ಪ್ಲಾಸ್ಟಿಕ್

ವಿಕಿಪೀಡಿಯ ಇಂದ
Jump to navigation Jump to search

ಪ್ಲಾಸ್ಟಿಕ್ ಇಲ್ಲದ ಜಾಗವೇ ಇಲ್ಲ. ಹೃದಯ ಕವಾಟದಿಂದ ಚಂದ್ರನವರೆಗೂ ಪ್ಲಾಸ್ಟಿಕ್ಮಯ. ಎಲ್ಲಿ, ಯಾವುದರಲ್ಲಿ ಪ್ಲಾಸ್ಟಿಕ್ ಇಲ್ಲ ಎಂದು ಹೇಳುವುದೇ ಕಷ್ಟ. ನಮಗೆ ಪ್ಲಾಸ್ಟಿಕ್ ಬಳಕೆ ಮಾತ್ರ ತಿಳಿದಿದೆ. ನಿರ್ವಹಣೆ, ನಾಶ ತಿಳಿದಿಲ್ಲ. ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜಲು ಬಳಸುವ ಬ್ರಷ್, ನೀರೆತ್ತಲು, ನೀರು ಹಿಡಿಯಲು ಬಳಸುವ ಕೊಡ, ಬಕೆಟ್, ಚಟ್ನಿ ಮಾಡಲು ಬಳಸುವ ಮಿಕ್ಸರ್, ಮಕ್ಕಳ ಆಟಿಕೆ, ಸ್ಕೂಲ್ ಬ್ಯಾಗ್, ಚಪ್ಪಲಿ, ಪೆನ್, ಫೋನ್, ರೆಫ್ರಿಜಿರೇಟರ್, ಬಸ್, ಟೇಬಲ್, ಕುರ್ಚಿ, ನಲ್ಲಿ, ಕಾಸ್ಮೆಟಿಕ್ ಡಬ್ಬಿ, ಕೊನೆಯಲ್ಲಿ ನೀವು ಮಲಗುವ ಮುನ್ನ ಲೈಟ್ ಆರಿಸಲು ಒತ್ತುವ ಸ್ವಿಚ್ ಸಹ ಪ್ಲಾಸ್ಟಿಕ್ ನಿಂದಲೇ ಆಗಿದೆ. ಪೇಟೆಗೆ ಹೋಗುವಾಗ ಕೈಚೀಲವೊಂದನ್ನು ಹಿಡಿದುಕೊಂಡು ಹೋಗುವ ಪದ್ಧತಿ ಈಗ ಇಲ್ಲ. ಎಲ್ಲಾ ವಸ್ತುಗಳಿಗೂ ಒಂದೊಂದು ಕ್ಯಾರಿಬ್ಯಾಗ್, ಅವುಗಳನ್ನು ತುಂಬಲು ಮತ್ತೊಂದು ಕ್ಯಾರಿ ಬ್ಯಾಗ್. ಗೊಬ್ಬರದ ಚೀಲ, ಪಶು ಆಹಾರ ಚೀಲ, ಕೀಟನಾಶಕಗಳ ಕ್ಯಾನ್, ಅಕ್ಕಿ ಚೀಲ, ಶೇಡ್ ನೆಟ್, ಡ್ರಿಪ್ ಪೈಪ್, ಸ್ಪ್ರಿಂಕ್ಲರ್, ಜೆಟ್, ಟಾರ್ಪಾಲ್, ಮುಚ್ಚಿಗೆಗೆ ಪ್ಲಾಸ್ಟಿಕ್, ಹಸುರುಮನೆ ನೆಟ್ಗಳು, ಮೀನು ಸಾಕುವ ನೆಲತೊಟ್ಟಿ, ಅಜೋಲಾ ತೊಟ್ಟಿ, ಮೊರ, ತಟ್ಟೆ, ಎತ್ತಿಗೆ ಕಟ್ಟುವ ಹಗ್ಗ, ದಂಡೆ, ಮುಖ್ಹಂಡ ಹೀಗೆ ಕೃಷಿಯಲ್ಲೂ ಪ್ಲಾಸ್ಟಿಕ್ಮಯ. ನಮ್ಮ ಬದುಕಿನಲ್ಲಿ, ವಾತಾವರಣದಲ್ಲಿ ಈಗ 25% ಪ್ಲಾಸ್ಟಿಕ್ ತುಂಬಿದೆ. ಇದರ ಬದಲಿಗೆ ಬೇರೇನೂ ಬಳಸಲೂ ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಪ್ಲಾಸ್ಟಿಕ್ ಬದಲಿಗೆ ಬೇರೇನು ಬಳಸಬಹುದು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ?! ಪ್ಲಾಸ್ಟಿಕ್ ತ್ಯಜಿಸಲು ಸಾಧ್ಯವೇ ಎನ್ನುವುದು ಇನ್ನೂ ಕ್ಲಿಷ್ಟಕರ ವಿಚಾರ. ನಿರ್ವಹಣೆ: ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದಿರುವುದು, ಜೈವಿಕ ಹಾಗೂ ಪ್ಲಾಸ್ಟಿಕ್ಗಳನ್ನು ಬೇರೆ- ಬೇರೆ ತ್ಯಾಜ್ಯವಾಗಿ ಸಂಗ್ರಹಿಸುವುದು- ಇದನ್ನು ಎಲ್ಲಾ ನಗರ, ಪುರಸಭೆಗಳು ಮಾಡಬೇಕು. ಇದು ಈಗ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರತವಾಗಿದೆ, ಘನ ತ್ಯಾಜ್ಯದ ಸೂಕ್ತ ವಿಲೇವಾರಿ. ಪ್ಲಾಸ್ಟಿಕ್ ಕವರುಗಳಲ್ಲಿ ಆಹಾರ ಪದಾರ್ಥಗಳನ್ನು ತುಂಬಿ ಎಸೆಯಬಾರದು. ಪ್ಲಾಸ್ಟಿಕನ್ನು ಸುಡಬಾರದು, ನೀರಿಗೆ ಎಸೆಯಬಾರದು. ಒಂದೊಮ್ಮೆ ನೀರಿಗೆ ಎಸೆಯುವುದು, ಬಿಡಾಸುವುದಾದರೆ ಗಂಟುಹಾಕಿ ಎಸೆಯಿರಿ. ಸಂಘ- ಸಂಸ್ಥೆಗಳ ಸಹಾಯದಿಂದ ಹೂಳುವಿಕೆ, ಪ್ಲಾಸ್ಟಿಕ್ ಫ್ಯಾಕ್ಟರಿಗಳಿಗೆ ರವಾನೆ, ಮರುಬಳಕೆಯ- ಉಪ ಉತ್ಪನ್ನಗಳ ತಯಾರಿಕೆಗೆ ಪ್ರಯತ್ನ. ಪರಿಹಾರ: 1. ಪ್ಲಾಸ್ಟಿಕ್ನ ಕಡಿಮೆ ಬಳಕೆ 2. ನಿರ್ವಹಣೆ 3. ಮರುಬಳಕೆ 4. ನಾಶ ಮಾಡಬಹುದಾದ ರೀತಿಗಳು 5. ತಯಾರಿಕೆಯಲ್ಲಿ ಬದಲಾವಣೆ 6. ಪುನರ್ ಬಳಕೆ 7. ಕಾನೂನು ಜಾರಿ