ತುಳು ನಾಡು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ತುಳು ನಾಡು ಭಾರತದಲ್ಲಿ ಕರ್ನಾಟಕ ಮತ್ತು ಕೇರಳತುಳು ಭಾಷೆ ಮಾತನಾಡಲಾಗುವ ಪ್ರದೇಶ. ಇದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮತ್ತು ಚಂದ್ರಗಿರಿ ನದಿಯವರೆಗಿನ ಕೇರಳಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿದೆ. ತುಳು ನಾಡು ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದ್ದ ಪರಶುರಾಮ ಕ್ಷೇತ್ರವೆಂದು ಪರಿಚಿತವಾಗಿದ್ದ ಪ್ರಾಚೀನ ಭಾಗವಾಗಿತ್ತು. ಪರಶುರಾಮ ತನ್ನ ತಾಯಿಯನ್ನು ಕೊಂದ ಪಶ್ಚಾತ್ತಾಪಕ್ಕಾಗಿ ಕೊಲ್ಲಲು ಬಳಸಿದ ಕೊಡಲಿಯನ್ನು ದೂರ ಎಸೆದಾಗ ಸಮುದ್ರ ಭಾಗ ಸರಿದು ಒಂದು ಭೂಭಾಗ ಸೃಷ್ಟಿಯಾಗುತ್ತದೆ. ಅದುವೇ ತುಳುನಾಡು. ಆದುದರಿಂದ ತುಳುನಾಡನ್ನು ಪರಶುರಾಮ ಸೃಷ್ಟಿ ಎಂದೂ ಕರೆಯಲಾಗುತ್ತದೆ.

ದ್ರಾವಿಡ ಕುಟುಂಬದ ಭಾಷೆಗಳಲ್ಲಿ ತುಳು ಭಾಷೆಯು ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ ಮತ್ತು ಅದರ ಸ್ಥಳೀಯ ಭಾಷಿಕರನ್ನು ತುಳುವ ಎಂದು ಕರೆಯಲಾಗುತ್ತದೆ. ತುಳು ಭಾಷಿಕರು ಸಂಖ್ಯೆ ೨೦೦೧ ರಲ್ಲಿ ೧.೭ ಮಿಲಿಯನ್ ಎಂದು ಅಂದಾಜಿಸಲಾಗಿದೆ, ಆದರೂ ಕೆಲವು ಮೂಲಗಳ ಪ್ರಕಾರ ಸುಮಾರು ೩ ಮಿಲಿಯನ್ ಎಂದು ಗಮನಿಸಲಾಗಿದೆ. ತುಳು ನಾಡಿನ ಬಳಕೆಯಲ್ಲಿರುವ ಇತರೆ ಭಾಷೆಗಳೆಂದರೆ ಕೊಂಕಣಿ, ಕೊರಗ ಮತ್ತು ಬ್ಯಾರಿ ಸೇರಿವೆ.

"https://kn.wikipedia.org/w/index.php?title=ತುಳು_ನಾಡು&oldid=718990" ಇಂದ ಪಡೆಯಲ್ಪಟ್ಟಿದೆ