ಅಬ್ಬಿ ಜಲಪಾತ

ವಿಕಿಪೀಡಿಯ ಇಂದ
Jump to navigation Jump to search
ಅಬ್ಬಿ ಜಲಪಾತ, ಮಡಿಕೇರಿ
Abbey Falls
Falling water Abbi falls

ಅಬ್ಬಿ ಜಲಪಾತವು ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ 7-8 ಕಿ.ಮೀ. ದೂರದಲ್ಲಿದೆ[೧]. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು[೨]. ಸುತ್ತಮುತ್ತಲು ದಟ್ಟವಾದ ಕಾಡು, ಕಾಫಿ ತೋಟದ ಮಧ್ಯೆ ಹಾಲಿನ ನೊರೆಯಂತೆ 30ರಿಂದ 40 ಅಡಿ ಎತ್ತರದ ಬೆಟ್ಟದಿಂದ ಧುಮ್ಮಿಕ್ಕುವ ನೀರನ್ನು ನೋಡುವುದೇ ಚೆಂದ. ನೋಡಿದಾಕ್ಷಣ.. ‘ಅಬ್ಬಾ’ ಎನ್ನುವಂತೆ ಉದ್ಘಾರ ತೆಗೆಯದವರೇ ಇಲ್ಲ ಎನ್ನಬಹುದು. ಇಷ್ಟೊಂದು ರಮಣೀಯವಾಗಿರುವ ಸ್ಥಳವು ಖಾಸಗಿ ಮಾಲೀಕರಿಗೆ ಸೇರಿದೆ ಎನ್ನುವುದು ಗಮನಾರ್ಹ.ನೆರವಂಡ ಇಂದಿರಾ ಅವರಿಗೆ ಸೇರಿದ ಜಾಗದಲ್ಲಿ ಅಬ್ಬಿ ಜಲಪಾತವಿದೆ[೩].

ಹೋಗುವ ಹಾದಿ[ಬದಲಾಯಿಸಿ]

ಸಮೀಪದ ಪಟ್ಟಣ[ಬದಲಾಯಿಸಿ]

ಮಡಿಕೇರಿ ಇಲ್ಲಿ ವಸತಿಗೃಹಗಳು, ಪೆಟ್ರೋಲ್ ಬಂಕುಗಳು ಮತ್ತಿತರ ಪ್ರಮುಖ ವ್ಯವಸ್ಥೆಗಳು ಲಭ್ಯ.

ಸಮೀಪದ ಪ್ರಮುಖ ಆಕರ್ಷಣೆಗಳು[ಬದಲಾಯಿಸಿ]

  1. ಮಡಿಕೇರಿ,
  2. ತಲಕಾವೇರಿ,
  3. ಇರುಪ್ಪು ಜಲಪಾತ,
  4. ಭಾಗಮಂಡಲ,
  5. ಬೈಲುಕುಪ್ಪೆ
  6. ರಾಜಾಸಿಟಿ
  7. ಕಾವೇರಿ ನಿಸರ್ಗಧಾಮ
  8. ಎಮ್ಮೆಮಾಡು ಧರ್ಗ ಮುಂತಾದುವು.

ಉಲ್ಲೇಖನ[ಬದಲಾಯಿಸಿ]