ಡಾಪ್ಲರ್ ಪರಿಣಾಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡಾಪ್ಲರ್ ಪರಣಾಮದ ರೇಖಾಚಿತ್ರ.
ಡಾಪ್ಲರ್ ಪರಿಣಾಮದ ಸಚಿತ್ರ ಆನಿಮೇಶನ್.
ಹಂಸವು ನೀರಿನಲ್ಲಿ ಚಲಿಸುತ್ತಿರುವಾಗ ಡಾಪ್ಲರ್ ಪರಿಣಾಮವನ್ನು ಗುರುತಿಸಬಹುದು.

ಡಾಪ್ಲರ್ ಪರಿಣಾಮವು (ಅಥವಾ ಡಾಪ್ಲರ್ ವರ್ಗಾವಣೆ) ವೀಕ್ಷಕ ತನ್ನ ನೇರದಲ್ಲಿ ಚಲಿಸುವಾಗ ತರಂಗಾವರ್ತನೆಯಲ್ಲಿ ಆಗುವ ಬದಲಾವಣೆ. ಈ ಪರಿಣಾಮವನ್ನು ಪ್ರೇಗ್‌ನಲ್ಲಿ ಆಸ್ಟ್ರಿಯನ್ ಭೌತಶಾಸ್ತ್ರಜ್ಞ ಕ್ರಿಶ್ಚಿಯನ್ ಡಾಪ್ಲರ್(Christian Doppler) ೧೮೪೨ ರಲ್ಲಿ ಪ್ರಸ್ತಾಪಿಸಿದನು. ಈ ಪರಿಣಾಮವನ್ನು ನಾವು ಒಂದು ವಾಹನ ನಮ್ಮತ್ತ ಬರುತ್ತಿರುವಾಗ ಮತ್ತು ಅದು ತಮ್ಮಿಂದ ದೂರ ಚಲಿಸುತ್ತಿಇರುವಾಗ ಅದರ ಸೈರನ್ನು(siren) ಮೂಲಕ ಸುಲಭವಾಗಿ ಗುರುತಿಸಬಹುದು.