ವಕ್ರೀಭವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ವಿವಿಧ ವಕ್ರೀಭವನಾಂಕಗಳನ್ನು ಹೊಂದಿರುವ ಎರಡು ಮಾಧ್ಯಮಗಳ ನಡುವಿನ ಸೀಮೆಯಲ್ಲಿ ಬೆಳಕಿನ ವಕ್ರೀಭವನ - ಇಲ್ಲಿ n2 > n1. ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗವು ಕಡಿಮೆಯಿರುವುದರಿಂದ (v2 < v1), ವಕ್ರೀಭವನ ಕೋನವಾದ θ2 ಆಪಾತಕೋನ θ1ಗಿಂತ ಕಡಿಮೆಯಿರುತ್ತದೆ; ಅಂದರೆ, ಹೆಚ್ಚು ವಕ್ರೀಭವನಾಂಕದ ಮಾಧ್ಯಮದಲ್ಲಿ ಬೆಳಕಿನ ಕಿರಣವು ಕ್ಷಿತಿಜಕ್ಕೆ ಹೆಚ್ಚು ಹತ್ತಿರದಲ್ಲಿರುತ್ತದೆ.
ಬೆಳಕು ನೀರಿನಿಂದ ಗಾಳಿಗೆ ಹೊರಬರುವಾಗ ವಕ್ರೀಭವಿಸುವುದರಿಂದ, ಚಿತ್ರದಲ್ಲಿನ ಸ್ಟ್ರಾ ಮುರಿದಂತೆ ಕಾಣುತ್ತದೆ.

ವಕ್ರೀಭವನವು ಅಲೆವೇಗದಲ್ಲಿನ ಬದಲಾವಣೆಯ ಕಾರಣದಿಂದುಂಟಾಗುವ ದಿಕ್ಕಿನ ಬದಲಾವಣೆ. ಅತಿ ಸಾಮಾನ್ಯವಾಗಿ, ಬೆಳಕು ಒಂದು ಮಾಧ್ಯಮದಿಂದ ಇನ್ನೊಂದಕ್ಕೆ ಹಾಯುವಾಗ ವಕ್ರೀಭವಿಸುತ್ತದೆ. ಆದರೆ, ಬೇರೆ ಥರದ ಅಲೆಗಳೂ ವಕ್ರೀಭವನಕ್ಕೊಳಗಾಗುತ್ತವೆ. ಉದಾಹರಣೆಗೆ, ಶಬ್ದ ತರಂಗಗಳು ಬೇರೆ ಮಾಧ್ಯಮದೊಳಗೆ ಹಾಯುವಾಗ ವಕ್ರೀಭವಿಸುತ್ತದೆ. ವಕ್ರೀಭವನವನ್ನು ಸ್ನೆಲ್ ನಿಯಮದಿಂದ ವಿವರಿಸಬಹುದು - ಈ ನಿಯಮದ ಪ್ರಕಾರ, ವಕ್ರೀಭವನ ಕೋನ ಮತ್ತು ಆಪಾತಕೋನಗಳು ಈ ಕೆಳಗಿನಂತೆ ಪರಸ್ಪರ ಸಂಬಂಧಿಸಿರುತ್ತವೆ:

ಅಥವಾ

ಇಲ್ಲಿ and ಆಯಾ ಮಾಧ್ಯಮಗಳಲ್ಲಿ ಅಲೆಯ ವೇಗಗಳನ್ನು ಸೂಚಿಸುತ್ತವೆ ಮತ್ತು ಮತ್ತು ಆಯಾ ಮಾಧ್ಯಮದಲ್ಲಿ ಬೆಳಕಿನ ವಕ್ರೀಭವನಾಂಕಗಳು

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]