ವಿಷಯಕ್ಕೆ ಹೋಗು

ಅನಿಲ್ ಕುಂಬ್ಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನಿಲ್ ಕುಂಬ್ಳೆ
ಅಕ್ಟೋಬರ್ 2019ರಲ್ಲಿ ಕುಂಬ್ಳೆ
ವಯಕ್ತಿಕ ಮಾಹಿತಿ
ಹುಟ್ಟು (1970-10-17) 17 October 1970 (age 55)
ಬೆಂಗಳೂರು, ಮೈಸೂರು ರಾಜ್ಯ (ಈಗಿನ ಕರ್ನಾಟಕ),  ಭಾರತ
ಅಡ್ಡಹೆಸರುಜಂಬೋ
ಬ್ಯಾಟಿಂಗ್ಬಲಗೈ ದಾಂಡಿಗ
ಬೌಲಿಂಗ್ಲೆಗ್ ಬ್ರೇಕ್
ಪಾತ್ರಬೌಲರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 192)9 ಆಗಸ್ಟ್ 1990 v ಇಂಗ್ಲೆಂಡ್
ಕೊನೆಯ ಟೆಸ್ಟ್29 ಅಕ್ಟೋಬರ್ 2008 v ಆಸ್ಟ್ರೇಲಿಯಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 78)25 ಏಪ್ರಿಲ್ 1990 v ಶ್ರೀಲಂಕಾ
ಕೊನೆಯ ಅಂ. ಏಕದಿನ​19 ಮಾರ್ಚ್ 2007 v ಬರ್ಮುಡಾ
ಅಂ. ಏಕದಿನ​ ಅಂಗಿ ನಂ.37 (ಹಿಂದೆ 18, 8)
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1989/90–2008/09ಕರ್ನಾಟಕ
1995ನಾರ್ತ್ಯಾಂಪ್ಟನ್‌ಶೈರ್
2000ಲೆಸ್ಟರ್‌ಶೈರ್
2006ಸರ್ರೆ
2008–2010ರಾಯಲ್ ಚಾಲೆಂಜರ್ಸ್ ಬೆಂಗಳೂರು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಓಡಿಐ ಎಫ್‌ಸಿ ಎಲ್‌ಎ
ಪಂದ್ಯಗಳು ೧೩೨ ೨೭೧ ೨೪೪ ೩೮೦
ಗಳಿಸಿದ ರನ್ಗಳು ೨೫೦೬ ೯೩೮ ೫೫೭೨ ೧೪೫೬
ಬ್ಯಾಟಿಂಗ್ ಸರಾಸರಿ ೧೭.೭೭ ೧೦.೫೩ ೨೧.೭೭ ೧೧.೨೦
೧೦೦/೫೦ ೧/೫ ೦/೦ ೭/೧೭ ೦/೦
ಉನ್ನತ ಸ್ಕೋರ್ ೧೧೦* ೨೬ ೧೫೪* ೩೦*
ಎಸೆತಗಳು ೪೦,೮೫೦ ೧೪,೪೯೬ ೬೬,೯೩೧ ೨೦,೨೪೭
ವಿಕೆಟ್‌ಗಳು ೬೧೯ ೩೩೭ ೧೧೩೬ ೫೧೪
ಬೌಲಿಂಗ್ ಸರಾಸರಿ ೨೯.೬೫ ೩೦.೮೯ ೨೫.೮೩ ೨೭.೫೮
ಐದು ವಿಕೆಟ್ ಗಳಿಕೆ ೩೫ ೭೨
ಹತ್ತು ವಿಕೆಟ್ ಗಳಿಕೆ ೨೦
ಉನ್ನತ ಬೌಲಿಂಗ್ ೧೦/೭೪ ೬/೧೨ ೧೦/೭೪ ೬/೧೨
ಹಿಡಿತಗಳು/ ಸ್ಟಂಪಿಂಗ್‌ ೬೦/– ೮೫/– ೧೨೦/– ೧೨೨/–
ಮೂಲ: espncricinfo, 8 ನವೆಂಬರ್ 2016

ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦ ಬೆಂಗಳೂರಿನಲ್ಲಿ) - ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ. ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.

ಕ್ರಿಕೆಟ್ ಜೀವನ

[ಬದಲಾಯಿಸಿ]

ಭಾರತ ೧೯೯೨ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಾಗ ಇವರು ತಮ್ಮ ಗುಣಮಟ್ಟವನ್ನು ಸ್ಥಾಪಿಸಿದರು, ೨ನೇ ಟೆಸ್ಟ್‌ನಲ್ಲಿ ೮ ವಿಕೆಟ್‌ಗಳನ್ನು ಉರುಳಿಸಿದರು. ಅದೇ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಬಂದಾಗ, ಕೇವಲ ೩ ಪಂದ್ಯಗಳಲ್ಲಿ ೨೧ ವಿಕೆಟ್‌ಗಳನ್ನು ಸರಾಸರಿ ೧೯.೮ ರಲ್ಲಿ ತೆಗೆದುಕೊಂಡರು. ಇವರು ಮೊದಲ ೫೦ ವಿಕೆಟ್‌ಗಳನ್ನು ಕೇವಲ ೧೦ ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಇದನ್ನು ಸಾಧಿಸಿದ ಭಾರತದ ಏಕೈಕ ಬೌಲರ್‌ ಆಗಿ ಉಳಿದಿದ್ದಾರೆ. ಎರಪಳ್ಳಿ ಪ್ರಸನ್ನರವರಾದ ಮೇಲೆ ೧೦೦ ಟೆಸ್ಟ್ ವಿಕೆಟ್‌ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಇವರಾದರು. ಇವರು ಇದನ್ನು ಸಾಧಿಸಿದ್ದು ೨೧ ಪಂದ್ಯಗಳಲ್ಲಿ. ಒಂದುದಿನದ ಪಂದ್ಯಗಳಲ್ಲಿ, ಇವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ ೨೭, ೧೯೯೩ ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ, ಇವರು ಕೇವಲ ೧೨ ರನ್‌ಗಳಿಗೆ ೬ ವಿಕೆಟ್‌ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್‌ನ ಅತ್ಯುತ್ತಮ ಸಾಧನೆಗಿಂತ ಹಿರಿದಾದುದಲ್ಲದೆ, ೧೦ ವರ್ಷಗಳಿಂದಲೂ ಇದು ಖಾಯಂ ಆಗಿ ಯಾರಿಂದಲೂ ಮುರಿಯದೆಯೇ ಉಳಿದಿದೆ. ವರ್ಷವಾರು ನೋಡಿದಲ್ಲಿ, ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು ೧೯೯೬ರಲ್ಲಿ. ಈ ವರ್ಷದಲ್ಲಿ ಇವರು ೬೧ ವಿಕೆಟ್‌ಗಳನ್ನು ಉರುಳಿಸಿದರು, ಒಟ್ಟು ೨೦.೨೪ ಸರಾಸರಿಯಲ್ಲಿ. ಇವರ ಎಕಾನಮಿ ರೇಟ್ ೪.೦೬ ಆಗಿತ್ತು. ಇದೇ ವರ್ಷ ಏಶಿಯಾದಲ್ಲಿ ವಿಶ್ವ ಕಪ್ ನಡೆದದ್ದು.

ಲೋಕದಾಖಲೆ

[ಬದಲಾಯಿಸಿ]

ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ ಫೆಬ್ರವರಿ ೪-ಫೆಬ್ರವರಿ ೮ ೧೯೯೯ನಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ(Anil Kumble Circle) ಎಂದು ನಾಮಕರಣ ಮಾಡಲಾಗಿದೆ.

ಮೈಲಿಗಲ್ಲುಗಳು

[ಬದಲಾಯಿಸಿ]
  • ಡಿಸೆಂಬರ್ ೧೦, ೨೦೦೪ - ಕಪಿಲ್ ದೇವ್ ಅವರ ೪೩೪ ವಿಕೆಟುಗಳನ್ನು ದಾಟಿದ ಅನಿಲ್ ಕುಂಬ್ಳೆ. ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್‍ಗಳನ್ನು ಪಡೆದ ಭಾರತದ ಬೌಲರ್ ಎಂಬ ಕೀರ್ತಿ.
  • ಮಾರ್ಚ್ ೧೧, ೨೦೦೬ - ೫೦೦ ಟೆಸ್ಟ್ ವಿಕೆಟುಗಳ ಸಾಧನೆ
  • ಜೂನ್ ೧೧, ೨೦೦೬ - ವೆಸ್ಟ್ ಇಂಡೀಸಿನ ಕರ್ಟ್ನಿ ವಾಲ್ಷ್ ಅವರ ೫೨೦ ವಿಕೆಟುಗಳ ಗುರಿ ದಾಟಿದ ಕುಂಬ್ಳೆ. ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್‍ಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಮುನ್ನಡೆ.
  • ೩೦೦ ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್.
  • ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪೈಕಿ ಮೂರನೆಯವರು. ( ೫೬೬ ವಿಕೆಟ್).
  • ಫೆಬ್ರುವರೀ ೧೯೯೯ರಲ್ಲಿ ಪಾಕಿಸ್ತಾನದ ವಿರುದ್ದ ದೆಹಲಿಯಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ೧೦ ವಿಕೆಟ್.

ಜುಂಬೋ (Jumbo)

[ಬದಲಾಯಿಸಿ]

ಅನಿಲ್ ಕುಂಬ್ಳೆ ಜುಂಬೋ("Jumbo") ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ಜುಂಬೋ ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.!!

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]

ಆರಂಭಿಕ ಮತ್ತು ವೈಯಕ್ತಿಕ ಜೀವನ

[ಬದಲಾಯಿಸಿ]

ಕುಂಬ್ಳೆಯವರು 1970 ರ ಅಕ್ಟೋಬರ್ 17 ರಂದು ಮೈಸೂರು ರಾಜ್ಯದ (ಈಗ ಕರ್ನಾಟಕ ) ಬೆಂಗಳೂರಿನಲ್ಲಿ, ಕೃಷ್ಣ ಸ್ವಾಮಿ ಮತ್ತು ಸರೋಜಾ ದಂಪತಿಗಳಿಗೆ ಜನಿಸಿದರು, ಇಬ್ಬರೂ ಕೇರಳದ ಕಾಸರಗೋಡು ಬಳಿಯ ಕುಂಬ್ಳದವರು . [] [] ಅವರಿಗೆ ದಿನೇಶ್ ಎಂಬ ಸಹೋದರನಿದ್ದಾನೆ. [] ಅವರ ಮಾತೃಭಾಷೆ ಕನ್ನಡ . []

ಕುಂಬ್ಳೆ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೋಲಿ ಸೇಂಟ್ ಇಂಗ್ಲಿಷ್ ಶಾಲೆಯಲ್ಲಿ ಮುಗಿಸಿದರು ಮತ್ತು ಹತ್ತನೇ ತರಗತಿಯನ್ನು ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಅವರು ಬೆಂಗಳೂರಿನ ಬೀದಿಗಳಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು 13 ನೇ ವಯಸ್ಸಿನಲ್ಲಿ "ಯಂಗ್ ಕ್ರಿಕೆಟರ್ಸ್" ಎಂಬ ಕ್ಲಬ್ ಅನ್ನು ಸೇರಿದರು. ಪ್ರೌಢಶಾಲೆಯ ನಂತರ ಅವರು ಬಸವನಗುಡಿಯ ನ್ಯಾಷನಲ್ ಪ್ರಿ-ಯೂನಿವರ್ಸಿಟಿ ಕಾಲೇಜಿನಿಂದ ಹನ್ನೆರಡನೇ ತರಗತಿಯನ್ನು ಪೂರ್ಣಗೊಳಿಸಿದರು. ನಂತರ ಅವರು 1991–92ರಲ್ಲಿ ರಾಷ್ಟ್ರೀಯ ವಿದ್ಯಾಲಯ ಎಂಜಿನಿಯರಿಂಗ್ ಕಾಲೇಜಿನಿಂದ (RVCE) ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. []

ಕುಂಬ್ಳೆಯವರು 1999 ರಲ್ಲಿ ಚೇತನಾ ಅವರನ್ನು ವಿವಾಹವಾದರು. [] ಅವರಿಗೆ ಮಯಾಸ್ ಎಂಬ ಮಗ ಮತ್ತು ಆರುಣಿ ಮತ್ತು ಸ್ವಸ್ತಿ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. [] ಅವರು ಸಸ್ಯಾಹಾರಿ . []

  1. MD Ritti (15 February 1999). "10 wickets – and phone overload". Rediff.com. Retrieved 9 August 2007.
  2. Abhijit Chatterjee. "Jumbo spinner". The Tribune. Retrieved 9 August 2007.
  3. "Anil Kumble, with his son Mayas, as he announces his retirement from ODIs". ESPNcricinfo. 30 March 2007. Retrieved 17 May 2012.
  4. "Anil Kumble". ESPNcricinfo. 6 September 2007. Retrieved 20 May 2020.
  5. Khan, Tanvir. "Anil Kumble: The Last Samurai". Zee News. Archived from the original on 20 June 2013. Retrieved 15 May 2012.
  6. Hemanth Kashyap (14 July 2008). "Bitter-battle". MidDay. Retrieved 6 June 2012.
  7. "Anil Kumble". Indian Mirror. Retrieved 6 June 2012.
  8. Khan, Farheen (11 June 2022). "Bengaluru: Veg food to debut, Anil Kumble reminisces UK memories". The Times of India. Archived from the original on 25 January 2023. Retrieved 24 January 2023.