ವಿಟ್ಲ
ವಿಟ್ಲ Vittla | |
---|---|
ಗ್ರಾಮ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ಸರ್ಕಾರ | |
• MLA | T. Shakuntala Shetty |
Elevation | ೧೦೦ m (೩೦೦ ft) |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ಪಿನ್ | 574243 |
Telephone code | 8255 |
ವಾಹನ ನೋಂದಣಿ | KA.19 |
ಜಾಲತಾಣ | http://vittla.webs.com/ |
ವಿಟ್ಲವು ಬಂಟ್ವಾಳದಿಂದ ೧೮ಕಿ.ಮಿ ದೂರದಲ್ಲಿರುವ ಊರು. ಇದು ಪುತ್ತೂರಿನಿಂದ ೧೪ಕಿ.ಮಿ ಮತ್ತು ಮಂಗಳೂರಿನಿಂದ ೪೦ಕಿ.ಮಿ ದೂರದಲ್ಲಿದೆ. ೨೦೦೮ರ ಚುನಾವಣೆಯವರೆಗೆ ವಿಟ್ಲವು ಒಂದು ವಿಧಾನಸಭಾ ಕ್ಷೇತ್ರವಾಗಿತ್ತು. ವಿಟ್ಲ ಮತ್ತು ಅದರ ಆಸುಪಾಸಿನಲ್ಲಿ ಕೃಷಿಯು ಪ್ರಧಾನವಾಗಿದ್ದು,ಅಡಿಕೆ,ಕೊಕ್ಕೋ,ಕಾಳುಮೆಣಸು,ತೆಂಗು,ಗೇರುಬೀಜ ಇತ್ಯಾದಿ ಬೆಳೆಯಲಾಗುತ್ತದೆ.
ಹಿಂದು, ಮುಸ್ಲಿಮ್,ಕ್ರೈಸ್ತರು ಮುಖ್ಯವಾಗಿ ಇಲ್ಲಿ ವಾಸಿಸುತ್ತಿದ್ದು, ಕನ್ನಡ,ತುಳು,ಹವ್ಯಕ ಕನ್ನಡ, ಕೊಂಕಣಿ,ಮಲೆಯಾಳಂ,ಬ್ಯಾರಿ ಭಾಷೆ ಮಾತನಾಡುವ ಜನರಿದ್ದಾರೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವೂ ದಕ್ಷಿಣ ಕನ್ನಡ ಜಿಲ್ಲೆಯ ಎತ್ತರವಾದ ದೇವಾಲಯ ಎಂಬ ಹೆಗ್ಗಳಿಕೆ ಇರುತ್ತದೆ. ವಿಟ್ಲ ಪಟ್ಟಣದಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರ ಇದೆ ಈ ಜಾಗಕ್ಕೆ ಅನ್ನಮೂಲೆ ಎಂಬ ಹೆಸರು ಇದೆ.
ಇತಿಹಾಸ[ಬದಲಾಯಿಸಿ]
ಡೊಂಬ ಹೆಗ್ಗಡೆ ಮನೆತನಕ್ಕೆ ಸೇರಿದ ವಿಟ್ಲ ಅರಸರಿಂದ ಈ ಪ್ರದೇಶವು ಆಳಲ್ಪಡುತ್ತಿತ್ತು. ರಾಜಮನೆತದ ಮುಖ್ಯಸ್ಠರು ಇಂದಿಗೂ ಸುತ್ತಲಿನ ೧೬ ದೇವಸ್ಠಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವಿಟ್ಲದ ಹೊರವಲಯದಲ್ಲಿ, ಹಚ್ಚ ಹಸುರಿನ ಸುಂದರ ಪರಿಸರದಲ್ಲಿ, ಅರಮನೆಯನ್ನು ಇಂದಿಗೂ ಕಾಣಬಹುದಾಗಿದೆ. ಅರಸು ಮನೆತನದ ಜನರು ಇಂದಿಗೂ ಅಲ್ಲಿ ವಾಸಿಸುತ್ತಿದ್ದಾರೆ.ಇಲ್ಲಿಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿರುವ ಐದು ಶಿವಲಿಂಗಗಳನ್ನು ಪಾಂಡವರು ಸ್ಥಾಪಿಸಿದರೆಂದು ಪ್ರತೀತಿಯಿದೆ.ವಿಟ್ಲವು ಪಂಚಲಿಂಗೇಶ್ವರ ದೇವಸ್ಥಾನದಿಂದ ಪ್ರಸಿದ್ಧವಾಗಿದೆ. ವಿಟ್ಲವು ಕಳಂಜಿಮಲೆ ಕಾಡಿನಿಂದ ಆವೃತವಾಗಿದೆ. ಈ ಕಾಡಿನಲ್ಲಿ ಬಕಾಸುರನೆಂಬ ಅಸುರನು ವಾಸವಾಗಿದ್ದನೆಂದು ಹೇಳಲಾಗುತ್ತದೆ.ಅವನು ವಾಸಿಸುತ್ತಿದ್ದನೆಂದು ಹೇಳಲಾಗುವ ಗುಹೆಯೊಂದನ್ನು ನಾವೀಗಲೂ ಅಲ್ಲಿ ಕಾಣಬಹುದಾಗಿದೆ
ಕೇಂದ್ರೀಯ ಸಂಸ್ಥೆಗಳು[ಬದಲಾಯಿಸಿ]
ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರವು(CPCRI) ವಿಟ್ಲದ ಬಳಿಯಿದೆ. ಅಡಿಕೆ ಮತ್ತು ಕೊಕ್ಕೋ ಬೆಳೆಗಳ ಬಗ್ಗೆ ಸಂಶೋಧನೆಗಳು ಇಲ್ಲಿ ನಡೆಯುತ್ತವೆ.
ಸಮೀಪದ ಪ್ರದೇಶಗಳು
ಮಂಗಳೂರು
ಕಾಸರಗೋಡು
ಬಂಟ್ವಾಳ
ಅಳಿಕೆ
ಪುಣಚಾ
ಬದಿಯಡ್ಕ
ಕನ್ಯಾನ
ಆನೇಕಲ್ಲು
ಮಂಜೇಶ್ವರ