ಶಬ್ದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಎರಡು ವಸ್ತುಗಳ ನಡುವಿನ ಕಂಪನವೆ ಶಬ್ದ.[೧]

ವಿಜ್ಞಾನ[ಬದಲಾಯಿಸಿ]

  • ಶಬ್ದವು ಘನ,ದ್ರವ,ಅನಿಲಗಳ ಮೂಲಕ ಹಾದು ಬರುವ ಕಂಪನ.ನಮ್ಮ ಕಿವಿಯ ಮೂಲಕ ಗ್ರಹಿಸಲ್ಪಡುವ ತರಂಗಾಂತರದ ಕಂಪನವನ್ನು ನಾವು ಶಬ್ದವೆಂದು ಸಾಮಾನ್ಯ ಅರ್ಥದಲ್ಲಿ ಹೇಳುತ್ತೇವೆ.
  • ಶಬ್ದವು ಶಕ್ತಿಯ ಒಂದು ರೂಪ.ಶಬ್ದದ ಮೂಲಕ ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.ಶಬ್ದದ ಅಧ್ಯಯನದಿಂದ ನಾವು ಮಾತನಾಡುವ ಬಗೆ ಹೇಗೆ ಎಂದು ತಿಳಿದುಕೊಳ್ಳಬಹುದು.ಶರೀರ ಶಾಸ್ತ್ರಜ್ಞರು ಉಚ್ಛಾರ ಲೋಪ ದೋಷಗಳ ಪರಿಹಾರ ಕಂಡುಹಿಡಿಯುವುದರಲ್ಲಿ ಶಬ್ದದ ಅಧ್ಯಯನವು ಮುಖ್ಯ ಪಾತ್ರ ವಹಿಸುತ್ತದೆ.
  • ಹೃದಯ ಮತ್ತು ಶ್ವಸಕೊಶದಿಂದ ಹೊರ ಹೊಮ್ಮುವ ಶಬ್ದದ ಮುಖಾಂತರ,ಅದರಲ್ಲಿರುವ ತೊಂದರೆಯನ್ನು ಕಂಡುಹಿಡಿಯಬಹುದು.ಭಾಷೆಗಳ ವಿಕಸನಕ್ಕೆ,ಮನುಷ್ಯನು ಉಂಟುಮಾಡುವ ಧ್ವನಿಯ ಏರಿಲಿತವೆ ಮುಖ್ಯ ಕಾರಣ.

ಪ್ರತಿಧ್ವನಿಯ ಕುತೂಹಲಕಾರಿ ವಿಷಯಗಳು[ಬದಲಾಯಿಸಿ]

  • ಪ್ರತಿಧ್ವನಿಯನ್ನು ಒಂದಕ್ಕಿಂತ ಹೆಚ್ಚು ಸಲ ಕೇಳಬಹುದು.ಧ್ವನಿಯು ಹಲವಾರು ಪ್ರತಿಫಲಿಸುವ ಮೆಲ್ಮಇಂದ ಪ್ರತಿಫಲಿಸಿದಾಗ ನಾವು ಅನೇಕ ಪ್ರತಿಧ್ವನಿಯನ್ನು ಕೇಳಬಹುದು.
  • ಮೋಡಗಳ ಅನೇಕ ಪ್ರತಿಫಲಿಸುವ ಮೆಲ್ಮಯಿಂದ ಪ್ರತಿಫಲನಗೊಳ್ಳುವ ಧ್ವನಿಯೇ ಗುಡುಗು.ಬಿಜಾಪುರದಲ್ಲಿರುವ ಗೋಲ್ ಗುಂಬಜಿನ ಪಿಸುಗುಟ್ಟುವ ಅಂಕಣದಲ್ಲಿ ಧ್ವನಿ ಏಳು ಬಾರಿ ಪ್ರತಿಧ್ವನಿಸುತ್ತದೆ.ಪ್ರಪಂಚದ ಅತಿ ವಿಸ್ಮಯಕಾರಿ ಪ್ರತಿಧ್ವನಿಯು ಐರ್ಲಾಂಡ್‍ನಲ್ಲಿರುವ ಕಿಲ್ಲರ್ನಿ ಬೆಟ್ಟದಿಂದ ಉಂಟಾಗುತ್ತದೆ.ಒಂದು ಧ್ವನಿಯು ಸರಿ ಸುಮಾರು ನೂರು ಭಾರಿ ಪ್ರತಿಧ್ವನಿಸುತ್ತದೆ.

ಡಾಪ್ಲರ್ ಪರಿಣಾಮ[ಬದಲಾಯಿಸಿ]

ತರಂಗದ ಜವವು (speed=ಜವ, ವೇಗ, ಚಲನೆಯ ಗತಿ),ಅದು ಪ್ರಸರಿಸುವ ಮಾಧ್ಯಮವನ್ನು ಅವಲಂಬಿಸಿರುತ್ತದೆ.ತರಂಗವು ಯಾವುದಾದರೂ ಒಂದು ಮಾಧ್ಯಮದಲ್ಲಿ ಪ್ರಸರಿಸುವಾಗ ಅದರ ಜವ ಮತ್ತು ಆವೃತ್ತಿ ಬದಲಾಗುವುದಿಲ್ಲ.ಆದರೆ ತರಂಗದ ಆಕಾರ ಮತ್ತು ಕೇಳುಗರ ಸಾಪೇಕ್ಷ ಚಲನೆ ಇದ್ದಲ್ಲಿ ತರಂಗದ ಆವೃತ್ತಿಯು ಬದಲಾದಂತೆ ಭಾಸವಾಗುತ್ತದೆ.ಇದನ್ನು ಡಾಪ್ಲರ್ ಪರಿಣಾಮ ಎನ್ನುತ್ತಾರೆ.ತರಂಗದ ಆಕಾರ ಮತ್ತು ವೀಕ್ಷಕನ ಸಾಪೇಕ್ಷ ಚಲನೆಯಿಂದಾಗಿ,ತರಂಗದ ಆವೃತ್ತಿ ಬದಲಾದಂತೆ ವ್ಯಕ್ತವಾಗುತ್ತದೆ. ಉದಾಹರಣೆಗೆ ರೈಲೊಂದು ನಿಲ್ದಾಣದಲ್ಲಿ ನಿಂತ ನಿಮ್ಮೆಡೆಗೆ ಬರುತ್ತಿದ್ದರೆ, ರೈಲಿನ ಎಂಜಿನ್ ಸದ್ದು ಹೆಚ್ಚಾಗುತ್ತಿರುವಂತೆ ಭಾಸವಾಗುತ್ತದೆ, ದೂರ ಹೋದಂತೆ ಸದ್ದು ಕಡಿಮೆಯಾದಂತೆ ಭಾಸವಾಗುತ್ತದೆ. ನೈಜತೆಯಲ್ಲಿ ರೈಲಿನ ಸದ್ದು ಯಾವಾಗಲೂ ಒಂದೇ ಇರುತ್ತದೆ.

ಡಾಪ್ಲರ್ ಪರಿಣಾಮದ ಅನ್ವಯಗಳು[ಬದಲಾಯಿಸಿ]

  • ಕೃತಕ ಉಪಗ್ರಹಗಳನ್ನು ಪತ್ತೆ ಹಚ್ಚಲು ಡಾಪ್ಲರ್ ಪರಿಣಾಮವನ್ನು ಬಳಸುತ್ತಾರೆ.ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಲು ಮತ್ತು ಅದರ ವೇಗವನ್ನು ಅಂದಾಜಿಸಲು ಡಾಪ್ಲರ್ ಪರಿಣಾಮವನ್ನು ಉಪಯೊಗಿಸುತ್ತಾರೆ. ಆಳ ಸಮುದ್ರದಲ್ಲಿ ಇರಬಹುದಾದ ಕಲ್ಲನ ರಚನೆಗಳನ್ನೂ ಇದರಿಂದ ಪತ್ತೆ ಹಚ್ಚಬಹುದು

ರೆಡಾರ್[ಬದಲಾಯಿಸಿ]

ರೇಡಿಯೋ ತರಂಗಗಳು ಲೋಹದ ವಸ್ತುಗಳಿಂದ ಪ್ರತಿಫಲಿಸುತ್ತವೆ.ಎಂದು ೧೮೮೬ನೇ ದಶಕದಲ್ಲಿ ಜರ್ಮನ್ ಭೌತ ಶಾಸ್ತ್ರಜ್ಞ ಹೆನ್ರಿಕ್ ಹರ್ಟ್ಜ್ ತಿಳಿಪದಿಸಿದನು. ಸೋನರ್ನಂತೆ ಶ್ರವಣಾತೀತ ಧ್ವನಿಗೆ ಪರ್ಯಾಯವಾಗಿ ಈ ಆವಿಷ್ಕಾರ ಪೂರಕ.ಇಲ್ಲಿ ವಿದ್ಯುತ್ ಕಾಂತೀಯ ಕಂಪನಗಳನ್ನು ಬಳಕೆ ಮಾಡಲಾಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. http://shabdkosh.com/kn/word_of_the_day
"https://kn.wikipedia.org/w/index.php?title=ಶಬ್ದ&oldid=716289" ಇಂದ ಪಡೆಯಲ್ಪಟ್ಟಿದೆ