ಬೆಳ್ತಂಗಡಿ

ವಿಕಿಪೀಡಿಯ ಇಂದ
Jump to navigation Jump to search
ಬೆಳ್ತಂಗಡಿ
India-locator-map-blank.svg
Red pog.svg
ಬೆಳ್ತಂಗಡಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.98° N 75.27° E
ವಿಸ್ತಾರ 8.87 km²
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೧)
 - ಸಾಂದ್ರತೆ
೭,೬೩೫ [೧]
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 574 214
 - +91-8256
 - 

ಇದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಜಿಲ್ಲಾ ಕೇಂದ್ರ ಮಂಗಳೂರಿನಿಂದಸುಮಾರು ೬೦ ಕಿ.ಮೀ ಪೂರ್ವಕ್ಕೆ ಇದೆ.ಇದನ್ನು ತುಳುಭಾಷೆಯಲ್ಲಿ "ಬೋಳ್ತೇರ್ ಎಂದು ಕರೆಯುತ್ತಾರೆ.

ಇತಿಹಾಸ[ಬದಲಾಯಿಸಿ]

ಈ ಸ್ಥಳಕ್ಕೆ ಇದರದೇ ಆದ ಇತಿಹಾಸವಿಲ್ಲದಿದ್ದರೂ ಸಮೀಪದಲ್ಲಿರುವ ಬಂಗಾಡಿಯಲ್ಲಿ ಆಳಿದ ಬಂಗ ಅರಸರು ಕಟ್ಟಿಸಿದ ಕೋಟೆಯ ಅವಶೇಷ,ಶಿಲೆಯಲ್ಲಿ ಕಟ್ಟಲಾದ ಸೋಮನಾಥ ದೇವಸ್ಥಾನ,ಒಂದು ಬಸದಿ ಇದೆ.[೨] ಸುಮಾರು ೬ ಕಿ.ಮೀ ದೂರದಲ್ಲಿರುವ ನಡ ಎಂಬಲ್ಲಿರುವ ದೊಡ್ಡ ಗುಡ್ಡದ ಮೇಲೆ ನರಸಿಂಹಗಡ ಎಂಬ ಕೋಟೆ ಇದೆ. ಇದನ್ನು ೧೭೯೪ರಲ್ಲಿ ಟಿಪ್ಪು ಸುಲ್ತಾನ ಪುನರ್‍ನಿರ್ಮಾಣ ಮಾಡಿ ತನ್ನ ತಾಯಿಯ ಹೆಸರಾದ ಜಮಾಲಾಬಿಯ ಹೆಸರಿನಿಂದ ಕರೆಯಲಾರಂಬಿಸಿದ ಬಳಿಕ ಅದು ಜಮಲಾಬಾದ್ ಎಂದಾಗಿದೆ.[೨]ಇಲ್ಲಿಯೇ ಬಳಿಯಲ್ಲಿ ಪೆರ್ಮಾಣು ಎಂಬಲ್ಲಿ ಜೈನ ಬಸದಿ ಇದೆ.ಮೊದಲು ಇದು ಹೋಬಳಿ ಕೇಂದ್ರವಾಗಿತ್ತು. ೧೯೫೪ರಲ್ಲಿ ಇದನ್ನು ತಾಲೂಕು ಎಂದು ಘೋಷಿಸಲಾಯಿತು.

ಭೌಗೋಳಿಕ[ಬದಲಾಯಿಸಿ]

ಬೆಳ್ತಂಗಡಿಯು 13°59′00″N 75°18′00″E / 13.9833°N 75.3°E / 13.9833; 75.3.[೩] ಯಲ್ಲಿದ್ದು ಸರಾಸರಿ ಸಮುದ್ರ ಮಟ್ಟದಿಂದ 685 ಮೀಟರ್ (2247 ಅಡಿ)ಎತ್ತರದಲ್ಲಿದೆ.

ರಾಜಕೀಯ ನಾಯಕರು ೨೦೧೮ ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿ ಸ್ವರ್ಣಯುಗ  ತಾಲೂಕಿನ ಶಾಸಕರಾಗಿ ಯುವ ನಾಯಕ ಹರೀಶ್ ಪೂಂಜಾ ಆಯ್ಕೆಯಾದರು ಅವರ ಬಗ್ಗೆ ತಾಲೂಕಿನ ಜನತೆ ಹಂಚಿಕೊಂಡ ಅಭಿಪ್ರಾಯಗಳ ಸರಮಾಲೆ ಓದುಗರಿಗಾಗಿ


ಎಳೆಯ ಶಾಸಕನ ಸ್ವಾಗತಕ್ಕೆ ಉತ್ಸಾಹದಲ್ಲಿರುವ ಎಳನೀರಿನ ಜನತೆ

ಶುಕ್ರವಾರ ದಿನಾಂಕ 07-12-18 ರಂದು ಕರ್ನಾಟಕದ ಯುವ ಶಾಸಕರಲ್ಲಿ ಒಬ್ಬರಾದ ಬೆಳ್ತಂಗಡಿಯ ಹರೀಶ್ ಪೂಂಜಾರವರು ಗಡಿ ಭಾಗದಲ್ಲಿ ಇರುವ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಪ್ರದೇಶ ಎಳನೀರಿಗೆ ಭೇಟಿ ನೀಡಲಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿ ಗೆದ್ದ ಮೇಲೆ ಆ ಗುಡ್ಡೆಗೆ ಯಾರು ಹೋಗುವುದು ಅಲ್ಲಿ ಇರುವುದು 450 ಮತ ಅಲ್ವ ಎಂದು ಮೂಗು ಮುರಿಯುತ್ತಿದ್ದ ರಾಜಕಾರಣಿಗಳ ಮದ್ಯದಲ್ಲಿ ಗೆದ್ದ ಮೇಲೆ ಕೂಡ ಸಮಯದ ಕೊರತೆ ಇದ್ದರೂ ಕೂಡ ಊರಿನ ಜನರ ಬಗ್ಗೆ ಕಾಳಜಿಯಿಂದ ಶಾಸಕರು ಭೇಟಿ ನೀಡುತ್ತಿರುವುದು ಊರವರಿಗೆ ಸಂಭ್ರವನ್ನುಂಟು ಮಾಡಿದೆ . ತಾಲೂಕಿನ ಪುಣ್ಯ ನದಿ ಜೀವ ನದಿಯ ಉಗಮ ತಾಣ ಮತ್ತು ಇಲ್ಲಿಯ ನೀರು ಶುಭ್ರವಾಗಿ ಎಳಸುತನ ದಿಂದ ಕೂಡಿರುವುದರಿಂದ ಈ ಊರಿಗೆ ಎಳನೀರು ಎಂಬ ಹೆಸರು ಬಂದಿದೆ . ದಿಡುಪೆಯಿಂದ 6 -7 ಕಿ.ಮೀ ದೂರದಲ್ಲಿ ಇರುವ ಇಲ್ಲಿಗೆ ಹೋಗಬೇಕಾದರೆ ನಡೆದು ಕೊಂಡು ಅಥವಾ 120 ಕಿ.ಮೀ ಸುತ್ತು ಬಳಸಿ ಬಜಗೋಳಿ ಕುದುರೆಮುಖ ಮಾರ್ಗವಾಗಿ ಹೋಗಬೇಕು . ದಿಡುಪೆ ಎಳನೀರ್ ರಸ್ತೆಯಾದರೆ ಧರ್ಮಸ್ಥಳ ದಿಂದ ಹೊರನಾಡಿಗೆ ಹೋಗುವ ಪ್ರವಾಸಿಗರಿಗೆ ಅನುಕೂಲವಾಗುವುದಲ್ಲದೆ ಚಾರ್ಮಾಡಿ ಘಾಟಿಯ ಒತ್ತಡ ಕಡಿಮೆಯಾಗಲಿದೆ. ಊರಿನೆಲ್ಲೆಡೆ ಇರುವ ಕಚ್ಚಾ ರಸ್ತೆ ಅಭಿವೃದ್ಧಿ ಮತ್ತು ವಿದ್ಯುತ್ ಸೌಲಭ್ಯ ನಾಗರಿಕರ ಬಹುಮುಖ್ಯ ಬೇಡಿಕೆ .

ಬೆರ್ಮೆರ್ ಗೆಂದಾಬೆರ್ : ಹರೀಶ್ ಪೂಂಜರು ಹಿರಿಯರಿಗೆ ಕೊಡುವ ಗೌರವ ಅವರ ದೈವ ಭಕ್ತಿ , ಎಳನೀರಿನಲ್ಲಿ ಇರುವ ಬ್ರಹ್ಮ ಸ್ಥಾನಕ್ಕೆ ನೆರವು ನೀಡಿರುವುದನ್ನು ನೆನೆಸಿಕೊಂಡು ಈ ಭಾಗದ ಅನೇಕ ಹಿರಿಯರು ಆರೆನ್ ಈ ಸಲ ಬೆರ್ಮೆರ್ ಗೆಂದಾಬೆರ್ ಎಂಬ ಮಾತು ಇಂದು ಸತ್ಯವಾಗಿದ್ದು ಊರಿನ ಜನ ಶಾಸಕರನ್ನು ನೋಡಲು ಕಾತರರಾಗಿದ್ದಾರೆ .

ದೇವರಂತಹ ಶಾಸಕ ತಾಲೂಕಿನಲ್ಲಿ ಮಳೆ ಬಂದು ಎಲ್ಲಾ ಕಡೆ ಪ್ರಾಕೃತಿಕ ವಿಕೋಪಗಳು ಆಗುತ್ತಿರುವಾಗ ಸ್ವತಃ ಶಾಸಕರೇ ಕರೆಮಾಡಿ ನಿಮ್ಮ ಊರಿನಲ್ಲಿ ಏನಾದ್ರು ಸಮಸ್ಯೆ ಇದೆಯಾ ಪ್ರಕಾಶ್ ಅಣ್ಣ ಎಂದು ಪಂಚಾಯತ್ ಸದಸ್ಯರನ್ನು ವಿಚಾರಿಸಿದನ್ನು ನೆನೆಸಿಕೊಳ್ಳುವ ಸ್ಥಳೀಯ ಪಂಚಾಯತ್ ಸದಸ್ಯರು ನಮ್ಮ ಊರಿಗೆ ಎಷ್ಟು ಅನುದಾನ ಕೊಡುತ್ತಾರ ಬಿಡುತ್ತಾರಾ ಆದರೆ ನಮಗೆ ದೇವರಂಥ ಶಾಸಕರಿದ್ದಾರೆ ಎಂಬ ಮಾತು ರೋಮಾಂಚನ ಗೊಳಿಸುತ್ತದೆ

ಬೆಳ್ತಂಗಡಿ ತಾಲೂಕಿನಲ್ಲಿರುವ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು[ಬದಲಾಯಿಸಿ]

ಜನಸಂಖ್ಯೆ ಮತ್ತು ವಿಸ್ತಾರ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೭,೬೩೫[೧].ತಾಲೂಕು ಪಂಚಾಯತಿಯ ೧೧ ವಾರ್ಡುಗಳಿದ್ದು ೮.೮೭ಚದರ ಕಿ.ಮೀ ವಿಸ್ತಾರವಿದೆ.

ವಾಣಿಜ್ಯ[ಬದಲಾಯಿಸಿ]

ಇದು ಕೃಷಿ ಉತ್ಪನ್ನಗಳ ಒಂದು ಪ್ರಮುಖ ಮಾರುಕಟ್ಟೆ.ಮುಖ್ಯ ಉತ್ಪನ್ನಗಳು ಅಡಿಕೆ,ಕೊಕ್ಕೊ,ತೆಂಗು ಮತ್ತು ರಬ್ಬರು.

ತಾಲೂಕು[ಬದಲಾಯಿಸಿ]

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ತಾಲೂಕು. ಚಾರ್ಮಾಡಿಯಿಂದ ಪೂಂಜಾಲಕಟ್ಟೆಯವರೆಗೂ, ವೇಣೂರು ನಿಂದ ಉಪ್ಪಿನಂಗಡಿಯವರೆಗೂ ಬೆಳ್ತಂಗಡಿ ತಾಲೂಕು ಹರಡಿದೆ.ಇದರ ಪೂರ್ವ-ಉತ್ತರ ಭಾಗದಲ್ಲಿ ರಮಣೀಯವಾದ ಪಶ್ಚಿಮ ಘಟ್ಟವಿದೆ. ಈ ತಾಲೂಕಿನಲ್ಲಿ ಪ್ರಸಿದ್ದ ಯಾತ್ರಾಸ್ಥಳ ಧರ್ಮಸ್ಥಳ,ಶಿಕ್ಷಣ ಕೇಂದ್ರವಾದ ಉಜಿರೆ,ಪ್ರೇಕ್ಷಣೀಯ ಸ್ಥಳವಾದ ಜಮಲಾಬಾದ್ ಕೋಟೆಯೂ ಇದೆ. ಇದಲ್ಲದೆ ಬೆಳ್ತಂಗಡಿಯಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳೂ ಇವೆ. ಮುಖ್ಯವಾಗಿ ಕಾಜೂರಿನ ಮಸೀದಿ, ಬೆಳ್ತಂಗಡಿ ಚರ್ಚ್,ಮಡಂತ್ಯಾರ್ ಚರ್ಚ್, ನಡಿಬೆಟ್ಟು ಶ್ರೀ ರೌಧ್ರಾನಾಥೇಶ್ವರ ದೇವಸ್ಥಾನ, ಪಾರೆಂಕಿ ಶ್ರೀ ಮಹೀಷಮರ್ಧಿನಿ ದೇವಸ್ಥಾನ, ಕುತ್ಯಾರು ಸೋಮನಾಥೇಶ್ವರ ದೇವಸ್ಥಾನ, ಸುರ್ಯ ಗ್ರಾಮದ ಸದಾಶಿವರುದ್ರ ದೇವಸ್ಥಾನ, ನೇತ್ರಾವತಿ ನದಿ ಇತ್ಯಾದಿ. ಬೆಳ್ತಂಗಡಿಯಲ್ಲಿ ಎರಡು ಎಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯಾಗಿವೆ . ಸುದ್ದಿ ಬಿಡುಗಡೆ ಹಾಗೂ ಜೈ ಕನ್ನಡಮ್ಮ ಇಲ್ಲಿಯ ಪ್ರಾದೇಶಿಕ ಪತ್ರಿಕೆಗಳು.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "NPR Report: Karnataka: Dakshina Kannada: Beltangadi". National Population Register, Ministry of Home Affairs, Government of India. 2011.
  2. ೨.೦ ೨.೧ "ಬೆಳ್ತಂಗಡಿ" (PDF). Retrieved 20 ಫೆಬ್ರುವರಿ 2016. Check date values in: |accessdate= (help)
  3. Falling Rain Genomics, Inc – Beltangadi