ಮಡಿಕೇರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Karnataka-icon.jpg
ಕೊಡಗು ತಾಲ್ಲೂಕುಗಳು
ಮಡಿಕೇರಿ | ಸೋಮವಾರಪೇಟೆ | ವಿರಾಜಪೇಟೆ
ಮಡಿಕೇರಿ
ಮಡಿಕೇರಿ ನಗರದ ಪಕ್ಷಿನೋಟ
ಮಡಿಕೇರಿಯ ರಾಜಾಸೀಟ್
India-locator-map-blank.svg
Red pog.svg
ಮಡಿಕೇರಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಡಗು
ನಿರ್ದೇಶಾಂಕಗಳು 12.4208° N 75.7397° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೩೨,೨೮೬
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೧ ೨೦೧
 - +೦೮೨೭
 - ಕೆಎ-೧೨

ಮಡಿಕೇರಿ ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು, ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಸ್ಥಾನವನ್ನು ಎರಡನೇ ಲಿಂಗರಾಜನು ಕಟ್ಟಿಸಿದನು. ಇಂದು ಇದು ಇಲ್ಲಿಯ ಒಂದು ಪ್ರಮುಖ ದೇವಸ್ಥಾನವೂ, ಪ್ರವಾಸಿ ತಾಣವೂ ಅಗಿದೆ,ಅದೇ ರೀತಿ ರಾಜಾಸೀಟ್, ಅರಮನೆ,ಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.ಅಬ್ಬಿ ಜಲಪಾತವು ಮೈ ತುಂಬಿದಾಗ ಸಂಭ್ರಮದ ನೋಟ.ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಬರುತ್ತಾರೆ.ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬೀಳ್ಗೊಡುತ್ತದೆ.ಮಡಿಕೇರಿಯ ಮಂಜನ್ನು ಕವಿ ಶ್ರೀ ಜಿ ಪಿ ರಾಜರತ್ನಮ್ ಅವರು `ಮಡಿಕೇರೀಲಿ ಮಂಜು' ಎಂಬ ಕವಿತೆಯಲ್ಲಿ ವರ್ಣಿಸಿದ್ದಾರೆ. ಮ್ಯೆಸೂರಿನಲ್ಲಿ ಅತಿ ವಿಜೃಂಭಣೆಯಿಂದ ನಡೆಯುವ ದಸರಾ,ಮಡಿಕೇರಿಯಲ್ಲಿಯೂ ನಡೆಯುತ್ತದೆ.ಮಡಿಕೇರಿಯ ತಲ ಕಾವೇರಿಯಲ್ಲಿ,ಕಾವೇರಿ ನದಿಯು ಹುಟ್ಟಿ ಅಲ್ಲಿಂದ ಸುಮಾರು ೧,೨ ಕಿ ಮಿ ವರೆಗೆ ಅಂತರ್ಗಾಮಿಯಾಗಿ ಹರಿದು ಮುಂದೆ ಭಾಗಮಂಡಲದಲ್ಲಿ ಪುನಃ ತನ್ನ ದರ್ಶನವನ್ನು ನೀಡುತ್ತದೆ.ಇದು ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ನದಿಯು ಸಹ ಅಗಿದೆ.ತಲ ಕಾವೇರಿಯಲ್ಲಿ ಪ್ರತಿ ವರ್ಷವು ತೀರ್ಥೊದ್ಭವವು ಸಂಭವಿಸುತ್ತದೆ,ಇದರ ದರ್ಶನಕ್ಕೆ ಸಾವಿರರು ಭಕ್ತರು ಅಲ್ಲಿ ಬಂದು ಸೇರುತ್ತಾರೆ,(ಮತ್ತು ಕೆಲವು ಸಂಘ ಸಂಸ್ಥೆಗಳು ತೀರ್ಥವನ್ನು ಜಿಲ್ಲೆಯ ಎಲ್ಲಾ ಭಾಗದ ಜನರಿಗೆ ತಲುಪಿಸಲು ಸಹಕರಿಸುತ್ತಾರೆ.) ಈ ನದಿಯು ಮುಂದೆ ತಮೀಳುನಾಡು ರಾಜ್ಯದ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ.

ಮಡಿಕೇರಿ ಅರಮನೆ
ಓಂಕಾರೇಶ್ವರ ದೇವಾಲಯ

ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣ ;ಮಂದಲ್ ಪಟ್ಟಿ'. ಮಡಿಕೇರಿಯಿಂದ ೧೨ ಕಿ.ಮಿ ದೂರದಲ್ಲಿದೆ.ಗಾಳಿಬೀಡು ಸಮೀಪದ ಕಾಲೂರು ಎಂಬ ಗ್ರಾಮದಲ್ಲಿದೆ. ಬೆಟ್ಟ ಗುಡ್ಡಗಳಿಂದ ಕೂಡಿದ ಮಂದಲ್ ಪಟ್ಟಿ ಪ್ರವಾಸಿಗರ ನೆಚ್ಚಿನ ತಾಣ. ಇದಕ್ಕೆ ಇನ್ನೊಂದು ಹೆಸರು ಮುಗಿಲು ಪೇಟೆ.

"https://kn.wikipedia.org/w/index.php?title=ಮಡಿಕೇರಿ&oldid=663873" ಇಂದ ಪಡೆಯಲ್ಪಟ್ಟಿದೆ