ಮಾತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾತಿನ ಉತ್ಪತ್ತಿ (ಆಂಗ್ಲ)

ಮಾತು ಎಂದರೆ ಮಾನವರು ಮತ್ತು ಕೆಲವು ಪ್ರಾಣಿಗಳು ಬಳಸುವ ಸಂವಹನದ ಧ್ವನಿರೂಪ. ಇದು ಪದಕೋಶದಿಂದ ಪಡೆದ ಘಟಕಗಳ ಪದ ಸಂಬಂಧಿ ಸಂಯೋಜನೆ ಮೇಲೆ ಆಧಾರಿತವಾಗಿದೆ. ಮಾತನಾಡಲಾದ ಪ್ರತಿ ಶಬ್ದವು ಸೀಮಿತ ಸಂಖ್ಯೆಯ ಸ್ವರ ಮತ್ತು ವ್ಯಂಜನ ಧ್ವನಿ ಘಟಕಗಳ (ಧ್ವನಿಮಾಗಳು) ಧ್ವನಿ ಸಂಯೋಜನೆಯಿಂದ ಸೃಷ್ಟಿಯಾಗಿರುತ್ತದೆ. ಈ ಶಬ್ದಕೋಶಗಳು, ಅವುಗಳನ್ನು ಜೋಡಿಸುವ ವಿನ್ಯಾಸ, ಮತ್ತು ಅವುಗಳ ಧ್ವನಿ ಘಟಕಗಳ ಸಮೂಹಗಳು ಬದಲಾಗುತ್ತವೆ, ಮತ್ತು ಸಾವಿರಾರು ವಿಭಿನ್ನ, ಮತ್ತು ಪರಸ್ಪರವಾಗಿ ಗ್ರಹಿಸಲಾಗದ ಮಾನವ ಭಾಷೆಗಳ ಸೃಷ್ಟಿಯಾಗುತ್ತದೆ. ಮಾನವರಿಗೆ ಮಾತನ್ನು ಉತ್ಪತ್ತಿಮಾಡುವುದನ್ನು ಸಾಧ್ಯವಾಗಿಸುವ ವಾಕ್ ಸಾಮರ್ಥ್ಯಗಳು ಅವರಿಗೆ ಹಾಡಲೂ ಸಾಧ್ಯಮಾಡುತ್ತದೆ.

ಸನ್ನೆ ಭಾಷೆಯ ರೂಪದಲ್ಲಿ ಕಿವುಡರಿಗಾಗಿ ಮಾನವ ಸಂವಹನದ ಸನ್ನೆಯ ರೂಪ ಅಸ್ತಿತ್ವದಲ್ಲಿದೆ. ಕೆಲವು ಸಂಸ್ಕೃತಿಗಳಲ್ಲಿ ಮಾತು ಲಿಖಿತ ಭಾಷೆಯ ಆಧಾರವಾಗಿದೆ, ಮತ್ತು ಹಲವುವೇಳೆ ಇದು ಇದಕ್ಕೆ ಸಂಬಂಧಿಸಿದ ಮಾತನಾಡುವ ಭಾಷೆಯಿಂದ ಶಬ್ದಕೋಶ, ಪದವಿನ್ಯಾಸ ಹಾಗೂ ಧ್ವನಿಶಾಸ್ತ್ರದಲ್ಲಿ ಭಿನ್ನವಾಗಿರುತ್ತದೆ. ಈ ಸ್ಥಿತಿಯನ್ನು ದ್ವಿಭಾಷತೆ ಎಂದು ಕರೆಯಲಾಗುತ್ತದೆ. ಸಂವಹನದಲ್ಲಿ ಅದರ ಬಳಕೆಯ ಜೊತೆಗೆ ಮಾತನ್ನು ಆಂತರಿಕವಾಗಿ ಒಳಗಿನ ಸ್ವಗತದ ರೂಪದಲ್ಲಿ ಗ್ರಹಿಕೆಯನ್ನು ಹೆಚ್ಚಿಸಲು ಮತ್ತು ಸಂಘಟಿಸಲು ಮಾನಸಿಕ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ ಎಂದು ವಿಗಾಟ್‍ಸ್ಕಿಯಂತಹ ಕೆಲವು ಮನೋವಿಜ್ಞಾನಿಗಳು ಸೂಚಿಸಿದ್ದಾರೆ.

ವಾಕ್ ಭಾಷೆಯಲ್ಲಿ ಬಳಸಲಾದ ಶಬ್ದಗಳ ವಾಕ್ ಉತ್ಪತ್ತಿ ಮತ್ತು ವಾಕ್ ಗ್ರಹಿಕೆಯ ರೂಪದಲ್ಲಿ ಮಾತನ್ನು ಸಂಶೋಧಿಸಲಾಗುತ್ತದೆ. ಇತರ ಸಂಶೋಧನಾ ವಿಷಯಗಳು ವಾಕ್ ಪುನರಾವರ್ತನೆಗೆ ಸಂಬಂಧಿಸಿವೆ. ವಾಕ್ ಪುನರಾವರ್ತನೆ ಎಂದರೆ ಕೇಳಿದ ಮಾತನಾಡಿದ ಶಬ್ದಗಳನ್ನು ಅವುಗಳನ್ನು ಪುನಃಸೃಷ್ಟಿಸಲು ಬೇಕಾದ ಉಚ್ಚಾರಣೆಯಲ್ಲಿ ಫಲನ ಮಾಡುವ ಸಾಮರ್ಥ್ಯ. ಇದು ಮಕ್ಕಳಲ್ಲಿ ಶಬ್ದಕೋಶದ ವಿಸ್ತರಣೆ ಹಾಗೂ ವಾಕ್ ದೋಷಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಲವಾರು ಶೈಕ್ಷಣಿಕ ವಿಭಾಗಗಳು ಇವನ್ನು ಅಧ್ಯಯನಿಸುತ್ತವೆ; ಧ್ವನಿಶಾಸ್ತ್ರ, ಮನೋವಿಜ್ಞಾನ, ವಾಕ್ ರೋಗಶಾಸ್ತ್ರ, ಭಾಷಾವಿಜ್ಞಾನ, ಜ್ಞಾನಗ್ರಹಣ ವಿಜ್ಞಾನ, ಸಂವಹನ ಅಧ್ಯಯನಗಳು, ಕಿವಿ ಗಂಟಲು ಶಾಸ್ತ್ರ, ಗಣಕ ವಿಜ್ಞಾನ ಮುಂತಾದವು. ಮಾನವ ಮಿದುಳು ತನ್ನ ವಿಭಿನ್ನ ಪ್ರದೇಶಗಳಲ್ಲಿ ಮಾತಿಗೆ ಹೇಗೆ ಅಡಿಪಾಯ ರಚಿಸುತ್ತದೆ ಎಂಬುವುದು ಸಂಶೋಧನೆಯ ಮತ್ತೊಂದು ಕ್ಷೇತ್ರವಾಗಿದೆ.

ಮಾನವರ ಮಾತು ಎಷ್ಟು ಪ್ರಮಾಣದಲ್ಲಿ ಅನನ್ಯವಾಗಿದೆ ಎಂಬುದು ವಿವಾದಾತ್ಮಕವಾಗಿದೆ; ಏಕೆಂದರೆ ಪ್ರಾಣಿಗಳು ಕೂಡ ಶಬ್ದೋಚ್ಚಾರಣೆಗಳ ಮೂಲಕ ಸಂವಹನ ನಡೆಸುತ್ತವೆ. ಕಾಡಿನಲ್ಲಿರುವ ಯಾವ ಪ್ರಾಣಿಯೂ ತುಲನಾತ್ಮಕವಾಗಿ ದೊಡ್ಡ ಶಬ್ದಕೋಶಗಳನ್ನು ಹೊಂದಿಲ್ಲವಾದರೂ, ಸಂಶೋಧನೆಯು ಪ್ರಾಣಿಗಳಿಗೆ ಮಾತಾಡುವ ಸಾಮರ್ಥವಿರುವ ಸಾಧ್ಯತೆಯನ್ನು ಪ್ರಕಟಗೊಳಿಸುತ್ತದೆ. ಮಾತಿನ ವಿಕಾಸಾತ್ಮಕ ಮೂಲಗಳು ಅಜ್ಞಾತವಾಗಿವೆ ಮತ್ತು ಬಹಳ ಚರ್ಚೆ ಹಾಗೂ ಊಹಾಪೋಹದ ವಿಷಯವಾಗಿವೆ.

"https://kn.wikipedia.org/w/index.php?title=ಮಾತು&oldid=833181" ಇಂದ ಪಡೆಯಲ್ಪಟ್ಟಿದೆ