ವಿಷಯಕ್ಕೆ ಹೋಗು

ದರ್ಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ದರ್ಶನ ವ್ಯುತ್ಪತ್ತಿಯ ಮೂಲಕ ದರ್ಶನ ಶಬ್ದಕ್ಕೆ ಬರುವ ಅರ್ಥ - ’ದೃಶ್ಯತೇ ಅನೇನ ಇತಿ ದರ್ಶನಮ್’ -ಯಾವುದರ ದ್ವಾರಾ ನೋಡುತ್ತೇವೆಯೋ ಅದು ದರ್ಶನ. ವಸ್ತುವಿನ ಸತ್ಯಭೂತವಾದ ತಾತ್ವಿಕ ಸ್ವರೂಪವೇ ನೋಡಬೇಕಾದುದು. ನಾನು ಯಾರು? ಎಲ್ಲಿಂದ ಬಂದಿದ್ದೇನೆ? ಸರ್ವತ್ರ ದೃಶ್ಯವಾಗಿರುವ ಜಗತ್ತಿನ ಸತ್ಯಸ್ವರೂಪವೇನು? ಇದರ ಉತ್ಪತ್ತಿ ಎಲ್ಲಿಂದ ಆಯಿತು? ಇದರ ಸೃಷ್ಟಿಗೆ ಯಾರು ಕಾರಣ? ಇದು ಚೇತನವೇ ಅಥವಾ ಅಚೇತನವೇ? ಈ ಸಂಸಾರದಲ್ಲಿ ನಾವು ಯಾವ ಕಾರ್ಯವನ್ನು ಮಾಡಬೇಕು? ಜೀವನವನ್ನು ಚನ್ನಾಗಿ ನೆಡೆಸಲು ನಾವು ಯಾವಸಾಧನವನ್ನು ಅವಲಂಬಿಸಬೇಕು? ಇಂತಹಾ ಪ್ರಶ್ನೆಗಳಿಗೆ ಉಚಿತವಾದ ಸಮಾಧಾನ ಕೊಡುವುದೇ ದರ್ಶನ. ದರ್ಶನವನ್ನು ಶಾಸ್ತ್ರ ವೆಂದೂ ಕರೆಯುತ್ತೇವೆ. ಶಾಸ್ತ್ರದ ಅರ್ಥವಾದರೂ ಏನು? ಶಾಸ್ತ್ರ ಪದದ ವ್ಯುತ್ಪತ್ತಿಯು ಆಗಮ ಗ್ರಂಥದಲ್ಲಿ ಈ ರೀತಿ ಇದೆ- ಶಾಸನಾತ್ ಶಂಸನಾತ್ ಶಾಸ್ತ್ರಂ ಶಸ್ತ್ರಮತ್ಯಭಿದೀಯತೇ | ಶಾಸನಂ ದ್ವಿವಿಧಂ ಪ್ರೋಕ್ತಂ ಶಾಸ್ತ್ರಲಕ್ಷಣವೇದಿಭಿಃ | ಶಂಸನಂ ಭೂತವಸ್ತ್ವೇಕವಿಷಯಂ ನ ಕ್ರಿಯಾಪರಮ್ | ಶಾಸ್ತ್ರ ಶಬ್ದದ ವ್ಯುತ್ಪತ್ತಿಯು ಎರಡು ಧಾತುಗಳಿಂದಾಗುತ್ತದೆ. ಶಾತ್ = ಆಜ್ಞೆ ಮಾಡುವುದು ; ಮತ್ತು ಶಂಸ್ = ಪ್ರಕಟ ಮಾಡುವುದು ಮತ್ತು ನಿಶೇದರೂಪ ಎಂಬುದಾಗಿ ಎರಡು ವಿಧಗಳಾಗಿರುತ್ತದೆ.

ಸಂಗ್ರಹ ಗ್ರಂಥಗಳು ೧. ಭಾರತೀಯ ದರ್ಶನ

   ಮೂಲ :- ಪಂಡಿತ್ ಬಲದೇವ್ ಉಪಾಧ್ಯಾಯ.
  ಅನುವಾದಕರು:- ಎಸ್. ರಾಮಚಂದ್ರ ಶಾಸ್ತ್ರಿ.
"https://kn.wikipedia.org/w/index.php?title=ದರ್ಶನ&oldid=850324" ಇಂದ ಪಡೆಯಲ್ಪಟ್ಟಿದೆ