ಪುಣಚಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪುಣಚ'ವು ದಕ್ಷಿಣ ಕನ್ನಡ ಜಿಲ್ಲೆಬಂಟ್ವಾಳ ತಾಲೂಕಿನಲ್ಲಿದೆ. ಇಲ್ಲಿ ಬ್ಯಾಂಕ್, ಅಂಚೆ ಕಛೇರಿ, ಪ್ರಾಥಮಿಕ ಶಾಲೆಗಳಿವೆ.

ಹಿನ್ನೆಲೆ ತುಳು ಭಾಷೆಯಲ್ಲಿರುವ 'ಪೂಂಚ', ಅಂದರೆ 'ಹುತ್ತ' ಎಂಬ ಪದದಿಂದ 'ಪುಣಚ' ಹೆಸರು ಬಂದಿದೆ.

ಪುಣಚವು 'ಮಹಿಷಮರ್ಧಿನಿ' ದೇವಸ್ಥಾನದಿಂದ ಪ್ರಸಿಧ್ಧವಾಗಿದೆ. ಪ್ರಶಾಂತವಾದ, ಹಸುರಿನಿಂದ ಕೂಡಿದ ಪ್ರದೇಶದಲ್ಲಿದೆ ಈ ದೇವಸ್ಥಾನ. ಹಿಂದೊಮ್ಮೆ ಹೆಂಗಸೊಬ್ಬಳು 'ದೇವರಗುಡ್ಡೆ' ಎಂಬ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದಾಗ 'ಮಹಿಷಮರ್ಧಿನಿ' ದೇವಿಯ ವಿಗ್ರಹ ದೊರೆಯಿತು. ಅವಳಿಗೆ ತಿಳಿಯದೇ ಆ ವಿಗ್ರಹದ ಒಂದು ಕಣ್ಣು ಭಗ್ನವಾಯಿತು, ನಂತರ, ಈಗಿರುವ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಲಾಯಿತು ಎಂದು ತಿಳಿದುಬರುತ್ತದೆ. ದೇವಸ್ಥಾನದ ಪಕ್ಕದಲ್ಲೆ ತಿಳಿನೀರಿನ ಪುಷ್ಕರಣಿ, ನಾಗಬನ, ದೈವದ ಗುಡಿ ಕೂಡ ಇದೆ. ವರ್ಷಂಪ್ರತಿ ೫ ದಿನಗಳ ಜಾತ್ರೆ ನಡೆಯುತ್ತದೆ. ಮದುವೆ ಇತ್ಯಾದಿ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ, ಸಭಾಭವನವೂ ಇದೆ.


ಜನಸಂಖ್ಯೆ ೨೦೦೧ ರ ಜನಗಣತಿಯ ಪ್ರಕಾರ, ಪುಣಚದ ಒಟ್ಟು ಜನಸಂಖ್ಯೆ ೭೮೭೮. ಅದರಲ್ಲಿ ೩೯೨೯ ಪುರುಷರು ಮತ್ತು ೩೯೪೯ ಮಹಿಳೆಯರು.ಹಿಂದುಗಳು ಬಹುಸಂಖ್ಯಾತರಾಗಿದ್ದು, ಮುಸ್ಲಿಮ್ ಹಾಗೂ ಕ್ರೈಸ್ತರೂ ಇಲ್ಲಿ ವಾಸವಾಗಿದ್ದಾರೆ. ವಿದ್ಯಾಭ್ಯಾಸ ಮೊದಲಿನಿಂದಲೂ ಇಲ್ಲಿನ ಜನರು ವಿದ್ಯಾಭ್ಯಾಸದಲ್ಲಿ ಆಸಕ್ತರು. ಪ್ರಾಥಮಿಕ, ಪ್ರೌಢ ಶಾಲೆಗಳಿದ್ದು, ಮುಂದಿನ ವಿಧ್ಯಾಭ್ಯಾಸಕ್ಕಾಗಿ ಹತ್ತಿರದ ವಿಟ್ಲ, ಪುತ್ತೂರು, ಮಂಗಳೂರಿಗೆ ಜನರು ಹೋಗುತ್ತಾರೆ. ಇಲ್ಲಿನ ಜನರು ಹೆಚ್ಚಾಗಿ ಗಲ್ಫ್, ಮುಂಬಯಿ, ಬೆಂಗಳೂರುಗಳಲ್ಲಿ ಕೆಲಸದಲ್ಲಿದ್ದು, ಅಲ್ಲಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಈ ಊರಿನ ಅಸಂಖ್ಯಾತ ಜನರು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.

ಕೃಷಿ ಭತ್ತವನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದುದಾದರೂ, ಇತ್ತೀಚೆಗೆ ವಾಣಿಜ್ಯ ಬೆಳೆಗಳಾದ ಅಡಿಕೆ, ರಬ್ಬರ್ ಇತ್ಯಾದಿಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಅಲ್ಲದೆ, ತೆಂಗು,ಬಾಳೆ,ಕಾಳುಮೆಣಸು,ಕೊಕ್ಕೋ ಇತ್ಯಾದಿಗಳನ್ನೂ ಕಾಣಬಹುದಾಗಿದೆ. ಹೈನುಗಾರಿಕೆಯೂ ನಡೆಯುತ್ತಿದೆ.

"https://kn.wikipedia.org/w/index.php?title=ಪುಣಚಾ&oldid=1159808" ಇಂದ ಪಡೆಯಲ್ಪಟ್ಟಿದೆ