ಅರಸು
ಅರಸು ಜಾತಿಯವರು ಕ್ಷತ್ರೀಯ ಕುಲದ ರಾಜಪಿಂಡೆ ಶಾಖೆಗೆ ಸೇರಿದವರಗಿದ್ದು. ಮೈಸೂರು ಒಡೆಯರ್ ರಾಜಮನೆತನವೂ ಇದೇ ಮೂಲದ್ದಾಗಿದೆ. ಆತ್ರೇಯ, ವಶಿಷ್ಟ, ವಿಶ್ವಾಮಿತ್ರ ಮುಂತಾದ ಗೋತ್ರಗಲನ್ನುಳ್ಳ ಇವರು ತಮ್ಮನ್ನು ಬ್ರಹ್ಮಕ್ಷತ್ರೀಯರೆಂದು ಗುರುತಿಸಿಕೊಳ್ಳುತಿದ್ದು. ಕನ್ನಡ ಇವರ ಮಾತ್ರು ಭಾಷೆ. ಬಾಲ್ಯದಲ್ಲೇ ಉಪನಯನ ನಂತರ ಜನಿವಾರ ಧರಿಸುವ ಇವರಲ್ಲಿ ಶೈವ, ವೈಷ್ಣವ, ಜೈನ ಧರ್ಮೀಯರಿದ್ದರೂ ವಿವಾಹ ಸಂಬಧದಲ್ಲಿ ಇದು ಅಡ್ಡಿಯಾಗುವುದಿಲ್ಲ[೧]. ಆದರೂ ವಿವಾಹದಲ್ಲಿ ಸಾಮಾನ್ಯವಾಗಿ ವೈದಿಕ ವಿಧಾನವನ್ನೇ ಅನುಸರಿಸುತ್ತಾರೆ. ಉಪನಯನದ ಸಮಯದಲ್ಲಿ ಬಿಲ್ಲಿನ ತುದಿಗೆ ಮೌರ್ವಿ(ರೇಷ್ಮೆಯ ವಸ್ತ್ರ)ವನ್ನು ಬಿಗಿದು ಮಾಡುವ ಅಂಬಿನಕಡ್ಡಿ(ಬಾಣ) ಆಚರಣೆಯು ವಿಶಿಷ್ಟವಾಗಿರುತ್ತದೆ. ಬ್ರಾಹ್ಮಣರ ಪೌರೋಹಿತ್ಯದಲ್ಲಿ ನಡಯುವ ಮದುವೆಯಲ್ಲಿ ವರನು ಮದುವೆ ಮುಗಿಯುವವರೆಗೂ ಖಡ್ಗ ಇಲ್ಲವೇ ಚಾಕುವನ್ನು ಜೊತೆಯಲ್ಲಿಟ್ಟುಕೋಂಡಿರುವ ಸಂಪ್ರದಾಯವಿದೆ[೨]. ವಿಧವೆಯರಿಗೆ ಮರು ಮಧುವೆಯ ಅವಕಾಶವಿರುವುದಿಲ್ಲ. ದಸರಾ ಇವರಿಗೆ ದೊಡ್ಡಾ ಹಬ್ಬವಾಗಿದ್ದು, ಆ ಸಂದರ್ಭದಲ್ಲಿ ಕಾಳಿ, ಲಕ್ಷ್ಮಿ ಹಾಗೂ ಸರಸ್ವತಿಯರನ್ನು ವಿಧಿಬದ್ದವಾಗಿ ಪೂಜಿಸುತ್ತಾರೆ. ಮಾವತ್ತೂರು ಮಾಸ್ತಮ್ಮ ಹಾಗೂ ಮೂಗೂರು ತಿಬ್ಬಾದೇವಿಯವರ ಜಾತ್ರಿಗಳಿಗೆ ವಿಶೇಷ ಮಹತ್ವ ನೀಡುವ ಇವರು ಮಂಟೆಸ್ವಾಮಿ ಶಿಷ್ಯರಾದ ರಾಚಪ್ಪಾಜಿ, ಸಿದ್ದಪ್ಪಾಜಿ ಗದ್ದುಗೆಳಿಗೂ ನಡೆದುಕೋಳ್ಳುತ್ತಿದ್ದಾರೆ. ಇವರಲ್ಲಿ ಸತ್ತವರನ್ನು ಚಿತೆಗೆ ಅರ್ಪಿಸುವ ಸಂಪ್ರದಾಯವಿದ್ದು. ಹತ್ತು ದಿನಗಳ ಸೂತಕದ ನಂತರ ೧೨ನೇ ದಿನ ಶ್ರಾದ್ಧಾವನ್ನು ಆಚರಿಸಲಾಗುತ್ತದೆ[೩]
ಉಲ್ಲೇಖಗಳು
[ಬದಲಾಯಿಸಿ]- ↑ Suresh, Dr Sundari; Rammohan, Dr S. Radha; Bharath, Dr K. Tech Trends 2021: Issues and Emerging Challenges and Changes in the Student - Centric Learning and Best Innovative Practices for Quality Enhancement in Education (in ಇಂಗ್ಲಿಷ್). Forschung Publications. ISBN 978-93-87865-77-8.
- ↑ Ikegame, Aya (2013-05-07). Princely India Re-imagined: A Historical Anthropology of Mysore from 1799 to the present (in ಇಂಗ್ಲಿಷ್). Routledge. ISBN 978-1-136-23909-0.
- ↑ Sampath, Vikram (2008). SPLENDOURS OF ROYAL MYSORE (PB) (in ಇಂಗ್ಲಿಷ್). Rupa & Company. ISBN 978-81-291-1535-5.