ಸೋಮವಾರಪೇಟೆ
ಸೋಮವಾರಪೇಟೆಯು ಕೊಡಗು ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಕೊಡಗಿನ ಮೂರು ತಾಲೂಕುಗಳಲ್ಲಿ ಒಂದು. ಸೋಮವಾರಪೇಟೆ ಪಟ್ಟಣವು ಕಾಫಿ,ಏಲಕ್ಕಿ ತೋಟಗಳಿಂದ ಸುತ್ತುವರೆದಿದೆ.
ಮುಖ್ಯ ಪಟ್ಟಣಗಳು
[ಬದಲಾಯಿಸಿ]ಕೊಡ್ಲಿಪೇಟೆ ಗ್ರಾಮವು ಭಾರತದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ಇದು ಮೈಸೂರು ವಿಭಾಗಕ್ಕೆ ಸೇರಿದೆ. ಇದು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಉತ್ತರಕ್ಕೆ 52 ಕಿಮೀ ದೂರದಲ್ಲಿದೆ. ಸೋಮವಾರಪೇಟೆಯಿಂದ 21 ಕಿ.ಮೀ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 217 ಕಿ.ಮೀ.ಶನಿವಾರಸಂತೆ (9 ಕಿಮೀ) ಕೊಡ್ಲಿಪೇಟೆಗೆ ಸಮೀಪದ ಗ್ರಾಮಗಳು. ಕೊಡ್ಲಿಪೇಟೆಯು ಉತ್ತರಕ್ಕೆ ಆಲೂರು ತಾಲೂಕು, ದಕ್ಷಿಣಕ್ಕೆ ಸೋಮವಾರಪೇಟೆ ತಾಲೂಕು, ಪೂರ್ವಕ್ಕೆ ಅರಕಲಗೂಡು ತಾಲೂಲ್, ಪೂರ್ವಕ್ಕೆ ಹಾಸನ ತಾಲೂಕು ಸುತ್ತುವರಿದಿದೆ.ಕೊಡ್ಲಿಪೇಟ್ ಪಿನ್ ಕೋಡ್ 571231 ಮತ್ತು ಅಂಚೆ ಕೇಂದ್ರ ಕಛೇರಿ ಕೊಡ್ಲಿಪೇಟೆ.
ಸಕಲೇಶಪುರ, ಹಾಸನ, ಮಡಿಕೇರಿ, ಚಿಕ್ಕಮಗಳೂರು ನಗರಗಳು ಕೊಡ್ಲಿಪೇಟೆಗೆ ಸಮೀಪದಲ್ಲಿದೆ.
ಕನ್ನಡ ಇಲ್ಲಿ ಸ್ಥಳೀಯ ಭಾಷೆ.
ಕೊಡ್ಲಿಪೇಟೆಯಲ್ಲಿ ರಾಜಕೀಯ
ಭಾರತೀಯ ಜನತಾ ಪಕ್ಷ, ಜೆಡಿ (ಎಸ್), ಬಿಜೆಪಿ, ಭಾರತೀಯ ಜನತಾ ಪಕ್ಷ (ಬಿಜೆಪಿ), ಐಎನ್‌ಸಿ ಈ ಪ್ರದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾಗಿವೆ.
ಪ್ರವಾಸಿ ಸ್ಥಳಗಳು
[ಬದಲಾಯಿಸಿ]ಮಲ್ಲಳ್ಳಿ ಜಲಪಾತ(ಫಾಲ್ಸ್ )
[ಬದಲಾಯಿಸಿ][೧]. ಮಲ್ಲಳ್ಳಿ ಜಲಪಾತ ಸೋಮವಾರಪೇಟೆಯಿಂದ ೨೫ ಕಿ.ಮೀ ದೂರದಲ್ಲಿದೆ.
ಮಲ್ಲಳ್ಳಿ ಜಲಪಾತವು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿದೆ.ಈ ಜಲಪಾತವು ಅತ್ಯಂತ ಸುಂದರವಾಗಿದೆ. ಇದು ಮುಖ್ಯವಾಗಿ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು ಭೇಟಿ ನೀಡಿ ಆನಂದಿಸುತ್ತಾರೆ. ಹಾಗೆಯೇ ಇದೊಂದು ಹೆಸರುವಾಸಿ ಜಲಪಾತವಾಗಿದೆ.
ಪುಷ್ಪಗಿರಿ
[ಬದಲಾಯಿಸಿ][೨] ಸೋಮವಾರಪೇಟೆಯಿಂದ ೩೦ ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.
ಹೊನ್ನಮ್ಮನ ಕೆರೆ
[ಬದಲಾಯಿಸಿ][೩] ಸೋಮವಾರಪೇಟೆಯಿಂದ ೬ ಕಿ ಮೀ ದೂರದಲ್ಲಿದೆ. ದೊಡ್ಡಮಲ್ತೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿಯೇ ಇರುವ ಹೊನ್ನಮ್ಮನ ಕೆರೆಯು ದೊಡ್ಡಮಲ್ತೆ ಗ್ರಾಮದಲ್ಲಿದ್ದು ಸಂಚಾರ ಸೌಲಭ್ಯಕ್ಕೆ ಅವಶ್ಯಕವಾದ ಸುಸಜ್ಜಿತ ರಸ್ತೆ ಸಂಪರ್ಕವನ್ನು ಹೊಂದಿದೆ. ರಾಜ್ಯ ಹೆದ್ದಾರಿ ರಸ್ತೆಯ ಬಸ್ ತಂಗುದಾಣದಿಂದಲೇ ಪ್ರವಾಸಿಗರಿಗೆ ಸುಸ್ವಾಗತ ಬಯಸುವಂತೆ ಕಂಡು ಬರುವ ಬೆಟ್ಟಗಳು ತಮ್ಮ ಚೆಲುವಾದ ತೋಳುಗಳಿಂದ ಆಲಂಗಿಸಿ ಆದರದಿಂದ ಬರಮಾಡಿಕೊಳ್ಳುತ್ತವೆ. ಅನೇಕ ತಲೆಮಾರುಗಳಿಂದ ಹೊನ್ನಮ್ಮನ ಉದಾರ ಪಾಲನೆ ಪೋಷಣೆಯಲ್ಲೇ ಬೆಳೆದು ಬಂದಿರುವ ಪ್ರಸ್ತುತ ಸ್ಥಳವು ಪುಣ್ಯಕ್ಷೇತ್ರವೆಂದೂ, ತೀರ್ಥಸ್ಥಳವೆಂದೂ, ಪವಿತ್ರಧಾಮವೆಂದೂ ಪರಿಗಣಿಸಲ್ಪಟ್ಟಿದೆ. ಅಲ್ಲದೆ ಪರಿಸರ ಸಾಮೀಪ್ಯದಲ್ಲಿರುವ ಬೆಟ್ಟ-ಗುಹೆಗಳ ಇತಿಹಾಸ, ಪುರಾಣ ಪ್ರತ್ಯಕ್ಷತೆಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.[೪]ಈ ಜಾಗವು ಒಂದು ಪ್ರವಾಸಿ ಹಾಗೂ ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿಯಾಗಿದೆ.
ಪಟ್ಟಣದಲ್ಲಿ ಹಾಗೂ ಗ್ರಾಮದ ಸಮೀಪದಲ್ಲಿ ಹಲವಾರು ದೇವಸ್ಥಾನ (ಇದರಲ್ಲಿ ಚೌಡ್ಲು ಗ್ರಾಮ & ಸಮೀಪ ಹಲವಾರು ಹಳೆಯ ಕಾಲದ ಐತಿಹಾಸಿಕ ಕೆತ್ತನೆ ಗಳು & ದೇವಸ್ಥಾನ ದ ಪಳೆಯುಳಿಗಳು ಇವೆ.), ಮಸೀದಿ & ದರ್ಗಾ (ಸೋಮವಾರಪೆಟೆ ಪಟ್ಟಣದ ಮಧ್ಯದಲ್ಲಿ ಇಸ್ಲಾಂ ನ ಸೂಫಿ ಪರಪರೆಯ ಸಂತರಾದ ಹಜರತ್ ಮಲಂಗ್ ಷಾರವರ ದರ್ಗಾ ಇದೆ). ಚರ್ಚ್ ( ವಿನೂತನ ಶೈಲಿಯ ಚರ್ಚ್ ಗಮನಸೆಳೆಯುತ್ತದೆ)
ದೇವಸ್ಥಾನಗಳು
[ಬದಲಾಯಿಸಿ]ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ಕ್ಷೇತ್ರ
[ಬದಲಾಯಿಸಿ]ಕೊಡಗು ಜಿಲ್ಲೆ,ಸೋಮವಾರಪೇಟೆ ತಾಲ್ಲೂಕು,ಕೊಡ್ಲಿಪೇಟೆ ಹೋಬಳಿ ನಿಲುವಾಗಿಲು-ಬೆಸೂರು ಎಂಬ ಗ್ರಾಮದ ಮಧ್ಯದಲ್ಲಿದೆ. ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ರೂಪವೇ ಬಾಲೆ. ಶ್ರೀ ಜಗನ್ಮಾತೆ ಪಾರ್ವತಿಯ ಇನ್ನೊಂದು ಪ್ರತಿರೂಪ ಮತ್ತು ಶ್ರೀ ತಾಯಿಯ ತಂಗಿಯೂ ಸಹ ಎಂದು ಗುರುತಿಸಲಾಗುತ್ತದೆ. ಸುಮಾರು 2011 ನವೆಂಬರ್ 27 ರಂದು ಸ್ಥಾಪಿತವಾದ ಈ ಕ್ಷೇತ್ರ ಅದರದ್ದೇ ಆದ ಇತಿಹಾಸದ ಹಿನ್ನೆಲೆಯನ್ನು ಹೊಂದಿದೆ. ಊರಿನ ಮುಖ್ಯಸ್ಥರ ಪ್ರಕಾರ ಹಾಗು ಪುರಾಣದ ಕಥೆ ಪ್ರಾಕಾರ ದೇವಸ್ಥಾನ ನಿರ್ಮಾಣವಾಗಬೇಕಿದ್ದ ಜಾಗದಲ್ಲಿ ಸಿಕ್ಕಿರುವ ಮಣ್ಣಿನ ದೀಪದ ಹಿಂದೆ ಇರುವ ಚಿನ್ಹೆ ಹಾಗು ಸಿಕ್ಕಿರುವ ಶ್ರೀಚಕ್ರದ ಚಿನ್ಹೆ ಕೂಡ ಒಂದೇ ಆಗಿರುವುದರಿಂದ 89 ದಿನಗಳ ಒಳಗಾಗಿ ದೇವಸ್ಥಾನ ನಿರ್ಮಾಣವಾಗಬೇಕೆಂದಾಯಿತು. ಭಕ್ತದಿಗಳು, ತಂತ್ರಿಗಳು ಹಾಗು ಬೆಸೂರು-ನೀಲುವಾಗಿಲು ಎರಡು ಊರಿನವರ ಧನ ಸಹಾಯದಿಂದ ಹೇಳಿದ ದಿನದಲ್ಲಿ ಅಂದರೆ ಮೂರು ತಿಂಗಳಲ್ಲಿ ದೇವಸ್ಥಾನವನ್ನು ಪ್ರತಿಷ್ಠಾಪಿಸಲಾಯಿತು. ರಾಜ್ಯದ ಎಲ್ಲಾ ಜನರು ಬಂದು ಪ್ರಾರ್ಥನೆ ಸಲ್ಲಿಸಿ ಹಣ್ಣು ಕಾಯಿ ಮಾಡಿಸಿಕೊಂಡು ಹೋಗುವ ಕಾರಣ ಹಾಗೂ ದೀಪ ಸಿಕ್ಕಿದ ಕುರುಹದಿಂದ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಬಾಲತ್ರಿಪುರ ಸುಂದರಿ ಅಮ್ಮನವರ ಸನ್ನಿಧಿಯನ್ನು ಕಟ್ಟಿಸಲಾಯಿತು.ರಾಣಿಯು ಸಂತಾನ ಭಾಗ್ಯಕೋಸ್ಕರ ತನ್ನ ಅಂತಃಪುರದಲ್ಲಿ ಬಾಲ ತ್ರಿಪುರ ಸುಂದರಿ ಅಮ್ಮನವರನ್ನು ಪೂಜಿಸುತ್ತಿದ್ದು, ಶ್ರೀಚಕ್ರದ ಮೂಲಕ ತಾಯಿಯ ಮೂಲ ಶಕ್ತಿಯು ಇಲ್ಲಿ ನೆಲೆಸಿದ್ದರಿಂದ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ಮೂಲ ಸನ್ನಿಧಿಯನ್ನು ಸ್ಥಾಪಿಸಲಾಯಿತು. ಅಮ್ಮನವರ ಎರಡನೇ ಅಲಂಕಾರ ಸಂತಾನ ಲಕ್ಷ್ಮಿ ಹೀಗಾಗಿ ಇಲ್ಲಿ ಗಂಡಸರಿಗೆ ಪ್ರವೇಶವಿರುವುದಿಲ್ಲ. ತದನಂತರ ರಾಜ-ರಾಣಿಗೆ ಮೂರು ಜನ ಹೆಣ್ಣು ಮಕ್ಕಳಾಗುತ್ತಾರೆ, ನೀಲಾವತಿ ,ಕುಶಲಾವತಿ ಹಾಗೂ ಹೇಮಾವತಿ.ನೀಲಾವತಿ ಎಂದರೆ ಈಗಿನ ನಿಲುವಾಗಿಲು , ಹೇಮಾವತಿ ಎಂದರೆ ಹೆಮ್ಮಾನೆ, ಕುಶಲಾವತಿ ಎಂದರೆ ಕೂಡ್ಲೂರು. ಈ ಕ್ಷೇತ್ರದಲ್ಲಿ ಈಶ್ವರ ದೇವಸ್ಥಾನವನ್ನು ಕಾಣಬಹುದಾಗಿದೆ.ಕ್ಷೇತ್ರದ ರಕ್ಷಣೆಗಾಗಿ ಚೌಡೇಶ್ವರಿ ದೇವಸ್ಥಾನವನ್ನು ನಿರ್ಮಿಸಲಾಗಿದೆ ಚೌಡೇಶ್ವರಿ ದೇವಿ ಇಲ್ಲಿನ ಜಾಗವನ್ನು ಕಾಪಾಡುವಂತವಳು ಅಂದರೆ ಈ ಬಾಲ ದೇವತೆ ಶಾಂತರೂಪಿಯಾಗಿರುವುದರಿಂದ ಈ ಸ್ಥಾನದ ಉಗ್ರ ದೇವತೆ ಚೌಡೇಶ್ವರಿ ತಾಯಿ ಎಂದೇ ಹೇಳಬಹುದಾಗಿದೆ. ಈ ದೇವಸ್ಥಾನ ವರ್ಷಕ್ಕೆ ಒಮ್ಮೆ ತೆರೆಯುತ್ತದೆ ಮತ್ತು ಹರಿಕೆ ಮಾಡಿಕೊಂಡವರು ಕುರಿ ಹಾಗೂ ಕೋಳಿಯನ್ನು ಬಲಿ ಕೊಡಬಹುದಾಗಿದೆ. ಎಲ್ಲ ದೇವಸ್ಥಾನಕ್ಕೂ ಎಲ್ಲ ದೇವರಿಗೂ ಕ್ಷೇತ್ರ ಪಾಲಕ ಇರುತ್ತಾರೆ ಕೆಲವು ದೇವಸ್ಥಾನದಲ್ಲಿ ಅದು ಕಾಣದೆ ಇರುವಂತಹ ಜಾಗದಲ್ಲಿ ಸ್ಥಾಪಿಸಿರುತ್ತಾರೆ, ಆದರೆ ಇಲ್ಲಿ ಎಲ್ಲರಿಗೂ ಗೋಚರಿಸುವ ಹಾಗೆ ಸ್ಥಾಪನೆ ಮಾಡಲಾಗಿದೆ. ನವೆಂಬರ್ 27 ರಂದು ದೇವಸ್ಥಾನದ ವಾರ್ಷಿಕೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹೋಮ-ಹವನಗಳನ್ನು ಮಾಡಿಸಲಾಗುತ್ತದೆ, ಸಂಜೆ ದೀಪಾರಾಧನೆ ಇರುತ್ತದೆ. ಫೆಬ್ರವರಿ ತಿಂಗಳಿನಲ್ಲಿ ತಾಯಿಯ ಜಾತ್ರಾ ಮಹೋತ್ಸವವನ್ನು ನಡೆಸುತ್ತಿದ್ದು ಸುತ್ತಮುತ್ತಲಿನ ಊರುಗಳಿಗೆ ಅಡ್ಡೆ ಉತ್ಸವ ಹೋಗುತ್ತಾರೆ ನಂತರ ಕೊನೆಯ ದಿನ ಹೇಮಾವತಿ ಹೊಳೆಯಿಂದ ಕಳಸವನ್ನು ತರುವುದು ಹಾಗೂ ವೀರಗಾಸೆ ಮಾಡಿಸುವ ಮುಖಾಂತರ ತಾಯಿಯನ್ನು ಮೆರೆಸುತ್ತಾರೆ. ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರು ರಾಜಾ-ರಾಣಿಗೆ ಕೊಟ್ಟ ಮಾತಿನಂತೆ ದೇವಸ್ಥಾನಕ್ಕೆ ಬಂದ ಭಕ್ತಾದಿಗಳು ಯಾರು ಕೂಡ ಖಾಲಿ ಹೊಟ್ಟೆಯಲ್ಲಿ ಹಿಂದಿರುಗಬಾರದೆಂದು ನಿತ್ಯ ದಾಸೋಹವನ್ನು ಪ್ರಾರಂಭಿಸಿದ್ದು, ಇಂದಿಗೂ ಆ ಸಂಸ್ಕೃತಿ ಚಾಲ್ತಿಯಲ್ಲಿದೆ.
ಮಲೇ ಮಲ್ಲೇಶ್ವರ
[ಬದಲಾಯಿಸಿ]ಮಲೇ ಮಲ್ಲೇಶ್ವರ ದೇವಸ್ಥಾನವು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ಬರುವಂತಹ ಒಂದು ಪುಟ್ಟ ಗ್ರಾಮ ಮಳೆಮಲ್ಲೇಶ್ವರ ಈ ಗ್ರಾಮದ ವಿಶೇಷತೆ ಏನೆಂದರೆ ಮಾದೇಶ್ವರ ಬೆಟ್ಟದಲ್ಲಿ ಶಿವನ ಮೂರ್ತಿ ಉಗಮವಾಗಿದ್ದು ಹಾಗೂ ನಂದಿ ಮೂರ್ತಿಗಳ ಉಗಮಸ್ಥಾನವಾಗಿದೆ ಇಲ್ಲಿ ವರ್ಷಕ್ಕೊಮ್ಮೆ ಅಂದರೆ ಫೆಬ್ರವರಿ ತಿಂಗಳಿನಲ್ಲಿ ಆಗುವಂತಹ ಮಹಾಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಶಿವನ ಆರಾಧನೆ ನಡೆಯುತ್ತದೆ ಆರಾಧನೆಗೆ ಹತ್ತಿರದ ಗ್ರಾಮದಿಂದ ಹಲವಾರು ಭಕ್ತಾದಿಗಳು ಬಂದು ಶಿವನ ದರ್ಶನವನ್ನು ಪಡೆದು ಸಂತೃಪ್ತರಾಗುತ್ತಾರೆ ಹಾಗೆಯೇ ಬೆಟ್ಟದ ತುದಿಯಿಂದ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳಬಹುದು.
ಸಿದ್ದಲಿಂಗಪುರ
[ಬದಲಾಯಿಸಿ]ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೋಕಿನ ಒಂದು ಪುಟ್ಟ ಹಳ್ಳಿ ಸಿದ್ದಲಿಂಗಪುರ. ಸಿದ್ದಲಿಂಗೀಶ್ವರ ದೇವರು ನೇಲೆಸಿರುವುದರಿಂದ ಈ ಊರಿಗೆ ಸಿದ್ದಲಿಂಗಪುರ ಎಂಬ ಹೆಸರು ಬಂದಿರುತ್ತದೆ. ಸಿದ್ದಲಿಂಗಪುರ ಗ್ರಾಮ ಅರಣ್ಯ ಪ್ರದೇಶದ ಮದ್ಯ ಭಾಗದಲ್ಲಿ ಇರುವ ಒಂದು ಸುಂದರ ಹಳ್ಳಿಯಾಗಿದೆ. ಈ ಊರಿನ ಸುತ್ತ-ಮುತ್ತ ಅರಣ್ಯ ಪ್ರದೇಶ ಗೀಡ ಮರ ಬೆಟ್ಟಗಳ ಸಾಲುಗಳು ಕಂಡು ಪ್ರಾಣಿಗಳು ಸುಂದರ ಪಕ್ಷಿಗಳು ನೇಲಸಿರುವ ಪ್ರದೇಶವಾಗಿರುತ್ತದೆ ಈ ಊರು ಸೋಮವಾರಪೇಟೆ ತಾಲೋಕು ಇಂದ 20 ಕಿಲೋಮೀಟರ್, ಕುಶಾಲನಗರದಿಂದ 17 ಕಿಲೋಮೀಟರ್ ಮದ್ಯದಲ್ಲಿ ಇರುತ್ತದೆ.ಈ ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಮಹಿಳಾ ಹಾಲು ಶೇಕರಣ ಕೇಂದ್ರ(ಡೈರಿ), ಸಿದ್ದಲಿಂಗೇಶ್ವರ ಬನ, ಚಾಮುಂಡೆಶ್ವರಿ ದೇವಸ್ಥಾನ, ಚಚಱ ಇರುತ್ತದೆ. ಈ ಹಳ್ಳಿಯ ಜನರು ಕೃಷಿಯನ್ನು ಅವಲಂಬಿಸಿದರೆ. ಜೋಳ, ಕಾಫಿ, ಮೇಣಸು, ತೇಂಗು, ಶುಠಿ, ಮುಂತಾದ ಬೆಳೆಗಳನ್ನು ಬೆಳೆಯುತ್ತರೆ.
ಮಕ್ಕಳ ಗುಡಿ ಬೆಟ್ಟ
[ಬದಲಾಯಿಸಿ]ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಎಂಬ ಗ್ರಾಮದಲ್ಲಿ ಇರುವಂತಹ ಒಂದು ಪ್ರವಾಸಿ ತಾಣವಾಗಿದೆ. ಇದು ಸೋಮವಾರಪೇಟೆಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಈ ಮಕ್ಕಳ ಗುಡಿ ಬೆಟ್ಟ ಬೆಟ್ಟ ಗುಡ್ಡಗಳಿಂದ ಕೂಡಿದ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಮಕ್ಕಳ ಗುಡಿ ಬೆಟ್ಟ ಎಂಬ ಹೆಸರು ಬರಲು ಕಾರಣವೇನೆಂದರೆ ಹಿಂದಿನ ಕಾಲದಲ್ಲಿ ಮಕ್ಕಳು ಇಲ್ಲಿಗೆ ಆಟವಾಡಲೆಂದು ದನಗಳನ್ನು ಮೇಯಿಸುತ್ತಾ ಮತ್ತು ಬೆಟ್ಟದ ಸಮೀಪ ಪ್ರತಿನಿತ್ಯ ಬರುತ್ತಿದ್ದರು. ಅಲ್ಲಿ ಮಕ್ಕಳು ಆಟವಾಡುತ್ತ ಚಿಕ್ಕ ಚಿಕ್ಕ ಕಲ್ಲುಗಳಿಂದ ಗುಡಿಯನ್ನು ಕಟ್ಟಿದರು. ದಿನನಿತ್ಯ ಮಕ್ಕಳು ಹಾಗೆಯೇ ಮುಂದುವರಿಸುತ್ತಾ ಮತ್ತು ಗುಡಿಗೆ ಪೂಜೆಯನ್ನು ಮಾಡುತ್ತಿದ್ದರು. ತದನಂತರ ಅದು ಹಾಗೆಯೇ ಮುಂದುವರಿದು ಮತ್ತು ಬೆಟ್ಟಕ್ಕೆ ಯಾರೇ ಹೋದರೂ ಒಂದು ಕಲ್ಲನ್ನು ಇಟ್ಟು ಬರುವಂತದ್ದು ಒಂದು ಸಂಪ್ರದಾಯವಾಗಿ ಇಂದಿಗೂ ಮುಂದುವರಿಸುತ್ತಾ ಬಂದಿದೆ. ಅಲ್ಲದೆ ಆ ಗುಡಿಯ ಒಳಗೆ ನಾಣ್ಯಗಳನ್ನು ಹಾಕಿದರೆ ಅದು ಒಂದು ರೀತಿಯ ವಿಶೇಷವಾದ ಶಬ್ದವನ್ನು ಕೇಳಬಹುದು. ಪ್ರಸ್ತುತ ದಿನಗಳಲ್ಲಿ ಈ ಮಕ್ಕಳಗುಡಿ ಬೆಟ್ಟವು ಕಲ್ಲುಗಳಿಂದ ನಿರ್ಮಿತ ವಾದ ಒಂದು ಬೃಹತ್ ಗುಡಿಯಾಗಿ ನಿರ್ಮಿತ ವಾಗಿರುವುದನ್ನು ನಾವು ನೋಡಬಹುದು.
ಬಂಗಾರ ಕಲ್ಲಿನ ಪವಾಡ
ಹೊನ್ನಮ್ಮನ ಕೆರೆ ದೇವಸ್ಥಾನ ಆವರಣದ ಮುಂಭಾಗದಲ್ಲಿ ವಿಶೇಷವಾದ ಒಂದು ಹಾಸು ಕಲ್ಲಿನ ಪೀಠವು ಸ್ಥಾಪಿಸಲ್ಪಟ್ಟಿದೆ. ಇದನ್ನು ಬಂಗಾರದ ಕಲ್ಲು, ಬಾಗಿನಕಲ್ಲು, ಬಂಗಾರಕಟ್ಟೆ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಒಂದು ಹಾಸುಗಲ್ಲಿನಿಂದ ನಿರ್ಮಿಸಲ್ಪಟ್ಟಿರುವ ಈ ಪೀಠವು ಪ್ರಸ್ತುತ ಗೌರಿಹಬ್ಬದ ಬಾಗಿನ ವಿಸರ್ಜನೆಯ ಶುಭ ಸಂದರ್ಭದಲ್ಲಿ (ಬಾಗಿನ) ಪೂಜಾ ಕಾವ್ಯಗಳಿಗಾಗಿ ಬಳಕೆಯಾಗುತ್ತಿದೆ. ಈ ಬಂಗಾರ ಕಲ್ಲಿನ ಪವಾಡ ಕಥೆಯೊಂದು ಜನಮನದಲ್ಲಿ ಪ್ರಚಲಿತವಾಗಿ ಮನೆ ಮನೆಯ ಮಾತಾಗಿದೆ. ನಂಬಿಕಸ್ಥರ ಸತ್ಯ ನಿಷ್ಠೆಯ ಆ ಕಾಲದಲ್ಲಿ ಹೊನ್ನಮ್ಮ ಬಗೆ ಬಗೆಯ ಒಡವೆ. ಆಭರಣಗಳನ್ನು ಹೊಂದಿದಳೆಂದರೆ ಉಪ್ಪೇಕ್ಷೆಯಾಗಲಾರದು ಅಂತೆಯೇ ಅವುಗಳನ್ನು ತನ್ನನ್ನು ಮನಪೂರ್ವಕವಾಗಿ ಬೇಡಿಕೊಂಡವರಿಗೆ ತಾತ್ಕಾಲಿಕ ಉಪಯೋಗಕ್ಕೆಂದು ಎರವಲಾಗಿ ಕೊಡುವ ಪದ್ಧತಿ ಇದ್ದಿತೆಂದರೆ ಅದರಲ್ಲಿಯೂ ಯಾವುದೇ ಅತಿಶಯವಿಲ್ಲ. ಹೊನ್ನಮ್ಮ ತನ್ನ ಜೀವಿತಾವಧಿಯಲ್ಲಿ ಬಡಬಗ್ಗರು, ಅಸಹಾಯಕರು ಬಂದು ಕೇಳಿ, ಮದುವೆ ಮುಂತಾದ ಶುಭಕಾರಗಳಿಗೆ ಒಡವೆ ಇತ್ಯಾದಿ ಆಭರಣಗಳನ್ನು ಪಡೆದುಕೊಂಡು ಹೋಗಿ ಅವುಗಳನ್ನು ಉಪಯೋಗಿಸಿಕೊಂಡು, ಅದರಲ್ಲಿಯೂ ವಿಶೇಷವಾಗಿ ಮದುಮಕ್ಕಳ ಅಲಂಕಾರಕ್ಕಾಗಿ ಬಳಸುತ್ತಿದ್ದರೆಂಬುದು ಪ್ರತೀತಿ. ಅವರ ಎಲ್ಲಾ ಕಾರಗಳು ಮುಗಿದ ಬಳಿಕ ಅವುಗಳನ್ನು ಯಥಾವತ್ತಾಗಿ ವಾಪಸ್ಸು ಕೊಡುವುದು ರೂಢಿಯಾಗಿರುತ್ತದೆ.[೫]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2008-01-19. Retrieved 2008-01-08.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2007-12-30. Retrieved 2008-01-08.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2007-12-12. Retrieved 2008-01-08.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ D M, ಕುಮಾರಪ್ಪ (09/08/2006). ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆ (2019 ed.). Bangalore: D M ಕುಮಾರಪ್ಪ (published 01/09/2019). p. 2.
{{cite book}}
: Check date values in:|date=
and|publication-date=
(help)CS1 maint: date and year (link) - ↑ ಬಂಗಾರ ಕಲ್ಲಿನ ಪವಾಡ