ಸಿ. ಎನ್. ಆರ್. ರಾವ್
ಸಿ. ಎನ್. ಆರ್. ರಾವ್ | |
---|---|
ಜನನ | ಜೂನ್ ೩೦, ೧೯೩೪ ಬೆಂಗಳೂರು, ಮೈಸೂರು ಸಂಸ್ಥಾನ, ಬ್ರಿಟಿಷ್ ಭಾರತ |
ವಾಸಸ್ಥಳ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ರಸಾಯನಶಾಸ್ತ್ರ |
ಸಂಸ್ಥೆಗಳು | ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಐಐಟಿ ಕಾನ್ಪುರ್ ಭಾರತೀಯ ವಿಜ್ಞಾನ ಸಂಸ್ಥೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಜವಹರಲಾಲ್ ನೆಹರೂ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ |
ಅಭ್ಯಸಿಸಿದ ವಿದ್ಯಾಪೀಠ | ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಪುರ್ಡ್ಯೂ ವಿಶ್ವವಿದ್ಯಾನಿಲಯ |
ಪ್ರಸಿದ್ಧಿಗೆ ಕಾರಣ | ಸಾಲಿಡ್ - ಸ್ಟೇಟ್ ಕೆಮಿಸ್ಟ್ರಿ ಮೆಟೀರಿಯಲ್ ಸೈನ್ಸ್ |
ಗಮನಾರ್ಹ ಪ್ರಶಸ್ತಿಗಳು | ಹ್ಯೂಗ್ಸ್ ಮೆಡಲ್ (೨000) ಇಂಡಿಯಾ ಸೈನ್ಸ್ ಅವಾರ್ಡ್ (೨೦೦೪) ರಾಯಲ್ ಸೊಸೈಟಿ ಎಫ್ ಆರ್ ಎಸ್ (೧೯೮೪) ಅಬ್ದುಸ್ ಸಲಾಮ್ ಮೆಡಲ್ (೨೦೦೮) ದಾನ ಡೇವಿಡ್ ಪ್ರೈಜ್ (೨೦೦೫) ಲೀಜಿಯನ್ ಹಾನರ್ (೨೦೦೫) ಪದ್ಮಶ್ರೀ(೧೯೭೪) ಪದ್ಮ ವಿಭೂಷಣ(೧೯೮೫) ಭಾರತ ರತ್ನ (೨೦೧೩) |
ಸಿ.ಎನ್.ಆರ್.ರಾವ್ ಎಂದೇ ಪ್ರಸಿದ್ದರಾಗಿರುವ, 'ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ (ಜೂನ್ ೩೦, ೧೯೩೪) ವಿಶ್ವವಿಖ‍್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ. ಪ್ರಸಕ್ತ ಬೆಂಗಳೂರಿನಲ್ಲಿರುವ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್ ಅವರಿಗೆ ೨೦೧೩ರ ವರ್ಷದಲ್ಲಿ ಭಾರತದ ಅತ್ಯುನ್ನತ ಗೌರವವಾದ 'ಭಾರತ ರತ್ನ' ಪ್ರಶಸ್ತಿ ಸಂದಿದೆ.
ಜೀವನ
ಜನನ
ಹನುಮಂತ ನಾಗೇಶ್ ರಾವ್ ಮತ್ತು ನಾಗಮ್ಮ ದಂಪತಿಯ ಮಗನಾದ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್ ಅವರು, ೧೯೩೪ರ ಜೂನ್ ೩೦ರಂದು ಬೆಂಗಳೂರಿನಲ್ಲಿ ಜನಿಸಿದರು.
ಶಿಕ್ಷಣ
೧೯೫೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎಸ್‌ಸಿ ಪದವಿ ಪಡೆದರು. "ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವರು ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು. ನನಗಾಗ ೧೧ ವರ್ಷ. ಬೆಂಗಳೂರಿನಲ್ಲಿ ಕಲಿಯುತ್ತಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾದೆ. ವಿಜ್ಞಾನ ಕಲಿಯಬೇಕು ಎಂಬ ಕನಸು ಮೂಡಿದ್ದು ಅದೇ ಹೊತ್ತಿನಲ್ಲಿ." ಎನ್ನುತ್ತಾರೆ ಪ್ರೊ. ರಾವ್. ಸ್ನಾತಕೋತ್ತರ ಪದವಿಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ೧೯೫೩ರಲ್ಲಿ ಪಡೆದರು. ೧೯೫೮ರಲ್ಲಿ 'ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ ಪಿ.ಎಚ್.ಡಿ. ಪಡೆದರು.
ವೃತ್ತಿಜೀವನ
ಅವರು ೧೯೫೯ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ ೧೯೬೩ರಲ್ಲಿ ಕಾನ್ಪುರದ ಐಐಟಿಗೆ ಸೇರಿದರು. ರಾವ್ ಪ್ರಸ್ತುತ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್‌ನಲ್ಲಿ ಪ್ರೊಫೆಸರ್ ಹಾಗೂ ಗೌರವಾಧ್ಯಕ್ಷರಾಗಿದ್ದಾರೆ. ಇವರು 'ರಸಾಯನ ಶಾಸ್ತ್ರದ ಸಾಲಿಡ್ ಸ್ಟೇಟ್ ಮತ್ತು ಮೇಟಿರಿಯಲ್ ವಿಭಾಗ'ದ ಸಂಶೋಧನೆಗೆ ವಿಶ್ವದಾದ್ಯಂತ ಹೆಸರುಗಳಿಸಿದ್ದಾರೆ. ಪ್ರಧಾನಮಂತ್ರಿಯವರ ವೈಜ್ಞಾನಿಕ ಸಲಾಹ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ವೈವಾಹಿಕ ಜೀವನ
ಪ್ರೊ.ಸಿ.ಎನ್.ಆರ್ ರಾವ್ ಅವರದು ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್ ಈ ಹಿಂದೆ ನಗರದ ಎಂ.ಇ.ಎಸ್ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ರ, ಸಂಜಯ್ ರಾವ್ ಕೂಡ ಜವಾಹರ್‌ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿ, ಸುಚಿತ್ರಾ ರಾವ್ ಅವರ ಪತಿ, ಕೆ.ಎನ್. ಗಣೇಶ್ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು.
ಸಂಶೋಧನೆ
ಹಲವಾರು ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾವ್ ಅತಿವಾಹಕತೆ (ಸೂಪರ್ ಕಂಡಕ್ಟಿವಿಟಿ) ಹಾಗು ನ್ಯಾನೋವಿಜ್ನಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದಾರೆ. ೪೨ಕ್ಕೂ ಹೆಚ್ಚು ವೈಜ್ನಾನಿಕ ಪುಸ್ತಕಗಳು ಹಾಗು ೧೫೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾವ್ ಬರೆದಿದ್ದಾರೆ. ಇವರ ಜೊತೆ ಕೆಲಸ ಮಾಡಿದ ೧೪೦ಕ್ಕೂ ಹೆಚ್ಚು ಜನ ಪಿ.ಹೆಚ್.ಡಿ. ಪದವಿ ಗಳಿಸಿದ್ದಾರೆ. ಇವರ ಲೇಖನಗಳನ್ನು ಇದುವರೆಗೂ ೪೦ ಸಾವಿರಕ್ಕೂ ಹೆಚ್ಚುಬಾರಿ ಪ್ರಸ್ತಾಪಿಸಲಾಗಿದೆ. ಇವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ. ರಾವ್ ಅವರು ತಮ್ಮ ಸಂಶೋಧನೆಗೆ ಸ್ವಾಮ್ಯ ಹಕ್ಕುಗಳನ್ನು (ಪೇಟೆಂಟ್)(Open source)ಪಡೆಯದೆ ಮುಕ್ತವಾಗಿಟ್ಟಿದ್ದಾರೆ.[೧]
ಪ್ರಶಸ್ತಿಗಳು ಹಾಗೂ ಗೌರವಗಳು
ಇವರು ಹಲವು ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.
- ಭಾರತ ಸರ್ಕಾರವು ೧೬ ನವಂಬರ್ ೨೦೧೩ರಂದು ಇವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಘೋಷಿಸಿತು. ಫೆಬ್ರವರಿ, ೪, ೨೦೧೪ ರಂದು ಇವರಿಗೆ ಹಾಗೂ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ಗೆ ರಾಷ್ಟ್ರಪತಿ ಭವನದಲ್ಲಿ ಪ್ರದಾನಮಾಡಲಾಯಿತು.[೨]
- ಅಮೆರಿಕ ಸಂಯುಕ್ತ ಸಂಸ್ಥಾನ ದ ನ್ಯಾಶನಲ್ ಆಕಾಡೆಮಿ ಆಪ್ ಸೈನ್ಸ್ ಹಾಗು ಅಮೆರಿಕನ್ ಆಕಾಡೆಮಿ ಆಪ್ ಆರ್ಟ್ ಅಂಡ್ ಸೈನ್ಸ್ ನ ಸದಸ್ಯರಾಗದ್ದಾರೆ.
- ಲಂಡನ್ನ ರಾಯಲ್ ಸೊಸೈಟಿಯ ಸದಸ್ಯರಾಗಿದ್ದಾರೆ.
- ಫ್ರಾನ್ಸ್ ಸರಕಾರದ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಲಾಗಿದೆ.
- ಯುನೆಸ್ಕೊ, ಪ್ಯಾರಿಸ್ನಿಂದ ಕೊಡಲಾಗುವ ಆಲ್ಬರ್ಟ್ ಐನ್ಸ್ಟನ್ ಚಿನ್ನದ ಪದಕ ಪಡೆದಿದ್ದಾರೆ.
- ಪದ್ಮಶ್ರೀ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳು ಇವರಿಗೆ ಸಂದಿದೆ.
- ಕರ್ನಾಟಕ ಸರಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.
- ಇವರಿಗೆ ಈವರೆಗೆ ೩೭ ಗೌರವ ಡಾಕ್ಟರೇಟ್ ನೀಡಲಾಗಿದೆ[೩].
- ಬ್ರಿಟನ್ನಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ೨೦೦೭ನೇ ಸಾಲಿನ ಗೌರವ ಡಾಕ್ಟರೇಟ್ ನೀಡಿದೆ[೪].
- ಜಪಾನ್ ಸರಕಾರ ನೀಡುವ ಸ್ಪ್ರಿಂಗ್ ಇಂಪೀರಿಯಲ್ ಡೆಕೊರೇಷನ್ ಪ್ರಶಸ್ತಿ, ೨೦೧೫[೫]
- ಜಪಾನ್ ಸರ್ಕಾರದ ‘ಆರ್ಡರ್ ಆಫ್ ದ ರೈಸಿಂಗ್ ಸನ್, ಗೋಲ್ಡ್ ಆಂಡ್ ಸಿಲ್ವರ್ ಸ್ಟಾರ್’ ಪದಕ[೬]
- ಗೀತಂ ವಿಶ್ವವಿದ್ಯಾಲಯ ನೀಡುವ ‘ಗೀತಂ ಸಂಸ್ಥಾಪನಾ ಪ್ರಶಸ್ತಿ’ಗೆ ಡಾ.ಸಿ.ಎನ್.ಆರ್. ರಾವ್ ಆಯ್ಕೆಯಾಗಿದ್ದಾರೆ.
- ಅಮೆರಿಕಾದ ಮೇಟಿರಿಯಲ ರಿಸಚ್౯ ಸೊಸೈಟಿ ನಿಡುವ ವಾನ ಹಿಪ್ಪನ ಪ್ರಶಸ್ತಿಯನ್ನು ದಿನಾಂಕ 24-09-2017 ರಂದು ಘೊಷಿಸಿದೆ[೭][೮]
- ಭಾರತರತ್ನ ಸಿ.ಎನ್.ಆರ್.ರಾವ್ ಅವರು ಅಂತರರಾಷ್ಟೀಯ'ಇನಿ'(ENI) ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪ್ರಜಾವಾಣಿ,೨೮, ಮೇ,೨೦೨೧
ಪುಸ್ತಕಗಳು:
ಅವರು ಅಮೇರಿಕಾಗೆ ಸ್ಥಳಾಂತರಗೊಂಡ ನಂತರ ಪ್ರಕಟಿಸಿದ್ದ ಪುಸ್ತಕಗಳು ಜೆ ಕ್ಲೆಫ್ಫೆ ಜೊತೆ- ವ್ಯತ್ಯಾಸದ ಭಾಗಗಳು ಮತ್ತು ಅದರ ಅನ್ವಯಗಳ ಅಂದಾಜು (೧೯೮೮), ಅಂಕಿಅಂಶ ಮತ್ತು ಸತ್ಯ (೧೯೮೯), ಡಿ ಎನ್ ಶಾನಭಾಗ್ ಜೊತೆ- ಅನ್ವಯಗಳೊಂದಿಗೆ ಸಂಭವನೀಯ ಮಾದರಿಗಳು, ಚೊಕೆಟ್-ಡಿನೈ ರೀತಿಯ ಕ್ರಿಯಾತ್ಮಕ ಸಮೀಕರಣಗಳು ಮತ್ತು ಅದರ ಅನ್ವಯಗಳು (೧೯೯೪), ಎಚ್ ಟೊಟೆಂಬರ್ಗ್ ಜೊತೆ- ಲೀನಿಯರ್ ಮಾದರಿಗಳು, ಕನಿಷ್ಠ ಚೌಕಗಳು ಮತ್ತು ಪರ್ಯಾಯ (೧೯೯೫) ಮತ್ತು ಎಂ ಬಿ ರಾವ್ ಜೊತೆ- ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಮ್ಯಾಟ್ರಿಕ್ಸ್ ಬೀಜಗಣಿತದ ಅನ್ವಯಗಳು (೧೯೯೮).
ಪ್ರಾರಂಭಿಸಿದ ಸಂಸ್ಥೆಗಳು:
ಸಿಆರ್ ರಾವ್ ಸಂಖ್ಯಾಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಆಧುನಿಕನ ಸಂಸ್ಥೆಯು (ಎಐಎಮ್‍ಎಸ್‍ಸಿಎಸ್[೯] ಎಂದು ಸಹ ಕರೆಯಲಾಗುತ್ತದೆ) ಗಣಿತ, ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತ ಅಂಕಿಯ ಸಂಶೋಧನೆ ಮಾಡುವ ಒಂದು ಪ್ರಮುಖ ಸಂಸ್ಥೆಯಾಗಿ ೨೦೦೭ ರಲ್ಲಿ ಸ್ಥಾಪಿಸಲಾಯಿತು. ಅವರ ಸಲಹೆಯಿಂದ ಕಟ್ಟಲಾಗಿದ್ದರಿಂದ ಸಿಆರ್ ರಾವ್‍ರವರ ಹೆಸರಿಡಲಾಯಿತು. ಇದು ರಾಜ್ಯ ಸರ್ಕಾರ ಮತ್ತು ವೈಯಕ್ತಿಕ ದಾನಿಗಳಿಂದ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಪಡೆದಿದೆ.
ಹೆಚ್ಚಿನ ವಿವರಕ್ಕೆ
ಉಲ್ಲೇಖಗಳು
- ↑ http://www.jncasr.ac.in/cnrrao/
- ↑ http://vijaykarnataka.indiatimes.com/articleshow/29853121.cms
- ↑ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ನಲ್ಲಿ ಸಿ ಎನ್ ಆರ್ ರಾವ್ ಗೌರವಗಳ ಪಟ್ಟಿ [೧] Archived 2006-12-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಾರ್ತಾಪುಟ". Archived from the original on 2007-06-30. Retrieved 2007-06-26.
- ↑ ಸಿ.ಎನ್.ಆರ್. ರಾವ್, ಟಿ.ಕೆ.ಎ. ನಾಯರ್‌ಗೆ ಜಪಾನ್ ಗೌರವ, ವಿಜಯಕರ್ನಾಟಕ, 30ಏಪ್ರಿಲ್ 2015
- ↑ ಪ್ರೊ.ಸಿಎನ್ಆರ್ ರಾವ್ ಈಗ ಜಪಾನ್ನ ‘ರೈಸಿಂಗ್ ಸನ್’, ವಿಜಯವಾಣಿ, ೦೨ಮೇ೨೦೧೫
- ↑ https://www.thefamouspeople.com/profiles/c-n-r-rao-7427.php
- ↑ https://www.yogems.com/yopedia/c-n-r-rao-an-eminent-indian-chemist-whose-success-rocket-was-ignited-by-his-parents/amp/
- ↑ "ಆರ್ಕೈವ್ ನಕಲು". Archived from the original on 2017-11-14. Retrieved 2017-11-04.