ ವಸ್ತುಗಳು ಕಡಿಮೆ ಉಷ್ಣಾಂಶಗಳಲ್ಲಿ ಒಣಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತವೆ. ಜೊತೆಗೆ, ಹೊಸ ಹಾಸುಗಳಲ್ಲಿ ಇಬ್ಬನಿ ಹಿಗ್ಗಿ ಜಲ್ಲಿಗಾರೆಯ ಶಕ್ತಿ ಮತ್ತು ಭದ್ರತೆ ದುರ್ಬಲವಾಗುವ ಅಪಾಯವಿರುವುದರಿಂದ, ಬೆಚ್ಚನೆಯ ಹವಾಗುಣಗಳಲ್ಲಿ ಗಾರೇ ಕೆಲಸ ನಡೆಸಲಾಗುವುದು. [೨೧]

ಶಾಲಾ ವಿರಾಮ[ಬದಲಾಯಿಸಿ]

ಹಲವು ದೇಶಗಳಲ್ಲಿ ಬೇಸಿಗೆ ಕಾಲದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿರುತ್ತದೆ, ಆದರೂ ದಿನಾಂಕಗಳಲ್ಲಿ ವ್ಯತ್ಯಾಸವುಂಟಾಗಬಹುದು. ಉತ್ತರ ಗೋಲಾರ್ಧದಲ್ಲಿ, ಕೆಲವು ಶಾಲೆಗಳು ಮೇ ತಿಂಗಳ ಮಧ್ಯದಲ್ಲಿ ಆರಂಭವಾಗುತ್ತವೆ, ಆದರೂ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಶಾಲೆಯು ಜುಲೈ ತಿಂಗಳ ಮಧ್ಯ ಅಥವಾ ಅಂತ್ಯದಲ್ಲಿ ಮುಗಿಯುತ್ತದೆ. ದಕ್ಷಿಣ ಗೋಲಾರ್ಧದಲ್ಲಿ, ಶಾಲಾ ರಜೆಗಳ ದಿನಾಂಕವು ಪ್ರಮುಖ ರಜಾದಿನಗಳಾದ ಕ್ರಿಸ್ಮಸ್‌ ಮತ್ತು ಕ್ರೈಸ್ತ ನವವರ್ಷ ದಿನಗಳನ್ನೂ ಒಳಗೊಳ್ಳುತ್ತದೆ. ಆಸ್ಟ್ರೇಲಿಯಾದ ಶಾಲೆಗಳಲ್ಲಿ ಬೇಸಿಗೆ ರಜೆಯು ಕ್ರಿಸ್ಮಸ್‌ ಹಬ್ಬದ ಕೆಲ ವಾರಗಳ ಮುಂಚೆ ಆರಂಭಗೊಂಡು, ಜನವರಿ ಅಂತ್ಯ ಅಥವಾ ಫೆಬ್ರವರಿ ಮಧ್ಯದಲ್ಲಿ ಅಂತ್ಯಗೊಳ್ಳುತ್ತದೆ. ವಿವಿಧ ರಾಜ್ಯಗಳಲ್ಲಿ ದಿನಾಂಕಗಳು ವ್ಯತ್ಯಾಸವಾಗುತ್ತವೆ.

ಚಟುವಟಿಕೆಗಳು[ಬದಲಾಯಿಸಿ]

ಜನರು ಬೆಚ್ಚಗಿನ ಹವಾಮಾನದ ಅನುಕೂಲವನ್ನು ಪಡೆದು, ಹೆಚ್ಚು ಕಾಲ ಹೊರಾಂಗಣದಲ್ಲಿ ಸಮಯ ಕಳೆಯಲು ಇಚ್ಛಿಸುತ್ತಾರೆ. ಸಾಗರ ತೀರಕ್ಕೆ ಪ್ರಯಾಣ ಮತ್ತು ಪಿಕ್ನಿಕ್‌ಗಳು ಬೇಸಿಗೆಯ ತಿಂಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ಕ್ರಿಕೆಟ್‌, ವಾಲಿಬಾಲ್‌, ಬೇಸ್ಬಾಲ್‌, ಸಾಫ್ಟ್‌ಬಾಲ್‌, ಸಾಕರ್‌, ಟೆನಿಸ್‌ ಹಾಗೂ ಫುಟ್ಬಾಲ್‌ನಂತಹ ಕ್ರೀಡೆಗಳನ್ನು ಆಡಲಾಗುತ್ತದೆ. ವಾಟರ್‌ ಸ್ಕೀಯಿಂಗ್‌ ಎಂಬುದು ವಿಶಿಷ್ಟವಾದ ಬೇಸಿಗೆಯ ಆಟವಾಗಿದೆ. ವರ್ಷದಲ್ಲಿ ನೀರು ಅತಿ ಬೆಚ್ಚಗಿರುವ ಕಾಲದಲ್ಲಿ ಈ ಕ್ರೀಡೆಯನ್ನು ಆಡಲಾಗುತ್ತದೆ.

Kids during summer 
Summer, a fresco by Ambrogio Lorenzetti 

ಇವನ್ನೂ ನೋಡಿ[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಬೇಸಿಗೆ]]


 • ಸಮರ್‌, ನಾರ್ಸ್‌ ಪುರಾಣತತ್ವಗಳಲ್ಲಿ ಬೇಸಿಗೆಯ ಮೂರ್ತೀಕರಣ.

ಆಕರಗಳು[ಬದಲಾಯಿಸಿ]

 1. http://www.straightdope.com/columns/read/161/is-it-true-summer-in-ireland-starts-may-೧
 2. Meteorological Glossary (Sixth ed.). London: HMSO. 1991. p. 260. ISBN 0-11-400363-7. 
 3. http://www.jsonline.com/sports/outdoors/48297387.html
 4. http://www.fox11online.com/dpp/weather/gdw_wluk_green_bay_fathers_day_first_day_summer_200906190659_rev1
 5. http://scienceworld.wolfram.com/astronomy/SummerSolstice.html
 6. ಪವನ ಶಾಸ್ತ್ರದ ಶಬ್ದಸಂಗ್ರಹ (೨೦೦೯). ಮುಂಗಾರು. ಅಮೆರಿಕನ್‌ ಮೆಟೀರಿಯಾಲಜಿಕಲ್‌ ಸೊಸೈಟಿ ದಿನಾಂಕ ೧೬ ಜನವರಿ ೨೦೦೯ರಂದು ಪುನರ್ಪಡೆದದ್ದು.
 7. ಚಾರ್ಲ್ಸ್‌ ಡಾರ್ವಿನ್‌ ವಿಶ್ವವಿದ್ಯಾನಿಲಯ (೨೦೦೯). Characteristics of tropical savannas. ಚಾರ್ಲ್ಸ್‌ ಡಾರ್ವಿನ್‌ ವಿಶ್ವವಿದ್ಯಾನಿಲಯ. ದಿನಾಂಕ ೨೭ ಡಿಸೆಂಬರ್‌ ೨೦೦೮ರಂದು ಪುನರ್ಪಡೆದದ್ದು.
 8. ಎ. ರಾಬರ್ಟೊ ಫ್ರಿಸ್ಯಾಂಚೊ (೧೯೯೩). Human Adaptation and Accommodation. ಯೂನಿವರ್ಸಿಟಿ ಆಫ್‌ ಮಿಷಿಗನ್‌ ಪ್ರೆಸ್‌, ಪಿಪಿ. ೩೮೮. ISBN ೦-೪೮೬-೨೦೦೭೦-೧ ದಿನಾಂಕ ೨೭ ಡಿಸೆಂಬರ್‌ ೨೦೦೮ರಂದು ಪುನರ್ಪಡೆದದ್ದು.
 9. ಮಾರ್ಟಿ ಜೆ. ಫಾನ್‌ ಲಿಯೆರ್‌, ಎರಿಕ್‌-ಅಲೇನ್‌ ಡಿ. ಅಟೆಗ್ಬೊ, ಜಾನ್‌ ಹೂರ್ವೆಗ್‌, ಅಡೆಲ್‌ ಪಿ. ಡೆನ್‌ ಹಾರ್ಟಾಗ್‌ ಮತ್ತು ಜೋಸೆಫ್‌ ಜಿ. ಎ. ಜೆ. ಹಾಟ್ವಾಸ್ಟ್‌. ಋತುಗಳಿಗೆ ಅನುಗುಣವಾಗಿ ವಯಸ್ಕರ ಶಾರೀರಿಕ ತೂಕದಲ್ಲಿ ಏರಿಳಿತಗಳ ಮಹತ್ವ: ವಾಯುವ್ಯ ಬೆನಿನ್‌ನಲ್ಲಿ ಒಂದು ಅಧ್ಯಯನ. ಬ್ರಿಟಿಷ್‌ ಜರ್ನಲ್‌ ಆಫ್‌ ನ್ಯೂಟ್ರಿಷನ್‌: ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್‌, ೧೯೯೪.
 10. ಆಫ್ರಿಕನ್‌ ಸೆಂಟರ್‌ ಆಫ್‌ ಮೀಟಿಯರೊಲಾಜಿಕಲ್‌ ಅಪ್ಲಿಕೇಷನ್‌ ಫಾರ್‌ ಡೆವೆಲಪ್ಮೆಂಟ್‌ (೨೦೦೮). ಟೆನ್‌ ಡೇ ಕ್ಲೈಮೇಟ್‌ ಬುಲೆಟಿನ್‌: ಡೆಕಾಡ್‌ ಆಫ್‌ 01 ರಿಂದ 10 ಏಪ್ರಿಲ್‌, 2008. ACMAD. ದಿನಾಂಕ ೮ ಫೆಬ್ರವರಿ ೨೦೦೯ರಂದು ಪುನರ್ಪಡೆದದ್ದು.
 11. ಜಾನ್‌ ಪಿ. ಮೆಕ್ನಾಮಾರಾ, ಜೆ. ಫ್ರಾನ್ಸ್‌, ಡಿ. ಇ. ಬೀವರ್‌ (೨೦೦೦). ಮಾಡೆಲಿಂಗ್‌ ನ್ಯೂಟ್ರಿಯೆಂಟ್‌ ಯೂಟಿಲೈಸೇಷನ್‌ ಇನ್‌ ಫಾರ್ಮ್‌ ಅನಿಮಲ್ಸ್‌. CABI, ಪಿಪಿ. ೨೭೫. ISBN ೦-೪೮೬-೨೦೦೭೦-೧ ದಿನಾಂಕ ೧೨ ಫೆಬ್ರವರಿ ೨೦೧೦ರಂದು ಪುನರ್ಪಡೆದದ್ದು
 12. ಡಾ. ಲಿಂಕನ್‌ ಬ್ರೋವರ್‌ (೨೦೦೫). ಪ್ರೆಸಿಪಿಟೇಷನ್‌ ಅಟ್‌ ದಿ ಮೊನಾರ್ಕ್‌ ಒವರ್ವಿಂಟರಿಂಗ್‌ ಸೈಟ್ಸ್‌ ಇನ್‌ ಮೆಕ್ಸಿಕೊ. ಜರ್ನಿ ನಾರ್ತ್‌. ದಿನಾಂಕ ೧೨ ಫೆಬ್ರವರಿ ೨೦೧೦ರಂದು ಪುನರ್ಪಡೆದದ್ದು
 13. ಪಾಲ್‌ ಎಂ. ಬ್ರೇಕ್ಪೀಲ್ಡ್‌ ಮತ್ತು ಟಾರ್ಬೆನ್‌ ಬಿ. ಲಾರ್ಸೆನ್‌ (೧೯೮೩). ದಿ ಎವೊಲ್ಯೂಷನರಿ ಸಿಗ್ನಿಫಿಕೆನ್ಸ್‌ ಆಫ್‌ ಡ್ರೈ ಅಂಡ್‌ ವೆಟ್‌ ಸೀಸನ್‌ ಫಾರ್ಮ್ಸ್‌ ಇನ್‌ ಸಮ್‌ ಟ್ರಾಪಿಕಲ್‌ ಬಟರ್ಫ್ಲೈಸ್‌. ಬಯೊಲಾಜಿಕಲ್‌ ಜರ್ನಲ್‌ ಆಫ್‌ ದಿ ಲಿನ್ನಿಯನ್‌ ಸೊಸೈಟಿ, ಪಿಪಿ. ೧-೧೨. ದಿನಾಂಕ ೨೭ ಡಿಸೆಂಬರ್‌ ೨೦೦೮ರಂದು ಪುನರ್ಪಡೆಯಲಾಯಿತು.
 14. ಫಿಲ್‌ ಹಾಲ್‌ (೧೯೮೯). ಕ್ರೊಕೊಡೈಲ್ಸ್‌, ದೇರ್‌ ಇಕಾಲಜಿ, ಮ್ಯಾನೆಜ್ಮೆಂಟ್‌ ಅಂಡ್‌ ಕನ್ಸರ್ವೇಷನ್‌. ಇಂಟರ್ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್‌ ಆಫ್‌ ನೇಚರ್‌ ಅಂಡ್‌ ನ್ಯಾಚುರಲ್‌ ರಿಸೋರ್ಸಸ್ ಕ್ರೊಕೊಡೈಲ್‌ ಸ್ಪೆಷಲಿಸ್ಟ್‌ ಗ್ರೂಪ್‌, ಪಿಪಿ. ೧೬೭. ದಿನಾಂಕ ೨೭ ಡಿಸೆಂಬರ್‌ ೨೦೦೮ರಂದು ಪುನರ್ಪಡೆಯಲಾಯಿತು.
 15. ಸ್ಯಾನ್‌ ಡೀಗೊ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಮ್‌ (೨೦೦೯). ಬೂಫೊ ಕ್ಯಾಲಿಫೊರ್ನಿಕಸ್‌: ಅರೊಯೊ ಟೋಡ್‌. ಸ್ಯಾನ್‌ ಡೀಗೊ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಮ್‌. ದಿನಾಂಕ ೧೬ ಜನವರಿ ೨೦೦೯ರಂದು ಪುನರ್ಪಡೆದದ್ದು.
 16. ಲಿಂಡಾ ಡೊವರ್‌ (೧೯೭೮). ಡ್ರೈ ಸೀಸನ್‌, ವೆಟ್‌ ಸೀಸನ್‌. ಆಡುಬೊನ್‌ ಮ್ಯಾಗಜೀನ್‌, ನವೆಂಬರ್‌ ೧೯೭೮, ಪಿಪಿ. ೧೨೦-೧೩೦. ೧೨ ಫೆಬ್ರವರಿ ೨೦೧೦ ಪುನರ್ಪಡೆದದ್ದು
 17. ೧೭.೦ ೧೭.೧ ೧೭.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬ್ಲಾಬ್ಲಾಬ್ಲಾ

"https://kn.wikipedia.org/w/index.php?title=ಬೇಸಿಗೆ&oldid=320354" ಇಂದ ಪಡೆಯಲ್ಪಟ್ಟಿದೆ