ಇಳಕಲ್ಲ ಸೀರೆ

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕಬಾಗಲಕೋಟೆಯ ಬಳಿ ಇರುವ ಇಳಕಲ್ ಊರಿನಲ್ಲಿ ಪ್ರಾಚೀನಕಾಲದಿಂದಲೂ ತಯಾರಗುತ್ತಿರುವ ಸೀರೆಗಳ ಒಂದು ವಿಧ.

ಇತಿಹಾಸ[ಬದಲಾಯಿಸಿ]

ಬಹುಶಃ ೮ ನೆಯ ಶತಮಾನದಿಂದಲೂ ಇಲ್ಲಿ ಸೀರೆ ತಯಾರಿಕೆ ಆರಂಭವಾಗಿರುವ ಕುರುಹುಗಳು ಸಿಗುತ್ತವೆ. ಬಳ್ಳಾರಿ ಮತ್ತು ಸುತ್ತಮುತ್ತಲ ಆಡಳಿತಗಾರರ ಪ್ರೋತ್ಸಾಹ ಹಾಗೂ ಒಲವಿನಿಂದ ಇಲ್ಲಿ ಸೀರೆ ಉದ್ಯಮ ತನ್ನ ನೆಲೆಯನ್ನು ಕಂಡಿತು. ಕಚ್ಚಾ ವಸ್ತುಗಳು ಸ್ಥಳೀಯವಾಗಿಗೆ ಲಭ್ಯವಿವೆ.ಹಬ್ಬ-ಹರಿದಿನಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತಿತ್ತು.

ತಯಾರಿಕೆ[ಬದಲಾಯಿಸಿ]

ಇಳಕಲ್ ಸೀರೆಗಳ ಅಂಚುಗಳು ೩ ಬಗೆಯದಾಗಿರುತ್ತವೆ. ೧. ಗೋಮಿ ('ಇಳಕಲ್ ದಡಿ' ಎಂಬುದು ಇದರ ಜನಪ್ರಿಯ ಹೆಸರು) ೨. ಪರಸ್ ಪೇಟ್ (ಚಿಕ್ಕ ಪರಸ್ ಮತ್ತು ದೊಡ್ಡಪರಸ್ ಎಂಬ ಎರಡು ಬಗೆಗಳಿವೆ). ೩. ಗಾಡಿ ಈ ಸೀರೆಗಳ ಮೈ ಅಥವಾ ಒಡಲುಗಳಲ್ಲಿ ೩ ವಿನ್ಯಾಸಗಳನ್ನು ನಾವು ಕಾಣಬಹುದು. 'ಬಣ್ಣದ ಪಟ್ಟೆಗಳು', 'ಆಯತಾಕೃತಿ', ಹಾಗೂ 'ಚೌಕಳಿ ಆಕಾರದ ವಿನ್ಯಾಸ'ದವು. ಇದೇ ಈ ಉದ್ಯಮದ ಧನಾತ್ಮಕ ಅಂಶವೂ ಹೌದು. ಇಳಕಲ್ ನಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ನೇಕಾರರು ಸೀರೆ ನೇಯ್ಗೆ, ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅದರ ವಿನ್ಯಾಸ ಹಾಗೂ ನೇಯ್ಗೆಯ ವಿಶೇಷತೆಯೆಂದರೆ, ಸೀರೆಯ ಮೈಗೆ ಹತ್ತಿಎಳೆಗಳನ್ನು ಬಳಸಿದ ಬಾಗು,ಅಥವಾ ವಕ್ರ ಡೊಂಕು ನೇಯ್ಗೆ ವ್ಯವಸ್ಥೆ. ಸೀರೆಯ ಅಂಚಿಗೆ ಹಾಗೂ ಸೆರಗಿಗೆ ಕಚ್ಚಾ ರೇಷ್ಮೆಯ ನೂಲನ್ನು ಬಳಸುತ್ತಾರೆ. ಕೆಲವೊಮ್ಮೆ ಕಚ್ಚಾ ರೇಷ್ಮೆಯ ಬದಲಿಗೆ ಶುದ್ಧ ರೇಷ್ಮೆಯನ್ನು ಸಹಿತ ಬಳಸುತ್ತಾರೆ. ಇಳಕಲ್ ಸೀರೆಗಳ ವಿಶಿಷ್ಟ್ಯ ೧. ಟೋಪಿ ತೆನೆ ಯೆಂಬ ತಂತ್ರದಿಂದ ಇಳಕಲ್ ಸೀರೆಗಳು, ತಯಾರಾಗುತ್ತವೆ. ಅಂದರೆ ನೇಯ್ಗೆಯನ್ನೇ ಮೂಲವಾಗಿ ಬಳಸಿಕೊಂಡು, ಹಲವಾರುಕೊಂಡಿ ಕುಣಿಕೆಗಳು ಗೊಣಸುಗಳನ್ನು ನಿರ್ಮಿಸಿಕೊಂಡು, ಸೀರೆಯ ಒಡಲಿನ ಭಾಗದ ನೇಯ್ಗೆಯನ್ನು ಸೆರಗಿನ ನೇಯ್ಗೆಯ ಜೊತೆ ಜೋಡಿಸುವ ವಿಶಿಶ್ಟ ಕಲೆ, ಹೆಣ್ಣುಮಕ್ಕಳಿಗೆ ಮುದಕೊಡುವಂತಹದು. ಈ ತಂತ್ರವನ್ನು ಬಳಸಿ ಒಬ್ಬ ನೇಕಾರ ೬, ೮, ೯ ಗಜದಷ್ಟು ಬಟ್ಟೆಯನ್ನು ಮಾತ್ರ ನೆಯುತ್ತಾನೆ. ನಂತರ ಈ ಮೂರು ಬೇರೆಬೇರೆ ಭಾಗಗಳನ್ನು ಒಟ್ಟಾಗಿ ಜೋಡಿಸಲು ಕೊಂಡಿ/ಗೊಣಸುತಂತ್ರದ ಬಳಕೆಯಗುತ್ತದೆ. ಗೌರವದ ಲಾಂಛನವನ್ನಾಗಿ ಪರಿಗಣಿಸಲಾಗಿದೆ. ಸೆರಗಿನ ವಿನ್ಯಾಸ ಒಂದು ಹೊಸಮಾದರಿಯದು. ತೋಪಿತೆನೆ ಸೀರೆಯ ಸೆರಗಿನಲ್ಲಿ ೩ ಪ್ರಮುಖ ಭಾಗಗಳನ್ನು ಕೆಂಪು ಬಣ್ಣದಲ್ಲಿ ಕಾಣಬಹುದು. ಎರಡು ಭಾಗಗಳ ಮಧ್ಯಭಾಗ ಬಿಳಿಬಣ್ಣದ್ದಾಗಿರುತ್ತದೆ.

ವೈಶಿಷ್ಟ್ಯ[ಬದಲಾಯಿಸಿ]

ಹಬ್ಬ-ಹರಿದಿನಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತಿತ್ತು. ಸೆರಗಿನ ತುದಿಯಲ್ಲಿ ಹೆಣಿಗೆ, ಕೋಟಿಕಂಬ್ಳಿ(ಕೋಟೆ ರಕ್ಷಕ), ಟೋಪಿ ತೆನೆ, ಜೋಳದ ತೆನೆ, ರಂಪ, (ಗಿರಿಶ್ರೇಣಿ) ಇತ್ಯಾದಿಗಳ ಹೆಣಿಗೆ ವಿನ್ಯಾಸಗಳಿತ್ತವೆ. ಸೀರೆಯ ಅಂಚು ವಿಶಾಲವಾಗಿ ೪ ರಿಂದ ೬ ಇಂಚಿನಷ್ಟು ಅಗಲವಿರುತ್ತದೆ. ಸಾಂಪ್ರದಾಯಿಕ ಸೀರೆಗಳಬಣ್ಣ ಸಾಮಾನ್ಯವಾಗಿ ಕೆಂಪು ಇಲ್ಲವೇ ಮರೂನ್ ಬಣ್ಣದ್ದಾಗಿರುತ್ತದೆ. ಗ್ರಾಹಕರು ದಾಳಿಂಬೆ ಕೆಂಪು, ಉಜ್ವಲ ನವಿಲು ಹಸಿರು ಬಣ್ಣ ಇಲ್ಲವೇ ಗಿಳಿ ಹಸುರಿನ ಸೀರೆಗಳನ್ನು ಸೂಚಿಸಿ ಪಡೆಯಬಹುದು. ಹತ್ತಿಯ ಸೀರೆಗಳೂ ಲಭ್ಯ. ಹತ್ತಿ-ರೇಷ್ಮೆ ಮಿಶ್ರದ ಸೀರೆಗಳೂ ದೊರೆಯುತ್ತವೆ. ಶುದ್ಧ ರೇಷ್ಮೆಯ ಸೀರೆಗಳನ್ನು ಗ್ರಾಹಕರು ಕೇಳಿ ಪಡೆಯಬಹುದು. ಮದುವೆ ಹೆಣ್ಣು ಧರಿಸಬಹುದಾದ ಇಳಕಲ್ ಧಾರೆ ಸೀರೆ ಕುಂಕುಮ ಬಣ್ಣದ್ದಾಗಿರುತ್ತದೆ. ಅರ್ಚಕರ ಮನೆಯವರು, ಹಾಗೂ ಪುರೋಹಿತರ ಮನೆಯ ಗೃಹಿಣಿಯರು ಇದೇ ಬಣ್ಣದ ಸೀರೆಯನ್ನು ಇಷ್ಟಪಡುತ್ತಾರೆ. ಆಧುನಿಕವಾಗಿ ತಯಾರಾಗುತ್ತಿರುವ ಒಂದು ನಮೂನೆ ಗಾಯತ್ರಿ ಯೆಂಬ ಸೀರೆಗೆ, ಹೊಸ ವಿನ್ಯಾಸದ, ೨.೫ ಇಂಚಿನಿಂದ ೪ ಇಂಚುಗಳವರೆಗಿನ ಕೆಂಪು ಅಥವ 'ಮರೂನ್' ಬಣ್ಣದ ಅಂಚನ್ನು ಕಾಣುತ್ತೇವೆ. ಇಳಕಲ್ ಸೀರೆಗಳ ಮತ್ತೊಂದು ಹೊಸವಿನ್ಯಾಸವೆಂದರೆ, ಒಡಲಿನ ಮೇಲೆ 'ಕಮಲದ ಹೂ', 'ಆನೆ', 'ಪಲ್ಲಕ್ಕಿ' ಇತ್ಯಾದಿ ಕಸೂತಿ ಚಿತ್ರಗಳ ಹೆಣಿಗೆ ೯ ಗಗಳ ಸೀರೆ,ಸೆರಗಿಗೆ ದೇವಸ್ಥಾನದಗೋಪುರಗಳ ವಿನ್ಯಾಸವಿರುತ್ತದೆ. ಸೆರಗುಗಳು ಸಾಮಾನ್ಯವಾಗಿ ಕೆಂಪುಬಣ್ಣದ ರೇಷ್ಮೆ ದಾರಗಳಿಂದ ನೇಯ್ಗೆಯಾದರೆ, ಅದಕ್ಕೊಪ್ಪುವಂತೆ, ಬಿಳಿಯ ಚಿತ್ರಾಲಂಕಾರವನ್ನೂ ನಾವು ಕಾಣುತ್ತೇವೆ.[೧]

ಉಲ್ಲೇಖಗಳು[ಬದಲಾಯಿಸಿ]

  1. K'taka gets highest number of GI tags