ವಿಷಯಕ್ಕೆ ಹೋಗು

ಹಲ್ಮಿಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಲ್ಮಿಡಿ
Halmidi
town
ಹಲ್ಮಿಡಿ ಶಾಸನ ಪ್ರತಿಕೃತಿ ಪೀಠದ ಮೇಲೆ ಅಳವಡಿಸಲಾಗಿದೆ
ಹಲ್ಮಿಡಿ ಶಾಸನ ಪ್ರತಿಕೃತಿ ಪೀಠದ ಮೇಲೆ ಅಳವಡಿಸಲಾಗಿದೆ
ದೇಶ ಭಾರತ
ರಾಜ್ಯಕರ್ನಾಟಕ
ಭಾಷೆಗಳು
  ಅಧಿಕೃತಕನ್ನಡ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
ISO 3166 codeIN-KA
ಜಾಲತಾಣkarnataka.gov.in

ಹಲ್ಮಿಡಿ ಕರ್ನಾಟಕಹಾಸನ ಜಿಲ್ಲೆಯ ಒಂದು ಹಳ್ಳಿ. ಕ್ರಿ. ಶ. ೪೫೦ರ ಕಾಲದ, ಕನ್ನಡದ ಮೊಟ್ಟಮೊದಲ ಶಾಸನ ಇದೇ ಹಳ್ಳಿಯಲ್ಲಿ ದೊರಕಿತು. ಹಿಟ್ಟುಗಲ್ಲಿನಿಂದ ಕೆತ್ತಿಸಿದ ಈ ಶಾಸನವನ್ನು ೧೯೩೦ರ ಸುಮಾರಿಗೆ ಪತ್ತೆಹಚ್ಚಲಾಯಿತು. ಕದಂಬರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.

ಹಾಸನ-ಬೇಲೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು. ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ.[]

ಹಲ್ಮಿಡಿ ಶಾಸನ

[ಬದಲಾಯಿಸಿ]
ಮುಖ್ಯ ಲೇಖನ: ಹಲ್ಮಿಡಿ ಶಾಸನ

ಕನ್ನಡ ಭಾಷೆಯಲ್ಲಿರುವ ಅತ್ಯಂತ ಹಳೆಯ ಶಾಸನ ಶಿಲ್ಪ ಇಲ್ಲಿ ದೊರೆತಿದೆ. ಕ್ರಿ.ಶ. ೪೫೦ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು ಕದಂಬರ ಕಾಕುತ್ಸ್ಥವರ್ಮನ ಕಾಲದ್ದು. ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.ಈ ಶಾಸನದ ಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ ಸಂಸ್ಕೃತ ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ ಎರಿದು,ಕೊಟ್ಟಾರ್,ಅದಾನ್ ಮೊದಲಾದ ಪದಗಳು, ಇದರ ಭಾಷೆ "ಪೂರ್ವದ ಹಳೆಗನ್ನಡ" ಎಂಬುದನ್ನು ಸೂಚಿಸುತ್ತವೆ.[][]

ಉಲ್ಲೇಖಗಳು

[ಬದಲಾಯಿಸಿ]
  1. Language of the Inscriptions - Sanskrit and Dravidiian - Archaeological Survey of India
  2. "ಆರ್ಕೈವ್ ನಕಲು". Archived from the original on 2007-10-01. Retrieved 2016-12-14. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. "Halmidi inscription proves antiquity of Kannada date 24 October 2004". Archived from the original on 1 ಡಿಸೆಂಬರ್ 2004. Retrieved 14 ಡಿಸೆಂಬರ್ 2016. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
"https://kn.wikipedia.org/w/index.php?title=ಹಲ್ಮಿಡಿ&oldid=1368990" ಇಂದ ಪಡೆಯಲ್ಪಟ್ಟಿದೆ